ಪೋಸ್ಟ್‌ಗಳು

ಅಕ್ಟೋಬರ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕಾಂಗ್ರೇಸ್ ಕಛೇರಿಯಲ್ಲಿ ಜನ್ಮ ಹಾಗೂ ಪುಣ್ಯಸ್ಮಣಾಚರಣೆ

ಇಮೇಜ್
  ಮಸ್ಕಿ : ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ಇಂದು ನಡೆದ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಯವರ ಪುಣ್ಯ ಸಂಸ್ಮರಣೆ ಹಾಗೂ ಮಾಜಿ ಗೃಹ ಸಚಿವ ಸರದಾರ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ನಿಮಿತ್ತ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕರ್ಪೂರ ಇಟ್ಟು ಕಾಯಿ ಒಡೆದು ಪೂಜೆ ಸಲ್ಲಿಸುವ ಮೂಲಕ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪೂರ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಮೈಬುಸಾಬ ಮುದ್ದಾಪೂರ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಡಿ.ಚಿಗರಿ, ಸೂಗಪ್ಪ ಮರಳದ, ಶರಣಪ್ಪ ಎಲಿಗಾರ, ಆನಂದ ವೀರಾಪೂರ, ಸಿದ್ದು ಮುರಾರಿ, ಸುರೇಶ್ ಖೈರವಾಡಗಿ ಸೇರಿದಂತೆ ಇನ್ನಿತರ ಮುಖಂಡರು ಇದ್ದರು.

"ದೀಪಾವಳಿ" ಅಂದು, ಮತ್ತು ಇಂದು

ಇಮೇಜ್
ಮಸ್ಕಿ : ಇಂದು ನೀರು ತುಂಬುವ ಹಬ್ಬ ಹೌದೇ?? ಹೌದು.ಆದರೆ ನೀರು ತುಂಬಲು ಹಂಡೆ ಇಲ್ಲ. ಕೊಡವಿಲ್ಲ. ನೀರಿನ ಬಸಿ ಇಲ್ಲವೇ ಇಲ್ಲ.ಸುಣ್ಣದ ಪಟ್ಟೆ ಕೆಮ್ಮಣ್ಣು ಇಲ್ಲ. ಹಂಡೆಯ ಸುತ್ತ ಸುತ್ತಲು ಮಾಲಿಂಗನ ಬಳ್ಳಿ ಇಲ್ಲ.  ನರಕ ಚತುರ್ದಶಿಯಂದು ಅಭ್ಯಂಗ ಸ್ನಾನಕ್ಕಾಗಿ ಧಗಧಗಿಸುವ ನೀರೊಲೆ ಇಲ್ಲ.ಸೆಗಣಿ ಕದಡಿದ ನೀರು ಹಾಕಿ ಅಂಗಳ‌ ಸಾರಿಸಿ ದೊಡ್ಡ ದೊಡ್ಡ ರಂಗೋಲಿ ಇಡುವ ಪೈಪೋಟಿ ಇಲ್ಲ.  ಅಕ್ಕಿ ನೆನೆಸಿ, ನುಣ್ಣಗೆ ಒರಳಿನಲ್ಲಿ‌ ತಿರುವಿ, ಹತ್ತಿಯ ತುಂಡಿನ ಸಹಾಯದಿಂದ ಹೊಸ್ತಿಲು, ಮೆಟ್ಟಿಲು ದೇವರ ಮುಂದೆ, ನಡುಮನೆ, ಕೋಣೆ ಕೋಣೆಗಳ ಗೋಡೆ ನೆಲದ ಅಂಚಿನಲ್ಲಿ. ಬೆರಳಿನಲ್ಲಿ ಇಡುತ್ತಿದ್ದ ಅಕ್ಕಿಹಿಟ್ಟಿನ ರಂಗೋಲಿ ಇಲ್ಲ. ಸೆಗಣಿಯಿಂದ ಕೆರಕನನ್ನು ಮಾಡಿ, ಗುಂಡನೆಯ ಚೆಂಡು ಹೂ ಸಿಕ್ಕಿಸಿ, ಮನೆಯ ಪ್ರತಿ ಬಾಗಿಲಿನ ಹೊಸ್ತಿಲಿನ ಅಂಚಿನಲ್ಲಿ ಇಡಲು ಎಷ್ಟೊಮನೆಗಳಿಗೆ ಹೊಸ್ತಿಲೇ ಇಲ್ಲ ಬೆಳಗಿನ ಜಾವ ಮೂರು ನಾಲ್ಕುಗಂಟೆಗೇ ಎಣ್ಣೆ ನೀರಿಗಾಗಿ ಎಬ್ಬಿಸುತ್ತಿದ್ದ ಅಮ್ಮ, ನಡು ಮನೆ ಸಾರಿಸಿ ರಂಗೋಲಿ ಇಟ್ಟು ಮಣೆ ಹಾಕಿ ಮಕ್ಕಳನ್ನೆಲ್ಲಾ ಸಾಲಾಗಿ ಕೂರಿಸಿ, ಹಣೆಗೆ ಕುಂಕುಮವಿಟ್ಟು, ಬೆಳ್ಳಿಯ ಬಟ್ಟಲಲ್ಲಿ ಎಣ್ಣೆ ತಂದು‌, ಹೂವಿನಿಂದ ನೆತ್ತಿಗೆ ಮೂರುಬಾರಿ ಎಣ್ಣೆ ಇಟ್ಟು, ನಂತರ ತಲೆಗೆಲ್ಲಾ ಎಣ್ಣೆ ಹಚ್ಚಿ ಟಪ ಟಪ ಬಡಿದು, ಕೈ ಕಾಲ್ಗಳಿಗೂ ಹಚ್ಚಿ ಎರಡೂ ಕೆನ್ನೆ, ಕೈ ಕಾಲ್ಗಳಿಗೂ ಎಣ್ಣೆಯ ಬೊಟ್ಟಿಟ್ಟು ಆರತಿ ಮಾಡುತ್ತಿದ್ದ...ಹಬ್ಬದ ನೀರು ಇಬ್ಬರಿಗೆ ಒಂದು ಚೊಂಬು ಎಂಬ

ಮಣ್ಣಿನ ದೀಪ, ಗಿಡ ವಿತರಿಸಿ ಹಸಿರು ದೀಪಾವಳಿ ಆಚರಿಸುವಂತೆ ಆರ್ಯವೈಶ್ಯ ಮಂಡಳಿ ಮತ್ತು ವ್ಯಾಸ ಯುವ ಜನ ಸಂಘದಿಂದ ಜನ ಜಾಗೃತಿ

ಇಮೇಜ್
  ಬೆಂಗಳೂರು, ಅ, 31; ಆರ್ಯವೈಶ್ಯ ಮಂಡಳಿ ಮತ್ತು ವ್ಯಾಸ ಯುವ ಜನ ಸಂಘ ನಗರದ ಲಾಲ್ ಬಾಗ್ ಬಳಿ ಪರಿಸರಕ್ಕೆ ಮಾರಕವಾಗಿರುವ ಪಟಾಕಿ ದೀಪಾವಳಿ ಬೇಡ. ಹಸಿರು ದೀಪಾವಳಿ ಆಚರಿಸುವಂತೆ ಮಣ್ಣಿನ ದೀಪ, ಗಿಡ ವಿತರಿಸಿ ಜನ ಜಾಗೃತಿ ಮೂಡಿಸಿತು. ಒಂದು ಸಾವಿರಕ್ಕೂ ಅಧಿಕ ಗಿಡಗಳನ್ನು ವಿತರಣೆ ಮಾಡಲಾಯಿತು.  ಸತತ 9ನೇ ವರ್ಷ ನಿರಂತರವಾಗಿ ಪ್ರಕೃತಿ ಉಳಿಸಿ, ಸಂರಕ್ಷಿಸಲು ದೀಪಾವಳಿಯಂದು ಮಣ್ಣಿನ ದೀಪಗಳು ಹಾಗೂ ಗಿಡಗಳನ್ನು ವಿತರಿಸಿ, ದೀಪ ಬೆಳಗಿಸುವ ಪಟಾಕಿ ಸುಡದೇ ಪರಿಸರ ಸ್ನೇಹಿ ದೀಪಾವಳಿ ಆಚರಣೆ ಮಾಡುವಂತೆ ಸಂದೇಶ ಸಾರಲಾಯಿತು.  ಎಪಿಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸಿಎ ಡಾ ವಿಷ್ಣು ಭರತ್ ಆಲಂಪಲ್ಲಿ ಮಾತನಾಡಿ, ಸಾಮಾಜಿಕ ಕಳಕಳಿಯುಳ್ಳ ಯುವ ಸಮೂಹದ ಜೊತೆಗೂಡಿ ಜನ ಜಾಗೃತಿ ಮೂಡಿಸಲಾಗುತ್ತಿದೆ. “ವರುಷಕೊಂದು ದೀಪಾವಳಿ, ವರುಷಕೊಂದು ಗಿಡ ನೆಡಿ” ಎಂಬ ಘೋಷವಾಕ್ಯದಡಿ ಜಾಗೃತಿ ಮೂಡಿಸಲಾಗುತ್ತಿದೆ. ದೀಪದಿಂದಲೇ ಬೆಳಕು, ಮರಗಳಿಂದಲೇ ಬದುಕು ಎಂಬ ಸಂದೇಶವನ್ನು ಪ್ರತಿಯೊಬ್ಬರೂ ಅರಿಯಬೇಕು. ಹಣತೆ ಬೆಳಗುವುದು ನಮ್ಮ ಸಂಪ್ರದಾಯ, ಪಟಾಕಿ ಸುಡುವುದಲ್ಲ ಎಂದು ತಿಳಿಸಿದರು. ಸಂಘದ ಅಧ್ಯಕ್ಷ ಅಂಜನ್, ಮಾಜಿ ಅಧ್ಯಕ್ಷ ಮುರಳಿಕೃಷ್ಣ, ಕಾರ್ಯದರ್ಶಿ ಸತೀಶ್, ಮಾಜಿ ಕಾರ್ಪೋರೇಟರ್ ದೀಪಾ ನಾಗೇಶ್, ದ್ವಾರಕಾನಾಥ್ ಶಂಕರ್ ಮತ್ತಿತರರು ಜನ ಜಾಗೃತಿಯಲ್ಲಿ ಪಾಲ್ಗೊಂಡಿದ್ದರು.

ಸೋರಿಯಾಸಿಸ್ ದಿನ: ಇಎಸ್ಐಸಿ ಚರ್ಮರೋಗ ವಿಭಾಗದಿಂದ ಜನ ಜಾಗೃತಿ

ಇಮೇಜ್
  ಬೆಂಗಳೂರು,; ವಿಶ್ವ ಸೋರಿಯಾಸಿಸ್ ದಿನದ ಸಂದರ್ಭದಲ್ಲಿ ಇಎಸ್ಐ ಚರ್ಮರೋಗ ವಿಭಾಗವು ಸೋರಿಯಾಸಿಸ್ ಕಾಯಿಲೆ, ಚಿಕಿತ್ಸಾ ವಿಧಾನಗಳ ಬಗ್ಗೆ ಜಾಗೃತಿ ಅಭಿಯಾನ ಮತ್ತು ಜನ ಜಾಗೃತಿ ಕಾರ್ಯಕ್ರಮ ಆಯೋಜಿಸಿತ್ತು.  ಈ ಸಂದರ್ಭದಲ್ಲಿ ಇಎಸ್ಐಸಿ ವೈದ್ಯಕೀಯ ಅಧೀಕ್ಷಕ ಡಾ.ಅಶೋಕ್ ಕುಮಾರ್ ಸಾಮಂತ, ಡಿಎಂಎಸ್ ಡಾ.ಯೋಗಾನಂದನ್, ಚರ್ಮ ವಿಭಾಗದ ಎಚ್ಒಡಿ ಡಾ.ಗಿರೀಶ್ ಎಂ.ಎಸ್., ಡಾ.ಬಿಂದುಶ್ರೀ, ಡಾ.ಚೇತನ್ ಬಿ.ಎಲ್., ಡಾ.ವಿದ್ಯಾಶ್ರೀ, ಡಾ.ಮನೋಜ್ ಪಿ ಮತ್ತಿತರರು ಉಪಸ್ಥಿತರಿದ್ದರು.  ಸೋರಿಯಾಸಿಸ್ ಕಾಯಿಲೆಯ ಬಗ್ಗೆ ಜಾಗೃತಿ, ರೋಗದ ಪ್ರಗತಿ, ಮುಂಗಡ ಚಿಕಿತ್ಸೆಗಳ ಬಗ್ಗೆ ರೋಗಿಗಳಿಗೆ ತಿಳಿಸಲಾಗಿತು. ಈ ಸಂದರ್ಭದಲ್ಲಿ ನೂರಾರು ರೋಗಿಗಳು, ಸಾಮಾನ್ಯ ಜನರು, ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾ.ಪ‌ಂ ಇಒ ವಿವಿಧ ಗ್ರಾಪಂಗಳ ಭೇಟಿ

