ಪೋಸ್ಟ್‌ಗಳು

ಜೂನ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹೊಸಕೇರಪ್ಪ ಕೆ ಪೊಲೀಸ್ ಇನ್ಸ್ಪೆಕ್ಟರ್ ಹಟ್ಟಿ ಠಾಣೆ ವತಿಯಿಂದ ಮಾದಕ ವಸ್ತು ದುರುಪಯೋಗ ಮತ್ತು ಸಾಗಾಣಿಕೆ ವಿರೋಧಿ ದಿನಾಚರಣೆ.ಜಾಗೃತಿ ಕಾರ್ಯಕ್ರಮ.

ಇಮೇಜ್
ಹಟ್ಟಿ ಚಿನ್ನದ ಗಣಿ : ರಾಯಚೂರು ಜಿಲ್ಲಾ ಪೊಲೀಸ್.ಹಾಗೂ ಲಿಂಗಸ್ಗೂರು ಉಪ ವಿಭಾಗ ಹಟ್ಟಿ ಪೊಲೀಸ್ ಠಾಣೆ ವತಿಯಿಂದ ಅಂತರಾಷ್ಟ್ರೀಯ ಮಾದಕ ವಸ್ತು ದುರುಪಯೋಗ ಮತ್ತು ಸಾಗಾಣಿಕೆ ವಿರೋಧಿ ದಿನಾಚರಣೆ ದಿನವಾದ ಇಂದು ಹಟ್ಟಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹೊಸಕೇರಪ್ಪ ಕೆ ನೇತೃತ್ವದಲ್ಲಿ ಬೆಳಿಗ್ಗೆ ಜಾತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು  ಈ ಕಾರ್ಯಕ್ರಮವು ಹಟ್ಟಿ ಪಟ್ಟಣದ ಪಾಮನ ಕಲ್ಲೂರ್ ಕ್ರಾಸ್ ಮುಖ್ಯ ರಸ್ತೆಯ ಮೂಲಕ ನೂರಾರು ವಿದ್ಯಾರ್ಥಿಗಳ ಜೊತೆಗೂಡಿ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮದೊಂದಿಗೆ ಮಾದಕ ವಸ್ತು ಮಾರಕ, ಹೆಂಡ ಸಾರಾಯಿ ಸಾವಾಸ.ಹೆಂಡರ ಮಕ್ಕಳು ಉಪವಾಸ,  ಬಿ ಡಿ.ಸಿಗರೇಟ್.ಗುಟ್ಕಾ. ಕ್ಯಾನ್ಸರ್ ಗೆ ಆಹ್ವಾನ, ಎಂದು ಘೋಷಣೆ ಕೂಗುತ್ತಾ ವಿದ್ಯಾರ್ಥಿಗಳ ಜೊತೆಗೂಡಿ.ಹಟ್ಟಿ ಚಿನ್ನದ ಗಣಿಯ ಶ್ರೀವಿನಾಯಕ ವಿದ್ಯಾಸಂಸ್ಥೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು  ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾಕ್ಟರ್ ಮಾವಿನಕಟ್ಟಿ ಎಚ್ ಜಿ ಎಂ, ಡಾಕ್ಟರ್ ಸಾಜಿದ ಎಚ್ ಜಿ ಎಂ, ಪೋಲಿಸ್ ಇನ್ಸ್ಪೆಕ್ಟರ್ ಹೊಸಕೆರಪ್ಪ ಕೆ, ಹಟ್ಟಿ ಪೊಲೀಸ್ ಠಾಣೆ  ಶ್ರೀ ವಿನಾಯಕ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ನರಸಪ್ಪ ಯಾದವ್,ಶಂಶುದ್ದೀನ್ ವಕೀಲರು, ಶಿಕ್ಷಕಿಯರಾದ ಶ್ರೀಮತಿ ಭಾಗಿರಥಿ,ಶ್ರೀಮತಿ ಮಹಾದೇವಿ, ಉಪಸ್ಥಿತರಿದ್ದರು  ಶಿಕ್ಷಕರಾದ ಮಹಾಂತೇಶ್ ಅತಿಥಿಗಳಿಗೆ ಸ್ವಾಗತ ಮತ್ತು ಸನ್ಮಾನ ಮಾಡುವ ಮೂಲಕ ಕಾರ್

