79ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಸಡಗರ.

 

ವರದಿ - ಮಂಜುನಾಥ್ ಕೊಳೂರು

 ಕೊಪ್ಪಳ. ಆಗಸ್ಟ್ 16 : - ದೇಶಕ್ಕೆ ಸ್ವಾತಂತ್ರ್ಯ ಪಡೆಯಲು ಹಲವಾರು ಮಹನೀಯರು ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟು ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಕೊಡಿಸಿದ 79ನೇ ಸ್ವಾತಂತ್ರ್ಯೋತ್ಸವ ಆಚರಣೆಯನ್ನು ನಗರದ ಮೋಚಿ (ಮುಚಿಗೇರ) ಸಮಾಜ ಬಾಂಧವರು ಜವಾಹರ ರೋಡ್, ಶ್ರೀ ಬಂಡೆ ದುರ್ಗಮ್ಮ ದೇವಸ್ಥಾನದ ಮುಂಭಾಗದಲ್ಲಿ ಆಯೋಜಿಸಿದ್ದ ಧ್ವಜರೋಹಣದ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ// ಬಿ.ಆರ್. ಅಂಬೇಡ್ಕರ್ ರವರ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಧ್ವಜಾರೋಹಣ ಮಾಡಿ ರಾಷ್ಟ್ರಧ್ವಜಕ್ಕೆಗೌರವ ಸಮರ್ಪಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜುನಾಥ ಬಂಡಿ , ಗೌರವಾಧ್ಯಕ್ಷ ಹುಲಗಪ್ಪ ಹುನಗುಂದ , ಮಾಜಿ ಉಪಾಧ್ಯಕ್ಷರಾದ ರಾಮಣ್ಣ ಮಂಗಳೂರು ನೆರವೇರಿಸಿದರು.

 ಧ್ವಜಾರೋಹಣ ನೆರವೇರಿಸಿದ ನಂತರ ಪರಸ್ಪರ ಸಿಹಿ ವಿತರಿಸಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕವನ್ನು ವಿತರಿಸಿದರು. 

ಧ್ವಜಾರೋಹಣ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಪಕೀರಪ್ಪ ಹಾದಿಮನಿ , ಕಾರ್ಯದರ್ಶಿ ಮಹೇಶ್ ಹಾದಿಮನಿ, ಖಜಾ0ಚಿ ಆನಂದ ದೊಡ್ಮನಿ , ಸಹ ಕಾರ್ಯದರ್ಶಿ ಹನುಮಂತ ಮಂಗಳೂರು, ಸದಸ್ಯರಾದ ಈರಪ್ಪ ಹುಣಸಿಮರ , ತಿಪ್ಪಣ್ಣ ಹಾದಿಮನಿ , ಆಂಜನೇಯ ಬೆದವಟ್ಟಿ , ಮಂಜುನಾಥ ಹಾದಿಮನಿ , ಈರಣ್ಣ ಮೂಲಿಮನಿ, ಕಿರಣ್ ಮಂಗಳೂರು , ಮಂಜುನಾಥ ಲಕ್ಷ್ಮಣ ಹಾದಿಮನಿ , ಮಾರುತಿ ಬೆಳವಟ್ಟಿ ಹಾಗೂ ಸಮಾಜ ಬಾಂಧವರು, ಹಿರಿಯರು ಶಾಲಾವಿದ್ಯಾರ್ಥಿಗಳು ಇತರರು ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*