ಇಮೇಜ್
  ಮಸ್ಕಿ : ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಿಗೆ ಬುಧವಾರ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಮರೇಶ್ ಅವರು ಭೇಟಿ ನೀಡಿ ವಿವಿಧ ಕಡತಗಳು, ಕೂಸಿನ ಮನೆಗಳನ್ನು ವೀಕ್ಷಿಸಿದರು. ಕನ್ನಾಳ ಗ್ರಾಮ ಪಂಚಾಯತಿಯ ಮೂಡಲದಿನ್ನಿ ಗ್ರಾಮದ ಅಂಗನವಾಡಿಗೆ ಭೇಟಿ ನೀಡಿ ಪ್ರತಿ ನಿತ್ಯ ಮಕ್ಕಳಿಗೆ ವಿತರಿಸುವ ಆಹಾರದ ಮೆನು ಪರಿಶೀಲಿಸಿದರು. ಮಕ್ಕಳಿಂದ ಮಾಹಿತಿ ಪಡೆದರು. ತದ ನಂತರ ಮೆದಕಿನಾಳ ಗ್ರಾಮದ ಕೂಸಿನ ಮನೆ, ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರು. ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ಪರಿಶೀಲಿಸಿದರು. ತದ ನಂತರ ಹಾಲಾಪುರ ಗ್ರಾಪಂಗೆ ಭೇಟಿ ನೀಡಿ ಸಿಬ್ಬಂದಿ ಹಾಜರಾತಿ ವಹಿ, ನರೇಗಾ ಕಾಮಗಾರಿಗಳ ಕಡತ ವೀಕ್ಷಿಸಿದರು. ತದ ನಂತರ ತೋರಣದಿನ್ನಿ ಗ್ರಾಪಂಯ ಕೂಸಿನ ಮನೆಗೆ ಭೇಟಿ ನೀಡಿದರು. ಎರಡು ಮೂರು ತಿಂಗಳಲ್ಲಿ ನರೇಗಾ ಸಮುದಾಯ ಆಧಾರಿತ ಕಾಮಗಾರಿಗಳಿಗೆ ಬೇಡಿಕೆ ಬರಲಿದ್ದು, ಕ್ರಿಯಾ ಯೋಜನೆ ಅನುಸಾರ ಕೆಲಸ ಒದಗಿಸಬೇಕು. ಕೂಸಿನ ಮನೆಗಳನ್ನು ಸಕ್ರಿಯವಾಗಿಸಿ ತಾಯಂದಿರು, ಮಕ್ಕಳಿಗೆ ಅನುಕೂಲ ಕಲ್ಪಿಸಬೇಕು ಎಂದರು. ಈ ವೇಳೆಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಮಲ್ಲಿಕಾರ್ಜುನ, ತಿಮ್ಮಣ್ಣ ಭೋವಿ, ರಾಮಣ್ಣ ನಡಗೇರಿ, ತಿಮ್ಮಪ್ಪ ನಾಯಕ, ಗ್ರಾ.ಪಂ ಸಿಬ್ಬಂದಿ ಉಪಸ್ಥಿತಿ ಇದ್ದರು.

11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನಕ್ಕೆ ಸಹಕರಿಸಿ : ಡಾ. ಅರ್ಜುನ್ ಗೊಳಸಂಗಿ ಮನವಿ

ಇಮೇಜ್
  ಮಸ್ಕಿ : ಪಟ್ಟಣದ ಸರ್ಕ್ಯೂಟ್ ಹೌಸಿನಲ್ಲಿ ಮಂಗಳವಾರ ಮಸ್ಕಿ ತಾಲೂಕ ದಲಿತ ಸಾಹಿತ್ಯ ಪರಿಷತ್ತು ವತಿಯಿಂದ ಡಿಸೆಂಬರ್ 14 ಮತ್ತು 15 ರಂದು ರಾಯಚೂರಿನ ಪಂಡಿತ ಜಂಬಲದಿನ್ನಿ ರಂಗಮಂದಿರದಲ್ಲಿ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಪ್ರಯುಕ್ತ ಪ್ರಚಾರ ಸಭೆ ನಡೆಯಿತು. ಇದೇ ವೇಳೆ ಮಾತನಾಡಿದ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷರಾದ ಡಾ. ಅರ್ಜುನ್ ಗೊಳಸಂಗಿ ರಾಜ್ಯ ಅಧ್ಯಕ್ಷರಾದ ಅವರು ಮಾತನಾಡಿ ಡಿಸೆಂಬರ್ 14 -15 ರಂದು ರಾಯಚೂರಿನ ಪಂಡಿತ ಜಂಬಲದಿನ್ನಿ ರಂಗಮಂದಿರದಲ್ಲಿ ಜರುಗುವ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಪ್ರಯುಕ್ತ ಪೂರ್ವಭಾವಿ ಪ್ರಚಾರ ಸಭೆಯಲ್ಲಿ ಸಾಹಿತ್ಯ ಅಭಿಮಾನಿಗಳು ಹಾಗೂ ಯುವಕರು - ಯುವತಿಯರು ಸೇರಿದಂತೆ ಇನ್ನಿತರರು ತಮ್ಮ ತನ -ಮನ ಧನದಿಂದ ಸಹಕಾರ ನೀಡಿ ಕಾರ್ಯಕ್ರಮಕ್ಕೆ ಬಂದು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಈ ಸಭೆಯಲ್ಲಿ ಸಮ್ಮೇಳನದ ಯಶಸ್ವಿಗೆ ಸಹಕಾರಕ್ಕಾಗಿ ಹಾಗೂ ವಿವಿಧ ಉಪಸಮಿತಿಗಳ ರಚನೆಗಾಗಿ  ಸಮ್ಮೇಳನ ಯಶಸ್ವಿಗಾಗಿ ಚರ್ಚಿಸಲಾಯಿತು. ಈ ವೇಳೆಯಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ರಾಜ್ಯಾಧ್ಯಕ್ಷರಾದ ಡಾ. ಅರ್ಜುನ್ ಗೊಳಸಂಗಿ,ದಲಿತ ಸಾಹಿತಿ ಹಾಗೂ ಹಿರಿಯ ಮುಖಂಡ ದಾನಪ್ಪ ಶ್ರೀ ನಿಲೋಗಲ್,ರಾಜ್ಯ ಖಜಾಂಚಿಗಳಾದ ಡಾ.ಸುಭಾಷ್ ಹೊದ್ಲೂರ್,ಸಹ ಸಂಯೋಜಕರಾದ ಡಾ. ಹುಸೇನಪ್ಪ ಅಮರಾಪುರ,ದಸಾಪ ನ ರಾಯಚೂರು ಜಿಲ್ಲಾ ಯುವ ಘಟಕದ ಅಧ್ಯಕ್ಷ ಪಾರ್ಥ ಸಾರಥಿ ಸಿರವಾರ,ದಸಾಪ ಅಧ್ಯಕ್ಷ ಶ್ರೀ ನಾಗೇ

*ಇಂಜಿನೀಯರಿಂಗ್ ಹಾಗೂ ವಾಸ್ತುಶಿಲ್ಪ ವಿಶ್ವಕರ್ಮರ ಕೊಡುಗೆ - ಡಾ.ಉಮೇಶ್ ಕುಮಾರ್*

ಇಮೇಜ್
ಚಿತ್ರದುರ್ಗ : ಇಂದು ನಾವು ಸುಂದರ ಜಗತ್ತನ್ನು ನೋಡುತ್ತಿದ್ದೇವೆ ಅಂದರೆ ಅದಕ್ಕೆ ಮುಖ್ಯ ಕಾರಣ ವಿಶ್ವಕರ್ಮರು” ಎಂದು ಶ್ರೀ ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಕಾರ್ಯಾಧ್ಯಕ್ಷರಾದ ವಿಶ್ವಕರ್ಮ ನಾಡೋಜ ಡಾ.ಬಿ.ಎಂ. ಉಮೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.  ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಹಿರಿಯೂರು ತಾಲೂಕು ವಿಶ್ವಕರ್ಮ ಸಮಾಜದವರು ಏರ್ಪಡಿಸಿದ್ದ “ಶ್ರೀ ಭಗವಾನ್ ವಿಶ್ವಕರ್ಮ ಜಯಂತೋತ್ಸವ”ದಲ್ಲಿ ಗಣ್ಯರೊಡನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. “ವಿಶ್ವಕರ್ಮರು ಸುಂದರ ಜಗತ್ತಿನ ನಿರ್ಮಾಣಕ್ಕೆ ಕಾರಣವಾದವರು. ಅಷ್ಟೇ ಅಲ್ಲದೆ ಅನಾದಿ ಕಾಲದಿಂದಲೂ ತಾಂತ್ರಿಕತೆಯಲ್ಲಿ ಅಪಾರ ನೈಪುಣ್ಯತೆಯನ್ನು ಸಾಧಿಸಿದವರು ಈ ಜಗತ್ತಿಗೆ ಇಂಜಿನಿಯರಿಂಗ್ ಹಾಗೂ ವಾಸ್ತುಶಿಲ್ಪವನ್ನು ಪರಿಚಯಿಸಿದವರು ವಿಶ್ವಕರ್ಮರು. ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಪೂರ್ವಜರು ವಿಗ್ರಹ-ದೇವಸ್ಥಾನಗಳ ಗಾತ್ರ, ಅಳತೆಯನ್ನು ವೈಜ್ಞಾನಿಕವಾಗಿ ಸಮೀಕರಿಸಿ ಕೆತ್ತನೆಯ ಕೆಲಸವನ್ನು ಮಾಡುತ್ತಿದ್ದರು. ವಿಜ್ಞಾನ ತಂತ್ರಜ್ಞಾನದಲ್ಲಿ ಆ ಕಾಲಕ್ಕೆಅವರು ಪರಿಣಿತಿಯನ್ನು ಸಾಧಿಸಿದ್ದರು. ಈ ನೈಪುಣ್ಯತೆಯನ್ನು ನಾವೆಲ್ಲಾ ಪೋಷಿಸಿ ಮುಂದುವರೆಸಿಕೊಂಡು ಹೋಗುವ ಅಗತ್ಯವಿದೆ” ” ಎಂದು ಉಮೇಶ್ ಕುಮಾರ್ ತಿಳಿಸಿದರು.  ಈ ವೇಳೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಡಿ.ಟಿ ಶ್ರೀನಿವಾ

ಕನ್ನಡ ರಾಜ್ಯೋತ್ಸವ ಹಿನ್ನೆಲೆ ಮಸ್ಕಿ ಪಟ್ಟಣ ಕೆಂಪು - ಹಳದಿ ಮಯ

ಇಮೇಜ್
  ಮಸ್ಕಿ : ಕನ್ನಡ ನಾಡು ಅಥವಾ ಕರ್ನಾಟಕ ಉದಯವಾದ ಈ ದಿನವನ್ನು ಸಂಭ್ರಮಿಸುವ ಹಾಗೂ ಕನ್ನಡ ರಾಜ್ಯದ ಏಕೀಕರಣಕ್ಕಾಗಿ ಹೋರಾಡಿದ ಮಹಾತ್ಮರನ್ನು ಸ್ಮರಿಸಿ, ಗೌರವಿಸುವ ಹಾಗೂ ಕನ್ನಡಾಭಿಮಾನವನ್ನು ಮೆರೆಯುವ ಉದ್ದೇಶದಿಂದ ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತದೆ. ಹಾಗೇಯೇ ಈ ವರ್ಷ ಪಟ್ಟಣವೂ ಮೊಟ್ಟ ಮೊದಲ ಬಾರಿಗೆ ಕೆಂಪು - ಹಳದಿಮಯ.ಕನ್ನಡ ರಾಜ್ಯೋತ್ಸವ ಆಚರಣೆ ದಿನದಂದು ಕನ್ನಡಾಂಬೆಯ ಫೋಟೊ ಇಟ್ಟು ಪೂಜೆ ಸಲ್ಲಿಸಲಾಗುತ್ತದೆ. ಶಾಲಾ–ಕಾಲೇಜುಗಳಲ್ಲಿ ಧ್ವಜಾರೋಹಣದ ಜೊತೆಗೆ ಕನ್ನಡಕ್ಕೆ ಸಂಬಂಧಿಸಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತದೆ. ಸಂಘ–ಸಂಸ್ಥೆಗಳು, ಕಚೇರಿಗಳಲ್ಲಿ ಕನ್ನಡಾಂಬೆಯ ಫೋಟೊ ಇಟ್ಟು ಪೂಜೆ ಮಾಡಲಾಗುತ್ತದೆ. ಮೆರವಣಿಗೆಗಳನ್ನು ಮಾಡುವ ಮೂಲಕ ಕನ್ನಡಾಭಿಮಾನ ಮೆರೆಯುತ್ತಾರೆ. ಈ ಬಾರಿಯೂ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಕನ್ನಡಪರ ಸಂಘಟನೆಗಳು ಕನ್ನಡ ಅಭಿಮಾನಿಗಳು ಹಾಗೂ ತಾಲೂಕ ಆಡಳಿತ ಪುರಸಭೆ ಸಹಯೋಗದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕನ್ನಡದ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕನ್ನಡ ಬಾವುಟಗಳಿಂದ ಮಧುವಣ ಗಿತ್ತಿಯಂತೆ ಮಸ್ಕಿ ಯನ್ನು ಶೃಂಗಾರ ಗೊಳಿಸಲಾಗಿದ್ದು, ತಾಲೂಕ ಆಡಳಿತ ಹಾಗೂ ಪುರಸಭೆಯೂ ಕನ್ನಡ ಅಭಿಮಾನಕ್ಕೆ ಸಾರ್ವಜನಿಕರಿಂದ ಹಾಗೂ ಕನ್ನಡ ಸಂಘಟನೆಗಳು, ಕನ್ನಡ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

