ಆಪರೇಷನ್ ಸಿಂಧೂರ ಭಾರತ ದೇಶದ ಕೀರ್ತಿ - ಕೆ ನೇಮಿರಾಜ್ ನಾಯ್ಕ

" ಸರಳವಾಗಿ 79 ನೇ ಸ್ವಾತಂತ್ರೋತ್ಸವ ದಿನಾಚರಣೆ"

ಕೊಟ್ಟೂರು: ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ ವತಿಯಿಂದ  ಹಮ್ಮಿಕೊಂಡಿದ್ದ 79 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣವನ್ನು ನೆರವೇರಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ನೇಮಿರಾಜ್ ನಾಯ್ಕ್ ಮಾತನಾಡಿ ಪಾಕಿಸ್ನಾನದ ವಿರುದ್ಧ ಭಾರತ ದೇಶವು ಆಪರೇಷನ್ ಸಿಂಧೂರ ಕೈಗೊಂಡಿ ರುವುದು ದೇಶದ ಕೋಟ್ಯಂತರ ಜನರ ಪ್ರತಿಬಿಂಬವಾಗಿದೆ ಮತ್ತು ಭಯೋತ್ಪಾದಕರ ಹಡಗು ತಾಣ ಗಳನ್ನು ಧ್ವಂಸ ಮಾಡುವುದರಲ್ಲಿ ಭಾರತ ಸೇನೆ ಯಶಸ್ವಿಯಾಗಿದೆ ಇದು ನಮಗೆ ಹೆಮ್ಮೆಯ ವಿಷಯ. ನಮ್ಮ ಬೆಂಗಳೂರಿನಲ್ಲಿ ತಯಾರಾದ ಮೇಕ್ ಇನ್ ಇಂಡಿಯಾ ಡ್ರೋನ್ ಗಳು   ಪಾಕಿಸ್ತಾನದ ಗುಜರಿ ಡ್ರೋನ್ ಗಳನ್ನು ಹೊಡೆದು ಹಾಕಲು ನಮ್ಮ ರಕ್ಷಣಾ ಪಡೆ ಯಶಸ್ವಿಯಾಗಿದೆ ಎಂದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭಬಾಯಿ ಪಾಟೇಲ್. ಲಾಲ್ ಬಹದ್ದೂರ್ ಶಾಸ್ತ್ರಿ, ಸೇರಿದಂತೆ ಇತರ ನಾಯಕರನ್ನು ಸ್ಮರಿಸಿದರು

ಈ ಕಾರ್ಯಕ್ರಮದಲ್ಲಿ ಪತ್ರಿಕೋ ದ್ಯಮದಲ್ಲಿ ಸಾಧನೆಗೈದ ವರದಿಗಾರರಾದ ಬಂದಾತರ  ಕೊಟ್ರೇಶ್, ಕೊಟ್ರೇಶ್ ಉತ್ತಂಗಿ, ಮಂಜುನಾಥ್, ಹಾಗೂ ಗ್ರಂಥಾಲಯ ಮೇಲ್ವಿಚಾರಕರ  ಶ್ರೀ ಮುರುಗೇಶ್ ಗೌಡ, ಸೇರಿದಂತೆ ಇತರ ಕ್ಷೇತ್ರದಲ್ಲಿ ಸಾಧನೆಗೈದ ಸನ್ಮಾನ ಮಾಡಲಾಯಿತು.

ಇದಕ್ಕಿಂತ ಮುಂಚೆ ಪಿಎಸ್ಐ ಪಥಸಂಚಲನ ನೆರವೇರಿಸಲಾಯಿತು.ಇದರಲ್ಲಿ ಆರಕ್ಷಕ ಮತ್ತು ಗೃಹರಕ್ಷಕ, ಕೊಟ್ರೇಶ್ವರ ಕಾಲೇಜ್ ಎನ್‌ಸಿಸಿ ತಂಡ  ಸೇರಿದಂತೆ ಹಲವು ತಂಡಗಳು ಭಾಗವಹಿಸಿದ್ದವು.

ನಂತರ  ಸಾಂಸ್ಕೃ ತಿಕೆಯ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತು ವಿದ್ಯಾ ರ್ಥಿಗಳು ಸಂಗೀತ ನೃತ್ಯ  ಪ್ರದರ್ಶಿಸುವ ಮೂಲಕ ಗಮನ ಸೆಳೆದರು.

ಈ ಸಂದರ್ಭದಲ್ಲಿ ತಹಶೀ ಲ್ದಾರ್ ಅಮರೇಶ್ ಜಿಕೆ, ಇಒ ಡಾ.ಆನಂದ ಕುಮಾ‌ರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ ನಸರುಲ್ಲಾ, సిబిఐ ನಾರಾಯಣ, ಪ.ಪಂ ಅಧ್ಯಕ್ಷೆ ಬದ್ದಿ ರೇಖಾ ರಮೇಶ್, ಉಪಾಧ್ಯಕ್ಷ ಸಿದ್ದಯ್ಯ, ಸ್ಥಾಯಿ ಸಮಿತಿಯ ಅಧ್ಯಕ್ಷೆ ಆಂಜಿನಮ್ಮ ಸದಸ್ಯರು, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಯೋಗೀಶ್ ದಿನ್ನೆ,ಸರ್ಕಾರಿ ಕಾಲೇಜು ಪ್ರಾಂಶುಪಾಲ ಸೋಮಶೇಖರ್, ರೈತ ಸಂಘದ ಮುಖಂಡರು, ವಿವಿಧ ಸಂಘಟನೆಯ  ಸೇರಿ ದಂತೆ ಇತರರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*