ಕಾನೂನು ಎಲ್ಲರೂ ಗೌರವಿಸಿ,ಜೀವನದಲ್ಲಿ ಅಳವಡಿಸಿಕೊಳ್ಳಿ : ವೆಂಕಟೇಶ ನಾಯಕ ಪಿಎಸ್ಐ

ಇಮೇಜ್
*ಮಸ್ಕಿ* ತಾಲ್ಲೂಕಿನ ಹಾಲಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಜಂಗಮರಹಳ್ಳಿಯಲ್ಲಿ ನಡೆದ ಮಸ್ಕಿ ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮ ದರ್ಜೆ ಕಾಲೇಜ್‌ ನಿಂದ ಎನ್ ಎಸ್ ಎಸ್ ಶಿಬಿರದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು, ಪ್ರಥಮದಲ್ಲಿ ಪ್ರಾಸ್ತಾವಿಕ ನುಡಿಯನ್ನು ಎನ್ ಎಸ್ ಎಸ್ ಅದಿಕಾರಿ ಶಿವಗ್ಯಾನಪ್ಪ ಮಾತನಾಡಿದರು. ನಂತರ ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದ ಕವಿತಾಳ ಪೊಲೀಸ್ ಠಾಣಿ ಪಿಎಸ್ಐ ವೆಂಕಟೇಶ ನಾಯಕ ರವರು ಕಾನೂನು ಅರಿವು ಮತ್ತು ನೆರವು ಎಂಬ ವಿಷಯದ ಕುರಿತು ಮಾತನಾಡುತ್ತಾ ನಮ್ಮ ದೇಶದ ಕಾನೂನು ಬಹಳಷ್ಟು ವಿಶೇಷವಾದ ಕಾನೂನುನಾಗಿದ್ದು, ಪ್ರತಿಯೊಬ್ಬ ಭಾರತೀಯರು ಕಾನೂನು ಚೌಕಟ್ಟನ್ನು ಮೀರದಂತೆ ಕೆಲಸ ಮಾಡಬೇಕು,ಯಾರು ಕಾನೂನಿನ ವಿರುದ್ದ ಕೆಲಸ ಮಾಡಿದರೆ ಯಾರೆ ಆಗಲಿ ಶಿಕ್ಷೆ ತಪ್ಪಿದ್ದಿಲ್ಲ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ರಾಮಣ್ಣ.ಎ ಸಹ ಪ್ರಾಧ್ಯಾಪಕರು ಮಾತನಾಡಿ ಎನ್ ಎಸ್ ಎಸ್ ಶಿಬಿರದಲ್ಲಿ ವಿದ್ಯಾರ್ಥಿಗಳು ಶಿಸ್ತು, ನಾಯಕತ್ವ, ಗ್ರಾಮೀಣ ಜನರ ಬದುಕಿನ ಸಮಸ್ಯೆ ಇನ್ನಿತರ ಎಲ್ಲಾ ಸಂಗತಿಗಳು ಶಿಬಿರದಲ್ಲಿ ಕಾಣುತ್ತಿರಿ ಇದೊಂದು ಭವಿಷ್ಯದಲ್ಲಿ ಅನುಭವ ತರುವ ಮಹತ್ವಪೂರ್ಣ ಕಾರ್ಯಕ್ರಮ ಎಂದು ಹೇಳಿದರು.ಕಾರ್ಯಕ್ರಮ ಸಾನಿದ್ಯವನ್ನು ಶ್ರೀ ದಂಡಗುಂಡಪ್ಪತಾತ , ಶ್ರೀ ಬಸವಲಿಂಗತಾತ, ಅತಿಥಿಗಳಾಗಿ ಎರಿತಾತ ಪಾಟೀಲ್, ಬಸವರಾಜ ರಾಮತ್ನಾಳ,ಮಹಾಂತೇಶ ಅಂಗಡಿ,ನಾಗೇಶ ಪ್ರಚಾರ್ಯರು,ಸಿದ್ದಾರ್ಥ ಪಾಟೀಲ್, ಬಸವರಾಜ

