ಪೋಸ್ಟ್‌ಗಳು

ಏಪ್ರಿಲ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬಾಬಾ ಸಾಹೇಬ್ ಅಂಬೇಡ್ಕರ್ ಅವರ 131 ನೇ ಜಯಂತಿ ಆಚರಣೆ

ಇಮೇಜ್
ಮಸ್ಕಿ: ತಾಲೂಕಿನ ಬೇಡರ ಕಾರಲ ಕುಂಟೆ ಗ್ರಾಮದಲ್ಲಿ ವಿವಿಧ ದಲಿತ ಪರ ಸಂಘಟನೆಯ ಮುಂದಾಳತ್ವದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ಏಪ್ರಿಲ್ ಬಂದರೇ ಸಾಕು ದಲಿತ ಬಂದುಗಳಿಗೆ ಹಬ್ಬವೋ ಹಬ್ಬ ಅದುವೇ ದಲಿತ ಸೂರ್ಯ ಭಾರತ ರತ್ನ ಡಾಕ್ಟರ್ ಬಿ. ಆರ್ ಅಂಬೇಡ್ಕರ್ ಅವರ 131 ನೇ ಜಯಂತಿಯನ್ನು ಬೇಡರ ಕಾರಲ ಕುಂಟೆ ಗ್ರಾಮದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.ಭಾರತೀಯ ಪ್ರಜೆ ಸಂಘ ವೆಂಕಟೇಶ ಕಾರಲಕುಂಟೆ ತಾಲೂಕ ಅಧ್ಯಕ್ಷರು,ಸರ್ವ ದಲಿತಪರ ಸಂಘಟನೆಗಳ ಸದಸ್ಯರು ಹಾಗೂ ಗ್ರಾಮ ಪಂಚಾಯತಿ ಅಧಿಕಾರಿ ಮತ್ತು ಸಿಬ್ಬಂದಿಗಳು ವಿವಿಧ ಗ್ರಾಮಗಳ ಸಾರ್ವಜನಿಕರು ಭಾಗಿಯಾಗಿದ್ದರು.

ನಮ್ಮ‌‌ ನಡೆ ಮತಗಟ್ಟೆ ಕಡೆ ಧ್ವಜಾರೋಹಣ

ಇಮೇಜ್
ಮಸ್ಕಿ: ದೇಶದಾದ್ಯಂತ ನಮ್ಮ‌‌ ನಡೆ ಮತಗಟ್ಟೆ ಕಡೆ ಕಾರ್ಯಕ್ರಮದ ಅಂಗವಾಗಿ ಮೆದಿಕಿನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ 9 ಮತಗಟ್ಟೆ ಗಳಲ್ಲಿ ದ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಾಯಿತು. ನಮ್ಮ‌‌ ನಡೆ ಮತಗಟ್ಟೆ ಕಡೆ ಕಾರ್ಯಕ್ರಮದ ಅಂಗವಾಗಿ ಮೆದಿಕಿನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ 9 ಮತಗಟ್ಟೆಗಳಲ್ಲಿ ದ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ವಿಷೇಶವಾಗಿ ಭಾಗದ ಸಂಖ್ಯೆ 123,124 ರಲ್ಲಿ ಮತದಾನದ ಬಗ್ಗೆ ಜಾಗೃತಿ ಜಾಥಾ,ಕಾಲನಡಿಗೆ,ವಿವಿಧ ಕಾರ್ಯಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಅಮರೇಶ ಕಾರ್ಯದರ್ಶಿ, ವೀರೇಶ ಕರ ವಸೂಲಿಗಾರರು,ಶಿವಪ್ಪ ರಾಠೋಡ್ ಶಿಕ್ಷಕರು, ಚಾಂದ್ ಖಾಜ ದೈಹಿಕ ಶಿಕ್ಷಕರು, ಮೆದಿಕಿನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಚುಣಾವಣೆ ಸದಸ್ಯರು,ಸಾರ್ವಜನಿಕರು ಸೇರಿದಂತೆ ಇನ್ನಿತರರು ಇದ್ದರು.

ಪ್ರಜ್ವಲ್ ರೇವಣ್ಣ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ : ಶೈಲಜಾ ಹಿರೇಮ

ಇಮೇಜ್
 ವರದಿ - ಮಂಜುನಾಥ ಕೋಳೂರು ಕೊಪ್ಪಳ  ಕೊಪ್ಪಳ : - ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ವಕ್ತಾರರಾದ ಶೈಲಜಾ ಹಿರೇಮಠ ಒತ್ತಾಯಿಸಿದ್ದಾರೆ. ಅವರು ರವಿವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿದ್ದೇಶಿಸಿ ಮಾತನಾಡಿ ಸ್ವಾತಂತ್ರ್ಯ   ನಂತರ ಭಾರತದಲ್ಲಿ ಎಂದೂ ಕಂಡರಿಯದ ಹಾಗೂ ಕೇಳದ ಸೆಕ್ಸ್ ಸ್ಕ್ಯಾಂಡಲ್ ನಡೆದಿರುವುದು ಅತ್ಯಂತ ಆಘಾತಕಾರಿ ಹಾಗೂ ದುರಂತ, ಕರ್ನಾಟಕದ ಮಾನವನ್ನು ಮಾಜಿ ಪ್ರಧಾನಿ ದೇವೆಗೌಡರ ಮೊಮ್ಮಗ ನಿಂದ ಹರಾಜಾಗಿರುವುದು ಅತ್ಯಂತ ಖಂಡನೀಯ, ಒಂದಲ್ಲ,ಎರಡಲ್ಲ ಮೂರು ಸಾವಿರ ಹೆಣ್ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನೆಡೆದಿರುವುದು ಅಸಹ್ಯಕರ. ಈ ಘಟನೆಯಲ್ಲಿ ರಾಜಕೀಯವಾಗಿ ಹಾಗೂ ಹಣದಿಂದ ಪ್ರಭಾವಿ ಕುಟುಂಬವಾದ ಮಾಜಿ ಪ್ರಧಾನಿಗಳಾದ ದೇವೇಗೌಡರ ಮೊಮ್ಮಗ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಇರುವುದರಿಂದ, ಈ ಘಟನೆಯಲ್ಲಿ ಅನ್ಯಾಯಕ್ಕೆ ಒಳಗಾದ ಮಹಿಳೆಯರಿಗೆ ನ್ಯಾಯ ಸಿಗಬೇಕೆಂದರೆ, ದೇವೆಗೌಡರು ನೈತಿಕ ಹೊಣೆ ಹೊತ್ತು ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು ಹಾಗೆಯೇ ಕುಮಾರಸ್ವಾಮಿಯವರು ಮತ್ತು ಹೆಚ್.ಡಿ ರೇವಣ್ಣನವರು ತಮ್ಮ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು.ಹಾಗೆಯೇ, ಪ್ರಜ್ವಲ್ ರೇವಣ್ಣ ಅವರು ರಾಜೀನಾಮೆ ಕೊಟ್ಟು, ಅವರು ವಿದೇಶಕ್ಕೆ ಹೋಗದ ಹಾಗೆ ಎಸ್‌ಐಟಿ ನೋಡಿಕೊಳ್ಳಬೇಕು.  ರಾಜಕೀಯವ

ಮಸ್ಕಿ : ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮ ಸಹಾಯಕ ಚುನಾವಣಾಧಿಕಾರಿಗಳಿಂದ ಧ್ವಜಾರೋಹಣ

ಇಮೇಜ್
ಮಸ್ಕಿ : ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಭಾನುವಾರ ಮಸ್ಕಿ ಪುರಸಭೆ ಆವರಣದಲ್ಲಿ ಏರ್ಪಡಿಸಿದ್ದ ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮದಲ್ಲಿ ಸಹಾಯಕ ಚುನಾವಣಾಧಿಕಾರಿಗಳಾದ ಜಗದೀಶ್‌ ಗಂಗಣ್ಣನವರ ಧ್ವಜಾರೋಹಣ ನೆರವೇರಿಸಿದರು.  ನಂತರ ಮಾತನಾಡಿ, ಸ್ಥಳೀಯ ಬೂತ್‌ಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿರುವ ಕುರಿತು ಮತದಾರರು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮದಡಿ ಧ್ವಜಾರೋಹಣ ನೆರವೇರಿಸಲಾಗಿದೆ. ಸ್ಥಳೀಯರಿಗೆ ಮತದಾನದ ಮಹತ್ವ ತಿಳಿಸಿ, ಮತಗಟ್ಟೆಗೆ ಆಗಮಿಸುವಂತೆ ಪ್ರೇರಣೆ ನೀಡಲಾಗುವುದು. ಇಂದಿನಿಂದ ಮೇ 7 ರವರೆಗೆ ಧ್ವಜ ಹಾರಾಡಲಿದೆ ಎಂದರು. ಮಸ್ಕಿ ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಅಂಬರೀಶ್‌, ಮಾತನಾಡಿ, ಮಸ್ಕಿ ಕ್ಷೇತ್ರದ 231 ಬೂತ್‌ಗಳಲ್ಲಿ ಧ್ವಜಾರೋಹಣ ನೆರವೇರಿಸಲಾಗುವುದು. ಸ್ಥಳೀಯರು ಬಿಎಲ್‌ಒಗಳಿಗೆ ಸಹಕಾರ ನೀಡಿ, ಶೇಕಡವಾರು ಮತದಾನ ಪ್ರಮಾಣ ಹೆಚ್ಚಳಕ್ಕೆ ಕಾಳಜಿ ವಹಿಸಬೇಕು ಎಂದರು. ಈ ವೇಳೆ ತಾ.ಪಂ ಸಿಬ್ಬಂದಿ ಗಂಗಾಧರ ಮೂರ್ತಿ, ಚಂದ್ರಶೇಖರ್‌, ಪುರಸಭೆ ಸಿಬ್ಬಂದಿ ಶಿವಣ್ಣ, ಮೀನಾಕ್ಷಮ್ಮ, ಸೋಮನಾಥ, ಗದ್ದೆಪ್ಪ, ಸುನೀಲ್‌, ಜಿ.ನಾಗರಾಜ್‌, ಬಸವರಾಜ್‌, ಅಂಬಿಕಾ, ಅಂಗನವಾಡಿ ಮೇಲ್ವಿಚಾರಕಿ ಶಿವಲೀಲಾ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಇದ್ದರು.

ಕಾಂಗ್ರೆಸ್ ಸರ್ಕಾರ ರೈತ ವಿರೋಧಿಸರಕಾರ:ದತ್ತಾತ್ರಿ 2008ರಲ್ಲಿ ತಂಗಡಗಿ ಕಾಲಲ್ಲಿ ಚಪ್ಪಲಿ ಇದ್ದಿಲ್ಲ ಅಂಗಿ ಹರಿದುಕೊಂಡು ನಿಂತಿದ್ದ:ದಡೇಸ್ಗೂರು

ಇಮೇಜ್
ವರದಿ - ಮಂಜುನಾಥ್ ಕೋಳೂರು ಕೊಪ್ಪಳ  ಕೊಪ್ಪಳ : - ರಾಜ್ಯ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದ್ದು ರೈತರಿಗಿದ್ದ ಯೋಜನೆಗಳನ್ನು ಸ್ಥಗಿತಗೊಳಿಸಿದೆ ಎಂದು ಪ್ರಕೋಸ್ಟದ ರಾಜ್ಯ ಸಂಯೋಜಕರಾದ ಎಸ್. ದತ್ತಾತ್ರಿ ಹೇಳಿದರು. ಅವರು ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಎನ್ ಡಿ ಆರ್ ಎಫ್ ನಿಯಮದಂತೆ ಕೇಂದ್ರ ಸರ್ಕಾರವು ಅನುದಾನ ಬಿಡುಗಡೆ ಮಾಡುತ್ತಿದೆ , ರಾಜ್ಯ ಸರ್ಕಾರ ಸಕಾಲಕ್ಕೆ ಕೇಂದ್ರಕ್ಕೆ ಸರಿಯಾದ ವರದಿ ನೀಡದೆ ಇರುವುದರಿಂದ ಪರಿಹಾರ ನೀಡುವಲ್ಲಿ ಕೇಂದ್ರದಿಂದ ವಿಳಂಬವಾಗಿದೆ .ರಾಜ್ಯ ಸರ್ಕಾರವು ಬರ ಪರಿಹಾರವನ್ನು ನೀಡಬಹುದಾಗಿತ್ತು ಆದರೆ ಬಿಟ್ಟಿ ಗ್ಯಾರಂಟಿ ಯೋಜನೆಗಳಿಗೆ ಹಣ ವಂದಿಸುವ ಉದ್ದೇಶದಿಂದ ಬರ ಪರಿಹಾರ ನೀಡಿಲ್ಲ ಈ ಹಿಂದೆ ಯಡಿಯೂರಪ್ಪ - ಬೊಮ್ಮಯಿ ನೇತೃತ್ವದ ಸರ್ಕಾರದಲ್ಲಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರಿಗೆ ರಾಜ್ಯದ ಸರ್ಕಾರದ 4000 ಹಣ ನೀಡುತ್ತಿಲ್ಲ, ವಿದ್ಯಾರ್ಥಿಗಳಿಗೆ - ವಿದ್ಯಾನಿಧಿ ಯೋಜನೆ ಸ್ಥಗಿತಗೊಳಿಸಿದ್ದಾರೆ , ರೈತ ಹಾಲು ಉತ್ಪಾದಕರಿಗೆ ಹಾಲಿನ ಪ್ರೋತ್ಸಾಹ ಧನ ನೀಡುತ್ತಿಲ್ಲ. ಈ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಮತ ಹಾಕಿದರೆ ಜಿಯಾದಿಗಳಿಗೆ ಮತ ಹಾಕಿದಂತಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಬಸವರಾಜ ದಡೇಸ್ಗೂರು ವಿಶ್ವಕರ್ಮ ಯೋಜನೆಯನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರದ ಅಸಹಕಾರ ತೋರುತ್ತಿದೆ ಕೊಪ್ಪಳ ಜಿಲ್ಲೆಯಲ್ಲಿ 70,000

ಪೆನ್‌ ಡ್ರೈವ್ ಪ್ರಕರಣ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಎನ್ ಎಫ್ ಐ ಡಬ್ಲ್ಯೂ ರಾಜ್ಯ ಕಾರ್ಯದರ್ಶಿ ಕೆ ರೇಣುಕಮ್ಮ ಒತ್ತಾಯ