"ರಕ್ತದಾನವು ಒಬ್ಬರ ಜೀವ ಉಳಿಸುವ ಒಳಿತಿಗಾಗಿ : ಶಾಸಕ ಕೆ ನೇಮಿರಾಜ್ ನಾಯ್ಕ್ "

ಇಮೇಜ್
*ಕ್ಷೇತ್ರದ ಹಗರಿಬೊಮ್ಮನಹಳ್ಳಿ ,ಕೊಟ್ಟೂರು ಮರಿಯಮ್ಮನಹಳ್ಳಿ ,ಏಕಕಾಲಕ್ಕೆ ಸಿಂಧೂರ ಬಂಡಾರ ಕಾರ್ಯಕ್ರಮದ ನಿಮಿತ್ತ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮ ಜನರ ಹಿತಕ್ಕಾಗಿ ರಕ್ತದಾನವು ಒಬ್ಬರ ಜೀವವನ್ನು ಉಳಿಸಲು ಒಳಿತಿಗಾಗಿ ಪ್ರೇರಣೆ ಮೂಲಕ ಹೇಳಿದರು * ಕೊಟ್ಟೂರು: ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಕೆ ನೇಮಿರಾಜ್ ನಾಯ್ಕ್ ರವರ ಆದೇಶದಂತೆ ಸಿಂಧೂರ ಬಂಡಾರ ಕಾರ್ಯಕ್ರಮದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಬುಧವಾರ ಆಯೋಜಿಸಲಾಗಿತ್ತು.   ತೇರು ಬಯಲು ಬಸವೇಶ್ವರ ದೇವಸ್ಥಾನದಲ್ಲಿ ಮಾನ್ಯ ಶಾಸಕರ ಆಪ್ತ ಸಹಾಯಕರಾದ ದೊಡ್ಡಬಸಪ್ಪ ರೆಡ್ಡಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿ ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಸಕರಾದ ಕೆ ನೇಮಿರಾಜ ನಾಯ್ಕ್ ಅವರು ಕ್ಷೇತ್ರದ ಜನತೆಗೆ ಸಂದೇಶ ಹೇಳುವ ಮೂಲಕ ನೀವು ದಾನ ಮಾಡುವ ರಕ್ತವು ಯಾರಿಗಾದರೂ ಜೀವನದಲ್ಲಿ ಮತ್ತೊಂದು ಅವಕಾಶವನ್ನು ನೀಡುತ್ತದೆ. ಒಂದು ದಿನ ಯಾರಾದರೂ ನಿಕಟ ಸಂಬಂಧಿ, ಸ್ನೇಹಿತ, ಪ್ರೀತಿಪಾತ್ರರು ಅಥವಾ ನೀವೂ ಆಗಿರಬಹುದು. ನಿಯಮಿತ ರಕ್ತ ಪೂರೈಕೆಯ ನಿರಂತರ ಅವಶ್ಯಕತೆಯಿದೆ ಏಕೆಂದರೆ ಬಳಕೆಗೆ ಮೊದಲು ರಕ್ತವನ್ನು ಸೀಮಿತ ಸಮಯದವರೆಗೆ ಮಾತ್ರ ಸಂಗ್ರಹಿಸಬಹುದು. ಸಾಕಷ್ಟು ಸಂಖ್ಯೆಯ ಆರೋಗ್ಯವಂತ ಜನರ ನಿಯಮಿತ ರಕ್ತದಾನದ ಅಗತ್ಯವಿದೆ. ನಾವು ಎಲ್ಲಕ್ಕಿಂತ ಜೀವನವನ್ನು ಗೌರವಿಸುತ್ತೇವೆ. ರಕ್ತದಾನವು ಒಬ್ಬರ ಜೀವವನ್ನು ಉಳಿಸಲು ಸುರ

"ದೇವದಾಸಿಯರ ಆರೋಗ್ಯ ತಪಾಸಣೆ ಕಾರ್ಯಕ್ರಮ "

ಇಮೇಜ್
ಕೊಟ್ಟೂರು: ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನಲ್ಲಿ ಮಾಜಿ ದೇವದಾಸಿ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಕೊಟ್ಟೂರು ತಾಲೂಕು ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು ಮಾಜಿ ದೇವದಾಸಿ ಪುನರ್ವಸತಿ ಯೋಜನೆ ಅಧಿಕಾರಿಗಳಾದ ನಾರಾಯಣ ಸರ್ ಮಾತನಾಡುತ್ತಾ, ಮಾಜಿ ದೇವದಾಸಿಯರು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಪೌಷ್ಠಿಕಾಂಶದ ಆಹಾರವನ್ನು ಸೇವಿಸಲು ಮತ್ತು ಜಂಕ್ ಫುಡ್ ಗಳನ್ನು ಸೇವಿಸಬಾರದು. ಮನೆಯಲ್ಲಿ ತರಕಾರಿ ಹಣ್ಣು ಹಂಪಲುಗಳನ್ನು ಸ್ವಚ್ಛವಾಗಿ ಶುಚಿಗೊಳಿಸಿ ಸೇವಿಸಬೇಕು.  ತರಕಾರಿಗಳನ್ನು ಹೆಚ್ಚು ಸೇವಿಸುವುದರಿಂದ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬಹುದು, ಏಕದಳ ದ್ವಿದಳ ಧಾನ್ಯಗಳನ್ನು ನಿಯಮಿತವಾಗಿ ಬಳಸುವುದರಿಂದ ಆರೋಗ್ಯದ ಹಿತವನ್ನು ಕಾಪಾಡಿಕೊಳ್ಳಬಹುದು ಎಂದರು. ಆರೋಗ್ಯದ ಕಾಳಜಿ ವಹಿಸುವುದರಿಂದ ರೋಗಗಳಿಂದ ದೂರವಿರಬಹುದು ಅಲ್ಲದೇ ಆರೋಗ್ಯದ ಹಿತವನ್ನು ಕಾಪಾಡುವಾಗ ವಹಿಸಬೇಕಾದ ಕ್ರಮಗಳನ್ನು ತಿಳಿಸಿದರು. ಪ್ರತೀಯೊಬ್ಬರು ಪ್ರತೀದಿನವೂ ಮನಸ್ಸನ್ನು ಆಹ್ಲಾದಕರವಾಗಿಟ್ಟುಕೊಳ್ಳಬೇಕು, ಸುಖಾಸುಮ್ಮನೇ ಯಾವುದೇ ಚಿಂತೆಗಳನ್ನು ಮಾಡದೇ ತಮ್ಮ ಕೆಲಸವನ್ನು ಮಾಡಿಕೊಂಡು ಜೀವನವನ್ನು ನಡೆಸಬೇಕು ಎಂದರು. ಆರೋಗ್ಯ ಅಧಿಕಾರಿಗಳಾದ ಪಿಬಿ ನಾಯಕ್, ಎನ್ ಎಫ್ ಐ ಡಬ್ಲ್ಯೂ ರಾಜ್ಯ ಕಾರ್ಯದರ್ಶಿ ರೇಣುಕಮ್ಮ ಕೊಟ್ಟೂರು ತಾಲೂಕು ದೇವದಾಸಿ ಸಂಘಟನೆ ತಾಲೂಕ್ ಅಧ್ಯಕ್ಷರು ಬಿ ರೇಣುಕಮ್ಮ ಶಿವರಾಜ್ ಸರ್ ಮನೋಜ್ ಸರ್ 50ಕ್ಕೂ ಹೆಚ್ಚು

"ನಗುವಿನ ಯುವರಾಜನಾ ಪುಣ್ಯ ಸ್ಮರಣೆ "

ಇಮೇಜ್
*ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ಅವರ 3ನೇ ವರ್ಷದ ಪುಣ್ಯತಿಥಿ* ಸಹೃದಯ ಶ್ರೀಮಂತ ಹಾಗೂ ನಗುವಿನ ಯವರಾಜ ದಿವಂಗತ ಪುನೀತ್ ರಾಜ್ ಕುಮಾರ್ ರವರ ಪುಣ್ಯ ಸ್ಮರಣೆ ದಿನವಾದ (ಅಕ್ಟೋಬರ್‌ 29) ಮಂಗಳವಾರ ಸ್ಮರಣಾರ್ಥ ಪಟ್ಟಣದ ಗಾಂಧಿ ವೃತ್ತದಲ್ಲಿ ಕಾರ್ಯಕ್ರಮ ನಡೆಯಿತು  ಕೊಟ್ಟೂರು: ಕರ್ನಾಟಕದ ಜನತೆಗೆ ಕರಾಳ ದಿನವಾದ ಅಕ್ಟೋಬರ್ 29 ರಂದು ಈ ನಾಡಿನ ಜನತೆ ಆ ದಿನ ಎಂದು ಮರೆಯಲು ಸಾಧ್ಯವಿಲ್ಲ. ಅವರು ನಮ್ಮನ್ನಗಲಿ  ಮೂರು ವರ್ಷ ಕಳೆಯುತ್ತಾ ಬಂತು. ಅವರ ಅಭಿಮಾನಿ ಆಗಿರುವ ನಾನು ಅವರನ್ನು ನೆನೆಯದ ದಿನವಿಲ್ಲ ಅದೆಷ್ಟೋ ಅಭಿಮಾನಿಗಳು ಅಪ್ಪು ಅನ್ನು ನೆನೆಸಿಕೊಂಡು ನೋವಿನಲ್ಲಿ ದಿನ ದೂಡುತ್ತಿದ್ದಾರೆ. ಡಾ. ಪುನೀತ್ ರಾಜ ಕುಮಾ‌ರ್ ಅವರು ಮಾಡಿರುವ ಸಮಾಜ ಸೇವೆ ದಾನ, ಧರ್ಮ ಕಾರ್ಯಗಳು ಈಗಿನ ಯುವಕರು ರೂಪಿಸಿಕೊಳ್ಳಬೇಕು ಎಂದು ಕೊಟ್ಟೂರು ತಾಲೂಕು ಅಪ್ಪು ಅಭಿಮಾನಿಗಳ ಸಂಘದ ಅಧ್ಯಕ್ಷರಾದ ರಾಂಪುರ ಪ್ರಕಾಶ್ ಹೇಳಿದರು. ಪಟ್ಟಣದ ಗಾಂಧಿ ಸರ್ಕಲ್  ಹತ್ತಿರ ದಿ: ಡಾ. ಪುನೀತ್ ರಾಜಕುಮಾರ್ ರವರ 3ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಿಕ್ಷಕರಾಗಿ ಆಗಮಿಸಿ ಎಸ್ ಕೊಟ್ರೇಶಪ್ಪ, ಶಿವುಕುಮಾರ,ಬಿ ಚೆನ್ನಬಸಪ್ಪ,ಕೆ ಎಚ್ ಎಂ ಕಲಾವತಿ ಬಿ ಮುತ್ತೇಶ್ ಚಂದ್ರಕಲಾ ಅಕ್ಕಹಾದೇವಿ ಅಪ್ಪು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಡ 200 ಮಕ್ಕ

