ಲೋಕಾಅದಾಲತ್ ದುಡ್ಡು ಇಲ್ಲದೆಯೂ ನ್ಯಾಯ ಒದಗಿಸುವುದು : ನ್ಯಾಯಾಧೀಶೆ ರೂಪಾ ಶ್ರೀ ವಗ್ಗಾ
ಮಸ್ಕಿ : ಪಟ್ಟಣದ ಬ್ರಮರಾಂಬ ಮಲ್ಲಿಕಾರ್ಜುನ ಭವನದಲ್ಲಿ ತಾಲೂಕ ನ್ಯಾಯವಾದಿಗಳ ಸಂಘ ಮಸ್ಕಿ ವತಿಯಿಂದ ನ್ಯಾಯಾಧೀಶರಾದ ಶ್ರೀಮತಿ ರೂಪಾ ಶ್ರೀ ವಗ್ಗಾ ರವರ ನೇತೃತ್ವದಲ್ಲಿ ಜರುಗಿದ ಕಾನೂನು ಅರಿವು - ನೆರವು ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ಜರುಗಿತು.
ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಮೂಲಭೂತ ಕರ್ತವ್ಯ ಮತ್ತು ಶಾಶ್ವತ ಲೋಕ ಅದಾಲತ್ ಯಾವ ರೀತಿ ಕಾರ್ಯ ನಿರ್ವಹಿಸುತ್ತೆ..? ರಾಷ್ಟ್ರ ಗೀತೆ ಹಾಡುವಾಗ ಎಲ್ಲರೂ ಹೇಗೆ ಗೌರವ ಕೊಡುತ್ತೇವೆಯೋ ಹಾಗೆಯೇ ಕಾನೂನು ನಿಯಮವನ್ನು ಪಾಲಿಸಬೇಕು.
ರಿಟ್ ಅರ್ಜಿಯನ್ನು
ಸುಪ್ರಿಂಕೋರ್ಟ್ ಅಲ್ಲಿ ಆರ್ಟಿಕಲ್ 32 ಪ್ರಕಾರ ಮತ್ತು ಹೈ ಕೋರ್ಟ್ ಅಲ್ಲಿ ಆರ್ಟಿಕಲ್ 226 ಪ್ರಕಾರ ರಿಟ್ ಅರ್ಜಿ ಹಾಕಬಹುದು. ಎಲ್ಲಾ ನಾಯಾಲಯದಲ್ಲಿ ಯೂ ಒಂದೇ ರೀತಿಯ ನ್ಯಾಯ ಒದಗಿಸಲಾಗುವುದು.
ನಾನೊಬ್ಬ ಬಡವ ಕಟ್ಟ ಕಡೆಯ ನಾಗರಿಕರಿಗೂ (ಡಿ.ಎಲ್.ಎಸ್.ಎ) ಪ್ರಕಾರ ಸರಕಾರಿ ವಕೀಲರನ್ನು ನೇಮಕ ಮಾಡಲಾಗಿರುತ್ತೇ ದುಡ್ಡು ಇಲ್ಲಾ ಅಂದ್ರು ನ್ಯಾಯ ಒದಗಿಸುವುದು ಇವರ ಕಾರ್ಯ.
ಕೇಸು ದಾಖಲು ಮಾಡಲು ಅನಾರೋಗ್ಯ ಕಾರಣ ಇದ್ದಲ್ಲಿ ಕುಟುಂಬ ಸದಸ್ಯರ ಒಬ್ಬರ ಹೆಸರಲ್ಲಿ ಕೇಸ್ ಹಾಕಬಹುದು.
ಒಬ್ಬ ಮಹಿಳೆ ಯಶಸ್ಸಿನ ಹಿಂದೆ ತಮ್ಮ ಕಾಲ ಮೇಲೆ ಮುಂದೆ ಬರಲು ಒಬ್ಬ ಪುರುಷನ ಸಹಾಯದಿಂದ ಅದು ತಂದೆಯ,ಗೆಳೆಯನ,ಗಂಡನ ರೂಪದಲ್ಲಿ ಆಗಿರಬಹುದು.ಲೋಕ ಅದಾಲತ್ ಅಲ್ಲಿ ಸಿವಿಲ್ ಕೇಸುಗಳಾದ ಗಂಡ ಹೆಂಡತಿ ಜಗಳ , ಆಸ್ತಿ ಹಕ್ಕು, ಇತ್ಯರ್ಥ,ವಿದ್ಯುತ್ ಬಿಲ್,ನೀರು ಬಿಲ್ ರಾಜಿ ಮಾಡಬಹುದು,
ಅತ್ಯಾಚಾರ,ಕೊಲೆ ಪ್ರಕರಣ ದಂತಹ ಕ್ರಿಮಿನಲ್ ಕೇಸ್ ಗಳನ್ನು ವಕೀಲರ ಮೂಲಕ ನಿಮ್ಮ ನ್ಯಾಯವನ್ನು ಪಡೆಯಬಹುದು ಎಂದು ತುಂಬಾ ಅರ್ಥಗರ್ಭಿತವಾಗಿ ಹೇಳಿದ್ದಾರೆ.