ಇಮೇಜ್
ಕೊಟ್ಟೂರು : ಹಾಸನದ ಪೆನ್ ಡ್ರೈವ್ ಪ್ರಕರಣ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಈ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಎನ್ ಎಫ್ ಐ ಡಬ್ಲ್ಯೂ ರಾಜ್ಯ ಕಾರ್ಯದರ್ಶಿ ಕೆ ರೇಣುಕಮ್ಮ ಆಗ್ರಹಿಸಿದ್ದಾರೆ. ಎರಡು ಸಾವಿರಕ್ಕೂ ಅಧಿಕ ಹೆಣ್ಣು ಮಕ್ಕಳನ್ನು ಕಾಮಕಾಂಡದಲ್ಲಿ ತೊಡಗಿ ವೀಡಿಯೊಗಳನ್ನು ಪೆನ್‌ಡೈವ್‌ಗಳ ಮೂಲಕ ಹಾಸನದ ಹಾದಿ ಬೀದಿಗಳಲ್ಲಿ ಚೆಲ್ಲಾಡಿರುವುದು ರಾಜ್ಯದಲ್ಲಿ ತಲ್ಲಣ ಉಂಟು ಮಾಡಿದೆ. ಈ ಭೀಕರ ಘಟನೆಯಲ್ಲಿ ತೊಡಗಿದ ವ್ಯಕ್ತಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು'  ವಿಕೃತ ಮನಸ್ಥಿತಿ: ಮಾಜಿ ಪ್ರಧಾನಿ ದೇವೇಗೌಡರ ಮಕ್ಕಳು, ಮೊಮ್ಮಕ್ಕಳು ಹೆಣ್ಣು ಮಕ್ಕಳ ವಿಚಾರದಲ್ಲಿ ಈ ರೀತಿಯಲ್ಲಿ ನಡೆದುಕೊಳ್ಳುತ್ತಾರೆಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಇದು ಸಂಸದ ಪ್ರಜ್ವಲ್ ರೇವಣ್ಣನ ವಿಕೃತ ಕಾಮದ ಮನಸ್ಥಿತಿ. ಈ ಘಟನೆಯಿಂದ ಸಂತ್ರಸ್ತ ಮಹಿಳೆಯರು ಸಮಾಜದಲ್ಲಿ ಮುಖ ತೋರಿಸುವುದಕ್ಕೆ ಆಗದೇ, ಆತ್ಮಹತ್ಯೆಗೆ ಒಳಗಾಗುತ್ತಾರೆ. ಅನೇಕರು ಮಾನಸಿಕ ಆಘಾತಕ್ಕೆ ಒಳಗಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಹೆಣ್ಣು ಮಕ್ಕಳ ಭವಿಷ್ಯದ ಸ್ಥಿತಿ ಸರಳವಾಗಿಲ್ಲ. ಸಂತ್ರಸ್ತರಿಗೆ ಯಾವ ಘಳಿಗೆಯಲ್ಲಿ ಏನು ಆಗುತ್ತೋ ಎನ್ನುವ ಆತಂಕ ಕಾಡುತ್ತಿದೆ. ಸಂತ್ರಸ್ತೆಯರಿಗೆ ಮನೆಗಳಲ್ಲಿಯೂಯಯ ಸಿಕ್ಕಿರುವುದಿಲ್ಲ. ಹಾಗೂ ಮಹಿಳಾ ಸಂಘಟನೆಗಳು ಸಂತ್ರಸ್ತೆಯರಿಗೆ ಧೈರ್ಯ ತುಂಬಿ, ಸಂಕಟದಿಂದ ಹೊರ

ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕೆ ಕೊಟ್ರೇಶ ಅವಿರೋಧವಾಗಿ ಆಯ್ಕೆ

ಇಮೇಜ್
*ಕರ್ನಾಟಕ ಪತ್ರಕರ್ತರ ಸಂಘ ತಾಲೂಕು ಘಟಕ ಪ್ರಾರಂಭೋತ್ಸವ* ಕೊಟ್ಟೂರು: ಕೊಟ್ಟೂರು ತಾಲೂಕು ಕರ್ನಾಟಕ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಕೊರವರ ಕೊಟ್ರೇಶ ಅವಿರೋಧವಾಗಿ ಆಯ್ಕೆಗೊಂಡರು. ಈ ಸಂಬಂಧ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧ್ಯಕ್ಷ ಬಿ ಎಚ್ ರಾಜು ,ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.  ಕರ್ನಾಟಕ ಪತ್ರಕರ್ತರ ಸಂಘದ ತಾಲೂಕು ಕಾರ್ಯಧ್ಯಕ್ಷ ಎಚ್ ವಿಜಯ್ ಕುಮಾರ್, ಉಪಾಧ್ಯಕ್ಷರಾಗಿ ಶಿರಿಬಿ ಕೊಟ್ರೇಶ್,ಉಪಾಧ್ಯಕ್ಷರಾಗಿ ಎಂ ಶ್ರೀನಿವಾಸ್ ,ಪ್ರಧಾನ ಕಾರ್ಯದರ್ಶಿಯಾಗಿ ಡಿ. ಸಿದ್ದಪ್ಪ ,ಖಜಾಂಚಿಯಾಗಿ ತೆಗ್ಗಿನಕೇರಿ ಕೊಟ್ರೇಶ್, ಸಂಘಟನಾ ಕಾರ್ಯದರ್ಶಿಯಾಗಿ ಎಸ್ ಪ್ರಕಾಶ್,ಜಂಟಿ ಸಂಘಟನಾ ಕಾರ್ಯದರ್ಶಿಯಾಗಿ ಜಿ ಶಿವರಾಜ್ ಕನ್ನಡಿಗ, ಅವಿರೋಧವಾಗಿ ಆಯ್ಕೆಯಾದರು.  ಜಿಲ್ಲಾ ಸಂಘದ ಕಾರ್ಯಧ್ಯಕ್ಷ ಸೋಮಶೇಖರಯ್ಯ ಹಿರೇಮಠ್,  ಪ್ರಧಾನ ಕಾರ್ಯದರ್ಶಿ ಕಾಕುಬಾಳು ಪ್ರಕಾಶ್,,ಎಂ ಗೌಸ್ ಇವರ ಸಮ್ಮುಖದಲ್ಲಿ ಮತ್ತು ತಾಲೂಕು ಸದಸ್ಯರು ಹಿರಿಯ ಪತ್ರಕರ್ತರ ಕೆ.ಎಂ. ಚಂದ್ರಶೇಖರ, ಎಸ್ ಪರಶುರಾಮ್,ಬಂದಾತರ  ಕೊಟ್ರೇಶ, ಸುವೇಭ್ ವಲಿ ಕೆ, ವೈ. ಹರ್ಷವರ್ಧನ , ಎಚ್ ದಾದಪೀರ್, ಪೂಜಾರ್ ಗಣೇಶ್ ,ಮತ್ತಿತರರು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಡಿಜಿಟಲ್ ಭಾರತ ನಿರ್ಮಾಣ- ಡಾ.ಬಸವರಾಜ

ಇಮೇಜ್
ವರದಿ ಮಂಜುನಾಥ್ ಕುಳ್ಳರು ಕೊಪ್ಪಳ  ಕೊಪ್ಪಳ : - : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಡಿಜಿಟಲ್ ಭಾರತ ನಿರ್ಮಾಣ ಮಾಡಿದ್ದಾರೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕೆ.ಶರಣಪ್ಪ ಹೇಳಿದರು.  ಕುಷ್ಟಗಿವಿಧಾನಸಭಾ ವ್ಯಾಪ್ತಿಯ ತಳವಗೇರಾ ಗ್ರಾಮದಲ್ಲಿ ನಡೆದ ಚುನಾವಣಾ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಭಾರತವನ್ನು ಡಿಜಿಟಲೀಕರಣ ಮಾಡುವುದು ಅಸಾಧ್ಯ ಎಂದು ಹಿಂದಿನ ಯುಪಿಎ ಸರ್ಕಾರದ ವಿತ್ತ ಸಚಿವ ಚಿದಂಬರಂರವರು ಮಾತನಾಡಿದ್ದರು ಆದರೆ ಇಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದಲ್ಲಿ ಇದು ಸಾಧ್ಯವಾಗಿದೆ. ಪ್ರತಿಯೊಬ್ಬ ಭಾರತೀಯರು ಇಂದು ಡಿಜಿಟಲೀಕರಣಕ್ಕೆ ಹೊಂದಿಕೊಂಡು ಬದಲಾವಣೆ ಬಯಸುತ್ತಿದ್ದಾರೆ. ಸಣ್ಣಪುಟ್ಟ ವ್ಯಾಪಾರಸ್ಥರು ಸಹಿತ ಯುಪಿಐ ಕ್ಯೂಆರ್ ಕೋಡ್ ಹೊಂದಿದ್ದಾರೆ. ಮೊಬೈಲ್ ಮೂಲಕವೇ ಪ್ರತಿ ವ್ಯವಹಾರವನ್ನು ಸರಳಗೊಳಿಸುವ ಮೂಲಕ ಸಣ್ಣಪುಟ್ಟ ವ್ಯವಹಾರಕ್ಕೂ ಬ್ಯಾಂಕಿಗೆ ಹೋಗುವ ಅಲೆದಾಟವನ್ನು ಮೋದಿಜಿ ಸರ್ಕಾರ ತಪ್ಪಿಸಿದೆ ಎಂದು ಕೇಂದ್ರ ಸರ್ಕಾರದ ಸಾಧನೆ ತಿಳಿಸಿದರು. ಈ ಸಂದರ್ಭದಲ್ಲಿ ಕುಷ್ಟಗಿ ಬಿಜೆಪಿ ಮಂಡಲದ ಅಧ್ಯಕ್ಷ ಮಹಾಂತೇಶ ಬದಾಮಿ, ಕೊಪ್ಪಳ ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ, ಶಾಸಕರಾದ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಹೆಚ್ ಪಾಟೀಲ, ಶಾಸಕ ಗಾಲಿ ಜನಾರ್ಧನ ರೆಡ್ಡಿ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಕೊಪ್ಪಳ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯ

ಕುಮಾರಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಜಂಗಮ ಸಮಾಜ ಪ್ರತಿಭಟನೆ.

ಇಮೇಜ್
ಮಸ್ಕಿ : ಪಟ್ಟಣದ ಬಸವೇಶ್ವರ ನಗರದ ತಹಶೀಲ್ದಾರರ ಕಚೇರಿಯಲ್ಲಿ ಕುಮಾರಿ ನೇಹಾ ಹಿರೇಮಠ ವಿದ್ಯಾರ್ಥಿನಿಯ ಬರ್ಬರ ಕಗ್ಗೋಲೆ ಮಾಡಿದ ಆರೋಪಿಗೆ ಕಾನೂನು ಅಡಿಯಲ್ಲಿ ಗಲ್ಲು ಶಿಕ್ಷೆ ನೀಡಬೇಕು ಎಂದು ಮಸ್ಕಿ ತಾಲೂಕ ಜಂಗಮ ಸಮಾಜ ಸಂಸ್ಥೆ ಯುವ ಘಟಕ ವತಿಯಿಂದ ಗೌರವಾನ್ವಿತ ರಾಜ್ಯಪಾಲರು ರಾಜ ಭವನ, ಬೆಂಗಳೂರು ಇವರಿಗೆ ಮಾನ್ಯ ಮಸ್ಕಿ ತಾಲೂಕ ತಹಶೀಲ್ದಾರರ ಮುಂಖಾಂತರ ಮನವಿಯನ್ನು ಸಲ್ಲಿಸಿದರು. ಈ ವೇಳೆ, ತಾಲ್ಲೂಕು ಅಧ್ಯಕ್ಷ ಘನಮಠದಯ್ಯ ಸ್ವಾಮಿ ಮಾತನಾಡಿ ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಆವರಣದಲ್ಲಿ ಹಾಡು ಹಗಲೇ ಕುಮಾರಿ ನೇಹಾ ತಂದೆ ನಿರಂಜನ ಹಿರೇಮಠ ಇವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದು ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ನೀಚ ಕೃತ್ಯವೆಸಗಿರುವುದು ವಿಷಾದನೀಯ. ಈ ಘಟನೆಯಿಂದಾಗಿ ಹೆಣ್ಣು ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಶಾಲಾ-ಕಾಲೇಜುಗಳಿಗೆ ತೆರಳಲು ಹಿಂದೆ ಮುಂದೆ ನೋಡುವಂತಾಗಿದೆ. ಭಯದ ಛಾಯೆ ಎಲ್ಲೆಡೆಗೂ ವ್ಯಾಪಿಸಿದೆ. ಇಡೀ ಸಮಾಜವೆ ಇಂದು ದುಃಖದ ಮಡುವಿನಲ್ಲಿದೆ. ಸಾಮಾಜಿಕ ಸಾಮರಸ್ಯ ಬಯಸುವ ಜನರ ಮಧ್ಯದಲ್ಲಿ ಕ್ರೂರ ಮನಸ್ಸಿನವರು ಶಾಂತಿಯನ್ನು ಹಾಳುಮಾಡುತ್ತಿದ್ದಾರೆ.   ಕರ್ನಾಟಕ ರಾಜ್ಯದಲ್ಲಿ ಮಹಿಳೆಯರಿಗೆ ಗೌರವ ಮತ್ತು ಸೂಕ್ತವಾದ ಭದ್ರತೆ ಇಲ್ಲದಂತಾಗಿದೆ, ಧಾರ್ಮಿಕ ಚೌಕಟ್ಟಿನೊಳಗೆ ಬದುಕುವವರು ನೇಹಾ ಅವರ ಹತ್ಯೆ ನೋಡಿದರೆ ಜೀವನದಲ್ಲಿ ಬದುಕುವುದು ಹೇಗೆ. ಈ ಕೊಲೆ ಪ್ರಕರಣದಿಂದ ಇಡೀ ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಆಘಾತವನ್ನು

ಕೊಟ್ಟೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸದಸ್ಯತ್ವಕ್ಕೆ 12 ಜನ ರಾಜೀನಾಮೆ

ಇಮೇಜ್
"ದುರುದ್ದೇಶ ಪೂರ್ವಕವಾಗಿ ನಡೆಯುತ್ತಿರುವ ಕೊಟ್ಟೂರು ತಾಲೂಕು ಘಟಕದ ಅಧ್ಯಕ್ಷರ ಆಯ್ಕೆ ವಿರೋಧಿಸಿ ಪತ್ರಿಕಾ ಸಂಘದ ಪ್ರಾಥಮಿಕ ಕಾರ್ಯನಿರತ ಪತ್ರಕರ್ತರ ಸದಸ್ಯತ್ವಕ್ಕೆ 12 ಜನ ರಾಜೀನಾಮೆ " ಕೊಟ್ಟೂರು : ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವವನ್ನು ಹೊಂದಿದ್ದು, ಸಕ್ರಿಯವಾಗಿ ಪತ್ರಿಕಾ ವರದಿ ಕಾರ್ಯಚಟುವಟಿಕೆಯಲ್ಲಿ ತೊಡಿಗಿಕೊಂಡಿರುತ್ತೇವೆ. ಇತ್ತೀಚೆಗೆ ಸುಳ್ಳು, ಸುದ್ದಿಗಳಿಗೆ ಮತ್ತು ಹಿರಿಯ ಪ್ರಭಾವಿ ಪತ್ರಿಕಾ ವರದಿಗಾರರ ಪ್ರಭಾವಕ್ಕೆ ಒಳಗಾಗಿ ಏಕ ಪಕ್ಷಿಯವಾಗಿ ಮತ್ತು ದುರುದ್ದೇಶ ಪೂರ್ವಕವಾಗಿ ಈ ಹಿಂದೆ ಇದ್ದ ಅಧ್ಯಕ್ಷರನ್ನು ಅಧ್ಯಕ್ಷ ಸ್ಥಾನದಿಂದ ಅವರ ಸದಸ್ಯತ್ವವನ್ನು ತಡೆಹಿಡಿಯಲಾಗಿರುತ್ತದೆ. ಆದರೆ ಈ ವಿಷಯವನ್ನು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಚರ್ಚಿಸಬೇಕಾಗಿದ್ದು, ಸಭೆಯ ನಡವಳಿಯ ನಿಯಮಗಳಾಗಿರುತ್ತದೆ. ಇದ್ಯಾವುದನ್ನು ಮಾಡದೇ ಸಂಘದ ಕೇಲವು ವರದಿಗಾರರು ತಾವೇ ಏಕಪಕ್ಷಿಯವಾಗಿ ನಿರ್ಧಾರ ತೆಗೆದುಕೊಂಡು ಈ ದಿನ ದಿನಾಂಕ: 25.04.2024 ರಂದು ನೂತನ ಅಧ್ಯಕ್ಷರ ಆಯ್ಕೆಯ ಸಭೆ ಕರೆದಿರುವುದು ಅಸಂಭದ್ದವಾಗಿರುತ್ತದೆ. ಏಕೆಂದರೆ ಈಗಾಗಲೇ ಹಿಂದಿನ ಅಧ್ಯಕ್ಷರ ಮೇಲಿದ್ದ ಸುಳ್ಳ ಆರೋಪದ ಪ್ರಕರಣಕ್ಕೆ ಮಾನ್ಯ ಸರ್ವೋಚ್ಚ ನ್ಯಾಯಾಲಯ ಧಾರವಾಡ ಇವರಿಂದ ತಡೆಯಾಜ್ಞೆ ಜಾರಿಯಾಗಿರುತ್ತದೆ. ಕೆಲವು ಕ್ರಿಮಿನಲ್ ಹಿನ್ನೆಲೆ ಹೊಂದಿದ ಮತ್ತು ಕೊಟ್ಟೂರು ಹಾಗೂ ವಿಜಯನಗರ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣ ದಾ

ಕೊಪ್ಪಳ ಲೋಕಸಭಾ ಬಿಜೆಪಿ ಅಭ್ಯರ್ಥಿ ಸಹನಭೂತಿ ಉಳ್ಳವ ವ್ಯಕ್ತಿ : ಡಾಕ್ಟರ್ ಮಹೇಶ್ ಗೋವನಕೊಪ್ಪ

ಇಮೇಜ್
 ವರದಿ ಮಂಜುನಾಥ್ ಕೋಳೂರು, ಕೊಪ್ಪಳ.   ಕೊಪ್ಪಳ: - ಕೊಪ್ಪಳ ಇತಿಹಾಸದಲ್ಲಿ ರಾಜಕೀಯಕ್ಕೆ ಒಳ್ಳೆಯ ಜಂಟಲ್ ಮ್ಯಾನ್ ಬರಬೇಕೆನ್ನುವ ಎಲ್ಲರ ಆಸೆಯಾಗಿತ್ತು ಇವತ್ತು ನಮ್ಮ ಗೆಳೆಯರಾಧ ಡಾಕ್ಟರ್ ಬಸವರಾಜ್ ಕ್ಯಾ ವಟರ್ ರವರು ನಾನು ಬೆಳಗಾವಿ ಯಲ್ಲಿ ಸಹಪಾಠಿಗಳು ರಾಜಕೀಯದಲ್ಲಿ ಒಳ್ಳೆಯ ಜೆಂಟಲ್ ಮ್ಯಾನ್ ಬರಬೇಕೆನ್ನುವ ನನ್ನ ನಿಮ್ಮೆಲ್ಲರ ಆಸೆಯಂತೆ ಇವತ್ತು ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಪಕ್ಷದಿಂದ ಕೊಪ್ಪಳ ಲೋಕಸಭಾ ಅಭ್ಯರ್ಥಿಯಾಗಿರುವ ಡಾಕ್ಟರ್ ಬಸವರಾಜ್ ಕ್ಯಾವೆಟರ್ ಕೇವಲ ಡಾಕ್ಟ್ರು ಆಗದೆ ಎಷ್ಟೋ ಬಡ ರೋಗಿಗಳಿಗೆ ಶಸ್ತ್ರ ಚಿಕಿತ್ಸೆಯ ಮುಖಾಂತರ ಪ್ರಾಣ ಉಳಿಸಿರುವ ಮಹಾನ್ ಸಹನು ಭೂತಿ ಸ್ವಭಾವದವರು. ಕೆಲ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿರುವ ಇವರು ಸಹನುಭೂತಿ ಸ್ವಭಾವ ಉಳ್ಳವರು, 25ನೇ ವಾರ್ಡಿನ ಎಲ್ಲಾ ಸಾರ್ವಜನಿಕರು ತಮ್ಮ ಅಮೂಲ್ಯವಾದ ಮತವನ್ನು ಬಿಜೆಪಿ ಅಭ್ಯರ್ಥಿಯಾದ ಡಾಕ್ಟರ್ ಬಸವರಾಜ ರವರಿಗೆ ಕೊಡುವುದರ ಮುಖಾಂತರ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಮೂರನೇ ಬಾರಿಗೆ ಪ್ರಧಾನಿ ಮಾಡಿದಾಗ ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಜಯಶಾಲಿಯಾಗಿ ಮೋದಿ ಅವರ ಮಂತ್ರಿ ಮಂಡಲದಲ್ಲಿ ಕೇಂದ್ರ ಆರೋಗ್ಯ ಮಂತ್ರಿಯಾದರೆ ಇನ್ನೂ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ, ಹಾಗೂ25ನೇ ವಾರ್ಡಿಗೆ ಹೆಚ್ಚಿನ ಕೆಲಸವನ್ನು ಮಾಡಲು ಅವಕಾಶ ಮಾಡಿಕೊಡಬೇಕೆಂದು ತಮ್ಮ ಅಮೂಲ್ಯವಾದ ಮತವನ್ನು ಬಿಜೆಪಿಗೆ ನೀಡಬೇಕೆಂದು ಕೊಪ್ಪಳ ಲೋಕಸಭಾ ಬಿಜೆಪಿ ಅಭ್ಯರ್

ಕೆ.ಹೊಸಹಳ್ಳಿ ಡೇರದೆ ನಾಗಲಿಂಗೇಶ್ವರ ಜಾತ್ರಾ ಮಹೋತ್ಸವ

ಇಮೇಜ್
ಸಿಂಧನೂರು : ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದ ಶ್ರೀ ಡೇರದೆ ನಾಗಲಿಂಗೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಕುಂಬಕಳಸಗಳೊಂದಿಗೆ ಪಲ್ಲಕ್ಕಿ ಉತ್ಸವ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.ನಂತರ ಗ್ರಾಮದ ಗುರು ಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ರಥೋತ್ಸವ ಜರುಗಿತು. ದೇವಸ್ಥಾನದ ವತಿಯಿಂದ ಬೆಳಗ್ಗೆಯಿಂದ ಜಾತ್ರೆಗೆ ಆಗಮಿಸಿದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಕೆ.ಹೊಸಹಳ್ಳಿ ಗ್ರಾಮದ ಗುರುಹಿರಿಯರು,ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ದಲಿತರ ಹಿತರಕ್ಷಣೆ ಮಾಡಿದ ಹಿನ್ನೆಲೆ : ಕಾಂಗ್ರೆಸ್ ಪಕ್ಷ ಬೆಂಬಲಿಸಲು *ಪಿಟಿಸಿಎಲ್ ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿ ನಿರ್ಧಾರ*

ಇಮೇಜ್
ಬೆಂಗಳೂರು : ದಲಿತರು, ಸಂವಿಧಾನ ವಿರೋಧಿ, ಸಾಂವಿಧಾನಿಕ ಸಂಸ್ಥೆಗಳ ಮೇಲೆ ಪ್ರಭಾವ ಬೀರಿ ವಿಶ್ವಾಸ ಕುಸಿಯುವಂತೆ ಮಾಡುತ್ತಿರುವ  ಬಿಜೆಪಿ ಪಕ್ಷವನ್ನು ಸೋಲಿಸಲು ಮತ್ತು ಸಂವಿಧಾನ ರಕ್ಷಣೆಗಾಗಿ ಪ್ರಸಕ್ತ ಲೋಕಸಭಾ ಚುನಾವನೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ನಿರ್ಧರಿಸಲಾಗಿದೆ ಎಂದು ಪಿಟಿಸಿಎಲ್ ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿ ತಿಳಿಸಿದೆ.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಪಿಟಿಸಿಎಲ್ ಮಂಜುನಾಥ್, ರಾಜ್ಯದ ಎಲ್ಲಾ ಎಸ್.ಸಿ./ಎಸ್.ಟಿ. ಸಮುದಾಯದ ಪಿಟಿಸಿಎಲ್ ಕಾಯ್ದೆ ಭೂಮಿ ವಂಚಿತರು ಹಾಗೂ ಅವರ ಕುಟುಂಬಗಳು ಕಾಂಗ್ರೆಸ್ ಬೆಂಬಲಿಸಲು ನಿರ್ಧರಿಸಿವೆ. ಬಡವರ ಪರವಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಬೆಂಬಲ ನೀಡುತ್ತೇವೆ. ನಮ್ಮ 208 ದಿನಗಳ ಹೋರಾಟಕ್ಕೆ ಸ್ಪಂದಿಸಿ ಚುನಾವಣಾ ಪೂರ್ವದಲ್ಲಿ ಕೊಟ್ಟ ಮಾತಿನಂತೆ ಅಧಿಕಾರಕ್ಕೆ ಬಂದ ಮೊದಲನೇ ಅಧಿವೇಶನದಲ್ಲೇ ಪಿಟಿಸಿಎಲ್ ಕಾಯ್ದೆಗೆ ಕಾಲಮಿತಿ ಅನ್ವಯಿಸುವುದಿಲ್ಲ ಎಂದು ತಿದ್ದುಪಡಿ ಮಾಡಿದ ಕಾಂಗ್ರೆಸ್ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು.  ಬಲಾಢ್ಯರ ಕುತಂತ್ರದಿಂದ ಶೋಷಿತ ಸಮುದಾಯಗಳ ಭೂ ಮಂಜೂರಾತಿ ಹಕ್ಕುಗಳನ್ನು ದುರ್ಬಲಗೂಳಿಸಿದ ಪೂರಕವಾದ ಸುಪ್ರೀಂ ಕೋರ್ಟ್‌ನಲ್ಲಿ 2017ರ  ನಿಕ್ಕಂಟಿ ರಾಮಲಕ್ಷ್ಮಿ ಮತ್ತು ಕರ್ನಾಟಕ ಸರ್ಕಾರದ ನಡುವಿನ ಪ್ರಕರಣದ ಆದೇಶದಿಂದ ಕಾಲಮಿತಿ  ಎಂಬ ಒಂದೇ ಕಾರಣದಿಂದ ಕಾನೂನುಬಾಹಿರ ಸ

ನೂರಾರು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ

ಇಮೇಜ್
(ಬಹುತೇಕ ಬಿಜೆಪಿ ಅಂಗಳ ಖಾಲಿ ಖಾಲಿ ) ಮಸ್ಕಿ : ಪಟ್ಟಣದ ಕಾಂಗ್ರೇಸ್ ಪಕ್ಷದ ಕಾರ್ಯಾಲಯದಲ್ಲಿ ಮಂಗಳವಾರ ಸಾಯಂಕಾಲ ಸಂಗಣ್ಣ ಕರಡಿ ಸಂಸದರು, ಶಿವರಾಜ್ ತಂಗಡಗಿ ಸಚಿವರು, ಹಂಪನಗೌಡ ಬಾದರ್ಲಿ ಸಿಂಧನೂರು ಶಾಸಕರು, ಆರ್ ಬಸನಗೌಡ ತುರುವಿ ಹಾಳ ಶಾಸಕರು, ಹೆಚ್ ಬಿ ಮುರಾರಿ,ಮಲ್ಲಿಕಾರ್ಜುನ್ ಪಾಟೀಲ್ ಯದ್ದಲ ದಿನ್ನಿ, ಸಿದ್ದನಗೌಡ ಮಾಟೂರು ಇವರ ನೇತೃತ್ವದಲ್ಲಿ ಮಸ್ಕಿ ಪಟ್ಟಣದ ಬಿಜೆಪಿ ಮುಖಂಡರಾದ ಅಂದಾನಪ್ಪ ಗುಂಡಳ್ಳಿ,ದೊಡ್ಡಪ್ಪ ಕಡಬೂರು, ಎಂ.ಅಮರೇಶ್ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು ಮಸ್ಕಿ,ಶ್ರೀಶೈಲಪ್ಪ ಸಜ್ಜನ್, ಬಸಪ್ಪ ಬ್ಯಾಳಿ ಮಾಜಿ ಎಪಿಎಂಸಿ ಅಧ್ಯಕ್ಷರು,ಉಮಾಪತಿ ಗೋನಾಳ,ಮಾನಪ್ಪ ಮಟ್ಟೂರು ಇವರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆ ಆದರು. ಮಸ್ಕಿ ಪಟ್ಟಣದ ಹಿರಿಯ ರಾಜಕೀಯ ಮುಖಂಡರನ್ನೇ ಟಾರ್ಗೆಟ್ ಮಾಡಿ ಸೆಳೆದ ಕಾಂಗ್ರೆಸ್ ಬಹುತೇಕ ಬಿಜೆಪಿ ಅಂಗಳ ಖಾಲಿ ಖಾಲಿ ಬಣಗುಡುತ್ತಿದೆ ಎಂಬುದು ಸಾರ್ವಜನಿಕರ ಮಾತಾಗಿದೆ. ಪಕ್ಷ ಸೇರ್ಪಡೆ ನಂತರ ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಗ್ಯಾರಂಟಿ ಯೋಜನಾ ಸಮಿತಿ ಜಿಲ್ಲಾಧ್ಯಕರು ಪ್ಯಾಮಯ್ಯ ಮುರಾರಿ,ತಾಲೂಕ ಸಮಿತಿ ಅಧ್ಯಕ್ಷರು ಮೈಬೂಬ್ ಸಾಬ್ ಮುದ್ದಾಪುರ,ಬಸನಗೌಡ ಪಾಟೀಲ್ ಮುದಬಾಳ,ಬಸನಗೌಡ ಪೋಲಿಸ್ ಪಾಟೀಲ್ ಮಸ್ಕಿ,ಮಲ್ಲನಗೌಡ ಸುಂಕನೂರು, ನಿರೂಪಾದೇಪ್ಪ ವಕೀಲರು, ಆನಂದ್ ವೀರಾಪುರ,ಮಲ್ಲಯ್ಯ ಮುರಾರಿ, ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

( ತುಗ್ಗಲದಿನ್ನಿ ಗ್ರಾಮದಲ್ಲಿ 92ನೇ ಮನೆ ಮನೆಗೆ ಅಂಬೇಡ್ಕರ್ ಕಾರ್ಯಕ್ರಮ )