ಕೊಟ್ಟೂರು 29.10.2024 :- ಸರ್ಕಾರಿ ನೌಕರರ ಸಂಘದ ಶಾಂತಿಯುತ ಮತದಾನ

ಇಮೇಜ್
  ಕೊಟ್ಟೂರು ತಾಲೂಕು ಸರ್ಕಾರಿ ನೌಕರರ ಸಂಘದ 2024-2029 ರ ಅವಧಿಗೆ 11 ಇಲಾಖೆಯ 20 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 9 ಇಲಾಖೆಯಿಂದ 15 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.  1. ಪಶುಸಂಗೋಪನೆ- ಯೋಗೀಶ್ವರ ಡಿ, 2.ಕಂದಾಯ- ಎಸ್ ಎಂ ಗುರುಬಸವರಾಜ, ಕೆ ರಮೇಶ್, 3.ಪ್ರೌಢಶಾಲೆ- ಎಂ ಸೋಮಶೇಖರರಾಜ್, ಶಶಿಕಲಾ ಹೆಚ್, 4. ಪದವಿ-ಪೂರ್ವ ಶಿಕ್ಷಣ ಇಲಾಖೆ – ಡಾ.ಜಗದೀಶಚಂದ್ರಭೋಸ್, 5. ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ-ವೀರೇಶ ತುಪ್ಪದ, 6.ಅರಣ್ಯ-ಹೇಮಚಂದ್ರ.ಕೆ. 7. ಆರೋಗ್ಯ ಮತ್ತು ಕುಟುಂಬ ಕಲ್ಯಾಣ – ಮೀನಾಕ್ಷಿ ವಿ, ಜಗದೀಶ.ಕೆ, ಮಂಜುನಾಥ ಬಿ ಟಿ, ನೂರ್ ಅಹ್ಮದ್, 8. ಖಜಾನೆ- ರವಿಕುಮಾರ್,  8.ಎಪಿಎಂಸಿ-ಎ.ಕೆ.ವೀರಣ್ಣ, 9. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ – ಕಛೇರಿ ಸಿಬ್ಬಂದಿ ಕೆ.ಪುಷ್ಪಲತಾ  ಹೀಗೆ 15 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.  ದಿನಾಂಕ: 28.10.2024 ರಂದು 5 ಸ್ಥಾನಗಳಿಗೆ ಮತದಾನ ನಡೆದಿದ್ದು,  ಶಿಕ್ಷಣ ಇಲಾಖೆಯ 4 ಸ್ಥಾನಗಳಿಗೆ 6 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 1.ಸಿದ್ದಪ್ಪ ಜಿ-305 ಮತಗಳು, 2.ಶಿವಕುಮಾರ ಎಂ-304 ಮತಗಳು, 3.ಎ.ಬಿ.ಗುರುಬಸವರಾಜ-274 ಮತಗಳು, 4.ಚನ್ನೇಶಪ್ಪ ಎಸ್-246 ಮತಗಳನ್ನು ಪಡೆದು ವಿಜೇತರಾದರೆ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇತರೆ ಸಿಬ್ಬಂದಿಯ 1 ಸ್ಥಾನಕ್ಕೆ 2 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಗಂಗಾಧರ ಸಿ.ಹೆಚ್.ಎಂ ಇ

ತಾಲೂಕು ಸರಕಾರಿ ನೌಕರರ ಸಂಘಕ್ಕೆ ಆಯ್ಕೆ

ಇಮೇಜ್
  ಕೊಟ್ಟೂರು: ಕೊಟ್ಟೂರು ತಾಲೂಕು ಸರಕಾರಿ ನೌಕರರ ಸಂಘದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ 2 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶ್ರೀಮತಿ ಪುಷ್ಪಲತಾ ಅವರು ಅವಿರೋಧವಾಗಿ ಆಯ್ಕೆಯಾದರು ಹಾಗೂ ಹ್ಯಾಳ್ಯಾ ಪಿಡಿಒ ಸಿ ಎಚ್ ಎಂ ಗಂಗಾಧರ ಅವರು 18 ಮತಗಳಿಂದ ಜಯಗಳಿಸಿದರು. ಆಯ್ಕೆಯಾದ ಶ್ರೀಮತಿ ಪುಷ್ಪಲತಾ ಹಾಗೂ ಪಿಡಿಒ ಸಿ ಎಚ್ ಎಂ ಗಂಗಾಧರ ಅವರು ಆಯ್ಕೆಯಾದ ಹಿನ್ನೆಲೆಯಲ್ಲಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಆನಂದ,ಹೆಚ್ ವಿಜಯ್ ಕುಮಾರ್, ಮತ್ತು ಆರ್ ಡಿಪಿಆರ್ ಇಲಾಖೆಯ ಎಲ್ಲ ಸಿಬ್ಬಂದಿಗಳು ಶುಭಕೋರಿದ್ದಾರೆ.

ನೂತನ ಗ್ರೇಡ್ 2 ತಹಶೀಲ್ದಾರರಿಗೆ ಸನ್ಮಾನ

ಇಮೇಜ್
ಮಸ್ಕಿ : ಬಸವೇಶ್ವರ ನಗರದ ತಹಶೀಲ್ದಾರರ ಕಚೇರಿಯಲ್ಲಿ ಇಂದು ನೂತನವಾಗಿ   ಗ್ರೇಡ್ 2 ತಹಶೀಲ್ದಾರ್ ಆಗಿ ಆಗಮಿಸಿದ ಅಶೋಕ್ ಪವಾರ್ ಹಾಗೂ ಅವರ ತಾಯಿಯವರನ್ನು ಗೆಳೆಯರ ಬಳಗದ ವತಿಯಿಂದ ಶಾಲು ಹೊದಿಸಿ ಹೂವಿನ ಹಾರ ಹಾಕಿ ಸಿಹಿ ತಿನ್ನಿಸುವ ಮೂಲಕ ಸನ್ಮಾನಿಸಿ ಗೌರವಿಸಿ ಬರಮಾಡಿಕೊಂಡರು. ಇದೇ ಸಂದರ್ಭದಲ್ಲಿ ನಾಗಭೂಷಣ ಬಾರಿಕೇರ,ಅಮರೇಶ ಸೊಪ್ಪಿಮಠ,ಶ್ರೀ ನಿವಾಸ ವಂದಾಲಪ್ಪ,ಪಂಪಣ್ಣ ಬೂದಗುಂಪಿ,ರಾಜೇಶ್ವರಿ ವಿ ಶ್ರೀ ನಿವಾಸ, ಶಿವರಾಜ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

*ಮಾನವೀಯತೆ ಮೆರೆದ ಸರ್ಕಾರಿ ಬಸ್ ಚಾಲಕ ನಿರ್ವಾಹಕ*

ಇಮೇಜ್
ಕಾನ ಹೊಸಹಳ್ಳಿ : ಬೆಂಗಳೂರಿನಿಂದ ಚಿತ್ರದುರ್ಗದ ಮಾರ್ಗವಾಗಿ ಕಾರ ಟ ಗಿಗೆ ಸರ್ಕಾರಿ ಸಂಸ್ಥೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯುೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ರಾಷ್ಟ್ರೀಯ ಹೆದ್ದಾರಿ 50ರ ಕಾನ ಹೊಸಹಳ್ಳಿ ಸಮೀಪದ ಆಲೂರು ಆರೋಗ್ಯ ಕೇಂದ್ರಕ್ಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಂದಿಗೆ ಬಸ್ಸನ್ನು ಕೊಂಡೊಯ್ದು,ಹೆರಿಗೆ ನೋವು ಕಾಣಿಸಿಕೊಂಡ ಗರ್ಭಿಣಿ ಮಹಿಳೆಯ ನ್ನು ಆಸ್ಪತ್ರೆಗೆ ದಾಖಲೆ ಮಾಡಿ ದ ರು. ದಾಖಲಿಸಿದ 10 ನಿಮಿಷದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ತಾಯಿ.  ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದ ರಾಮನಗರ 14ನೇ ವಾರ್ಡ್ ನಿವಾಸಿ ಸುಲ್ತಾನ್ ಬಿ ಗಂಡ ರಾಜ ಭಕ್ಷಿ. ಗರ್ಭಿಣಿ ಮಹಿಳೆಯಾಗಿದ್ದಾಳೆ   ಸುಲ್ತಾನ್ ಬಿ ಅವರ ಪತಿ ರಾಜಭಕ್ಷಿಯು ಬೆಂಗಳೂರಿನ ಆಸ್ಪತ್ರೆಯಲ್ಲಿ ಕಿಡ್ನಿ ಸ್ಟೋನ್ ಚಿಕಿತ್ಸೆಗೊಳಗಾಗಿದ್ದರಿಂದ ಪ ತಿಯನ್ನು ನೋಡಿಕೊಂಡು ಶನಿವಾರ ತಮ್ಮ ಗ್ರಾಮಕ್ಕೆ ತೆರಳುವಾಗ ಚಿತ್ರದುರ್ಗದಿಂದ ಆಲೂರು ಮಧ್ಯದಲ್ಲಿ ಬಸ್ಸಿನಲ್ಲಿಪ್ರ ಯಾಣಿಸುತ್ತಿರುವಾಗ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈ ಮಹಿಳೆಯು ಹೆ ರಿಗೆ ನೋವಿನಿಂದ ನರಳುತ್ತಿರುವುದನ್ನು ಪಯಣಕರು ನೋಡಿ ಬಸ್ ಚಾಲಕ ಮತ್ತು ನಿರ್ವಾಹಕನಿಗೆ ಸಮೀಪದ ಆರೋಗ್ಯ ಕೇಂದ್ರಕ್ಕೆ ಬಸ್ಸನ್ನು ತೆಗೆದುಕೊಂಡು ಹೋಗಲು ಹೇಳಿದರು. ಇದೇ ಬಸ್ ನಲ್ಲಿ ತುರುವನೂರಿನ ನಾಗವೇಣಿ ಎಂಬ ನರ್ಸ್ ಈ ಮಹಿಳೆಯನ್ನು ಗಮನಿಸುತ್ತಿದ್ದು ರಾಷ್ಟ್ರೀಯ ಹೆದ್ದಾರಿ 50ರ ಪಕ್ಕದಲ್ಲಿರ

*ಜಂಗಮ ಸಮಾಜ ಸಂಸ್ಥೆ ಉದ್ಘಾಟನಾ ಸಮಾರಂಭ- ಪ್ರತಿಭಾ ಪುರಸ್ಕಾರ*

ಇಮೇಜ್
ಕಾನ ಹೊಸಹಳ್ಳಿ :-ಜಂಗಮರ ಸಮಗ್ರ ಅಭಿವೃದ್ಧಿಗಾಗಿ ಜಂಗಮ ಸಮುದಾಯದ ಜನರೆಲ್ಲ ಒಂದಾಗಬೇಕು. ಆಗ ಮಾತ್ರ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯ ಎಂದು ಶೀ ಮ.ನಿ.ಪ್ರ ಶಂಕರಸ್ವಾಮಿಗಳು ನುಡಿದರು.    ಕಾನ ಹೊಸಹಳ್ಳಿ ಪಟ್ಟಣದ ಗಾಣಿಗರ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಜಂಗಮ ಸಮಾಜ ಸಂಸ್ಥೆ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಜಂಗಮ ಸಮುದಾಯದವರು ಯಾವಾಗಲೂ ಸಮಾಜ ಕಟ್ಟುವ ಕೆಲಸ ಮಾಡುತ್ತ ಬಂದಿದ್ದಾರೆ. ಬೇಡಜಂಗಮರು ವಿಚಾರವಂತರು, ಜ್ಞಾನದಾಸೋಹಿಗಳು ಇವರ ಪ್ರೋತ್ಸಾಹದಿಂದ ಅನೇಕ ವಿದ್ಯಾರ್ಥಿಗಳು ಮಠಮಾನ್ಯಗಳ ಪ್ರಸಾದ ನಿಲಯಗಳಲ್ಲಿ ವ್ಯಾಸಂಗ ಮಾಡಿ ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಹೊಂದಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಎನ್‌.ಎಂ ರವಿಕುಮಾರ್, ಸಾಹಿತಿಗಳು ಮಾತನಾಡಿ ಸಂವಿಧಾನಾತ್ಮಕವಾಗಿ ಮೀಸಲಾತಿಯನ್ನು ಕೇಳುತ್ತಿದ್ದೇವೆಯೇ ವಿನಃ ಬೇರೆ ಯಾವುದೇ ಉದ್ದೇಶವಿಲ್ಲ. ಸಮುದಾಯದ ಅಭಿವೃದ್ಧಿಗೆ ಮೀಸಲಾತಿ ಅವಶ್ಯಕ ಹಾಗಾಗಿ ಸಂಘಟನೆಯ ಬಲ ಇಟ್ಟುಕೊಂಡು ಒಂದಾದರೆ ಮಾತ್ರ ಸಮಾಜದ ಉಳಿವು ಸಾಧ್ಯ. ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹಲವು ಸಮುದಾಯಗಳು ಹೋರಾಟ ಮಾಡುತ್ತಿವೆ. ರಾಜ್ಯ ಸರ್ಕಾರ ಎಲ್ಲರ ಬೇಡಿಕೆಗಳಿಗೆ ಮನ್ನಣೆ ನೀಡಬೇಕು' ಎಂದು ಆಗ್ರಹಿಸಿದರು. ಈ ವೇಳೆ ಐ.ದಾರುಕೇಶ್ ಉಪಾಧ್ಯಕ್ಷರು ಬಿಡಿಸಿಸಿ ಬ್ಯಾಂಕ್ ಹೊಸಪೇಟೆ ಇವರು ಮಾತನಾಡಿ ಮೀಸಲಾತಿ ಕಲ್ಪಿ

