ನ್ಯಾಯಾಲಯ ಸ್ಥಾಪನೆಗೆ ಶಾಸಕರಿಂದ ಸ್ಥಳ ವೀಕ್ಷಣೆ

  


ಕೊಟ್ಟೂರು: ಪಟ್ಟಣದಲ್ಲಿ ನ್ಯಾಯಾಲಯ ಆರಂಭಿಸಲು ಅಗತ್ಯವಿರುವ ಕಟ್ಟಡ ಮುಂತಾದ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವುದಾಗಿ ಶಾಸಕ ಕೆ.ನೇಮರಾಜನಾಯ್ಕ ಭರವಸೆ ನೀಡಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಕಛೇರಿಯಲ್ಲಿ ಸೋಮವಾರ ನಡೆದ ನ್ಯಾಯಲಯ ಹೋರಾಟ ಸಮಿತಿ ಪದಾಧಿಕಾರಿಗಳನ್ನುದ್ದೇಶಿಸಿ ಮಾತನಾಡಿ ವಕೀಲರ ಬೇಡಿಕೆಯಂತೆ ಪಟ್ಟಣ ಪಂಚಾಯ್ತಿ ಕಚೇರಿಯ ಹಿಂಭಾಗದಲ್ಲಿರುವ ಬಾಲ ಭವನದಲ್ಲಿ ನಡೆಯುತ್ತಿರುವ ನಮ್ಮ ಕ್ಲಿನಿಕ್ ಆಸ್ಪತ್ರೆಯನ್ನು ಹಳೇ ನಾಡಕಚೇರಿ ಕಟ್ಟಡಕ್ಕೆ ಸ್ಥಳಾಂತರಿಸಿ ಬಾಲ ಭವನ ಕಟ್ಟಡವನ್ನು ತಾತ್ಕಾಲಿಕವಾಗಿ ನ್ಯಾಯಲಯ ಸ್ಥಾಪನೆಗೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಶೀಘ್ರದಲ್ಲಿಯೇ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೂ ಸಹ ಕೂಡ್ಲಿಗಿ ರಸ್ತೆಯಲ್ಲಿ ಸೂಕ್ತ ಸ್ಥಳವನ್ನು ಮಂಜೂರು ಮಾಡುವುದಲ್ಲದೇ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನ ಕಲ್ಪಿಸಿಕೊಡುವುದಾಗಿ ತಿಳಿಸಿದರು.

ನ್ಯಾಯಾಲಯ ಹೋರಾಟ ಸಮಿತಿ ಅಧ್ಯಕ್ಷ ಎಂ. ಗುರುಸಿದ್ಧನಗೌಡ ಮಾತನಾಡಿ ಉಚ್ಚ ನ್ಯಾಯಾಲಯದ ಬಳ್ಳಾರಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಆರ್ ನಟರಾಜ್ ಇವರು ಹರಪನಹಳ್ಳಿಗೆ ಇತ್ತೀಚೆಗೆ ಆಗಮಿಸಿದ ಸಂದರ್ಭದಲ್ಲಿ ನ್ಯಾಯಾಲಯ ಸ್ಥಾಪನೆಗೆ ಮನವಿ ಸಲ್ಲಿಸಿದಾಗ ಕೂಡಲೇ ಸ್ಪಂದಿಸಿ ಬಳ್ಳಾರಿಯ ಪ್ರಧಾನ ಜಿಲ್ಲಾ ಸತ್ರ ನ್ಯಾಯದೀಶರಾದ ಕೆ.ಜಿ.ಶಾಂತಿ ಇವರಿಗೆ ಕೊಟ್ಟೂರಿನಲ್ಲಿ ಕಟ್ಟಡ ವೀಕ್ಷಣೆ ಮಾಡಿ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ ಬಗ್ಗೆ ವಿವರಣೆ ನೀಡಿದರು.

ಅಖಂಡ ಎರಡೂ ತಾಲ್ಲೂಕುಗಳಿಗೆ ಸಂಬಂಧಿಸಿದಂತೆ ಕೂಡ್ಲಿಗಿ ನ್ಯಾಯಾಲಯದಲ್ಲಿ ವ್ಯಾಜ್ಯಗಳು ಅತಿ ಹೆಚ್ಚು ಇರುವುದರಿಂದ ಶೀಘ್ರವಾಗಿ ಇತ್ಯರ್ಥ ಪಡಿಸಿ ಕಕ್ಷಿದಾರರಿಗೆ ನ್ಯಾಯ ದೊರಕಿಸಿಕೊಡಲು ವಿಳಂಭವಾಗುತ್ತಿದೆ ಹಾಗಾಗಿ ಕೊಟ್ಟೂರಿನಲ್ಲಿ ನ್ಯಾಯಾಲಯ ಸ್ಥಾಪನೆಯಾದರೆ ಕಕ್ಷಿದಾರರಿಗೆ ಸಹಾಯವಾಗುವುದಲ್ಲದೇ ವಕೀಲರಿಗೂ ಸಹ ವ್ಯಾಜ್ಯಗಳನ್ನು ಶೀಘ್ರದಲ್ಲಿ ಇತ್ಯರ್ಥ ಪಡಿಸಲು ಸಹಕಾರಿಯಾಗುತ್ತದೆ ಹೊ.ಮ.ಪಂಡಿತಾರಾಧ್ಯ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಎಂ.ಎಂ.ಜೆ.ಹರ್ಷವರ್ಧನ್, ಬೂದಿ ಶಿವಕುಮಾರ್, ತಹಶೀಲ್ದಾರ್ ಜಿ.ಕೆ.ಅಮರೀಶ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಬಿ.ಆನಂದಕುಮಾರ್, ಪ.ಪಂ.ಮುಖ್ಯಾಧಿಕಾರಿ ಎ. ನಸರುಲ್ಲಾ, ಹೋರಾಟ ಸಮಿತಿ ಉಪಾಧ್ಯಕ್ಷ ಪಿ.ಪ್ರಭುದೇವ್, ಕಾರ್ಯದರ್ಶಿ ಶಿವಾನಂದ ಬಾವಿಕಟ್ಟಿ, ಜಂಟಿ ಕಾರ್ಯದರ್ಶಿಗಳಾದ ಕೆ.ಗುರುಬಸವರಾಜ್, ಟಿ.ಹನುಮಂತಪ್ಪ, ಖಜಾಂಚಿ ಟಿ.ಎಂ.ಸೋಮಯ್ಯ ಹಾಗೂ , ಕಾಳಾಚಾರಿ, ಎಸ್.ಎಂ.ಶಿವಪ್ರಕಾಶ್, ಡಿ.ಲಿಂಗರಾಜ್ ಮುಂತಾದ ವಕೀಲರು ಪಾಲ್ಗಪಾಲ್ಗೊಂಡಿದ್ದರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*