ಇಮೇಜ್
ಅಂಬೇಡ್ಕರ್ ಆಶಯದಂತೆ ಆಸ್ತಿ-ಸಂಪತ್ತು ರಾಷ್ಟ್ರೀಕರಣವಾಗಬೇಕು: ಬಸವರಾಜ ಎಕ್ಕಿ ಮಸ್ಕಿ: ದೇಶದಲ್ಲಿ ಕೆಲವರಿಗೆ ಸಾವಿರಾರು ಎಕರೆ ಭೂಮಿಯಿದೆ ಆದರೆ ಇನ್ನು ಕೆಲವರಿಗೆ ತುಂಡು ಭೂಮಿಯೂ ಕೂಡ ಇಲ್ಲ. ಈ ಅಸಮಾನ ಸಂಪತ್ತಿನಿಂದಾಗಿ ಶ್ರೀಮಂತ - ಬಡವ, ಮೇಲು - ಕೀಳು ಸೃಷ್ಟಿಯಾಗಿ ಜನರ ಏಳಿಗೆಗೆ ಹಿನ್ನಡೆಯಾಗಿದೆ. ಹಾಗಾಗಿ ಬಾಬಾಸಾಹೇಬ್ ಅಂಬೇಡ್ಕರ್ ರವರ ಆಶಯದಂತೆ ದೇಶದ ಆಸ್ತಿ ಮತ್ತು ಸಂಪತ್ತು ರಾಷ್ಟ್ರೀಕರಣವಾಗಬೇಕು. ಶ್ರೀಮಂತ ಬಡವ ಎಂಬ ಬೇಧ-ಭಾವಗಳು ಕಡಿಮೆಯಾಗಿ ಸ್ವಸಹಾಯ ಪದ್ಧತಿಯಲ್ಲಿ ಜನರು ಬದುಕುವಂತಾಗಬೇಕು ಎಂದು, ಹೋರಾಟಗಾರ ಹಾಗೂ ಕಲಾವಿದ ಬಸವರಾಜ ಎಕ್ಕಿ ಅಭಿಪ್ರಾಯ ವ್ಯಕ್ತಪಡಿಸಿದರು. ಮಸ್ಕಿ ತಾಲೂಕಿನ ತುಗ್ಗಲದಿನ್ನಿ ಗ್ರಾಮದ ಮಲ್ಲಮ್ಮ - ಶಾಸ್ತ್ರಿ ಅಮರಪ್ಪ ಇವರ ಮನೆಯಲ್ಲಿ ಬಹುಜನ ಸಂಘರ್ಷ ಸಮಿತಿಯಿಂದ ಮಂಗಳವಾರ ಆಯೋಜಿಸಿದ್ದ, 92ನೇ ಮನೆ-ಮನೆಗೆ ಅಂಬೇಡ್ಕರ್ ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಮಾತನಾಡಿದರು. ಮಹಿಳೆಯರು ಮೌಡ್ಯಾಚರಣೆಯನ್ನು ಆಚರಣೆ ಮಾಡುವ ಅನಾಗರೀಕತೆ ಸಂಸ್ಕೃತಿಯನ್ನು ಬಿಡಬೇಕು. ವಿದ್ಯಾವಂತರಾಗಿ ವೈಜ್ಞಾನಿಕ ತಿಳುವಳಿಕೆಯಲ್ಲಿ ಜೀವಿಸಬೇಕು ಎಂದು ಸಂದೇಶ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ದಲಿತ ವಿದ್ಯಾರ್ಥಿ ಪರಿಷತ್ ರಾಯಚೂರು ಜಿಲ್ಲಾ ಸಂಚಾಲಕ ಮೌನೇಶ ಜಾಲವಾಡಗಿ ಮಾತನಾಡಿ, ಭಾರತ ದೇಶದಲ್ಲಿ ಸಾವಿರಾರು ವರ್ಷಗಳ ಕಾಲ ವಿದ್ಯೆಯಿಂದ ವಂಚಿತವಾದ ಶೋಷಿತ ಸಮುದಾಯಗಳ ಜನ ಅಜ್ಞಾನ, ಮೌಢ್ಯ, ಕಂದಚಾರ ಶೋಷಣೆಯಲ್ಲಿ ಬದು

ಪ್ರಜಾಪ್ರಭುತ್ವದ ಆಶಯ ಎತ್ತಿ ಹಿಡಿಯೋಣ ಎಆರ್‌ಒ ಜಗದೀಶ್‌ ಸಲಹೆ

ಇಮೇಜ್
ಮಸ್ಕಿ : ಪಟ್ಟಣದ ಗಾಂಧೀ ನಗರದಿಂದ ಕನಕ ವೃತ್ತದವರೆಗೆ ಮಂಗಳವಾರ ಏರ್ಪಡಿಸಿದ್ದ ಮತದಾನ ಜಾಗೃತಿ ಜಾಥಾಕ್ಕೆ (ಮ್ಯಾರಥಾನ್) ಸಹಾಯಕ ಚುನಾವಣಾಧಿಕಾರಿಗಳಾದ ಜಗದೀಶ್‌ ಗಂಗಣ್ಣನವರ ಚಾಲನೆ ನೀಡಿದರು. ನಂತರ ಮಾತನಾಡಿ, ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಜಾರಿಗೆ ಬಂದ ನಂತರ ಪ್ರಜೆಗಳೇ ಈ ದೇಶದ ಶಕ್ತಿಯಾಗಿದ್ದಾರೆ. ಮತದಾನ ಪವಿತ್ರವಾಗಿದ್ದು, ಮೇ 7 ರಂದು ಯಾವುದೇ ಆಸೆ ಆಮಿಷಕ್ಕೆ ಒಳಗಾಗದೇ ಸೂಕ್ತ ಅಭ್ಯರ್ಥಿಗೆ ಮತದಾನ ಮಾಡಿ, ಸಂವಿಧಾನದತ್ತವಾಗಿರುವ ವಿಶೇಷ ಹಕ್ಕನ್ನು ಚಲಾಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯಗಳನ್ನು ಎತ್ತಿ ಹಿಡಿಯಬೇಕು ಎಂದರು. ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಅಂಬರೀಶ್‌ ಮಾತನಾಡಿ, ಮತದಾನಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಅಕ್ಷರಸ್ಥರು ತಮ್ಮ ಮನೆಯ ಸುತ್ತ ಮತದಾನದ ಮಹತ್ವ ಕುರಿತು ತಿಳಿಸಿ, ಅವರನ್ನು ಮತಗಟ್ಟೆಗೆ ಕರೆ ತರಬೇಕು ಎಂದರು.  ಹಾಗೇಯೇ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಮತ್ತು ಮಹಾತ್ಮ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಗಾಂಧೀ ನಗರದಿಂದ ಆರಂಭಗೊಂಡ ಜಾಥಾ ಹಳೆ ಬಸ್‌ ನಿಲ್ದಾಣ ಮೂಲಕ ಕನಕ ವೃತ್ತ ತಲುಪಿತು. ತದ ನಂತರ ಮಾನವ ಸರಪಳಿ ನಿರ್ಮಿಸಲಾಯಿತು. ಸಹಾಯಕ ಚುನಾವಣಾಧಿಕಾರಿ ಜಗದೀಶ್‌ ಗಂಗಣ್ಣನವರ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಈ ವೇಳೆ ತಹಸೀಲ್ದಾರ್‌ರಾದ ಅರಮನೆ ಸುಧಾ, ಗ್ರೇಡ್‌ 2 ತಹಸೀಲ್ದಾರ್‌ ರಾಘವೇಂದ್ರ, ಜೆಸ್ಕಾಂ ಎಇಇ ವೆಂಕಟೇಶ್‌, ಶಾಖಾಧಿಕಾರಿ ಶ್ರೀಶೈಲ್‌

ವಿವಿಧ ಬೇಡಿಕೆಗಳಿಗಾಗಿ ಗ್ರಾಮಸ್ಥರು ತಾ. ಪಂ ಇಓ ಅವರಿಗೆ ಮನವಿ

ಇಮೇಜ್
ಮಸ್ಕಿ : ತಾಲೂಕಿನ ಹಾಲಾಪೂರ ಗ್ರಾಮ ಪಂಚಾಯತಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಅಂಬೇಡ್ಕರ್ ವಾದ ತಾಲ್ಲೂಕು ಸಂಚಾಲಕರಾದ ಬಸವರಾಜ ಕೋಠಾರಿ ಮಸ್ಕಿ ಇವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ನಂತರ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ್ ರವರಿಗೆ ಮನವಿ ಪತ್ರ ಸಲ್ಲಿಸಿದರು. ಹಾಲಾಪೂರ ಗ್ರಾಮ ಪಂಚಾಯತಿಯಲ್ಲಿ ಕಳೆದ ಹಲವಾರು ತಿಂಗಳಿನಿಂದ ಉದ್ಯೋಗ ಖಾತ್ರಿ ಕೆಲಸ ಇಲ್ಲ,ಕುಡಿಯುವ ನೀರಿನ ಸಮಸ್ಯೆ, ದನದ ಶೆಡ್, ಶೌಚಾಲಯ ಫಲಾನುಭವಿಗಳು ಕಟ್ಟಿಸಿದರು ಇನ್ನೂ ಬಿಲ್ ಆಗಿಲ್ಲ ಇನ್ನೂ ಮುಂತಾದ ಮೂಲಭೂತ ಸೌಲಭ್ಯಗಳ ಕುರಿತು ಧರಣಿಯನ್ನು ಮಾಡುತ್ತಿದ್ದೇವೆ ಎಂದು ತಾಲ್ಲೂಕು ಸಂಚಾಲಕರಾದ ಬಸವರಾಜ ಕೋಠಾರಿ ಮಸ್ಕಿ ರವರು ಹೇಳಿದರು. ಸ್ಥಳಕ್ಕೆ ಮಸ್ಕಿ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ರವರು ಭೇಟಿಮಾಡಿ ಧರಣಿ ನಿರತರ ಸಮಸ್ಯೆಗಳನ್ನು ಪರಿಶೀಲಿಸಿ ಹದಿನೈದು ದಿನಗಳಲ್ಲಿ ಬೇಡಿಕೆಗಳನ್ನು ಪರಿಹರಿಸುತ್ತೇವೆ ಎಂದು ಮನವಿ ಪತ್ರವನ್ನು ಸ್ವೀಕರಿಸಿ ಹೇಳಿದರು. ಈ ಸಂದರ್ಭದಲ್ಲಿ ಪಿಡಿಒ ರಾಮಣ್ಣ, ಕಾರ್ಯದರ್ಶಿ ಪರಣ್ಣ, ಗ್ರಾಮ ಪಂಚಾಯತಿ ಸದಸ್ಯರಾದ ಚಂದಪ್ಪ ದೊಡ್ಡಮನಿ, ಅಮರೇಶ, ನಿರುಪಾದೆಪ್ಪ,ದಲಿತ ಸಂಘರ್ಷ ಸಂಘದ ಮುಖಂಡರಾದ ಆಬೇಲ್ ರಾಜ,ಬಸವಂತ ಹಿರೇ ಕಡಬೂರು, ಪರಶುರಾಮ ಉಸ್ಕಿಹಾಳ, ನಾಗಪ್ಪ ದಿನಸಮುದ್ರ,ಬಸವರಾಜ ಯದ್ದಲದಿನ್ನಿ, ಬಸವರಾಜ ಮರಕಮದಿನ್ನಿ, ಯಂಕಪ್ಪ ನಾಯಕ,ಮುಪ್ಪಿನಯ್ಯಸ್ವಾಮಿ, ಬಸವ ಹಾಲಾಪೂರ, ಲಕ್ಷ್ಮಣ ಹಾಲಾಪೂರ, ದುರಗಪ್ಪ ಸೇ

ಪ್ರಜಾಪ್ರಭುತ್ವ ಮೌಲ್ಯ ಎತ್ತಿ ಹಿಡಿಯೋಣ ತಾ.ಪಂ ಇಒ ಅಂಬರೀಶ್‌ ಕರೆ

ಇಮೇಜ್
ಮಸ್ಕಿ : ಪಟ್ಟಣದ ಅನ್ನಪೂರ್ಣ ನರ್ಸಿಂಗ್‌ ಹೋಂನ ರೋಗಿಗಳು ಮತ್ತು ಸಂಬಂಧಿಕರಿಗೆ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಅಂಬರೀಶ್‌ ಸೋಮವಾರ ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದರು. ತದ ನಂತರ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಅಮೂಲ್ಯವಾದದ್ದು. ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೇ ತಮಗೆ ಸೂಕ್ತ ಎನಿಸುವ ಅಭ್ಯರ್ಥಿಗೆ ಮತ ಚಲಾಯಿಸಬೇಕು. ಮೇ 7 ರಂದು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವ ಮೌಲ್ಯವನ್ನು ಎತ್ತಿ ಹಿಡಿಯಬೇಕು. ಈ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ವಿವಿಧ ಸ್ವೀಪ್‌ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ ಎಂದರು.  ಡಾ. ಮಲ್ಲಿಕಾರ್ಜುನ ಇತ್ಲಿ ಮಾತನಾಡಿ, ತಾಲೂಕು ಸ್ವೀಪ್‌ ಸಮಿತಿ ನಿರಂತರವಾಗಿ ಜಾಗೃತಿ ಕಾರ್ಯಕ್ರಮ ಏರ್ಪಡಿಸಿ, ಮತದಾನದ ಮಹತ್ವ ವಿವರಿಸುತ್ತಿರುವುದು ಸ್ತುತ್ಯಾರ್ಹ. ಚುನಾವಣಾ ಆಯೋಗದ ಆಶಯದಂತೆ ಶೇ. 100 ಮತದಾನ ಸಾಧಿಸಲು ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ತಿಳಿಸಿದರು. ಈ ವೇಳೆ ಮಸ್ಕಿ ತಾಪಂ ಸಹಾಯಕ ನಿರ್ದೇಶಕರಾದ (ಪಂಚಾಯತ್‌ ರಾಜ್‌) ಸೋಮನಗೌಡ ಪಾಟೀಲ್‌, ಸಿಬ್ಬಂದಿ ಗಂಗಾಧರ ಮೂರ್ತಿ, ವಿನೋದ ರಾಜ್‌, ಅರ್ಜುನ, ಪ್ರಸೂತಿ ತಜ್ಞರಾದ ತೇಜಸ್ವಿನಿ ಇತ್ಲಿ, ಶಿವರಾಜ್‌ ಇತ್ಲಿ, ಸಿದ್ದಲಿಂಗಪ್ಪ ಕನಕೇರಿ ಇತರರಿದ್ದರು. ಲಯನ್ಸ್‌ ಕ್ಲಬ್‌ ಮತ್ತು ನರ್ಸಿಂಗ್‌ ಹೋಂ ಆಶ್ರಯದಲ್ಲಿ ಪ್ರತಿ ಸೋಮವಾರದಂತೆ ಅನ್ನದಾಸೋಹ ಕಾರ್ಯಕ್ರಮದಡಿ ರೋಗಿಗಳು ಮತ್ತು ಅವರ ಸಂಬಂಧಿಕರಿಗೆ

ಐತಿಹಾಸಿಕ ಮಸ್ಕಿ ಮುದ್ದು ಮಲ್ಲಿಕಾರ್ಜುನ ಜಾತ್ರಾಮಹೋತ್ಸವ.

ಇಮೇಜ್
ಮಸ್ಕಿ: ಐತಿಹಾಸಿಕ ಮಸ್ಕಿ ಮುದ್ದು ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವ ಇಂದು ದವನದ ಹುಣ್ಣಿಮೆ ದಿನ ನಡೆಯಲಿದೆ ಎಂದು ಮಲ್ಲಿಕಾರ್ಜುನ ದೇವಸ್ಥಾನದ ಅರ್ಚಕರಾದ ಸಿದ್ದಯ್ಯ ಹಿರೇಮಠ ರವರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೆಳಿಗ್ಗೆ ಪಟ್ಟಣದ ಮುದಗಲ್ ರಸ್ತೆಯಲ್ಲಿರುವ ಮುದ್ದು ಮಲ್ಲಿಕಾರ್ಜುನ ದೇವ ಸ್ಥಾನದಲ್ಲಿ ರುದ್ರಾಭಿಷೇಕ, ಕಳಸ ಪೂಜೆ, ವಿಶೇಷ ಪೂಜೆ ಹಾಗೂ ರಥಕ್ಕೆ ಕಳಸಾಭಿಷೇಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 6 ಗಂಟೆಗೆ ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವ ಜರುಗಲಿದೆ. ಕಾರ್ಯಕ್ರಮಗಳ ದಿವ್ಯ ಸಾನಿಧ್ಯವನ್ನು ಗಚ್ಚಿನಮಠದ ಶ್ರೀ ವರರುದ್ರಮುನಿ ಶಿವಾಚಾರ್ಯರು ವಹಿಸುವರು ಎಂದು ತಿಳಿಸಿದರು.