"ತಾಲೂಕು ಘಟಕ ಅಧ್ಯಕ್ಷರನ್ನಾಗಿ ಶ್ರೀಧರ ಎಸ್ "

ಇಮೇಜ್
"ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷರಾದ ಎನ್. ಭರಮಣ್ಣ ಅವರು ತಾಲೂಕು ಘಟಕ ರಚನೆ ಪ್ರಕ್ರಿಯೆ ನಡೆಯಿತು " ಕೊಟ್ಟೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷರಾದ ಎನ್ ಭರಮಣ್ಣ ಇವರ ನೇತೃತ್ವದಲ್ಲಿ ಕೊಟ್ಟೂರು ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.  ಪದಾಧಿಕಾರಿಗಳ ವಿವರ : ಕೊಟ್ಟೂರು ತಾಲೂಕು ಅಧ್ಯಕ್ಷರನ್ನಾಗಿ ಶ್ರೀಧರ ಎಸ್ ಒಡೆಯರ್ ಹ್ಯಾಳ್ಯಾ, ಗೌರವಾಧ್ಯಕ್ಷರಾಗಿ ಕೆಬಿ ಕೊಟ್ರೇಶ್ ಸಂಗಮೇಶ್ವರ, ಉಪಾಧ್ಯಕ್ಷರಾಗಿ ನೀಲಕಂಠನಗೌಡ ಜೋಳದ ಕೂಡ್ಲಿಗಿ, ಕಾರ್ಯದರ್ಶಿ ಮೂಗನಗೌಡ ಪ್ರಧಾನ ಕಾರ್ಯದರ್ಶಿ ಎನ್ ಬಸವರಾಜ್ ಉಪ ಕಾರ್ಯದರ್ಶಿ ಬಿ ಚನ್ನಬಸಪ್ಪ ಖಜಾಂಶಿಯಾಗಿ ಅಂಕಲಿ ರಮೇಶ್ ಉಪಖಜಾಂಶಿ ಜೆ ಅಂಜನಪ್ಪ ಸಂಘಟನಾ ಕಾರ್ಯದರ್ಶಿ ಯುವರಾಜ್ ಸಹ ಸಂಘಟನಾ ಕಾರ್ಯದರ್ಶಿ ಡಿ ವೆಂಕಟೇಶ್ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಎನ್ ಭರಮಣ್ಣ ರಾಜ್ಯ ಉಪಾಧ್ಯಕ್ಷರು ಮಾತನಾಡಿ ಕೊಟ್ಟೂರು ತಾಲೂಕಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘ ರಚನೆ  ಮಾಡಬೇಕು ಏಕೆಂದರೆ ರೈತರಿಗೆ ಆಗುವ ಅನ್ಯಾಯದ ವಿರುದ್ಧ ಹೋರಾಟ ಮಾಡಿದರೆ ಮಾತ್ರ ಅಧಿಕಾರಿಗಳು ನಮ್ಮ ಮಾತು ಕೇಳುತ್ತಾರೆ. ರೈತರಿಗೆ ನ್ಯಾಯ ದೊರಕಿ ಕೊಡುವ ಕೆಲಸ ನಡೆಯುತ್ತಿವೆ ಎಂದು ಹೇಳಿದರು ಈ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳು ,ಸರ್ವ ಸದಸ್ಯರು ಉಪಸ್ಥಿತರಿದ್ದರು

"ಇದು ಬರೀ ರಸ್ತೆಯಲ್ಲ ಗುಂಡಿಗಳ ತಾಣ"

ಇಮೇಜ್
ಜನರ ಜೀವ ಬಲಿಗಾಗಿ ಕಾದು ಕುಳಿತಿರುವ : ಉದ್ಭವ ರಸ್ತೆ ಗುಂಡಿಗಳು ನಿರ್ಮಾಣ ಕೊಟ್ಟೂರು: ರಸ್ತೆಗಳಲ್ಲಿ ಗುಂಡಿ ನಿರ್ಮಾಣವಾಗುವುದು ಸಹಜ. ಆದರೆ ಗುಂಡಿಗಳಲ್ಲೇ ರಸ್ತೆ ಉದ್ಭವವಾಗಿದೆ ಎನ್ನುವಷ್ಟರ ಮಟ್ಟಿಗೆ ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾದರೆ ಪ್ರಯಾಣಿಕರು ಬೀಳದೇ ಸುಗಮವಾಗಿ ಸಂಚರಿಸಲು ಸಾಧ್ಯವೇ? ಈ ರೀತಿಯ ರಸ್ತೆಗಳು ಇರುವುದು ಬೇರೆಲ್ಲೂ ಅಲ್ಲ, ಶ್ರೀ ಕ್ಷೇತ್ರ ವಾದ ಕೊಟ್ಟೂರು-ಹರಪನಹಳ್ಳಿ ಹೆದ್ದಾರಿಯ ಮಧ್ಯದ  ರಸ್ತೆ. ಚಪ್ಪರದಹಳ್ಳಿ ಕೆ ಅಯ್ಯನ ಹಳ್ಳಿ, ಹಾರಳು ಯವರೆಗೂ ರಸ್ತೆಯ ತುಂಬಾ ಗುಂಡಿಗಳು ನಿರ್ಮಾಣವಾಗಿವೆ. ಅಲ್ಲದೇ ಮಧ್ಯದಲ್ಲಿ ರೈಲ್ವೆ ಬ್ರಿಡ್ಜ್ ಕೆಳಗಂತೂ ಗುಂಡಿಗಳ ತಾಣವೇ ಇದೆ. ಹಲವಾರು ಬೈಕ್ ಪ್ರಯಾಣಿಕರು ಬಿದ್ದು ಕೈಕಾಲು ಮುರಿದುಕೊಂಡಿರುವ ಉದಾಹರಣೆಗಳು ಇದ್ದರೂ ಸಹ ಅಧಿಕಾರಿಗಳು ರಸ್ತೆ ದುರಸ್ತಿ ಮಾಡಿಸುವ ಯಾವುದೇ ಕ್ರಮಕ್ಕೂ ಮುಂದಾಗುತ್ತಿಲ್ಲ.  ರಾತ್ರಿ ಪ್ರಯಾಣಿಸುವ ಪ್ರಯಾಣಿಕರಂತೂ ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ಓಡಾಡುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಓಡಾಡುವ ಜನರ ಪರದಾಟವನ್ನು ಕೇಳುವವರೇ ಇಲ್ಲದಂತಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಕಂಡೂ ಕಾಣದಂತೆ ಮೂಕಪ್ರೇಕ್ಷಕರಾಗಿದ್ದಾರೆ ವಿನಾಃ ರಸ್ತೆ ದುರಸ್ತಿಯ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲವೆಂದು ಗ್ರಾಮಸ್ಥರು ದೂರುತ್ತಿದ್ದಾರೆ. ಈ ಹಿಂದೆ ರಸ್ತೆ ಸರಿಪಡಿಸುವಂತೆ ಸಂಬಂಧಿಸಿದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಗಮನ ಸೆಳೆದರೂ ಸಹ ಅವರು ಕೇರ್ ಮಾಡದೇ ಜನ

ಉಜ್ಜನಿ ಗ್ರಾಮದಲ್ಲಿ ದೀಪ ಸಂಜೀವಿನಿ ಕಾರ್ಯಕ್ರಮ

ಇಮೇಜ್
  ಕೊಟ್ಟೂರು: ಜಿಲ್ಲಾ ಪಂಚಾಯಿತಿ ವಿಜಯನಗರ ತಾಲೂಕು ಪಂಚಾಯಿತಿ ಕೊಟ್ಟೂರು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ 2024 ರ ಭಾರತಾಂಬೆ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದಿಂದ ಉಜ್ಜನಿ ಗ್ರಾಮದಲ್ಲಿ ದೀಪ ಸಂಜೀವಿನಿ ಕಾರ್ಯಕ್ರಮವನ್ನು ಮಾಡಲಾಯಿತು.  ಕಾರ್ಯಕ್ರಮಕ್ಕೆ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರು ನರೇಗಾ ಹಾಗೂ ಎನ್ನಾರಲ್ ಎಮ್ ನೋಡಲ್ ಅಧಿಕಾರಿ ಹೆಚ್ ವಿಜಯ್ ಕುಮಾರ್ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಿಂಗಮ್ಮ ಸನ್ಮಾರಪ್ಪ ಇವರು ದೀಪ ಸಂಜೀವಿನಿ ಕಾರ್ಯಕ್ರಮ ಸೋಮವಾರ ಉದ್ಘಾಟನೆಯನ್ನು ಮಾಡಿದರು  ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯಿತಿ ಗೌರವಾನ್ವಿತ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಮತ್ತು ಒಕ್ಕೂಟದ ಪದಾಧಿಕಾರಿಗಳು ಅಧ್ಯಕ್ಷರು ಕಾರ್ಯದರ್ಶಿ ಖಜಾಂಚಿ ಮತ್ತು ಸಂಘದ ಸದಸ್ಯರುಗಳು ಹಾಗೂ ತಾಲೂಕು ಪಂಚಾಯಿತಿಯ ಮೇಲ್ವಿಚಾರಕರು ಮತ್ತು ಸಿಬ್ಬಂದಿಯಾದ ಎಂಬಿಕೆ ಎಲ್ ಸಿ ಆರ್ ಪಿ ಕೃಷಿ ಸಖಿ ಪಶು ಸಖಿ ಎಫ್ ಎಲ್ ಸಿ ಆರ್ ಪಿ ಭಾಗವಹಿಸಿದ್ದರು ಗ್ರಾಮ ಪಂಚಾಯಿತಿ ಉಜಿನಿ, ಉಪಸ್ಥಿತರಿದ್ದರು.

ಪಿತಾಮಹ ಅಂಕಣ

ಇಮೇಜ್
 ಭಾವದಂಗಳ - 16 ಅರ್ಧ ಸತ್ಯ  ಕೆಲವೊಂದು ಮಾತುಗಳೇ ಹಾಗೆ ಹೇಳಿದರೆ ನೋವು,ಹೇಳದೆ ಇದ್ದರೆ ಸಂಕಟ.ಎಷ್ಟೋ ಬಾರಿ ಏನೋ ಹೇಳಬೇಕು ಎಂದು ಬಾಯ್ತೆರೆಯುತ್ತೇವೆ,ಆದರೆ ಕೊನೆವರೆಗೂ ಹೇಳಲಾಗದೇ ಕೊರೆಯುತ್ತಿರುವ ವಿಚಾರವನ್ನು ಮನಸ್ಸಿನೊಳಗೆ ಇಂಗಿಸಿ ಬಿಡುತ್ತೇವೆ.ಏನನ್ನು ಹೇಳಬೇಕು ಎನ್ನುವುದು ವಿವೇಚನೆ,ಎಷ್ಟು ಹೇಳಬೇಕು ಎನ್ನುವುದು ಬುದ್ಧಿವಂತಿಕೆ. ಯಾವಾಗ, ಏನನ್ನು,ಹೇಗೆ, ,ಎಷ್ಟು ಹೇಳಬೇಕು ಎನ್ನುವುದನ್ನು ನಿರ್ಧರಿಸುವವರು ನಾವೇ. ಆದರೆ ನಮ್ಮನ್ನು ನಾವು ಕಾಪಾಡಿ ಕೊಳ್ಳಲು,ನಮ್ಮ ತಪ್ಪುಗಳನ್ನು ಮರೆಯಾಗಿಸಲು ಪೂರ್ಣ ಸತ್ಯವನ್ನು ಹೇಳದೆ ತೊಳಲಾಡುತ್ತೇವೆ.ಆ ಸತ್ಯ ತನ್ನಲ್ಲೇ ಸಮಾಧಿಯಾಗಲಿ ಎಂದು ಬಯಸುತ್ತೇವೆ.ಈ ಯಾಂತ್ರಿಕ ಯುಗದಲ್ಲಿ ಕ್ಷಣಮಾತ್ರದಲ್ಲಿ ಒಂದು ಬೆರಳಿನ ಸ್ಪರ್ಶದಿಂದ ಎಷ್ಟೋ ಕಾಲ ಜೊತೆಯಾಗಿ ಕಳೆದ ಸಾವಿರಾರು ನೆನಪುಗಳನ್ನು ಅಳಿಸಿ ಹಾಕಬಹುದು.ಆದರೆ ಬದುಕಿನುದ್ದಕ್ಕೂ ಒಂದಷ್ಟು ಹೇಳದೇ ಉಳಿದ ಮಾತುಗಳನ್ನು,ಹೃದಯದಲ್ಲಿ ಅಚ್ಚಾದ ಕ್ಷಣಗಳನ್ನು ಎಂದಿಗೂ ಅಳಿಸಲಾಗದು.ನಮ್ಮ ಬದುಕಿನ ಪುಸ್ತಕದಲ್ಲಿ ಅದೆಷ್ಟೋ ಅರ್ಥವಾಗದ ಪುಟಗಳಿರುತ್ತವೆ.ಎಷ್ಟೇ ಅರ್ಥೈಸಿಕೊಂಡರೂ ಅರ್ಥವಾಗದೆ ಕೊನೆಗೆ ಬದುಕು ನಿರರ್ಥಕವೆನಿಸುತ್ತದೆ.ಅರ್ಥವಾಗದ, ಅರ್ಥೈಸಲು ಆಗದ ಮೂಕ ಭಾವ ನಮ್ಮೊಳಗಿನ ಸುಪ್ತ ಪ್ರಜ್ಞೆಯನ್ನು ಕಾಡುತ್ತದೆ.ಬದುಕಲ್ಲಿ ನಮ್ಮೊಳಗೆ ಹುದುಗಿ ಹೋದ ಸತ್ಯ ಕಣ್ಮುಂದೆ ಬಂದಾಗ ಮನಸ್ಸೆಂಬ ಕಡಲಲ್ಲಿ ಪುಟಿದೇಳುವ ಅಲೆಗಳು ಬಿರುಗಾಳಿಯನ್ನೇ ಸೃಷ್ಟಿಸುತ್ತದೆ.