ನಂತರ ಮಾತನಾಡಿದ ರಾಮಣ್ಣ ನಾಯಕ್ ಹಿರಿಯ ವಕೀಲರು ಸಾರ್ವಜನಿಕರಿಗೆ ಲೋಕ ಅದಾಲತ್ ಎಂದರೇನು ? ಜನಸಾಮಾನ್ಯರ ನ್ಯಾಯಾಲಯ (ಜನತಾ ನ್ಯಾಯಾಲಯ) 1987 ರಲ್ಲಿ ಸ್ಥಾಪನೆ ಆಯಿತು.
ಮೊಟ್ಟ ಮೊದಲ ಬಾರಿಗೆ 1986 ರಲ್ಲಿ ಗುಜರಾತ್, ಚೆನ್ನೈ ನಲ್ಲಿ ಹಲವು ಕೇಸುಗಳು ರಾಜಿ ಆಗಿದ್ದರಿಂದ 1987 ರಲ್ಲಿ ಜನತಾ ನ್ಯಾಯಾಲಯ ಸ್ಥಾಪನೆ ಆಯಿತು. ಪಂಚಾಯ್ತಿ ನ್ಯಾಯಾಲಯ ಒಂದು ಕುಟುಂಬದ ಸಂಭಂದದ ಪರವಾಗಿ ಹೇಳುವ ನ್ಯಾಯಕಟ್ಟೆ ಆಯಿತು. ಆದ್ದರಿಂದ ಎಲ್ಲರೂ ನ್ಯಾಯದ ಮೊರೆ ಹೋದರು ಸಿವಿಲ್ ದಾವೆ ಎಲ್ಲವನ್ನೂ, ಸಾದ ಕೇಸುಗಳು ಇದ್ದ ಪ್ರಕರಣವನ್ನು ರಾಜಿ ಮಾಡಿಕೊಳ್ಳಬಹುದು. 5 ಗುಂಟೆ ಜಮೀನಿಗೆ "ಗೆದ್ದವನು ಸೋತ" ಸೋತವನು ಗೆದ್ದ ಉದಾಹರಣೆ ಇವೆ ಹಾಗೆಯೇ ಲೋಕ ಅದಾಲತ್ ನಲ್ಲಿ ಯಾವುದೇ ಶುಲ್ಕ ಇಲ್ಲದೇ ನ್ಯಾಯ ಪಡೆಯಬಹುದು ಎಂದು ಸರಳ ಭಾಷೆಯಲ್ಲಿ ನೆರೆದ ಜನತೆಯ ಮನಮುಟ್ಟುವ ರೀತಿಯಲ್ಲಿ ತಿಳಿ ಹೇಳಿದರು.
ಇದೇ ಸಂದರ್ಭದಲ್ಲಿ ಡಾಕ್ಟರ್ ಬಸವಲಿಂಗಪ್ಪ ದಿವಟರ್,ಮಾರುತಿ ಕಲ್ಲೂರು ಸರಕಾರಿ ಅಭಿಯೋಜಕರು, ಮಲ್ಲಪ್ಪ ನಾಗರಬೆಂಚಿ ಕಾರ್ಯದರ್ಶಿ, ಅಮರೇಗೌಡ ಸಂಜಿ ಉಪಾಧ್ಯಕ್ಷರು,ಹಿರಿಯ ವಕೀಲರಾದ ಈಶಪ್ಪ ದೇಸಾಯಿ, ಶಿವರಾಜ್ ಕಣ್ಣೂರು,ರಾಮಣ್ಣ ಬಳಗಾನೂರ ಸೇರಿದಂತೆ ಭೀಮದಾಸ ಪಿಎಸ್ಐ ಕೋರ್ಟ್ ಪೊಲೀಸರು ಹಾಗೂ ಪಟ್ಟಣದ ನಾಗರಿಕರು ಇದ್ದರು.



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