ತಹಶೀಲ್ದಾರರ ಮುಖಾಂತರ ರಾಷ್ಟ್ರಪತಿ ರವರಿಗೆ ಮನವಿ

ಇಮೇಜ್
ಮಸ್ಕಿ : ಪಟ್ಟಣದ ಬಸವೇಶ್ವರ ನಗರದ ತಹಶೀಲ್ದಾರರ ಕಚೇರಿಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿ ಕಾಪಾಡಲು ವಿಫಲಗೊಂಡ ಕೇಂದ್ರ ಶಿಕ್ಷಣ ಸಚಿವರನ್ನು ವಜಾ ಮಾಡಬೇಕು ಮತ್ತು ಪರೀಕ್ಷೆ ನಡೆಸುವ ಅಧಿಕಾರ ಆಯಾ ರಾಜ್ಯಗಳ ಸರ್ಕಾರಕ್ಕೆ ನೀಡಬೇಕು ಎಂದು ದಲಿತ ವಿದ್ಯಾರ್ಥಿ ಪರಿಷತ್ ಸಂಘಟನೆಯು ತಹಶೀಲ್ದಾರರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು. ದಲಿತ ವಿದ್ಯಾರ್ಥಿ ಪರಿಷತ್ ಸಂಘಟನೆಯು ವಾಲ್ಮೀಕಿ ವೃತ್ತದಿಂದ ಘೋಷಣೆ ಕೂಗುತ್ತ ಕಾಲ್ನಡಿಗೆ ಜಾಥಾ ಮೂಲಕ ಪ್ರತಿಭಟನೆ ಮಾಡುತ್ತಾ ದಂಡಾಧಿಕಾರಿ ಕಚೇರಿಯಲ್ಲಿ ಮಸ್ಕಿ ತಹಶೀಲ್ದಾರರ ಮುಖಾಂತರ ರಾಷ್ಟ್ರಪತಿ ಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾ ಸಂಚಾಲಕ ಮೌನೇಶ ಜಾಲವಾಡಗಿ  ದೇಶದ ಅತ್ಯಂತ ಕಠಿಣಾತಿ ಕಠಿಣ ಪರೀಕ್ಷೆ ನೀಟ್ನಲ್ಲೂ ಗೋಲ್ಮಾಲ್ ನಡೆದೋಯ್ತು. ಬಳಿಕ ನೆಟ್ ಪರೀಕ್ಷೆಗೂ ಅಕ್ರಮದ ವಾಸನೆ ಬಡಿದಿದ್ದರಿಂದ ಪರೀಕ್ಷೆ ರದ್ದಾಗಿದೆ. ಪರೀಕ್ಷೆಗಳ ಅಕ್ರಮದ ವಿರುದ್ಧ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಅಕ್ರಮಗಳ ಗದ್ದಲದಲ್ಲಿರುವ ಕೇಂದ್ರ ಸರ್ಕಾರ (26/06/2024) ರಂದು ಅಂದರೇ ಇಂದು ನಡೆಯಬೇಕಿದ್ದ ನೀಟ್-ಪಿಜಿ ಪರೀಕ್ಷೆಯನ್ನು ಕೂಡ ಕೊನೆಯ ಕ್ಷಣದಲ್ಲಿ ಮುಂದೂಡಿಕೆ ಮಾಡಿ ಆದೇಶಿಸಿದೆ.  ಸರ್ಕಾರಿ ನೇಮಕಾತಿಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆಗಿದ್ದು ಇತಿಹಾಸ. ಇದನ್ನೂ ಮೀರಿ ಈಗ ಕಠಿಣ ಪರೀಕ್ಷೆಗಳಾದ ನೀಟ್-ನೆಟ್ ಕೂಡ ಅಕ್ರಮದ ಗೂಡುಗಳಾಗಿ ಮಾರ್ಪಟ್ಟಿವೆ. ಲಕ್ಷ ಲಕ್ಷ ಹಣಕ್ಕೆ ಪ್ರಶ್ನೆ ಪತ