ಹುಬ್ಬಳ್ಳಿಯ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಲವ್‌ ಜಿಹಾದ್ ಹತ್ಯೆ ಖಂಡಿಸಿ ಎಬಿವಿಪಿ ಪ್ರತಿಭಟನೆ

ಇಮೇಜ್
ದೇವದುರ್ಗ: ಹುಬ್ಬಳ್ಳಿಯ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಲವ್‌ ಜಿಹಾದ್ ಹತ್ಯೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ತಾಲ್ಲೂಕು ಘಟಕದ ವತಿಯಿಂದ ಶನಿವಾರ ಪ್ರತಿಭಟನೆ ನಡೆಯಿತು. ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ನೇಹಾ ಹತ್ಯೆ ಖಂಡಿಸಿ ಘೋಷಣೆ ಕೂಗಿದರು. ಆರೋಪಿಗೆ ತಕ್ಕ ಶಿಕ್ಷೆಯನ್ನು ನೀಡಬೇಕು ಎಂದು ಆಗ್ರಹಿಸಿ ತಾಲ್ಲೂಕು ಆಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.  ಪ್ರೀತಿ ವಿಚಾರವಾಗಿ ನೇರಾ ಹಿರೇಮಠ ಅವರನ್ನು ಪೀಡಿಸುತ್ತಿದ್ದ ಪ್ರೀತಿ ಮಾಡಲು ತಿರಸ್ಕರಿಸಿದ್ದಕ್ಕೆ, ಲವ್‌ ಜೀಹಾದ್‌ ಕೃತ್ಯಕ್ಕೆ ಮುಂದಾಗಿ ಕಾಲೇಜಿನಲ್ಲೇ ಚಾಕುವಿನಿಂದ ಇರಿದು ಹತ್ಯೆ ಮಾಡಿರುವುದು ಇಡೀ ಸಮಾಜವೇ ತಲೆತಗ್ಗಿಸುವ ಸಂಗತಿಯಾಗಿದೆ.  ಘಟನೆಯಿಂದಾಗಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಆತಂಕ್ಕೀಡಾಗಿದ್ದಾರೆ. ಇಂಥವರನ್ನು ನಡು ರಸ್ತೆಯಲ್ಲಿ ಗಲ್ಲಿಗೇರಿಸುವ ಕಾನೂನುಗಳನ್ನು ಜಾರಿ ತರಬೇಕು ಅಂದಾಗ ಸಮಾಜದಲ್ಲಿ ಶಾಂತಿಯುತ ಹಾಗೂ ಇಂತಹ ಘಟನೆ ಮರುಕಳಿಸುವುದಿಲ್ಲ ಎಂದು ಆಕ್ರೋಶ ಅವರ ಹಾಕಿದರು.  ವೆಂಕಟೇಶ ಚಿಂತಲಕುಂಟಾ, ಶಿವನಗೌಡ ಹೂವಿನಹೆಡಗಿ, ಸೂಗಯ್ಯ ಸ್ವಾಮಿ, ಅಜಯ ವಿಶ್ವ ಕರ್ಮ, ದೇವರಾಜ, ವಿರೂಪಾಕ್ಷಿ, ಶಿವಾಜಿ, ರಂಗನಾಥ, ಬಸವರಾಜ ಕೋಪ್ಪರ ಸೇರಿದಂತೆ ವಿವಿಧ ಹಿಂದೂ ಪರ ಮುಖಂಡರು ಭಾಗವಹಿಸಿದ್ದರು.

ಕೊಟ್ಟೂರು ತಾಲೂಕು ಜಂಗಮ ಸಮಾಜದ ವತಿಯಿಂದ ನೇಹಾ ಹತ್ಯೆಗೈದ : ಆರೋಪಿಗೆ ಗಲ್ಲು ಶಿಕ್ಷೆಗೆ ಒತ್ತಾಯ

ಇಮೇಜ್
ಕೊಟ್ಟೂರು:  ತಾಲೂಕು ಜಂಗಮ ಸಮಾಜ ಶುಕ್ರವಾರ ಉಪ ತಹಶಿಲ್ದಾರ ಅನ್ನದಾನೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿ ಹುಬ್ಬಳ್ಳಿ ಬಿ.ಯು.ಬಿ ಕಾಲೇಜಿನ ಎಂ.ಸಿ.ಎ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಫಯಾಜ್ ಎಂಬ ಅನ್ಯ ಕೋಮಿನ ಸಮಾಜ ಘಾತುಕ ದುಷ್ಕರ್ಮಿ ಹಾಡು ಹಗಲಿನಲ್ಲಿಯೇ ಬರ್ಬರವಾಗಿ ಹತ್ಯೆ ಗೈದ ಆರೋಪಿಗೆ ಗಲ್ಲು ಶಿಕ್ಷೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು. ಡೋಣೂರ ಚಾನುಕೋಟಿ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಈ ಕೃತ್ಯಕ್ಕೆ ಸಹಕರಿಸಿದ ಎಲ್ಲಾ ಸಹಚಾರ್ಯರಿಗೂ ಕಠಿಣ ಶಿಕ್ಷೆ ಆಗಬೇಕು, ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತ ಪಾಪ ಕೃತ್ಯ ಎಸಗಿದ ಆರೋಪಿಗೆ ಬೆಂಬಲಿಸಿದ ಎಂತಹ ಪ್ರಭಾವಶಾಲಿಯೇ ಆಗಿರಲಿ ಆ ರೋಪಗಳಿಗೆ ಶಿಕ್ಷೆ ಆಗಬೇಕು ಎಂದರು  ಈ ಸಂದರ್ಭದಲ್ಲಿ ಕೊಟ್ಟೂರು ದೇವರು ಶಿವಪ್ರಕಾಶ್ ಸ್ವಾಮಿಗಳು , ಆರ್.ಎಂ ಕೊಟ್ರೇಶ್, ಅಯ್ಯನಹಳ್ಳಿ ಕೊಟ್ರಯ್ಯ ಉಪಸ್ಥಿತರಿದ್ದರು.  ಕೊಟ್ -1 ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಬರ್ಬರ್ ಹತ್ಯೆ ಗೈದ ಆರೋಪಿಗೆ ಗೆಲ್ಲು ಶಿಕ್ಷೆ ವಿಧಿಸಬೇಕೆಂದು ಸರ್ಕಾರವನ್ನು ಕೊಟ್ಟೂರು ತಾಲೂಕು ಜಂಗಮ ಸಮಾಜದ ತಾಲೂಕು ಅಧ್ಯಕ್ಷ ಅಡಕಿ ಮಂಜುನಾಥಯ್ಯ, ಆಗ್ರಹಿಸಿದರು.

70 ವರ್ಷಗಳಲ್ಲಿ ಆಗದ ಅಭಿವೃದ್ಧಿ 10 ವರ್ಷದಲ್ಲಿ ಆಗಿದೆ : ಡಾ. ಕ್ಯಾವಟರ್

ಇಮೇಜ್
ವರದಿ -- ಮಂಜುನಾಥ ಕೊಲ್ಲೂರು ಕೊಪ್ಪಳ ಕೊಪ್ಪಳ : - ಕಳೆದ ಒಂದು ದಶಕದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಕೃಷಿ, ವಿಜ್ಞಾನ ತಂತ್ರಜ್ಞಾನ, ಆರ್ಥಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಣನೀಯ ಅಭಿವೃದ್ಧಿಯಾಗಿದೆ ಕೊಪ್ಪಳ ಲೋಕಸಭಾ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕೆ ಶರಣಪ್ಪ ಮಾತನಾಡಿದರು. ಲೋಕಸಭಾ ಚುನಾವಣೆ ನಿಮಿತ್ತ ವಣಗೇರಿ ಹಾಗೂ ಮುಧೋಳ ಮಹಾಶಕ್ತಿ ಕೇಂದ್ರದಲ್ಲಿ ಕಲ್ಯಾಣ ಬಸವೇಶ್ವರ ದೇವಸ್ಥಾನ ಭೇಟಿ ನೀಡಿದ ನಂತರ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡು ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿ, ರೈಲು ನಿಲ್ದಾಣ, ಮಂಗಳಯಾನ ಮತ್ತು ರೈತಹಿತ ಸೇರಿ ಹಲವು ಜನಪರ ಯೋಜನೆಗಳನ್ನು ಜಾರಿ ಮಾಡುವದರೊಂದಿಗೆ ಸರ್ವರನ್ನು ಹಿತ ಕಾಯುವ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ ಎಂದರು. ಜಗತ್ತಿನ ಅತಿದೊಡ್ಡ ಆರ್ಥಿಕ ಕ್ಷೇತ್ರದಲ್ಲಿ ಭಾರತವು ಐದನೇ ಸ್ಥಾನಕ್ಕೇರಿದೆ. ಬರುವ ವರ್ಷಗಳಲ್ಲಿ 3 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದುವ ಮೂಲಕ ಜಗತ್ತಿನ ಅತ್ಯಧಿಕ ದೊಡ್ಡ ಆರ್ಥಿಕತೆ ದೇಶ ಎಂದು ಹೊರಹೊಮ್ಮಲಿದೆ.  ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್ ಮಾತನಾಡಿದರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಕೊಲೆ ದೇಶಾದ್ಯಂತ ಚರ್ಚೆಯಾಗುತ್ತಿದೆ. ಕೊಲೆಗಾರನ ಮನೆಗೆ ಭದ್ರತೆ ನೀಡುವ ಮೂಲಕ ಮುಸ್ಲಿಂ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಹೇಳಿದರು.  ಮಾಜ

ಹನುಮಸಾಗರದಲ್ಲಿ ನೇಹಾ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕೋಲೆಯಂತ ಕೃತ್ಯಗಳನ್ನು ಯಾರೆ ಮಾಡಲಿ ಅಂತವರಿಗೆ ಎನ್ ಕೌಂಟರ್ ಕಾನೂನು ತರಲೆಬೇಕು : ಬಸವರಾಜ ದ್ಯಾವಣ್ಣವರ್ ‌‌‌

ಇಮೇಜ್
ವರದಿ- ಮಂಜುನಾಥ ಕೋಳೂರು, ಕೊಪ್ಪಳ  ಕೊಪ್ಪಳ : - ಹುಬ್ಬಳ್ಳಿಯಲ್ಲಿ ಎಂ.ಸಿ.ಎ ಓದುತ್ತಿದ್ದ ನೇಹಾ ಹಿರೇಮಠ್ ಎಂಬ ವಿಧ್ಯಾರ್ಥಿಗೆ ಫಯಾಜ್ ಎಂಬ ಮತಾಂಧ ಕೋಲೆ ಮಾಡಿದ್ದು ಹೇಯ ಕೃತ್ಯ ಖಂಡಿಸಿ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದ ಕರಿಸಿದ್ಧೇಶ್ವರ ಮಠದ ಆವರಣದಲ್ಲಿ ನೇಹಾ ಅವರಿಗೆ ಎರಡು ನೀಮಿಷಮೌನಾಚರಣೆ ಮಾಡಿ ಮೇನಬತ್ತಿ ಹಚ್ಚಿ ಭಾವಪೂರ್ಣಶ್ರದ್ಧಾಂಜಲಿಅರ್ಪಿಸಲಾಯಿತು. ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರು ಮಾತನಾಡಿ.ನಡೆದಂತ ಈ ಘಟನೆಯನ್ನು ಸರಕಾರ ಸಿ.ಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವರು ಬೆಜವಾಬ್ದಾರಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ಹೇಳಿದರು. ಗ್ರಾಮ ಪ ಸದಸ್ಯರಾಧ ಬಸವರಾಜ ದ್ಯಾವಣ್ಣವರ್ ಮಾತನಾಡಿ.ಕೋಲೆ ಮಾಡಿದಂತ ಆರೋಪಿಗಳನ್ನು ಕೂಡಲೆ ಸರಕಾರ ಇಂತ ಕೃತ್ಯಗಳನ್ನು ಯಾರೆ ಮಾಡಲಿ ಅಂತವರಿಗೆ ಉತ್ತರ ಪ್ರದೇಶ ಮಾದರಿಯಲ್ಲಿ ಎನ್ ಕೌಂಟರ್ ಕಾನೂನು ತರಲೆಬೇಕು ಇಲ್ಲ ಅಂದರೆ ಹೆಣ್ಣು ಮಕ್ಕಳು ಬದುಕಿ ಬಾಳುವುದು ಕಷ್ಟ ಇದೆ ಎಂದರು. ಕಾರ್ಯಕ್ರಮದಲ್ಲಿ ಬಸವರಾಜ ಹಳ್ಳೂರು ,ರುದ್ರಗೌಡ ಗೌಡಪ್ಪನವರ್ , ಮಹಾಂತೇಶಅಗಸಿಮುಂದಿನ್ , ಶರಣಪ್ಪ ಬಾಚಲಾಪೂರು , ಡಾ.ಶರಣು ಹವಾಲ್ದಾರ್ , ಈಶಪ್ಪ ಕಣ್ಣುರು , ಮಹಾಂತಯ್ಯ ಕೂಮಾರಿ , ಶೇಖಣ್ಣ ಗಡಾದ್ , ರಮೇಶ ಬಡಿಗೇರ , ವಿರೇಶ ಈಳಗೇರ ,ಶರಣಪ್ಪ ಬೋದೂರು ,ರಾವುಲ್ ದೇವಿಸಿಂಗ್ ಮುಂತಾದವರು ಕಾರ್ಯಕ್ರಮದಲ್ಲಿ ಪಕ್ಷತೀತವಾಗಿ ಎಲ್ಲ ಮುಖಂಡರು ಬಾಗವಹಿಸಿದರು.

ಸತ್ಯ, ಶಾಂತಿ, ಅಹಿಂಸೆಯ ತತ್ವದ ಪ್ರತಿಪಾದಕರು ಶ್ರೀ ಮಹಾವೀರರು : ಡಾ. ಕ್ಯಾವಟರ್

ಇಮೇಜ್
ವರದಿ - ಮಂಜುನಾಥ್ ಕೋಳೂರು ಕೊಪ್ಪಳ ಕೊಪ್ಪಳ: - ಸತ್ಯ, ಶಾಂತಿ, ಅಹಿಂಸೆಯ ತತ್ವದ ಪ್ರತಿಪಾದಕರಾಗಿದ್ದ ಶ್ರೀ ಮಹಾವೀರರ ಜೀವನ ಇಡೀ ಸಮಾಜಕ್ಕೆ ಮಾರ್ಗದರ್ಶನ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಹೇಳಿದರು. ನಗರದಲ್ಲಿ ನಡೆದ ಭಗವಾನ್ ಶ್ರೀ ಮಹಾವೀರ ಜಯಂತಿ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಗವಾನ ಶ್ರೀ ಮಹಾವೀರರ ಆದರ್ಶಗಳನ್ನು ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಬದುಕು ನಡೆಸೋಣ ಎಂದರು. ಮಹನೀಯರ ಜಯಂತಿ ಆಚರಣೆ ಮೂಲಕ ಅವರ ವಿಚಾರಧಾರೆ ತಿಳಿಯಬೇಕು ಹಾಗೂ ಅವುಗಳನ್ನು ಮೈಗೂಡಿಸಿಕೊಳ್ಳಬೇಕು. ಮಹನೀಯರನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತರಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಆಯಾ ಸಮುದಾಯಗಳ ಮಹನೀಯರ ಜಯಂತಿ ಹಾಗೂ ಸಮುದಾಯಗಳ ಅಭಿವೃದ್ಧಿಗೆ ಅವರ ಹೆಸರಲ್ಲಿ ನಿಗಮ, ಮಂಡಳಿ ರಚಿಸಿದರು. ಆದ್ದರಿಂದಲೇ ನಿಗಮ, ಮಂಡಳಿ ಮೂಲಕ ಸಮುದಾಯಗಳ ಅಭಿವೃದ್ಧಿ ಆಗುತ್ತಿವೆ ಎಂದರು. ಈ ಸಂದರ್ಭದಲ್ಲಿ ಜೈನ್ ಸಮಾಜದ ಪ್ರಮುಖರು, ಗುರು ಹಿರಿಯರು, ಮಿತ್ರರು ಜೊತೆಗಿದ್ದರು.