ಅಸ್ಪೃಶ್ಯತಾ ಆಚರಣೆ ಅಂತ ಅನಿಷ್ಟ ಪದ್ದತಿಯನ್ನು ತೊಡೆದು ಹಾಕಲು ಎಲ್ಲರೂ ಜಾಗೃತರಾದಾಗ ದೇಶ ಅಭಿವೃದ್ಧಿ ಹೊಂದಲು ಸಾಧ್ಯ : ಶಿವಕುಮಾರ್

ಇಮೇಜ್
   ವರದಿ - ಮಂಜುನಾಥ್ ಕೋಳೂರು ಕೊಪ್ಪಳ  ಕೊಪ್ಪಳ ಅ 2 8 : - ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ ಅವರ ಆದರ್ಶ ಮಾರ್ಗದ ಅಡಿಯಲ್ಲಿ ಅಸ್ಪೃಶ್ಯತಾ ಆಚರಣೆ ಅಂತ ಅನಿಷ್ಟ ಪದ್ದತಿಯನ್ನು ತೊಡೆದು ಹಾಕಲು ಎಲ್ಲರೂ ಜಾಗೃತರಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ಸಂಘಟನೆಗೆ ಶಕ್ತಿ ಬರುತ್ತದೆ ಆಗ ಸಮಾಜ ಸುಧಾರಣೆಗೊಂಡು ದೇಶ ಅಭಿವೃದ್ಧಿ ಹೊಂದುತ್ತದೆ ಎಂದು ದಲಿತ ಸಂಘರ್ಷ ಸಮಿತಿ (ಭೀಮವಾದ ) ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕರಾದ ಶ್ರೀ ಶಿವಕುಮಾರ್ ರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.  ದಲಿತ ಸಂಘರ್ಷ ಸಮಿತಿಯ (ಭೀಮವಾದ) ರಾಜ್ಯ ಸಂಚಾಲಕರಾದ ಮಾನ್ಯ ಶ್ರೀ ಡಾ. ಆರ್. ಮೋಹನ್ ರಾಜ್ ರವರ ಆದೇಶದಂತೆ ಕೊಪ್ಪಳ ಜಿಲ್ಲಾ ಸಂಘಟನೆಯ ಕಾರ್ಯಕಾರಿ ಸಭೆಯನ್ನು ಕೊಪ್ಪಳ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ದಿನಾಂಕ 23ರಂದು ಸಭೆ ನಡೆದಿದ್ದು ಸಭೆಯಲ್ಲಿ 44 ಜನ ಸಂಘಟನೆಯ ಪ್ರತಿನಿಧಿಗಳು ಭಾಗವಹಿಸಿದ್ದು . ಈ ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಸಂಘಟಕರ ಹಾಗೂ ಪದಾಧಿಕಾರಿಗಳ ಅಭಿಪ್ರಾಯಗಳನ್ನು ಹಾಗೂ ಅನುಮತಿಯನ್ನು ಪಡೆದುಕೊಂಡು ಕೊಪ್ಪಳ ಜಿಲ್ಲಾ ದಲಿತ ಸಂಘರ್ಷ ಸಮಿತಿ (ಭೀಮವಾದ ) ಸಂಘಟನೆಯ ಜಿಲ್ಲಾ ಸಂಚಾಲಕರಾಗಿ ಶ್ರೀ ಪ್ರಕಾಶ್. ಎಚ್ .ಹೊಳೆಪ್ಪನವರ , ಜಿಲ್ಲಾ ಸಂಘಟನಾ ಸಂಚಾಲಕರಾಗಿ ಶ್ರೀ ಮಾರ್ಕಂಡಪ್ಪ. ಡಿ .ಹಲಗಿ ಕೊಪ್ಪಳ , ಶ್ರೀ ಮಂಜುನಾಥ ಕೋಳೂರು ಕೊಪ್ಪಳ, ಶ್ರೀ ಹನುಮಂತಪ್ಪ ಸೋಮನಾಳ ಕಾರಟಗಿ , ಶ್ರೀ

ದಸಾಪ ಯುವ ಘಟಕದ ಅಧ್ಯಕ್ಷರಾಗಿ ಹುಲುಗಪ್ಪ.ಜಿ. ಗೋನಾಳ ನೇಮಕ

ಇಮೇಜ್
  ಮಸ್ಕಿ : ದಲಿತ ಸಾಹಿತ್ಯ ಪರಿಷತ್ತು ಸಂಘದ ರಾಜ್ಯಾಧ್ಯಕ್ಷರಾದ ಡಾ.ಅರ್ಜುನ್ ಗೊಳಸಂಗಿ ಮತ್ತು ಜಿಲ್ಲಾಧ್ಯಕ್ಷರಾದ ತಾಯರಾಜ್ ಮರ್ಚೆಟ್ನಾಳ ಅವರುಗಳ ಸಲಹೆ ಮತ್ತು ಆದೇಶದ ಮೇರೆಗೆ ದಲಿತ ಸಾಹಿತ್ಯ ಪರಿಷತ್ತು ಯುವ ಘಟಕದ ಮಸ್ಕಿ ತಾಲೂಕ ಅಧ್ಯಕ್ಷರನ್ನಾಗಿ ಹುಲುಗಪ್ಪ.ಜಿ.ಗೋನಾಳ ರನ್ನು ನೇಮಕ ಮಾಡಿ ಆದೇಶಿಸಲಾಗಿದೆ. ಇನ್ನೂ ಮುಂದೆ ತಾವುಗಳು ತಾಲೂಕಿನಾದ್ಯಂತ ದಲಿತ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆ ಗಳಲ್ಲಿ ಕ್ರಿಯಾಶೀಲರಾಗಿ ಕಾರ್ಯಗೊಂಡು ತಾಲೂಕ ಸಮಿತಿ ಪದಾಧಿಕಾರಿಗಳನ್ನು ನೇಮಕ ಮಾಡಿಕೊಂಡು ಯುವ ಸಮಿತಿಯನ್ನು ಬಲಗೊಳಿಸಲು ಈ ಮೂಲಕ ಸೂಚಿಸಲಾಗಿದೆ ಎಂದು ಪತ್ರಿಕೆ ಹೇಳಿಕೆಯಲ್ಲಿ ಪಾರ್ಥ ಸಿರವಾರ ಜಿಲ್ಲಾಧ್ಯಕ್ಷ ದಲಿತ ಸಾಹಿತ್ಯ ಪರಿಷತ್ತು ಯುವ ಘಟಕ ರಾಯಚೂರು ಇವರು ತಿಳಿಸಿದ್ದಾರೆ.

*ಆಲದ ಮರವನ್ನು ಮಗುವಂತೆ ಜೋಪಾನ ಮಾಡುತ್ತಿರುವ ವನಸಿರಿ ತಂಡ : ಚನ್ನಪ್ಪ ಕೆ.ಹೊಸಹಳ್ಳಿ*

ಇಮೇಜ್
ಸಿಂಧನೂರು : ನಗರದ ಅಮರ ಶ್ರೀ ಆಲದ ಮರಕ್ಕೆ ಕೀಟಗಳು ಹರಡಿದ್ದು ಎಲೆಗಳು ಕಂದುಬಣ್ಣಕ್ಕೆ ತಿರುತ್ತಿವೆ ಆದ್ದರಿಂದ ಆಲದ ಮರವನ್ನು ಮಗುವಿನಂತೆ ಜೋಪಾನವಾಗಿ ನೋಡಿಕೊಳ್ಳುತ್ತಿರುವ ನಮ್ಮ ವನಸಿರಿ ಫೌಂಡೇಶನ್ ತಂಡ ಆಲದ ಮರಕ್ಕೆ ರಾಸಾಯನಿಕ ಕೀಟನಾಶಕ ಸಿಂಪಡಣೆ ಮಾಡುವ ಮೂಲಕ ಮಗುವಿನಂತೆ ಪೋಷಣೆ ಮಾಡಲಾಗುತ್ತಿದೆ ಎಂದು ವನಸಿರಿ ಫೌಂಡೇಶನ್ ಜಾಲತಾಣದ ಅದ್ಯಕ್ಷರಾದ ಚನ್ನಪ್ಪ ಕೆ.ಹೊಸಹಳ್ಳಿ ತಿಳಿಸಿದರು. ದಿನಾಂಕ 26-05-2022 ರಂದು ವನಸಿರಿ ಫೌಂಡೇಶನ್ ವತಿಯಿಂದ ಅಮರ ಶ್ರೀ ಆಲದ ಮರವನ್ನು ನೆಟ್ಟು,ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳ ಅಮೃತ ಹಸ್ತದಿಂದ ಅಮರ ಶ್ರೀ ಎಂದು ನಾಮಕರಣ ಮಾಡಿ,ನಂತರ ಪ್ರತಿವರ್ಷ ಮೇ 5ರಂದು ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸುತ್ತಾ ಬಂದಿದ್ದು,ಮಗುವಿನಂತೆ ಪಾಲನೆ ಪೋಷಣೆ ಮಾಡುತ್ತಿದ್ದೇವೆ.ಸದ್ಯ ಇದೀಗ ಆಲದ ಮರಕ್ಕೆ ಕೀಟಗಳು ಹರಡಿದ್ದು ಎಲೆಗಳ ಚಿಗುರುಗಳನ್ನು ತಿಂದು ಹಾಕುತ್ತಿವೆ.ಮನೆಯಲ್ಲಿ ಮಗುವನ್ನು ಯಾವರೀತಿ ಲಾಲನೆ ಪೋಷಣೆ ಮಾಡುತ್ತೇವೆಯೋ ಅದೇರೀತಿ ಈ ಮರವನ್ನು ಗಿಡ ನೆಟ್ಟಾಗಿನಿಂದ ಇಲ್ಲಿಯವರೆಗೂ ಪೋಷಣೆ ಮಾಡುತ್ತಿದ್ದೇವೆ. ಈಗ ಎಲೆಗಳನ್ನು ತಿಂದುಹಾಕುತ್ತಿರುವುದನ್ನು ಗಮನಿಸಿ ಇವತ್ತು ಎಲೆಗಳಿಗೆ ರಾಸಾಯನಿಕ ಕ್ರಿಮಿನಾಶಕ ಸಿಂಪಡಣೆ ಮಾಡುತ್ತಿದ್ದೇವೆ.ಇವತ್ತು ತಮ್ಮ ಕುಟುಂಬಕ್ಕಾಗಿ ಆರ್ಥಿಕತೆ ಹೊಂದುವ ದೃಷ್ಟಿಯಿಂದ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಎಷ್ಟೋ ಜನರನ್ನು ನಾವುಗಳು ನೋಡುತ್ತಿದ್ದೇವೆ.ಅವರಲ್ಲಿ