ಪವಾಡಪುರುಷ ಗುಡ್ಡದ ಸಂತ ಅಂತೋಣಿಯವರ ಜಾತ್ರಾ ಮಹೋತ್ಸವ ಗುರುಗುಂಟ

ಇಮೇಜ್
ಲಿಂಗಸುಗೂರು ತಾಲೂಕಿನ ಗುರುಗುಂಟದ ಮೌಂಟ್ ಕಾರ್ಮೆಲ್ ದೇವಾಲಯದಲ್ಲಿ ಪವಾಡಪುರುಷ ಗುಡ್ಡದ ಸಂತ ಅಂತೋನಿಯವರ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಗುರುಗುಂಟ ಮೌಂಟ್ ಕಾರ್ಮೆಲ್ ದೇವಾಲಯದ ವಿಚಾರಣೆಯ ಗುರುಗಳಾದ ವಂದನೆಯ ಸ್ವಾಮಿ ರಾಬರ್ಟ್ ಪೌಲ್ ಅವರ ನೇತೃತ್ವದಲ್ಲಿ ಸಾಯಂಕಾಲ ನಾಲ್ಕು ಗಂಟೆಗೆ ಹಿರೇನಗನೂರು ಯುವಕರಿಂದ ಭಕ್ತಿಯ ಭಜನೆ ಹಾಡುಗಳಿಂದ ಪವಾಡಪುರುಷ ಗುಡ್ಡದ ಸಂತ ಅಂತೋಣಿಯವರ ಭವ್ಯ ತೇರು ಮೆರವಣಿಗೆ ಯೊಂದಿಗೆ ಹಬ್ಬವನ್ನುಆಚರಿಸಲಾಯಿತು. ಗುಡ್ಡದ ಸಂತ ಅಂತೋಣಿಯವರ ಕೃಪಾ ಆಶೀರ್ವಾದವನ್ನು ಪಡೆಯಲು ಗುರಗುಂಟ,ಯರಡೋಣ,ಹಟ್ಟಿ, ಹಿರೇನಗನೂರು ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತರು ಆಗಮಿಸಿದ್ದರು.ಗುರುಗುಂಟ ಧರ್ಮ ಕೇಂದ್ರದ ಕ್ಲೂನಿ ಮಠದ ಕನ್ಯಾಸ್ತ್ರಿಯರು ಗುನೇಲಿಯನ್ ಮಠದ ಕನ್ಯಾಸ್ತ್ರಿಯರು ಹಬ್ಬದ ದಿವ್ಯ ಬಲು ಪೂಜೆಯನ್ನು ಅರ್ಪಿಸಲು ಬಂದಂತಹ ಫಾದರ್ ಡಾಕ್ಟರ್ ಜಾನಪೀಟರ್ ಹಾಗೂ ಶಕ್ತಿನಗರದ ಧರ್ಮ ಕೇಂದ್ರ ಗುರುಗಳಾದ ಫಾದರ್ ಯಾಗಪ್ಪ ರವರು ಬಂದಂತಹ ಭಕ್ತಾದಿಗಳಿಗೆ  ಸಂತ ಅಂತೋನಿಯವರ ಪವಾಡಗಳ ಬಗ್ಗೆ ಸೊಗಸಾಗಿ ಪ್ರಬೋಧನೆ ಮಾಡಿದರು.ಹಬ್ಬದಲ್ಲಿ ಪಾಲ್ಗೊಳ್ಳಲು ನೆರೆಹೊರೆಯ ಗ್ರಾಮಗಳಾದ  ಯರಡೋಣ,ಹಟ್ಟಿ ಚಿನ್ನದ ಗಣಿ ಹಾಗೂ ಹಿರೇನಗನೂರು ಧರ್ಮ ಕೇಂದ್ರದ ಭಕ್ತಾದಿಗಳು ಸಂತ ಗುಡ್ಡದ ಅಂತೋನಿಯವರ ಮಹಾಪ್ರಸಾದವನ್ನು ಸ್ವೀಕರಿಸಿ ಆಶೀರ್ವಾದವನ್ನು ಪಡೆದು ಪುನೀತರಾದರು.