ಭಾರತವನ್ನು ವಿಶ್ವಗುರು ಮಾಡುವುದೆ ಮೋದಿಯವರು ಸಂಕಲ್ಪ : ಡಾ// ಬಸವರಾಜ್

ಇಮೇಜ್
                                   ವರದಿ ಮಂಜುನಾಥ್ ಕೋಳೂರು ಕೊಪ್ಪಳ  ಕೊಪ್ಪಳ : - ಭಾರತವನ್ನು ವಿಶ್ವಗುರು ಮಾಡುವ ಸಂಕಲ್ಪ ಮಾಡಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಈ ಪಯಣದಲ್ಲಿ ಬಡವರು ಹಿಂದುಳಿಯಬಾರದು, ಬಡ ಕುಟಂಬಗಳನ್ನು ಮಧ್ಯಮ ವರ್ಗಕ್ಕೆ ಏರಿಸಬೇಕೆಂದು ಅವರ ನೇತೃತ್ವದ ಕೇಂದ್ರ ಸರ್ಕಾರವು ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿ ಬಡವರ ಜೀವನವನ್ನು ಉತ್ತಮಗೊಳಿಸಲು ಶ್ರಮಿಸಿದೆ. ಈ ಅಭಿವೃದ್ಧಿ ಮುಂದುವರೆಯಲು ಬಿಜೆಪಿ ಬಹುಮತದಿಂದ ಗೆಲ್ಲಬೇಕಿದೆ ಎಂದು ಮಸ್ಕಿ ಕ್ಷೇತ್ರದ ಹಾಲಾಪುರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರಿಗೆ ಮನದಟ್ಟು ಮಾಡಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮಸ್ಕಿ ಬಿಜೆಪಿ ಮಂಡಲದ ಅಧ್ಯಕ್ಷರಾದ ಶರಣಬಸವ ಸೊಪ್ಪಿಮಠ, ಮಾಜಿ ಸಂಸದರುಗಳಾದ ಕೆ.ವಿರೂಪಾಕ್ಷಪ್ಪ, ಶಿವರಾಮನಗೌಡ, ಮಾಜಿ ಸಚಿವರಾದ ಹಾಲಪ್ಪ ಆಚಾರ, ಮಾಜಿ ಶಾಸಕರಾದ ಪ್ರತಾಪಗೌಡ ಪಾಟೀಲ, ಬಸನಗೌಡ ಬ್ಯಾಗೋಡ್, ಮುಖಂಡರಾದ ಸಿ.ವಿ.ಚಂದ್ರಶೇಖರ, ಲೋಕಸಭಾ ಸಂಚಾಲಕರಾದ ಹೆಚ್.ಗಿರಿಗೌಡ್ರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ರಾಜಗುರು, ಜೆಡಿಎಸ್ ಮುಖಂಡ ರಾಘವೇಂದ್ರ ನಾಯಕ್, ಪ್ರಮುಖರಾದ ಜಗದೀಶ ತಾತ್, ಬಸವಂತರಾಯ ಕುರಿ, ವಿಶ್ವನಾಥ ರೆಡ್ಡಿ, ಚಂದ್ರಶೇಖರ ಬುಗೇಬಾಳ, ಎರೆತಾತ, ಮಲ್ಲಪ್ಪ ಅಂಕಸದೊಡ್ಡಿ, ವಿಶ್ವನಾಥರೆಡ್ಡಿ ಅಮೀನಗಡ, ಶಿವಕುಮಾರ ಪಾಟೀಲ ವಟಗಲ್, ಮರಿಗೌಡ ಆಲಾಪುರ್, ಲಿಂಗರಾಜ ಜಂಗರಹಳ್ಳಿ ಹಾಗೂ ಉಭಯ ಪಕ್ಷ

ಜಾಗತಿಕ ಮಟ್ಟದಲ್ಲಿ ಇಂದು ಭಾರತದ ಪ್ರಗತಿ ಅಗ್ರಗಣ್ಯ ಸ್ಥಾನದಲ್ಲಿದೆ -- ಡಾ. ಬಸವರಾಜ್

ಇಮೇಜ್
ವರದಿ -- ಮಂಜುನಾಥ ಕೋಳೂರು ಕೊಪ್ಪಳ  ಕೊಪ್ಪಳ : - ಇಂದು ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ತಳಕಲ್ ಗ್ರಾಮದಲ್ಲಿ ನಡೆದ ತಳಕಲ್ ಮಹಾಶಕ್ತಿ ಕೇಂದ್ರದ ಚುನಾವಣಾ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು.ಜಾಗತಿಕ ಮಟ್ಟದಲ್ಲಿ ಇಂದು ಭಾರತದ ಪ್ರಗತಿ ಅಗ್ರಗಣ್ಯ ಸ್ಥಾನದಲ್ಲಿದೆ, ಇಡೀ ವಿಶ್ವವನ್ನು ನಮ್ಮ ಕುಟುಂಬ ಎಂಬ ಕಲ್ಪನೆಯ ವಸುದೈವ ಕುಟುಂಬದ ಸಂಸ್ಕೃತಿಯನ್ನು ಪಾಲಿಸಿದ ಕೀರ್ತಿ ನಮ್ಮ ಹೆಮ್ಮೆಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜೀ ಅವರದ್ದು, ಇಂತಹ ಜಗಮೆಚ್ಚಿದ ನಾಯಕತ್ವ ಭಾರತಕ್ಕೆ ಅವಶ್ಯಕ ಮತ್ತು ಅನಿವಾರ್ಯ ಎಂಬುದನ್ನು ಮನದಟ್ಟು ಮಾಡಿ ಮತಯಾಚನೆ ಮಾಡಿದೆ.  ಈ ಸಂದರ್ಭದಲ್ಲಿ ಯಲಬುರ್ಗಾ ಬಿಜೆಪಿ ಮಂಡಲದ ಅಧ್ಯಕ್ಷರಾದ ಮಾರುತಿ ಗಾವರಾಳ, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ಕೊಪ್ಪಳ ಬಿಜೆಪಿ ಜಿಲ್ಲಾಧ್ಯಕ್ಷರಾದ ನವೀನಕುಮಾರ ಗುಳಗಣ್ಣನವರ, ಮಾಜಿ ಸಚಿವರಾದ ಹಾಲಪ್ಪ ಆಚಾರ, ಜೆ.ಡಿ.ಎಸ್ ತಾಲೂಕು ಅಧ್ಯಕ್ಷರಾದ ಬಸವರಾಜ ಗುಳಗುಳಿ, ಪ್ರಮುಖರಾದ ಬಸಲಿಂಗಪ್ಪ ಭೂತೆ, ಸಿ.ಎಚ್.ಪಾಟೀಲ, ಬಸವರಾಜ ಗೌರಾ, ಈರಣ್ಣ ಹುಬ್ಬಳ್ಳಿ, ಮಲ್ಲನಗೌಡ ಕೋನನಗೌಡ್ರ, ಶರಣಪ್ಪ ರಾಂಪೂರ್, ಮಹೇಶ್ವರಿ ಸಾಲೋಗಿಮಠ, ವಿಜಯಲಕ್ಷ್ಮಿ ಮರಾಸಿ, ಕೆಂಚವ್ವ ಹಳ್ಳಿ, ಅಯ್ಯನಗೌಡ ಕೆಂಚಮ್ಮನವರ, ಜಗನಾಥಗೌಡ್ರು, ಪ್ರಕಾಶ ಬೆಲೇರಿ, ರಾಜಶೇಖರ ಹಳ್ಳಿ, ಶಿವಕುಮಾರ ವಾದಿ, ಶಿವಣ್ಣ ಮುತ್ತಾಳ, ಈರಣ್ಣ ಅಂಗಡಿ ಹಾಗೂ ಗ್ರಾಮ ಪಂಚಾಯತ ಸರ್ವ ಸದಸ್ಯರು, ಉಭಯ

ನೇಹಾ ಹಿರೇಮಠ ಹಂತಕನನ್ನು ಗಲ್ಲಿಗೇರಿಸಿ : ಡಿವಿಪಿ ಮನವಿ

ಇಮೇಜ್
ಮಸ್ಕಿ : ದಲಿತ ವಿದ್ಯಾರ್ಥಿ ಪರಿಷತ್ ತಾಲೂಕ ಸಮಿತಿ ಮಸ್ಕಿ ವತಿಯಿಂದ ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ಈ ದೇಶದಲ್ಲಿ ನಿರಂತರವಾಗಿ ಮಹಿಳೆಯರ ಮೇಲೆ, ಬಾಲಕಿಯರ ಮೇಲೆ, ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯಗಳು, ಅತ್ಯಾಚಾರಗಳು,ಕೊಲೆಗಳು ಎಗ್ಗಿಲ್ಲದೆ ನಡೆಯುತ್ತಿರುವುದು ದುರಂತವೇ ಸರಿ. ಆದ್ದರಿಂದ ಇಂತಹ ಕ್ರೂರಿ ಕೊಲೆಗಾರರನ್ನು ಗಲ್ಲು ಶಿಕ್ಷೆ ವಿಧಿಸಬೇಕು ಎಂದು ತಹಸೀಲ್ದಾರರು ಮಸ್ಕಿ ಇವರ ಮುಖಾಂತರ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮನವಿ ಪತ್ರವನ್ನು ಸಲ್ಲಿಸಿದರು. ಇದೇ ದಿನಾಂಕ 18-04-2024 ಗುರುವಾರ ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಆವರಣದಲ್ಲಿ ನೇಹಾ ನಿರಂಜನ ಹಿರೇಮಠ ಅವರ ಭೀಕರ ಕೊಲೆ ಪ್ರಕರಣ ಹುಬ್ಬಳ್ಳಿ ಜನತೆಗೆ ಹಾಗೂ ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳಿಗೆ ತುಂಬಾ ಅಘಾತವನ್ನು ಉಂಟು ಮಾಡಿದೆ.  ಕೊಲೆ ಮಾಡಿದ ಸಹಪಾಠಿ ಫಯಾಜ್ ನೇಹಾಳಿಗೆ ಪ್ರೀತಿಸುವಂತೆ ಹಿಂದೆ ಬಿದ್ದು ಪೀಡಿಸುತ್ತಿದ್ದ ಆಗ ಆತನ ಪ್ರೀತಿಯ ನಿರಾಕರಿಸಿದ ನೇಹಾ ಅವರ ಮೇಲೆ ಕೋಪಗೊಂಡ ಫಯಾಜ್ ಕಾಲೇಜು ಕ್ಯಾಂಪಸ್ ಒಳಗಡೆ ನುಗ್ಗಿ ನೇಹಾಳನ್ನು ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಕೃತ್ಯದಿಂದಾಗಿ ರಾಜ್ಯದೆಲ್ಲೆಡೆ ಪಾಲಕರು ತಮ್ಮ ಮಕ್ಕಳನ್ನು ಶಾಲಾ-ಕಾಲೇಜಿಗೆ ಕಳಿಸುವಲ್ಲಿ ಭಯಭೀತರಾಗಿದ್ದಾರೆ. ಆದಕಾರಣ ಇಂತಹ ಕೃತ್ಯವನ್ನು ನಾವೆಲ್ಲರೂ ತೀವ್ರವಾಗಿ ಖಂಡಿಸುತ್ತೇವೆ, ಮತ್ತು ವಿರೋಧಿಸುತ್ತೇವೆ

*🪔ನಿಧನ ವಾರ್ತೆ:ಶ್ರೀಮತಿ ಶಾರದಮ್ಮಹೊಸಕೆರೆ -🪔*-

ಇಮೇಜ್
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ : ಎ19_ ಹೊಸಕೆರೆ ಗ್ರಾಮದ ನಿವಾಸಿ ಹಾಗೂ ಮಾದಿಗ ಸಮುದಾಯದ ಶ್ರೀಮತಿ ಮಲಿಯ ಮ್ಮರ ಶಾರದಮ್ಮ (63) ಗಂಡ ಮಲಿಯಮ್ಮರ ದುರುಗಪ್ಪ ಎಪ್ರಿಲ್‌ 19 ಶುಕ್ರವಾರ ಸಂಜೆ ಸಮಯದಲ್ಲಿ 7:15 ಗಂಟೆಗೆ, ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತಿದ್ದರು. ಮೃತಳು ಶಾರದಮ್ಮ ಇವರು ಹೊಸಕೆರೆ ಮಾದಿಗ ಸಮುದಾಯದ ಯುವ ಮುಖಂಡರಾದ, ಎಚ್ ಎಂ ಚಾರೇಪ್ಪ ತಾಯಿಯಾಗಿದ್ದು ಇವರಿಗೇ ಇಬ್ಬರು ಗಂಡು ಮಕ್ಕಳು ಮತ್ತು ಸೊಸೆಯಂದಿರು ಮೊಮ್ಮಕ್ಕಳನ್ನು, ಅಪಾರ ಬಂಧು ಬಳಗವನ್ನು ಹೊಂದಿದ್ದರು. *ಅಂತ್ಯಕ್ರಿಯೆ*- ಮೃತರ ಅಂತ್ಯಕ್ರಿಯೆ ಎ 20 ಶನಿವಾರ ಬೆಳಿಗ್ಗೆ 11 ಗಂಟೆಗೆ,ಹೊಸಕೆರೆ ಗ್ರಾಮದ ಶಾಂತಿವನದಲ್ಲಿ ಜರುಗಲಿದೆ. *ಸಂತಾಪ*- ನಿಧನರಾಗಿರುವ ಶ್ರೀಮತಿ ಮಲಿಯಮ್ಮರ ಶಾರದಮ್ಮ ರವರ ಅಗಲಿಕೆಗೆ, ಮಕ್ಕಳು ಮೊಮ್ಮಕ್ಕಳು ಬಂಧುಗಳು ಗ್ರಾಮ ಸೇರಿದಂತೆ ತಾಲೂಕಿನ ಸಮಸ್ತ ಮಾದಿಗ ಸಮಾಜದವರು ಮತ್ತು ವಿವಿದ ಸಮಾಜದವರು. ಶಾಸಕರಾದ ನೇಮಿರಾಜನಾಯ್ಕ ಸೇರಿದಂತೆ ಗ್ರಾಮ ಪಂಚಾಯತಿಯ ಸರ್ವಸದಸ್ಯರು ಹಾಗೂ ಅಧಿಕಾರಿಗಳು ಮತ್ತು ದಲಿತ ಪರ ಸಂಘಟನೆಯ ಪದಾಧಿಕಾರಿಗಳು ವಿವಿದ ಜನಪ್ರತಿನಿಧಿಗಳು, ವಿವಿದ ಪಕ್ಷಗಳ ಪ್ರಮುಖರು. ಮಹಿಳಾ ಸಂಘ, ಕಾರ್ಮಿಕ ಸಂಘ, ರೈತ ಸಂಘ, ಹಾಗೂ ವಿವಿದ ಸಂಘಟನೆಗಳು. ಪತ್ರಕರ್ತರು ಹಾಗೂ ಹಿರಿಯ ನಾಗರೀಕರು, ಮತ್ತು ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ಮತದಾನ ಹಬ್ಬದಲ್ಲಿ ಪ್ರತಿಯೊಬ್ಬರು ಭಾಗವಹಿಸಿ ಅಮರೇಶ್ ಕಾರ್ಯದರ್ಶಿ /ಗಮನ ಸೆಳೆದ ಜಾಗೃತಿ ಜಾಥಾ

