ದೇವದಾಸಿ ಮಹಿಳೆರಿಗೆ ಆರೋಗ್ಯ ತಪಾಸಣಾ ಶಿಬಿರ
ಕೊಟ್ಟೂರು :ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ದೇವದಾಸಿ ಪುನರ್ವಸತಿ ಯೋಜನೆಯ ವಿಜಯನಗರ ಜಿಲ್ಲೆ ಮಾಜಿ ದೇವದಾಸಿ ಮಹಿಳೆಯರಿಗೆ ತಾಲೂಕು ಮಟ್ಟದ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾಕ್ಟರ್ ಸುಲೋಚನಾ ಮಾಜಿ ದೇವದಾಸಿ ಮಹಿಳೆಯರು ಆರ್ಥಿಕವಾಗಿ ಹಿಂದುಳಿದವರಾಗಿದ್ದು ಅವರ ಆರೋಗ್ಯದ ಕಾಳಜಿಯಿಂದ ಸರ್ಕಾರ ಈ ಒಂದು ಉಚಿತ ಶಿಬಿರವನ್ನು ಹಮ್ಮಿಕೊಂಡಿದ್ದು ಇದೊಂದು ಅತ್ಯುತ್ತಮ ಕಾರ್ಯಕ್ರಮ ಎಂದು ಹೇಳಿದರು. ಈ ಸಂದರ್ಭದಲ್ಲಿ ದೇವದಾಸಿ ಪುನರ್ವಸತಿ ಯೋಜನೆಯ ತಾಲೂಕು ಅನುಷ್ಠಾನಾಧಿಕಾರಿಗಳು ಹನುಮಂತ ಮಾತನಾಡಿ ನಿಗಮದಿಂದ ನೀಡಲ್ಪಡುವ ಮಾಶಾಸನ ಮತ್ತು ಇತರೆ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು ಹಾಗೆ ಮುಂದುವರೆದು ಸಂದ ಮೂರನೇ ಸಮೀಕ್ಷೆಯ ಕುರಿತು ಮಾಹಿತಿಯನ್ನು ನೀಡಿ ಕ್ಷಮಿಸಿ ನೈಜ ದೇವದಾಸಿ ಮಹಿಳೆಯರು ಭಾಗವಹಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾಕ್ಟರ್ ಸುಲೋಚನಾ, ಐಸಿಟಿಸಿ ಕೌನ್ಸೆಲರ್ (ಅouಟಿseಟoಡಿ)ಮಹಾಂತೇಶ್ ಜಿ ಎಮ್, ಲ್ಯಾಬ್ ಟೆಕ್ನಿಷಿಯನ್ ಬಸವರಾಜ, ಎನ್ ಸಿಡಿ ಕೌನ್ಸೆಲರ್ (ಅouಟಿseಟoಡಿ)ಚೆನ್ನಯ್ಯ, ದೇವದಾಸಿ ಕ್ಷೇಮಾಭಿವೃದ್ಧಿ ಒಕ್ಕೂಟ ರಾಜ್ಯ ಕಾರ್ಯದರ್ಶಿ ರೇಣುಕಮ್ಮ, ತಾಲೂಕ್ ಅನುಷ್ಠಾನಾಧಿಕಾರಿ ಹನುಮಂತ ಎಂ ಹಾಗೂ ಸೌಖ್ಯ ಬೆಳಕು ಸಮುದಾಯ ಸೇವಾ ಸಂಸ್ಥೆಯ ಸಿಬ್ಬಂದಿಗಳು..ವಿವಿಧ ಗ್ರಾಮಗಳ ಮಾಜಿ ದೇವದಾಸಿ ತಾಯಂದಿರು ಪಾಲ್ಗೊಂಡಿದ್ದರು..

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