ಈಚನಾಳ ಗ್ರಾಮದ *ಅಮೃತ ಸರೋವರ* ಕೆರೆಯ ದಡದಲ್ಲಿ *ಅಂತರಾಷ್ಟ್ರೀಯ ಯೋಗ ದಿನಾಚರಣೆ*

ಇಮೇಜ್
ಲಿಂಗಸ್ಗೂರು-21 ಈಚಿನಾಳ ಗ್ರಾಮ ಪಂಚಾಯತಿಯ ಅಮೃತ ಸರೋವರ ಕೆರೆ ದಡದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ. ಮಾನ್ಯ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರು ರವರು ಮಾತನಾಡಿ ಪ್ರತಿ ವರ್ಷ ವಿಶ್ವ ಯೋಗ ದಿನವನ್ನು ಜೂನ್ 21ರಂದು ವಿಶ್ವದಾದ್ಯಂತ ಬಹಳ ಅದ್ದೂರಿಯಾಗಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವಿಶ್ವದಾದ್ಯಂತ ಹೆಚ್ಚಿನ ಜನರು ತಮ್ಮ ಮಾನಸಿಕ ಒತ್ತಡ ಮತ್ತು ದೈಹಿಕ ಸೌಂದರ್ಯಕ್ಕಾಗಿ ಯೋಗದ ಮೊರೆ ಹೋಗುತ್ತಿದ್ದಾರೆ.ಯೋಗ ಮನಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚೀನ ಕಲೆಯಾಗಿದೆ.ಭಾರತವು ಜಗತ್ತಿಗೆ ನೀಡಿದ ಒಂದು ದೊಡ್ಡ ಕೊಡುಗೆ ಯೋಗವಾಗಿದೆ. ಯೋಗವು 6000 ವರ್ಷಕ್ಕೂ ಹಳೆಯದಾದ ಭೌತಿಕ,ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ.ಪ್ರತಿ ವರ್ಷ ಯೋಗದ ದಿನಾಚರಣೆಯ ಯೋಗ ಧ್ಯಾನ ಸಭೆಗಳು, ಚರ್ಚೆಗಳು ಸಂಸ್ಕೃತಿಕ ಪ್ರದರ್ಶನಗಳು ಇತ್ಯಾದಿಗಳನ್ನು ಅಭ್ಯಾಸಿಸೋದರ ಮೂಲಕ ವಿಶ್ವದ ಬಹುತೇಕ ರಾಷ್ಟ್ರಗಳು ಯೋಗ ದಿನವನ್ನು ಆಚರಿಸಲಾಗುತ್ತಿದೆ. ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕರಡು ಪ್ರಸ್ತಾವನೆಯನ್ನು 2014 ಡಿಸೆಂಬರ್ ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ,ಭಾರತದ ಕಾಯಂ ಪ್ರತಿನಿಧಿಯಾಗಿರುವ ಅಶೋಕ್ ಕುಮಾರ್ ಮಂಡಿಸಿದ್ದರು. ವಿಶ್ವಸಂಸ್ಥೆಗೆ ಇದು ಇತಿಹಾಸದ ಕ್ಷಣವಾಗಿದ್ದು,ಅದರ ಸದಸ್ಯ ರಾಷ್ಟ್ರಗಳು ಅಭೂತ ಪೂರ್ವ ಬೆಂಬಲ ಸೂಚಿಸಿದ್ದು ವಿಶ್ವಸಂಸ್ಥೆಯ ೧೯೪೩ ರಾಷ್ಟ್ರಗಳ ಪೈಕಿ ೧೭೭ ದೇಶಗಳು ಅನುಮೋದನೆಯನ್ನು ನೀಡ