ಇಮೇಜ್
ಮಸ್ಕಿ : ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು ಎಂದು ಅಮರೇಶ್ ಕಾರ್ಯದರ್ಶಿ ಸಲಹೆ ನೀಡಿದರು. ಮೆದಿಕಿನಾಳ ಗ್ರಾಮದ ಪಂಚಾಯತ್ ಕಟ್ಟೆಯಿಂದ ಪ್ರಾರಂಭವಾಗಿ ಅಗಸಿಯ ಬಸವೇಶ್ವರ, ಎಸ್ಸಿ ಕಾಲೋನಿಯ ಮಾರಿಯಮ್ಮನ ದೇವಸ್ಥಾನ,ದೈವದ ಕಟ್ಟೆ, ಬಸ್ ನಿಲ್ದಾಣ, ಸರಕಾರಿ ಆಸ್ಪತ್ರೆ, ಬುಧವಾರ ಗ್ರಾಮ ಪಂಚಾಯತಿ ಮಟ್ಟದ ಸ್ವೀಪ್‌ ಸಮಿತಿ ಏರ್ಪಡಿಸಿದ್ದ ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಸಂವಿಧಾನದತ್ತವಾಗಿರುವ ಮತದಾನ ಹಕ್ಕನ್ನು ಯಾವುದೇ ಆಮಿಷಕ್ಕೆ ಒಳಗಾಗದೇ ತಮಗೆ ಸೂಕ್ತ ಎನಿಸುವ ಅಭ್ಯರ್ಥಿಗೆ ಮತ ಚಲಾಯಿಸಬೇಕು. ಅಕ್ಷರಸ್ಥರು ತಮ್ಮ ಮನೆಯ ಸುತ್ತಲಿನ ನಿವಾಸಿಗಳಲ್ಲಿ ಈ ಕುರಿತು ಜಾಗೃತಿ ಮೂಡಿಸಿ, ಅವರನ್ನು ಮತಗಟ್ಟೆಗೆ ಕರೆದುಕೊಂಡು ಹೋಗಬೇಕು. ಪ್ರತಿಯೊಬ್ಬರು ವಿಶೇಷ ಕಾಳಜಿ ವಹಿಸಿದಾಗ ಮಾತ್ರ ಮಸ್ಕಿ ಕ್ಷೇತ್ರದ ಶೇಕಡವಾರು ಮತದಾನ ಪ್ರಮಾಣ ಹೆಚ್ಚಳವಾಗಲಿದೆ ಎಂದರು. ವೀರೇಶ ಮಾತನಾಡಿ ಲೋಕಸಭಾ ಚುನಾವಣೆಯ ಮತದಾನದಲ್ಲಿ ಪಾಲ್ಗೊಳ್ಳಿ ಎಂದರು.ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ ಮತದಾನ ಜಾಗೃತಿ ಜಾಥಾ ಬ್ಯಾನರ್ ಹಿಡಿದು ಮತದಾನದ ಮಹತ್ವವನ್ನು ಘೋಷಣೆ ಕೂಗುವ ಮೂಲಕ ಸಾರ್ವಜನಿಕರ ಗಮನ ಸೆಳೆದವು. ಇದೇ ಸಂದರ್ಭದಲ್ಲಿ ವೀರೇಶ ಹಾಗೂ ದುರುಗೇಶ್ ಕರ ವಸೂಲಿಗಾರರು, ಲಾಲ್ ಸಾಬ್,ಗ್ರಾಮ ಪಂಚಾಯತಿ ಸಿಬ್ಬಂದಿ ಸೇರಿದಂತೆ ಗ್ರಂಥ ಪಾಲಕರು,ಅಂಗನವಾಡಿ ಕಾರ್ಯಕ

ಬೈಕಿಗೆ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು

ಇಮೇಜ್
ಮಸ್ಕಿ : ಸಿಂಧನೂರಿನಿಂದ ಮುದಗಲ್ ಗೆ ಮದುವೆಗೆ ಎಂದು ತೆರಳುತ್ತಿದ್ದ ಬೈಕಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಸ್ಕಿ ಪಟ್ಟಣದ ಅಶೋಕ ಶಿಲಾ ಶಾಸನ ರಸ್ತೆ ಬಳಿ ಈ ಘಟನೆ ನಡೆದಿದೆ. ಲಾರಿ ಡಿಕ್ಕಿಯಾಗಿ ಬೈಕಿನಲ್ಲಿದ್ದ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಸ್ಕಿಯ ಅಶೋಕ ಶಿಲಾ ಶಾಸನ ರಸ್ತೆ ಬಳಿ ಈ ಘಟನೆ ಸಂಭವಿಸಿದೆ. ಸಿಂಧನೂರು ಮೂಲದ ಸಮೀರ್ (22) ಸಲ್ಮಾ (10) ಮೃತ ದುರ್ದೈವಿಗಳು ಎಂದು ಹೇಳಲಾಗುತ್ತಿದೆ. ಸಿಂಧನೂರಿನಿಂದ ಸವಾರರು ಮದುವೆಗೆ ಮುದಗಲ್ ಗೆ ತೆರಳುತ್ತಿದ್ದರು ಎಂದು ತಿಳಿದುಬಂದಿದ್ದು, ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅವರು ಮೇಲೆ ಹಲ್ಲೆ ಖಂಡನಾರ್ಹ : ದೇವರಾಜ್ ಮಡಿವಾಳರ

ಇಮೇಜ್
ಮಸ್ಕಿ:ಹಿರಿಯ ಸಂಸ್ಕೃತಿ ಚಿಂತಕರು, ಸಾಹಿತಿಗಳು ,ರಂಗಕರ್ಮಿಗಳು ,ಹೋರಾಟಗಾರರು ಆದ ಒಡನಾಡಿ ಶ್ರೀ ಕೋಟಿಗಾನಹಳ್ಳಿ ರಾಮಯ್ಯ ರವರ ಮೇಲೆ ಹಲ್ಲೆ ಅಘಾತಕಾರಿ ಹಾಗೂ ಸಿಪಿಐಎಂಎಲ್ ಲಿಬರೇಶನ್ ಬಲವಾಗಿ ಖಂಡಿಸುತ್ತದೆ ಎಂದು ಸಿಪಿಐಎಂಎಲ್ ಲಿಬರೇಶನ ರಾಯಚೂರು ಜಿಲ್ಲಾ ಸಮಿತಿ ಸದಸ್ಯ ದೇವರಾಜ್ ಮಡಿವಾಳರ  ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಕೋಲಾರ ತಾಲ್ಲೂಕಿನ ಅಂತರಗಂಗೆ ಬೆಟ್ಟದ ಪಾಪ ರಾಜನಹಳ್ಳಿ ಗ್ರಾಮದಲ್ಲಿ ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಹಾಗೂ ಅವರ ಪುತ್ರ ಮೇಲೆ ಗ್ರಾಮದ ದೇವಸ್ಥಾನದಲ್ಲಿ ಧ್ವನಿವರ್ಧಕ ಸೌಂಡ್ ವಿಚಾರದಲ್ಲಿ ಹಲ್ಲೆ ನಡೆದಿದೆ.ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸಲು ಮತ್ತು ಸೂಕ್ತ ಚಿಕಿತ್ಸೆ ನೀಡಲು ಸಿಪಿಐಎಂಎಲ್ ಲಿಬರೇಶನ್  ಆಗ್ರಹಿಸುತ್ತದೆ ಹಾಗೂ ಈ ಕೂಡಲೇ ಸರ್ಕಾರ ಗಂಭೀರವಾಗಿ ಪರಿಗಣಿಸಿ ರಾಮಯ್ಯ ಅವರ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕೆಂದು ಸಿಪಿಐಎಂಎಲ್ ಲಿಬರೇಶನ ರಾಯಚೂರು ಜಿಲ್ಲಾ ಸಮಿತಿ ಸದಸ್ಯ ದೇವರಾಜ್ ಮಡಿವಾಳರ  ಪತ್ರಿಕೆ ಹೇಳಿಕೆ ಮೂಲಕ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.

ಗುರಿಯ ಮೇಲಿನ ಇಚ್ಛೆ ಮತ್ತು ಪರಿಶ್ರಮವೇ ಸಾಧನೆಗೆ ಕಾರಣ - ಜಗದೀಶ್ ಗಂಗಣ್ಣನವರ್

ಇಮೇಜ್
ಮಸ್ಕಿ: ಲೋಕಸಭಾ ಚುನಾವಣೆಯ ನಿಮಿತ್ತ ಮಸ್ಕಿ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿಯಾಗಿ ಆಗಮಿಸಿದ ಶ್ರೀ ಜಗದೀಶ್ ಗಂಗಣ್ಣನವರ್ ಅಭಿನಂದನ್ ಸ್ಫೂರ್ತಿ ಧಾಮಕ್ಕೆ ಭೇಟಿ ನೀಡಿ ಮಕ್ಕಳ ಕುಶಲೋಪರಿ ವಿಚಾರಿಸಿ ಮಕ್ಕಳಿಗೆ ಭವಿಷ್ಯ ರೂಪಿಸಿಕೊಳ್ಳಲು ಅಗತ್ಯವಿರುವ ಅಂಶಗಳ ಬಗ್ಗೆ ತಿಳಿಸಿದರು. ಅಭಿನಂದನ್ ಸಂಸ್ಥೆಯ ಕಾರ್ಯ ಚಟುವಟಿಕೆಗಳು, ಸಾಮಾಜಿಕ ಕಾರ್ಯಗಳು ಮತ್ತು ಸಂಸ್ಥೆ ನಡೆದು ಬಂದ ಹಾದಿಯ ಬಗ್ಗೆ ಮಾಹಿತಿ ತಿಳಿದುಕೊಂಡು ಅಭಿನಂದನ್ ಸ್ಫೂರ್ತಿ ಧಾಮದ ಮಕ್ಕಳೊಂದಿಗೆ ಸ್ವಲ್ಪ ಹೊತ್ತು ಕಾಲ ಕಳೆದರು. ಮಕ್ಕಳೊಂದಿಗೆ ತಮ್ಮ ಬಾಲ್ಯದಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದ ರೀತಿ, ತಮ್ಮ ಜೀವನದಲ್ಲಿ ಮಾಡಿದ ಸ್ಫೂರ್ತಿಧಾಯಕ ಕಾರ್ಯಗಳ ಬಗ್ಗೆ ಹೇಳುತ್ತಾ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಿದರು. ಯಾವುದೇ ಗುರಿಯನ್ನು ಮುಟ್ಟಲು ಮೊದಲು ಅದರ ಮೇಲಿನ ಇಚ್ಛೆ, ಏಕಾಗ್ರತೆ, ಛಲ, ಪರಿಶ್ರಮ ಹಾಗೂ ಉತ್ತಮ ಮಾರ್ಗದರ್ಶನ ಬಹಳ ಮುಖ್ಯ ಆಗಿರುತ್ತದೆ. ನಿಮಗೆ ಸಿಗುತ್ತಿರುವ ಎಲ್ಲಾ ಮಾರ್ಗದರ್ಶನಗಳ ಸದುಪಯೋಗ ಪಡೆದುಕೊಂಡು ಶ್ರೇಷ್ಠ ಸಾಧನೆಗಳನ್ನು ಮಾಡಿ ದೇಶದ ಅತ್ಯುತ್ತಮ ಸಾಧಕರಾಗಿ ಎಂದು ಹೇಳಿದರು. ಇದೆ ಸಂಧರ್ಭದಲ್ಲಿ ತಹಸೀಲ್ದಾರರಾದ ಅರಮನೆ ಸುಧಾ, ಗ್ರೇಡ್ 2 ತಹಶೀಲ್ದಾರ್ ರಾಘವೇಂದ್ರ ,ಕಂದಾಯ ಅಧಿಕಾರಿ ರಾಘವೇಂದ್ರ ಶಿಕ್ಷಕರಾದ ಮಹಾಂತೇಶ , ಬಸವರಾಜ ರತ್ನಾಪುರ, ಅಭಿನಂದನ್ ಸಂಸ್ಥೆಯ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ, ಅಭಿನಂದನ್ ಸಂಸ್ಥೆಯ ಪದಾಧಿಕಾರಿಗಳು ಮತ್ತು ಅ
ಇಮೇಜ್
  ಕೊಟ್ಟೂರು: ಉಜ್ಜಿನಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಗುರುವಾರ ಮುಸ್ಲಿಮರ ರಂಜಾನ್ ಹಬ್ಬದ ಅಂಗವಾಗಿ ಈದ್ಗಾಗಳಲ್ಲಿ ಸಮೂಹಿಕ ಪ್ರಾರ್ಥನೆ ಮಾಡಿದರು. ನಂತರ ಪರಸ್ಪರ ಶುಭಾಷಯಗಳನ್ನು ವಿನಿಮಯ ಮಾಡಿಕೊಂಡರು. ರಂಜಾನ್ ಹಬ್ಬದ ಅಂಗವಾಗಿ ಉಜ್ಜಿನಿ ಸಮೀಪದ ನಿಂಬಳಗೆರೆ ಗ್ರಾಮದ ಮುಸ್ಲಿಮರ ಗ್ರಾಮ ಈದ್ಗಾ ಮೈದಾನದಲ್ಲಿ ಗುರುವಾರ ಪ್ರಾರ್ಥನೆ ನಡೆಸಿದರು.

