* ಗಣೇಶ ಹಬ್ಬ, ಈದ್ ಮಿಲಾದ್ ಹಬ್ಬದ ಪ್ರಯುಕ್ತ ಪೊಲೀಸ್ ಇಲಾಖೆಯಿಂದ ಶಾಂತಿ ಸಭೆ*
"ಈದ್ ಮಿಲಾದ್, ಗಣೇಶ ಚತುರ್ಥಿ ಎರಡು ಹಬ್ಬಗಳು ಒಟ್ಟಿಗೆ ಇರುವುದರಿಂದ ಸೌಹಾರ್ದಯುತವಾಗಿ ಹಬ್ಬಗಳನ್ನು ಆಚರಿಸಬೇಕೆಂದು ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಹೇಳಿದರು."
ಕೊಟ್ಟೂರು : ಪಟ್ಟಣ ಪೊಲೀಸ್ ಠಾಣೆ ಆವರಣದಲ್ಲಿ ಪೊಲೀಸ್ ಇಲಾಖೆಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಹಿಂದೂ-ಮುಸ್ಲಿಂ ಮುಖಂಡರ ಶಾಂತಿ ಸಭೆಯಲ್ಲಿ ಮಾತನಾಡಿದ ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಅವರು, ಯಾರು ಕೂಡ ಪಿಓಪಿ ಗಣೇಶ್ ಮೂರ್ತಿ ಬಳಸದೇ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಬೇಕು. ಯಾವುದೇ ಪ್ಲೆಕ್ಸ್, ಬಟಿಂಗ್ಸ್ ಹಾಕಬೇಕಾದರೆ ಅನುಮತಿ ಪಡೆಯಬೇಕು. ಒಂದು ಧರ್ಮಕ್ಕೆ ತೊಂದರೆ ಕೊಡದಂತೆ ಹಬ್ಬ ಆಚರಿಸಬೇಕು ಎಚ್ಚರಿಕೆ ನೀಡಿದರು.
ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬವನ್ನು ಶಾಂತಿ ಸೌಹಾರ್ದತೆಯೊಂದಿಗೆ ಧಾರ್ಮಿಕ ಭಾವನೆಗಳಿಗೂ ಧಕ್ಕೆಯಾಗದಂತೆ ಆಚರಿಸಿ ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳಿ,ಗಣೇಶ ಮೂರ್ತಿ ಪ್ರತಿಷ್ಠಾಪನೆ ಹತ್ತಿರ ಇಸ್ಪೇಟ್ ಆಡದಂತೆ ಎಚ್ಚರಿಕೆ ವಹಿಸಬೇಕೆಂದು ಕೊಟ್ಟೂರು ಸಿಪಿಐ ದುರುಗಪ್ಪ ಹೇಳಿದರು.
ಪಿಎಸ್ಐ ಗೀತಾಂಜಲಿ ಶಿಂಧೆ,ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎನ್ ಬರ್ಮಣ್ಣ, ಡಿಎಸ್ಎಸ್ ಜಿಲ್ಲಾ ಸಂಚಾಲಕ ಬುದ್ಧಿ ಮರಿಸ್ವಾಮಿ ಮಾತನಾಡ ಸ್ವಾತಂತ್ರ್ಯ ಪೂರ್ವದಲ್ಲಿ ಹಬ್ಬದ ನಿಮಿತ್ತ ಜನರನ್ನು ಕುಡಿಸಲು ಗಣೇಶ ಚತುರ್ಥಿ ಹಬ್ಬವನ್ನು ಆಚರಣೆ ಮಾಡಲಾಯಿತು.ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ವನ್ನು ಸೌಹಾರ್ದತೆಯಿಂದ ಆಚರಣೆ ಮಾಡಿ ಈ ಹಿಂದೆ ಅಂಬೇಡ್ಕರ್, ವಾಲ್ಮೀಕಿ ಸಮುದಾಯಗಳ ನಡುವೆ ಘರ್ಷಣೆಯಾಗಿರುವುದು ಇಲ್ಲಿವರೆಗೂ ಆಚರಣೆ ಮಾಡಿದಂತಾಗಿದೆ ಮುಂದಿನ ವರ್ಷ ಎರಡು ಸಮುದಾಯದವರು ಹೊಂದಾಣಿಕೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ ಆಚರಿಸಲಾಗುತ್ತದೆ ಎಂದು ಹೇಳಿದರು
ಸೇರಿದಂತೆ ಕೆಇಬಿ ಚೇತನ್, ಅಗ್ನಿಶಾಮಕ ದಳದ ಅಧಿಕಾರಿ, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಎ ನಸರುಲ್ಲಾ, ಹಾಗೂ ಹಿಂದೂ-ಮುಸ್ಲಿಂ ಸಮುದಾಯದ ಮುಖಂಡರುಗಳು, ಗಣೇಶ ಮಂಡಳಿಯ ಯುವಕರು ಉಪಸ್ಥಿತರಿದ್ದರು.



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