ಬೆಲ್ಲದಮರಡಿ : ಅಮೃತ ಸರೋವರ ದಡದಲ್ಲಿ ವಿಶ್ವ ಯೋಗ ದಿನಾಚರಣೆ

ಇಮೇಜ್
ಮಸ್ಕಿ : ದೇಶದ ಅನೇಕ ಋಷಿ ಮುನಿಗಳು, ಸಾಧಕರಿಂಧ ಸಿದ್ಧಿಸಿದ ಯೋಗಾಭ್ಯಾಸವು ವಿಶ್ವಕ್ಕೆ ಭಾರತ ನೀಡಿದ ಬಹುದೊಡ್ಡ ಕೊಡುಗೆ ಎಂದು ಅಡವಿಬಾವಿ (ಮಸ್ಕಿ) ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಾದ ಸಂತೋಷ್ ಹೇಳಿದರು. ಅಡವಿಬಾವಿ (ಮಸ್ಕಿ) ಗ್ರಾ.ಪಂ ಯ ಬೆಲ್ಲದಮರಡಿ ಗ್ರಾಮದ ಹೊರ ವಲಯದಲ್ಲಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಿದ ಅಮೃತ ಸರೋವರ ಕೆರೆ ದಡದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಕೇಂದ್ರ ಸರಕಾರ ಆದೇಶದ ಮೇರೆಗೆ ವಿಶ್ವ ಸಂಸ್ಥೆ ಸೇರಿ ವಿಶ್ವದ ಅನೇಕ ದೇಶಗಳು ಇಂದು ಯೋಗ ದಿನ ಆಚರಿಸುತ್ತಿವೆ. ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಯೋಗಾಭ್ಯಾಸ ಸಹಕಾರಿಯಾಗಿದೆ ಎಂದರು. ಸ್ಥಳೀಯ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ವಿರುಪನಗೌಡ ಮಾತನಾಡಿ, ಮಹಿಳೆಯರ ಸಬಲೀಕರಣಕ್ಕಾಗಿ ಯೋಗ ಎಂಬ ಧ್ಯೇಯವಾಕ್ಯದಡಿ ಈ ವರ್ಷ ಯೋಗ ದಿನ ಆಚರಿಸಲಾಗುತ್ತಿದೆ. ದಿನಪೂರ್ತಿ ಕುಟುಂಬ ನಿರ್ವಹಣೆ, ದುಡಿಮೆ, ಮಕ್ಕಳ ಲಾಲನೆ ಪಾಲನೆಯಲ್ಲಿ ನಿರತರಾಗಿರುವ ಮಹಿಳೆಯರು ಸದಾ ಒತ್ತಡದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ನಾವು ದಿನ ಪೂರ್ತಿ ದುಡಿಯುತ್ತೇವೆ ನಮಗೇಕೆ ಯೋಗ ಎಂದು ಉದಾಸೀನ ಮಾಡದೇ ಪ್ರತಿ ದಿನ ಬೆಳಗ್ಗೆ ಅಥವಾ ಸಂಜೆ ಒಂದರ್ಧ ಗಂಟೆ ಯೋಗಭ್ಯಾಸಕ್ಕೆ ಮೀಸಲಿಟ್ಟರೆ, ದೈಹಿಕ ಸದೃಢತೆ ಜೊತೆಗೆ ನೆಮ್ಮದಿ ಕಂಡುಕೊಳ್ಳಬಹುದಾಗಿದೆ. ಬದಲಾದ ಆಹಾರ ಶೈಲಿ, ಜೀವನ ಕ್ರಮದಿಂದ ಇಂದು ಅನೇಕ ರೋಗಗಳು ಕಾಣಿಸಿಕೊಳ್ಳುತ್ತಿವೆ. ಅದರಲ್ಲಿ

ಯಲಗಟ್ಟಾ ಪ್ರೌಢಶಾಲಾ ಮುಖ್ಯಗುರು ನಾಗನಗೌಡ ಅಮಾನತ್ತು ಗೆ ಆಗ್ರಹ.