*ಜಂಗಮ ಸಮಾಜ ಸಂಸ್ಥೆ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ*

ಇಮೇಜ್
ಕೂಡ್ಲಿಗಿ: ಜಂಗಮ ಸಮಾಜ ಸಂಸ್ಥೆ,(ರಿ) ಕೂಡ್ಲಿಗಿ ವತಿಯಿಂದ ಅ,27 ರಂದು ಭಾನುವಾರ ಬೆಳಿಗ್ಗೆ 10:30ಕ್ಕೆ ಜಂಗಮ ಸಮಾಜ ಸಂಸ್ಥೆ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಕಾನ ಹೊಸಹಳ್ಳಿ ಪಟ್ಟಣದ ಗಾಣಿಗರ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಜಂಗಮ ಸಮಾಜ ಸಂಸ್ಥೆಯ ಅಧ್ಯಕ್ಷರು ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ತಾಲೂಕು ಜಂಗಮ ಸಮಾಜ ಸಂಸ್ಥೆ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ, ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಗುತ್ತದೆ. ಕಾರ್ಯಕ್ರಮದ ಸಾನಿಧ್ಯವನ್ನು ಶೀ ಮ.ನಿ.ಪ್ರ ಶಂಕರಸ್ವಾಮಿಗಳು, ಕ್ರಿಯ ಮೂರ್ತಿಗಳು, ಮಹಲ್ ಮಠ, ಕೊಟ್ಟೂರು ಇವರು ಸಾನಿಧ್ಯವನ್ನು ವಹಿಸುವರು. ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಶ್ರೀನಿವಾಸ್ ಎನ್.ಟಿ. ಅವರು ಉದ್ಘಾಟಿಸುವರು, ಎಚ್.ಎಂ ಗಂಗಾಧರ ಸ್ವಾಮಿ ಅಧ್ಯಕ್ಷರು ತಾಲೂಕು ಜಂಗಮ ಸಮಾಜ ಸಂಸ್ಥೆ ಕೂಡ್ಲಿಗಿ, ಅಧ್ಯಕ್ಷತೆವಹಿಸುವರು. ಕಾರ್ಯಕ್ರಮದಲ್ಲಿ ಕೆ.ಎಂ ಶಶಿಧರ್ ಸ್ವಾಮಿ ಮಾಜಿ ಜಿ.ಪಂ ಸದಸ್ಯರು, ಐ.ದಾರುಕೇಶ್ ಉಪಾಧ್ಯಕ್ಷರು ಬಿಡಿಸಿಸಿ ಬ್ಯಾಂಕ್ ಹೊಸಪೇಟೆ, ಕೆ.ಎಂ ವೀರೇಶ್ ಕಾರ್ಯದರ್ಶಿ ಬಾಪೂಜಿ ವಿದ್ಯಾಸಂಸ್ಥೆ ಚಿತ್ರದುರ್ಗ, ಕೆ.ಎಂ ಮಂಜಕ್ಕ ಗ್ರಾ.ಪಂ ಸದಸ್ಯರು ಹೊಸಹಳ್ಳಿ, ಚಿದಾನಂದಸ್ವಾಮಿ ನಿವೃತ್ತ ಬಿಡಿಸಿಸಿ ಬ್ಯಾಂಕ್ ಸೂಪರಿಟೆಂಡೆಂಟ್, ವೈ ಎಂ ವೀರೇಶ್ವರಯ್ಯ ಅಧ್ಯಕ್ಷರು ಆರ್.ಎಸ್.ಎಸ್.ಎನ್ ಇಮಾಡಪುರ, ಕಾಶೀನಾಥಯ್ಯ ಜಿಲ್ಲಾಧ್ಯಕ್ಷರು ಜಂಗಮ ಸಮಾಜ ಸ೦ಸ್ಥೆ ವಿಜಯನಗರ, ಎಂ.

ಮಕ್ಕಳ ಭಾವನೆ ಅರಿತುಕೊಂಡು ಬೋಧನೆ ಮಾಡಬೇಕೆಂದು : ಶಾಸಕ ಹಂಪನಗೌಡ ಬಾದರ್ಲಿ

ಇಮೇಜ್
ಮಸ್ಕಿ: ವಿದ್ಯಾರ್ಥಿಗಳಿಗೆ ಪಠ್ಯಕ್ಕೆ ಸೀಮಿತಗೊಳಿಸಬಾರದು, ಪಠ್ಯದ ಜೊತೆಗೆ ಸಂಸ್ಕಾರ, ನೈತಿಕ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕೆಂದು ಸಿಂಧನೂರಿನ ಶಾಸಕ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಹಂಪನಗೌಡ ಬಾದರ್ಲಿ ಅವರು ಶಿಕ್ಷಕರಿಗೆ ಸಲಹೆ ನೀಡಿದರು.  ಪಟ್ಟಣದ ಭ್ರಮರಾಂಭ ದೇವಸ್ಥಾನದಲ್ಲಿ ನಡೆದ ಜಿಲ್ಲಾ ಶೈಕ್ಷಣಿಕ ಸಮಾವೇಶ ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸದೃಢ ದೇಶ ನಿರ್ಮಾಣವಾಗಲು ಶಿಕ್ಷಕನ ಕೈಯಲ್ಲಿದೆ. ಮಕ್ಕಳ ಭಾವನೆ ಅರಿತುಕೊಂಡು ಬೋಧನೆ ಮಾಡಬೇಕೆಂದು ಹೇಳಿದರು. ಶೈಕ್ಷಣಿಕ ಸಮಾವೇಶ, ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಸಮಸ್ಯೆಗಳನ್ನು ಪರಿಹರಿಸಲು ಒಂದು ಉತ್ತಮ ವೇದಿಕೆಯಾಗಿದೆ. ಖಾಸಗಿ ಶಾಲೆಯ ಒಕ್ಕೂಟದ ವ್ಯಾಪ್ತಿಗೆ ಯಾವುದೇ ಅಹಿತಕರ ಘಟನೆಗಳು ನಡೆದರೂ ನನ್ನ ಗಮನಕ್ಕೆ ತನ್ನಿ ಅದಕ್ಕೆ ಪರಿಹಾರ ಹುಡುಕುವ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಅಲ್ಪ ವೇತನದಲ್ಲಿ ಗುಣಾತ್ಮಕ ಶಿಕ್ಷಣವನ್ನು ನೀಡುವ ಕೆಲಸ ಶಿಕ್ಷಕ ಮಾಡುತ್ತಿದ್ದಾನೆ. ಸರ್ಕಾರ ಖಾಸಗಿ ಶಿಕ್ಷಕರಿಗೆ ಮೂಲ ಸೌಕರ್ಯ ನೀಡಬೇಕು. ಸಿಆರ್‌ಎಫ್ ಅನುದಾನವನ್ನು ಶಿಕ್ಷಣ ಸಂಸ್ಥೆಗೆ ಬಳಕೆ ಮಾಡಿಕೊಳ್ಳುವುದಕ್ಕೆ ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಜೆ.ಟಿ.ಪಾಟೀಲ್ ಅವರ ಜೊತೆ ಚರ್ಚೆ ಮಾಡಿದ್ದೇನೆ. ಅನುದಾನ ಬಳಕೆಗೆ ಸಮ್ಮತಿ ಸೂಚಿಸಿದ್ದಾರೆ ಎಂದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೌಚಾಲಯ, ಕುಡಿಯುವ ನೀರು, ಶಾಲೆ, ರಸ

ದೇಶಾದ್ಯಂತ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ : ಕೇರಿಯರ್ ಉತ್ಸವಕ್ಕಾಗಿ ಕ್ಯೂಎಸ್ 1-ಗೇಜ್ ನೊಂದಿಗೆ ಕೆ2 ಕಲಿಕೆ ಸಹಭಾಗಿತ್ವ

ಇಮೇಜ್
  ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಉತ್ತಮ ತಿಳುವಳಿಕೆಯುಳ್ಳ ವೃತ್ತಿಯನ್ನು ಆಯ್ಕೆ ಮಾಡಲು ನೆರವು ಬೆಂಗಳೂರು,ಅ,25 : ಬಹು ಆಯಾಮದ ಶೈಕ್ಷಣಿಕ ಪರಿಹಾರಗಳನ್ನು ಒದಗಿಸುವ ಬೆಂಗಳೂರು ಪ್ರಧಾನ ಕಚೇರಿ ಹೊಂದಿರುವ ಕೆ2 ಲರ್ನಿಂಗ್ ರಿಸೋರ್ಸಸ್ ಇಂಡಿಯಾ ಪ್ರೈ. ಲಿಮಿಡೆಟ್ ಇದೀಗ ಕ್ಯೂಎಸ್ 1-ಗೇಜ್ ಪಾಲುದಾರಿಕೆ ಹೊಂದಿದೆ. ಭಾರತದ ಪ್ರಮುಖ ಶೈಕ್ಷಣಿಕ ಶ್ರೇಯಾಂಕ ವ್ಯವಸ್ಥೆಯು ತನ್ನ ವೃತ್ತಿ ಮಾರ್ಗದರ್ಶನ ವೇದಿಕೆಯಾದ ವೃತ್ತಿ ಉತ್ಸವವನ್ನು ವಿಸ್ತರಿಸಲು ಮುಂದಾಗಿದೆ. ಈ ಪಾಲುದಾರಿಕೆ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸಮಗ್ರವಾಗಿ ವೃತ್ತಿ ಮಾರ್ಗದರ್ಶನ ನೀಡಲು ಸಹಾಯ ಮಾಡುತ್ತದೆ. ವೃತ್ತಿ ಆಯ್ಕೆ ಜೊತೆಗೆ ಚತುರ ಶಿಕ್ಷಣದ ಒಳನೋಟವನ್ನು ಪಡೆಯಲು ಸಹಕಾರಿಯಾಗಲಿದೆ.  ಈ ಸಹಭಾಗಿತ್ವದಲ್ಲಿ ತೊಡಗಿಸಿಕೊಳ್ಳಲು ಹೊಸ ಉಪಕ್ರಮಗಳನ್ನು ಪರಿಚಯಿಸಲಾಗಿದೆ, ಇದರಲ್ಲಿ ಕಾರ್ಯಾಗಾರಗಳು ಮತ್ತು ಮಾನಸಿಕ ಅಸ್ವಸ್ಥತೆಯ ಪರೀಕ್ಷೆಗಳು ಸಹ ಒಳಗೊಂಡಿರುವುದು ವಿಶೇಷವಾಗಿದೆ. ಈ ಸಾಧನ ವ್ಯಕ್ತಿಗತ ಮಾರ್ಗದರ್ಶನ ನೀಡುವ ಜೊತೆಗೆ ತನ್ನ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಾಧ್ಯ. ಶಿಕ್ಷಣ ಸಂಸ್ಥೆಗಳು ಸಹ-ಬ್ರಾಂಡಿಂಗ್ ಮಾರುಕಟ್ಟೆ ಮತ್ತು ಕಾರ್ಯಕ್ರಮಗಳ ವೇದಿಕೆಗಳ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ಒದಗಿಸುವ ಅನುಕೂಲಗಳು ಇಲ್ಲಿವೆ.  ಸಹಭಾಗಿತ್ವ ಕುರಿತು ಕೆ2 ಲರ್ನಿಂಗ್ ಸಂಸ್ಥಾಪಕ ಶ್ರೀಪಾಲ್ ಜೈನ್, “ವಿಶ್ವಸಾರ್ಹ ಸಂಸ್ಥೆಗಳಿಗೆ ಉತ್

