"ಕೊಟ್ಟೂರಿನಲ್ಲಿ ಗಣೇಶ ಚತುರ್ಥಿ ಅದ್ದೂರಿ ಮೆರವಣಿಗೆಯಿಂದ ವಿಸರ್ಜನೆ"
ಕೊಟ್ಟೂರು : ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಗಣೇಶ ಚತುರ್ಥಿ ಹಬ್ಬವನ್ನು ಆಚರಿಸುವ ಸಂಪ್ರದಾಯವಿದೆ. 2025ರ ಆಗಸ್ಟ್ 27ರಂದು ಬುಧವಾರ ಗಣೇಶ ಚತುರ್ಥಿ ಹಬ್ಬವನ್ನು ಕೊಟ್ಟೂರಿನ ಪ್ರಮುಖ ರಸ್ತೆ ಹಾಗೂ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಡಗರದಿಂದ ಆಚರಿಸಲಾಯಿತು.
ಈ ದಿನದಂದು ಕೊಟ್ಟೂರಿನ ಪ್ರಮುಖ ಕಚೇರಿಗಳಲ್ಲಿ ಒಂದಾದ ಜೆಸ್ಕಾಂ ಸಿಬ್ಬಂದಿಯವರು ಡೋಳು ಕುಣಿತದೊಂದಿಗೆ ಅದ್ದೂರಿಯಾಗಿ ಮೆರವಣಿಗೆ ಮೂಲಕ ಕರೆತಂದು ತಮ್ಮ ಕಚೇರಿಯಲ್ಲಿ ವಿಸರ್ಜನೆ ಮಾಡಲಾಯಿತು.
ಈ ಸಡಗರದ ಮೆರವಣಿಗೆಯನ್ನು ರಸ್ತೆ ಬದಿಯಲ್ಲಿ ನಿಂತು ಜನರು ಕಣ್ಣು ತುಂಬಿಕೊಂಡ ಸನ್ನಿವೇಶ ಕಂಡು ಬಂದಿತ್ತು.
ತಮ್ಮ ಹಿಂದೂ ಸಂಪ್ರದಾಯಿಕವಾಗಿ ನಡೆದು ಬಂದ ಗಣೇಶ ಹಬ್ಬದ ವಿವರಣೆ : ಹಿಂದೂ ಧರ್ಮದಲ್ಲಿ ಜನರು ಅತಿ ಹೆಚ್ಚು ಪೂಜಿಸಲಾಗುವ ದೇವರು ಮತ್ತು ದೇವತೆಗಳಲ್ಲಿ ಗಣೇಶನೂ ಒಬ್ಬನಾಗಿದ್ದಾನೆ.
ಗಣೇಶನನ್ನು ಪ್ರತಿನಿತ್ಯವೂ ಪೂಜಿಸಲಾಗುತ್ತದೆಯಾದರೂ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಗಣೇಶನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಯಾಕೆಂದರೆ, ಈ ದಿನವು ಗಣೇಶ ಚತುರ್ಥಿ ಹಬ್ಬದ ದಿನವಾಗಿದೆ. ಈ ದಿನದಂದು ಗಣೇಶನು ಜನಿಸಿದನು ಎಂಬುದು ಧಾರ್ಮಿಕ ನಂಬಿಕೆಯಾಗಿದೆ.ಆಚರಿಸುವುದರಿಂದ ನಾವು ಸಂತೋಷವನ್ನು ಪಡೆದುಕೊಳ್ಳಬಹುದಾಗಿದೆ.ಈ ಶುಭ ದಿನದಂದು ಮನೆಗಳಲ್ಲಿ, ಕಛೇರಿಗಳಲ್ಲಿ, ದೇವಸ್ಥಾನಗಳಲ್ಲಿ ಹಾಗೂ ಪೆಂಡಲ್‌ಗಳಲ್ಲಿ ಗಣೇಶನ ವಿಗ್ರಹವನ್ನು ಇಟ್ಟು ಪೂಜೆಯನ್ನು ಮಾಡುತ್ತಾರೆ. ಗಣೇಶ ಚತುರ್ಥಿಯ ದಿನದಂದು 10 ದಿನಗಳ ಕಾಲ ಗಣೇಶನ ವಿಗ್ರಹವನ್ನು ಇಟ್ಟು ಪೂಜೆಯನ್ನು ಮಾಡಿ ಅನಂತ ಚತುರ್ದಶಿ ದಿನದಂದು ಗೌರವ ಪೂರ್ವಕವಾಗಿ ವಿಸರ್ಜನೆಯನ್ನು ಮಾಡಲಾಗುತ್ತದೆ.ಎಂದು ಗಣೇಶನ ಆರಾಧಕರು ಚಿದಂಬರ ಭಟ್ಟರು ಹೇಳಿದರು


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