ಇಮೇಜ್
ಲಿಂಗಸ್ಗೂರು : ರೋಡಲಬಂಡ(ತಾವಗ) ಗ್ರಾಮ ಪಂಚಾಯಿತಿಯ ಯಲಾಗಟ್ಟಾ ಗ್ರಾಮದ  ಸರ್ಕಾರಿ ಪ್ರೌಢಶಾಲೆಯ  ಮುಖ್ಯ ಗುರುಗಳಾದ ನಾಗನಗೌಡ ಇವರು ಶಾಲೆಗೆ ನಿರಂತರ ಗೈರಾಗುತ್ತಿರುವ ನಾಗನಗೌಡ ಇವರನ್ನು ಸೇವೆಯಿಂದ ಅಮಾಮಾತಿಗೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಲಿಂಗಸ್ಗೂರು ತಾಲೂಕು ಸಮಿತಿ ನೇತೃತ್ವದಲ್ಲಿ  ಇಂದು ಶಾಲೆಯ ಮುಂದೆ ಅನಿರ್ಧಿಷ್ಟವಧಿ ಧರಣಿ ನಡೆಸಲಾಯಿತು. ಧರಣಿ ಸ್ಥಳಕ್ಕೆ ಬಿಇಓ ಬೇಟೆ ನೀಡಿದರು.ನಾವು ಮನವಿ ಪತ್ರ  ನೀಡುವುದಿಲ್ಲ.ಬದಲಾಗಿ ಡಿಡಿಪಿಐ ಸ್ಥಳಕ್ಕೆ ಬರಲು ಪಟ್ಟು ಹಿಡಿಯಲಾಯಿತು. ಅಲ್ಲಿಯವರೆಗೆ ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುವುದು ಎಂದರು. ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ಧರಣಿ ಕುರಿತು ಮಾತನಾಡಿ ಮುಖ್ಯಗುರುಗಳಾದ ನಾಗನಗೌಡ ಅವರು 2 ವರ್ಷಗಳಿಂದ  ಶಾಲೆಗೆ ನಿರಂತರವಾಗಿ ಅನಧಿಕೃತವಾಗಿ ಗೈರಾಗುತ್ತಿದ್ದು,ಶಾಲೆಯ ಮಕ್ಕಳ ವಿದ್ಯಾಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಈ ಬಗ್ಗೆ ಅನೇಕ ಬಾರಿ ಎಸ್ಎಫ್ಐ,ಹಾಗೂ ಎಸ್ ಡಿಎಂಸಿ ಮತ್ತು ಅನೇಕ ಸಂಘಟನಗಳು ದೂರು ನೀಡಿದರೂ ಇಲಾಖೆ ರಾಜಕೀಯ ಒತ್ತಡಕ್ಕೆ ಮಣಿದು ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 2 ವರ್ಷಗಳಿಂದಲೂ ಅವರು ಯಲಗಟ್ಟಾ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಮುಖ್ಯ ಗುರುಗಳಾಗಿ ಬಂದ ಮೇಲೆ ನಿರಂತರ ಗೈರಾಗಿದ್ದಾರೆ.ಕೇವಲ ಧ್ವಜಾರೋಹಣ ಹಾಗೂ ಕೆಲವೊಂದು ಜಯಂತಿಗಳ ಆಚರಿಸಲು ಮಾತ್ರ ಹಾಜರಿರುತ್ತಾರೆ. ಕೆಲ ಹೊತ