ಸರಕಾರಿ ಪ್ರೌಢ ಶಾಲೆ ಹಳೆ ವಿದ್ಯಾರ್ಥಿಳ ಸ್ನೇಹ ಸಮ್ಮೇಳನ

ಇಮೇಜ್
ಕೊಟ್ಟೂರು : ಪಟ್ಟಣದ ಸರಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ೧೯೭೩, ೭೪ ಮತ್ತು ೭೫ನೇ ಸಾಲಿನಲ್ಲಿ ೧೦ನೇ ತರಗತಿ ವಿದ್ಯಾರ್ಥಿಗಳು ೫೦ ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಏ.೧೪ರಂದು ಸ್ನೇಹ ಸಮ್ಮೇಳನ ಹಮ್ಮಿಕೊಂಡಿದೆ ಎಂದು ಸಮ್ಮೇಳನ ಸಮಿತಿ ಗೌರವಾಧ್ಯಕ್ಷ ಪಿ.ಎಚ್.ದೊಡ್ಡರಾಮಣ್ಣ, ಅಧ್ಯಕ್ಷ ರೇವಣಸಿದ್ದಪ್ಪ ಹೇಳಿದರು. ಪಟ್ಟಣದ ತುಂಗಭದ್ರ ಬಿಇಡಿ ಕಾಲೇಜಿನಲ್ಲಿ ನಡೆದ ಜಂಟಿ ಸುದ್ದಿಗೋಷ್ಟಿಯಲ್ಲಿ ಅವರು ಗುರುವಾರ ಮಾತನಾಡಿದರು. ೧೯೭೪ನೇ ಸಾಲಿನ ವಿದ್ಯಾರ್ಥಿಗಳ ಕಾರ್ಯಕ್ರಮ ನಡೆಸುವ ಯೋಜನೆ ರೂಪಿಸಿದಾಗ ೭೩ ಮತ್ತು ೭೫ನೇ ಸಾಲಿನವರೂ ಸೇರಿಕೊಂಡು ಒಟ್ಟಾಗಿ ಸಮಾರಂಭ ಮಾಡುವ ನಿರ್ಧಾರ ಮಾಡಿದ್ದೇವೆ. ಈಗಾಗಲೇ ಇದಕ್ಕೆ ಎಲ್ಲ ತಯಾರಿಯೂ ನಡೆದಿದೆ. ಆ ಸಾಲಿನ ಶಿಕ್ಷಕರಾದ ಕೆ.ಜಯಪ್ಪ, ಅರವರ ಗುರುಬಸಪ್ಪ, ಎಚ್.ಎಂ.ಹಾಲಯ್ಯನವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು. ಬೆಳಗ್ಗೆ ಶಿಕ್ಷಕರೊಂದಿಗೆ ಗ್ರೂಪ್ ಫೋಟೊ ತೆಗೆಸಿಕೊಳ್ಳಲಾಗುವುದು. ಶ್ರೀ ಮರುಳಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುವ ಸಮಾರಂಭದ ವೇದಿಕೆಯಲ್ಲಿ ಅಸೀನರಾಗುವ ಶಿಕ್ಷಕರಿಂದ ವಿಶಿಷ್ಟ ಕಾರ್ಯಕ್ರಮ ನಡೆಸಲಾಗುವುದು. ಮಧ್ಯಾಹ್ನ ಹಳೆ ವಿದ್ಯಾರ್ಥಿಗಳಿಂದ ಕಲಾ ಪ್ರದರ್ಶನ ನಡೆಯಲಿದೆ ಎಂದು ಅವರು ಹೇಳಿದರು. ಸಮಿತಿ ಕಾರ್ಯದರ್ಶಿ ಡಿ.ಚಾಮರಸ ಮಾತನಾಡಿ, ಕೇವಲ ಮೂರು ತಿಂಗಳಲ್ಲಿ ಬೇರೆಡೆ ಇದ್ದ ಸ್ನೇಹಿತರನ್ನು ಸಂಪರ್ಕಿಸಿದೆ. ಕಾರ್ಯಕ್ರಮ ಮೊದಲ ಪೂರ್ವಭಾವಿ ಸಭೆಯಲ್ಲಿ ೩೦ ಜನ ಇದ್ದೆವೆ. ಈಗ ಸಂಖ್ಯೆ ೧೦೦ ದಾ

ಕೊಟ್ಟೂರಿನಲ್ಲಿ ಮುಸ್ಲಿಂರಿAದ ಸಡಗರ ಸಂಭ್ರಮದೊAದಿಗೆ ರಂಜಾನ್

ಇಮೇಜ್
 ಕೊಟ್ಟೂರು :  ಪವಿತ್ರ ರಂಜಾನ್ ಹಬ್ಬವನ್ನು ಪಟ್ಟಣದಲ್ಲಿನ ಮುಸ್ಲಿಂ ಭಾಂದವರು ಗುರುವಾರ ಸಡಗರ ಸಂಭ್ರಮಗಳೊAದಿಗೆ ಆಚರಿಸಿದರು, ಇಲ್ಲಿನ ಆರು ಪ್ರಮುಖ ಮಸೀದಿಗಳಲ್ಲಿ ಹಬ್ಬದ ನಿಮಿತ್ತವಾಗಿ ಮುಸ್ಲಿಂ ದೈವ ಅಲ್ಲಾಹುವಿನ ನಾಮಸ್ಮರಣೆ ಬೆಳೆಗ್ಗೆ ೯ ರಿಂದಲೇ ಮಾರ್ದನಿಸಿದವು.   ಪಟ್ಟಣದ ಬಿಲಾಲ್, ಉಸ್ಮಾನಿಯ, ಜಾಮೀಯ, ಮುಬಾರಕ್, ಇಲಾಹಿ, ತೋಹಿಬಾ ಮಸೀದಿಗಳಿಂದ ಮುಸ್ಲಿಂ ಜನಾಂಗದವರು ನೂರಾರು ಸಂಖ್ಯೆಯಲ್ಲಿ ಜಮಾವಣೆ ಗೊಂಡು ಪಾದಯಾತ್ರೆಯ ಮೆರವಣಿಗೆ ಕೈಗೊಂಡರು. ನಂತರ ಇಲ್ಲಿನ ಹಗರಿಬೊಮ್ಮನಹಳ್ಳಿ ರಸ್ತೆಯಲ್ಲಿನ ಖಬರ್‌ಸ್ಥಾನದಲ್ಲಿ ಕೂಡಿಕೊಂಡು ಸಾಮೂಹಿಕ ಪ್ರಾರ್ಥನೆ ಕೈಗೊಂಡರು. ಧರ್ಮಗುರು ಮುಕ್ತಿಮಹಮ್ಮದ್ ಯಾಸೀನ್ ನೆರೆದಿದ್ದ ಭಾಂದವರಿಗೆ ಧರ್ಮೊಪದೇಶ ನೀಡಿ ಪ್ರಾರ್ಥನೆಯನ್ನು ಭೋದಿಸಿದರು. ಇವರ ಅಜ್ಞಾನುಸಾರ ಜನಾಂಗದ ಭಾಂದವರು ರಾಗಬದ್ದವಾಗಿ ಅಲ್ಲಾಹುನನ್ನು ಸ್ಮರಿಸಿ ನಮಸ್ಕರಿಸಿದರು. ನಂತರ ಪರಸ್ಪರ ಒಬ್ಬರನ್ನು ಒಬ್ಬರು ಆಲಂಗಿಸಿಕೊAಡು ಈದ್-ಮುಬರಕ್ ಹೇಳಿಕೊಂಡರು.  ಸ್ಥಳಿಯ ಮುಖಂಡರಾದ ಅಯೂಬ್ ಖಾನ್, ಯಾಸೀನ್ ನಾಗೇನಹಳ್ಳಿ, ನಜೀರ್ ಸಾಬ್, ಸಾಲಾಮ್ ಸಾಬ್, ಬಾಗಳಿ ಭಾಷಾ ಸಾಬ್, ರೆಹಮತ್ ಸಾಬ್, ಕೆ.ಎಂ. ಸಲೀಂ ಸಾಬ್, ಸಲಾಂ ಸಾಬ್, ಸೈಪುಲ್ಲಾ, ಅಬ್ಬಾಸ್, ಮತ್ತಿತರರು ಪಾಲ್ಗೊಂಡಿದ್ದರು.

144 ನೇ ಸಂಡೆ ಫಾರ್ ಸೋಷಿಯಲ್ ವರ್ಕ್ ಸೇವಾ ಕಾರ್ಯ

ಇಮೇಜ್
ಮಸ್ಕಿ : ಅಭಿನಂದನ್ ಸಂಸ್ಥೆಯ ಮೂಲಕ ಆರಂಭ ಮಾಡಲಾಗಿರುವ ಸ್ವಚ್ಛತಾ ಅಭಿಯಾನ ಸಂಡೆ ಫಾರ್ ಸೋಷಿಯಲ್ ವರ್ಕ್ ಇಲ್ಲಿವರೆಗೆ ಅಂದರೆ ಒಂದು ವಾರವೂ ಸಹ ಬಿಡದೆ ನಿರಂತರವಾಗಿ ಸಾಗುತ್ತಾ ಪ್ರಸ್ತುತ 144 ವಾರಗಳನ್ನು ಪೂರೈಸಿದೆ. ಕೇವಲ ಮಸ್ಕಿಗೆ ಸೀಮಿತ ಆಗದೆ ಬೇರೆ ಬೇರೆ ತಾಲೂಕು, ಜಿಲ್ಲೆ ಹಾಗೂ ಆಂಧ್ರ ಪ್ರದೇಶದಲ್ಲಿಯೂ ಸಹ ತನ್ನ ಕಾರ್ಯವನ್ನು ಕೈಗೊಂಡು ಯಶಸ್ವಿಯಾಗಿ ಸಾಗುತ್ತಿದೆ. ಈ ವಾರದ 144 ನೇ ಸಂಡೆ ಫಾರ್ ಸೋಷಿಯಲ್ ವರ್ಕ್ ಸೇವಾ ಕಾರ್ಯದಲ್ಲಿ ಮಸ್ಕಿ ತಾಲೂಕಿನ ಹಳೇ ಹುಲ್ಲೂರಿನ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಿ ಅದಕ್ಕೆ ಬಣ್ಣವನ್ನು ಹಚ್ಚಿ ಸುಂದರಗೊಳಿಸಲಾಯಿತು. ಇದೆ ಸಂದರ್ಭದಲ್ಲಿ ಮಾತನಾಡಿದ ಅಭಿನಂದನ್ ಸಂಸ್ಥೆಯ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ ಅವರು ಅಭಿನಂದನ್ ಸಂಸ್ಥೆಯ ಮೂಲಕ ಹಲವಾರು ಸಾಮಾಜಿಕ ಕಾರ್ಯಗಳು ನಡೆಯುತ್ತಿವೆ, ಇವುಗಳಲ್ಲಿ ಪ್ರತಿ ಭಾನುವಾರ ನಮ್ಮ ಸಂಸ್ಥೆಯ ಮೂಲಕ ಭಾನುವಾರದ ರಜೆಯನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸುವ ಇಚ್ಛೆಯಿಂದ ಆರಂಭವಾಗಿರುವುದೇ ಈ ಸಂಡೆ ಫಾರ್ ಸೋಷಿಯಲ್ ವರ್ಕ್. ಸ್ವಚ್ಛ ಭಾರತದ ಕನಸನ್ನು ನನಸಾಗಿ ಮಾಡುವ ಪ್ರಯತ್ನದಲ್ಲಿ ನಾವುಗಳು ಈ ಅಭಿಯಾನದ ಮೂಲಕ ಕಾರ್ಯನಿರತರಗಿದ್ದೇವೆ. ಸ್ವಚ್ಛ ಭಾರತವೇ ಸಂಡೆ ಫಾರ್ ಸೋಷಿಯಲ್ ವರ್ಕ್ ನ ಮೂಲ ಮಂತ್ರವಾಗಿದೆ. ಒಂದು ವಾರವೂ ಬಿಡದೇ ಇಲ್ಲಿವರೆಗೆ 144 ವಾರಗಳ ಸೇವಾ ಕಾರ್ಯವನ್ನು ನಾವು ಕೈಗೊಂಡಿದ್ದೇವೆ. ಇದು ನಿತ್ಯ ನಿರಂತರವಾಗಿ ಸಾಗುತ್ತಲೇ ಇರುತ್ತದೆ. ನಿಮ್ಮ ಭಾಗ

" ಬಿಸಿಲಿನ ತಾಪಕ್ಕೆ ತತ್ತರಿಸಿದ ಬಯಲು ಸೀಮೆಯ ಜನರು "

ಇಮೇಜ್
*ತಂಪು, ಪಾನೀಯ, ಕಲ್ಲಂಗಡಿ ಹಣ್ಣು ,ಹಣ್ಣಿನ ಜ್ಯೂಸ್ ವ್ಯಾಪಾರ ಜೋರು * ಕೊಟ್ಟೂರು : ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪಕ್ಕೆ ತತ್ತರಿಸಿರುವ ಕೊಟ್ಟೂರು ಪಟ್ಟಣದ ನಾಗರಿಕರು ತಂಪು ಪಾನೀಯದತ್ತ ಮೊರೆ ಹೋಗುತ್ತಿದ್ದಾರೆ. ಕೊಟ್ಟೂರು ತಾಲೂಕಿನದ್ಯಾಂತ ದಿನೇ ದಿನೇ ಬಿಸಿಲಿನ ತಾಪವು  40 ಡಿಗ್ರಿ ಸೆಲ್ಸಿಯಸಿಗೆ ಬಿಸಿಲಿನ ಪ್ರಖರತೆ ತಲುಪಿದೆ . ವಿಜಯನಗರ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪಟ್ಟಣ ಪಂಚಾಯತಿ ಅವರಿಂದ ಮೈಕ್ ನಲ್ಲಿ ಅನೌನ್ಸ್ಮೆಂಟ್ ಮಧ್ಯಾಹ್ನ 12:00 ಯಿಂದ ಸಂಜೆ 5:00 ಗಂಟೆಯವರೆಗೂ ಬಿಸಿಲಿನ ತಾಪ ಹೆಚ್ಚಾಗುವುದರಿಂದ ಸಾರ್ವಜನಿಕರಿಗೆ ಹೊರಗಡೆ ಬರದಂತೆ ಹಾಗೂ ಅತಿ ಹೆಚ್ಚು ನೀರು ಕುಡಿಯುವಂತೆ ಸಾರ್ವಜನಿಕರಿಗೆ ತಿಳಿಸಲಾಯಿತು. ಬೆಳ್ಳಿಗೆ 10 -12 ಗಂಟೆಗೆ ವಿಪರೀತ ಬಿಸಿಲಿನ ಝಳ ಆರಂಭವಾಗುತ್ತದೆ. ಇದರ ಜೊತೆಗೆ ಬಿಸಿಯಾದ ಗಾಳಿ ಮುಖಕ್ಕೆ ತಾಗುವುದರಿಂದ ಮುಖವೆಲ್ಲ ಸುಟ್ಟ ಅನುಭವ ಆಗುತ್ತದೆ. ಇದರಿಂದಾಗಿ ಸದಾ ವಾಹನಗಳು ಮತ್ತು ಜನರಿಂದ ಗಿಜಿಗುಡುತ್ತಿದ್ದ  ಬಸ್ ನಿಲ್ದಾಣ, ಗಾಂಧಿ ಸರ್ಕಲ್  ವಿವಿಧ ರಸ್ತೆಗಳು ಮಧ್ಯಾಹ್ನ ಆಗುತ್ತಿದ್ದಂತೆ ಸಂಚರಿಸುವ ಸಂಚರಿಸುವವರ ಸಂಖ್ಯೆ ತೀರ ಇಳಿಮುಖವಾಗಿದೆ.  ಬೇಸಿಗೆ ಬಿರು ಬಿಸಿಲು ಆರಂಭವಾಗುತ್ತಿದ್ದಂತೆ ಪಟ್ಟಣದ ರಸ್ತೆ ಬದಿ ಜನಸಂದಣಿ ಪ್ರದೇಶದಲ್ಲಿ ತಂಪು ಪಾನೀಯ ಮತ್ತು ಎಳೆನೀರು ಅಂಗಡಿಗಳು ಎಲ್ಲೆಂದರಲ್ಲಿ ತಲೆಯೆತ್ತಿವೆ. ಬೇಸಿಗೆ ಬಿಸಿಲಿನಿಂದ ತತ್ತರಿಸಿದ ಜನರು ಹಣ್ಣು ತಂಪು ಪಾನೀಯ