*ಆರೋಗ್ಯವೇ ಮೊದಲು,ನಂತರ ಎಲ್ಲವೂ* *- ಸಿ ಎ ಡಾ.ವಿಷ್ಣು ಭರತ್ ಆಲಂಪಲ್ಲಿರವರು ಕರೆ* ನೀಡಿದ್ದಾರೆ

ಇಮೇಜ್
ಬೆಂಗಳೂರು : ಆಚಾರ್ಯ ಪಾಠ ಶಾಲ ಶಿಕ್ಷಣ ಸಂಸ್ಥೆ ಮತ್ತು ಮಾತೃ ಛಾಯಾ ಜೈನ್ ಸಮಾಜದ ಸಹಭಾಗಿತ್ವದಲ್ಲಿ ಸುಮಾರು 400 ಜನರಿಗೆ ಉಚಿತ ಆರೋಗ್ಯ ತಪಾಸಣೆಗಳನ್ನು ನಡೆಸಲಾಗಿದೆ. ಆಚಾರ್ಯ ಪಾಠ ಶಾಲ ಶಿಕ್ಷಣ ಸಂಸ್ಥೆಯ ಎಲ್ಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ಮಾತೃ ಛಾಯಾ ಜೈನ ಸಮಾಜವು ಬಸವನಗುಡಿಯ ಸಾರ್ವಜನಿಕರ ಹಿತದೃಷ್ಟಿಯಿಂದ, ವಿಶೇಷವಾಗಿ BBMP ಗುತ್ತಿಗೆ ಸ್ಕ್ಯಾವೆಂಜರ್‌ಗಳ ವಿಶೇಷ ಕಾಳಜಿಯಿಂದ APS ಶಿಕ್ಷಣ ಸಂಸ್ಥೆ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆಯನ್ನು 26 ಅಕ್ಟೋಬರ್ 24 ರಂದು ನಡೆಸಿತು. ದೀಪಾವಳಿಯ ವಿಶೇಷ ಸಂದರ್ಭದಲ್ಲಿ ನೆಡೆದ ಈ ಆರೋಗ್ಯ ಶಿಬಿರವು ತುಂಬಾ ಜನರಿಗೆ ಬೆಳಕಾಯಿತು ಎಂದೇ ಹೇಳಬಹುದು. ಬಸವನಗುಡಿ ಕ್ಷೇತ್ರದ ಶಾಸಕ ಶ್ರೀ ರವಿ ಸುಬ್ರಹ್ಮಣ್ಯ ರವರು, ಆಚಾರ್ಯ ಪಾಠ ಶಾಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸಿ ಎ ಡಾ.ವಿಷ್ಣು ಭರತ್ ಆಲಂಪಲ್ಲಿರವರು, ಜೈನ ಸಮಾಜದ ಅಧ್ಯಕ್ಷೆ ಶ್ರೀಮತಿ. ಲಲಿತಾ ಜೈನ್, ಮಾಜಿ ಕಾರ್ಪೋರೇಟರ್ ಶ್ರೀಮತಿ.ಕವಿತಾ ಜೈನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಆರೋಗ್ಯ ಶಿಬಿರದ ವಿಶೇಷತೆಯು ಕ್ಯಾನ್ಸರ್ ರೋಗನಿರ್ಣಯವನ್ನು ಪರಿಶೀಲಿಸುವುದು. ಶಿಬಿರದಲ್ಲಿ ಮಕ್ಕಳೂ ಸೇರಿದಂತೆ 400 ಜನರನ್ನು ತಪಾಸಣೆಗೆ ಒಳಪಡಿಸಲಾಯಿತು ಮತ್ತು ಅವರಿಗೆ ವರದಿಗಳನ್ನು ನೀಡಲಾಯಿತು ಮತ್ತು ಚಿಕಿತ್ಸೆಗಾಗಿ ಎಲ್ಲಿ ಚಿಕಿತ್ಸೆತೆಗೆದುಕೊಳ್ಳಬೇಕು ಎಂದು ನುರಿತ ವೈದ್ಯರ ತಂಡ ತಿಳಿಸಿತು.   90 ವರ್ಷಗಳ ಸ

ರಾಜ್ಯ ಮಟ್ಟಕ್ಕೆ ಆಯ್ಕೆ : ಅಭಿನಂದನೆ ಮಹಾಪೂರ

ಇಮೇಜ್
  ಮಸ್ಕಿ : ರಾಯಚೂರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಮಸ್ಕಿ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಹಾಲಾಪೂರಿನ ವಿದ್ಯಾರ್ಥಿಗಳು ವೈಯುಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ೧೦ ನೇ ತರಗತಿ ವಿದ್ಯಾರ್ಥಿಯಾದ ರೋಹಿತ್ ವಿರುಪಾಕ್ಷಯ್ಯ ೧೦೦ ಮೀಟರ್ ಓಟದಲ್ಲಿ ತೃತೀಯ ಸ್ಥಾನ , ಮತ್ತು ೪೦೦ ಮೀಟರ ಅಡೆತಡೆ ಓಟದಲ್ಲಿ ಪ್ರಥಮ ಪಡೆದು ರಾಜ್ಯ ಮಟ್ಟಕ್ಕೆಆಯ್ಕೆಯಾಗಿದ್ದು ಸಂತಸ ಪಡುವ ವಿಷಯವಾಗಿದೆ. ಈ ಸಾಧನೆಗೆ , ಮುಖ್ಯ ಗುರುಗಳಾದ ಸುಭಾಸ್ ಸಿಂಗ್ ಹಜಾರಿ ಸಿಬ್ಬಂದಿ ವರ್ಗ , ಎಸ್ ಡಿ.ಎಂ.ಸಿ ಅಧ್ಯಕ್ಷ ಮಾಳಿಂಗರಾಯ ಹಾಗೂ ಪದಾಧಿಕಾರಿಗಳು, ಬಸವರಾಜಪ್ಪ ಗೌಡ ಪಾಟೀಲ್,ಸಂಘದ ಅಧ್ಯಕ್ಷ ಸಿದ್ದಾರ್ಥ್ ಪೊಲೀಸ್ ಪಾಟೀಲ್ ಮತ್ತು ಸಸದಸ್ಯರು, ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕ ರವೀಂದ್ರ. ಕೆ,ಹಿರಿಯ ವಿದ್ಯಾರ್ಥಿಗಳು ಊರಿನ ಪ್ರಮುಖರು, ಶಿಕ್ಷಣ ಪ್ರೇಮಿಗಳು ಕ್ರೀಡಾ ಪ್ರೇಮಿಗಳು ಅಭಿನಂದಿಸಿದ್ದಾರೆ.

ಮರಕುಂಬಿ ಎಸ್ಸಿ-ಎಸ್ಟಿ ದೌರ್ಜನ್ಯ ಪ್ರಕರಣ : 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಇಮೇಜ್
* ಮಹತ್ವದ ತೀರ್ಪು ನೀಡಿದ ಕೋರ್ಟ್* ಕೊಟ್ಟೂರು: ಕೊಪ್ಪಳ ಜಿಲ್ಲಾ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದ ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ 98 ಜನ ಅಪರಾಧಿಗಳಿಗೆ (Criminals) ಜೀವಾವಧಿ ಶಿಕ್ಷೆ, ಮೂವರಿಗೆ 5 ವರ್ಷ ಶಿಕ್ಷೆ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ (ಅ.24) ಮಹತ್ವದ ಆದೇಶ ಹೊರಡಿಸಿದೆ. ಎಸ್ಸಿ-ಎಸ್ಟಿ ದೌರ್ಜನ್ಯ ಪ್ರಕರಣಮಹತ್ವದ ತೀರ್ಪು ನೀಡಿದ ಕೋರ್ಟ್ಏನಿದು ಪ್ರಕರಣಕಣ್ಣೀರಿಟ್ಟ ಕುಟುಂಬಸ್ಥರು ಅಸ್ಪೃಶ್ಯತೆ ಆಚರಣೆ, ದಲಿತರ ಮೇಲಿನ ದೌರ್ಜನ್ಯ ಕಾರಣ ಪ್ರಕರಣ ದೇಶದ ಗಮನ ಸೆಳೆದಿತ್ತು. ಗಲಭೆಗೆ ಕಾರಣರಾದ 101 ಜನರ ವಿರುದ್ಧದ ಆರೋಪ ಸಾಬೀತಾಗಿದ್ದು, ನ್ಯಾಯಾಲಯ ಅಪರಾಧಿಗಳೆಂದು ತಿಳಿಸಿದೆ. 98 ಅಪರಾಧಿಗಳಿಗೆ ಜೀವಾವಧಿ ಜೈಲು ಶಿಕ್ಷೆ ಹಾಗೂ ತಲಾ 5 ಸಾವಿರ ರೂ. ದಂಡ ವಿಧಿಸಿದೆ. ಮೂವರು ಎಸ್ಸಿ, ಎಸ್ಟಿ ವರ್ಗಕ್ಕೆ ಸೇರಿದ ಮೂವರು ಅಪರಾಧಿಗಳಿಗೆ ತಲಾ ಎರಡು ಸಾವಿರ ರೂ. ದಂಡ ಹಾಗೂ 5 ವರ್ಷ ಸಜೆ ವಿಧಿಸಲಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ಚಂದ್ರಶೇಖರ್ ಸಿ. ಅ.21ರಂದು 101 ಆರೋಪಿಗಳ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳೆಂದು ಘೋಷಿಸಿದ್ದರು. ಗುರುವಾರ ಶಿಕ್ಷೆ ಪ್ರಕಟಿಸಿ ಆದೇಶಿಸಿದರು. ಏನಿದು ಪ್ರಕರಣ ದೇಶಾದ್ಯಂತ ಗಮನ ಸೆಳೆದಿದ್ದ ಗಂಗಾವತಿ ತಾಲೂಕಿನ ಮರಕುಂಬಿಯಲ್ಲಿ 2014ರಲ್ಲಿ ದಲಿತರು ಮತ್ತು ಸವರ್ಣಿಯರ ನಡುವಿನ ಗಲಾಟೆಗೆ ಕಾರಣವಾಗಿತ್ತು. 2014ರ ಆಗಸ್ಟ್ 28ರಂದ

*ಸೋಲಾರ್ ಕಂಪನಿ ವಿರುದ್ಧ ರೈತರ ಸಂಘಟನೆಗಳ ಆಕ್ರೋಶ*

ಇಮೇಜ್
ಕೊಟ್ಟೂರು : ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹಾಗೂ ದಲಿತ ಸಂಘರ್ಷ ಸಮಿತಿ ವತಿಯಿಂದ ಕೃಷಿ ಜಮೀನಿನಲ್ಲಿ ಸೋಲಾರ್ ಪ್ಲಾಂಟ್ ಅಳವಡಿಸಿರುವ ಕುರಿತು ಅದನ್ನು ಕೂಡಲೇ ತೆರವುಗೊಳಿಸುವಂತೆ ತಹಶೀಲ್ದಾರರಿಗೆ ರಾಜ್ಯಧ್ಯಕ್ಷ ಭರಮಣ್ಣ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.  ಸೋಲಾರ್ ಘಟಕವನ್ನು ಅಳವಡಿಸಲು ಒಂದೇ ಕಡೆ ನೂರಾರು ಎಕರೆ ಭೂಮಿ ಬೇಕಾಗುತ್ತದೆ. ಹಾಗಾಗಿ ಸೂಕ್ತವೆನಿಸುವ ಜಮೀನು ಪಡೆಯಲು ಕಂಪನಿಯವರು ಅನೇಕ ಮಾರ್ಗಗಳನ್ನು ಮಧ್ಯವರ್ತಿಗಳ ಮೂಲಕ ಅನುಸರಿಸುತ್ತಿದ್ದಾರೆ. ಅಧಿಕೃತವಾಗಿ ಹೊಲ ನೀಡುವ ರೈತನಿಂದ ಪಡೆದ ಜಮೀನಿನ ಪಕ್ಕದ ರೈತನಿಗೆ ಗೊತ್ತಿಲ್ಲದಂತೆ ಕೆಲವರ ಹೊಲದಲ್ಲಿ ಅನುಮತಿ ಪಡೆಯದೇ ಅನಧಿಕೃತವಾಗಿ ಪ್ಲಾಂಟ್‌ಗಳನ್ನು ಅಳವಡಿಸುತ್ತಿದ್ದಾರೆ. ಕೃಷಿ ಯೋಗ್ಯವಾದ ಜಮೀನುಗಳನ್ನು ರೈತರಿಂದ ಕಡಿಮೆ ದರದಲ್ಲಿ ಪಡೆದು ರೈತರ ಜಮೀನುಗಳನ್ನು ಪವರ್ ಆಪ್ ಅರ್ಟನಿ ಮೂಲಕ 30 ವರ್ಷಕ್ಕಿಂದ ಹೆಚ್ಚು ಲೀಜ್ ಪಡೆದುಕೊಂಡಿದ್ದರು. ಕಂಪನಿಯವರು ರೈತರ ಜಮೀನುಗಳನ್ನು ನೊಂದಾಯಿಸುವುದಕ್ಕಿAದ ಮುಂಚೆನೆ ಪ್ಲಾಂಟ್ ಅಳವಡಿಸುವ ಕಾರ್ಯ ಚಟುವಟಿಕೆ ಕೈಗೊಂಡಿದ್ದಾರೆ. ಕಾಯಿದೆ ನಿಯಮಗಳಿಗೆ ವಿರುದ್ದವಾಗಿ ಕೃಷಿಗೆ ಯೋಗ್ಯವಲ್ಲದ ಜಮೀನುಗಳನ್ನು ಪಡೆಯುವುದನ್ನು ಬಿಟ್ಟು ಯೋಗ್ಯವಾದ ಜಮೀನನ್ನು ಪಡೆದು ರೈತರಿಗೆ ವಂಚಿಸುತ್ತಿದ್ದಾರೆ. ಇಂತಹವರ ವಿರುದ್ದ ಕೂಡಲೇ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