ರೇಣುಕ ಸ್ವಾಮಿ ಕೊಲೆಮಾಡಿರುವುದು ಖಂಡನಾರ್ಹ

ಇಮೇಜ್
ಕೊಟ್ಟೂರು : ಬೇಡ ಜಂಗಮ ಸಮಾಜದ ಚಿತ್ರದುರ್ಗದ ರೇಣುಕಸ್ವಾಮಿಯನ್ನು ಕಿಡ್ನಾಪ್ ಮಾಡಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಶೆಡ್‌ನಲ್ಲಿ ಚಿತ್ರ ಹಿಂಸೆ ಮಾಡಿ ಹತ್ಯೆ ಮಾಡಿರುವುದು ಖಂಡನಾರ್ಹ. ರೇಣುಕಾ ಸ್ವಾಮಿ ಇವರನ್ನು ಕೊಲೆಮಾಡಿದ ಚಿತ್ರ ನಟ ದರ್ಶನ್ ಮತ್ತು ಅವರ ತಂಡದವರನ್ನು  ತ್ವರಿತ ಗತಿಯಲ್ಲಿ ಕಠಿಣ ಶಿಕ್ಷೆ ನೀಡಬೇಕು ಎಂದು ಕೊಟ್ಟೂರು ತಾಲೂಕು ಬೇಡ ಜಂಗಮ ಮತ್ತು ರೈತ ಸಂಘಟನೆಗಳವರು ಬುಧುವಾರ ಆಗ್ರಹಿಸಿದರು. ಕೊಟ್ಟೂರು ತಾಲ್ಲೂಕು ಬೇಡ ಜಂಗಮ ಮತ್ತು ರೈತ ಸಂಘಟನೆಗಳವರು ಸರ್ಕಾರವನ್ನು ಒತ್ತಾಯಿಸುವ ಮನವಿ ಪತ್ರವನ್ನು ತಾಲ್ಲೂಕು ಆಡಳಿತದ ಉಪ ತಹಶೀಲ್ದಾರ್‌ರವರಿಗೆ ಸಲ್ಲಿಸಿ ನಂತರ ಅವರು ಮಾತನಾಡಿದರು. ರೇಣುಕ ಸ್ವಾಮಿಯವರು ಕುಟುಂಬಕ್ಕೆ ಆದಾರವಾಗಿದ್ದರು. ಇವರನ್ನು ಕಳೆದುಕೊಂಡು ಅವರ ಕುಟುಂಬ ಕಂಗಲಾಗಿದೆ ಅವರ ಮನೆಯ ಸದಸ್ಯರಿಗೆ ನ್ಯಾಯ ಒದಗಿಸಿಬೇಕೆಂದರು . ರೇಣುಕಸ್ವಾಮಿ ಹತ್ಯೆ ಮಾಡಿರುವ ಆರೋಪಿಗಳಿಗೆ ತ್ವರಿತ ಗತಿಯಲ್ಲಿ ಖಠಿಣ ಶಿಕ್ಷೆ ಸಿಗುವತ್ತೆ ಆಗಬೇಕೆಂದು ಅವರ ಒತ್ತಾಯಿಸಿದರು. ಎನ್. ಭರಮಣ್ಣ ಮಾತನಾಡಿ ಚಿತ್ರದುರ್ಗದ ಮೃತ ರೇಣುಕಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಆತನ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಮತ್ತು ಪವಿತ್ರಗೌಡ  ದರ್ಶನ್ ಮತ್ತು ಗ್ಯಾಂಗ್ ಕಾನೂನು ಪ್ರಕಾರ ___ ಸರ್ಕಾರ ಪಾರದರ್ಶಕವಾಗಿ ಮೃತ ರೇಣುಕಸ್ವಾಮಿ ಕುಟುಂಬಕ್ಕೆ ಬೆಂಬಲಿಸಿ ನ್ಯಾಯ ಒದಗಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಟ್ಟ

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಇಂದು ಡಿಗ್ರಿ ಕಾಲೇಜಿನ ಪ್ರಾಂಶುಪಾಲರು ಆಯ್ಕೆ

ಇಮೇಜ್
೨೦ ಕೊಟ್ಟೂರು ೦೩ ವಿಜಯನಗರ ಜಿಲ್ಲೆ ಕೊಟ್ಟೂರು ಇಂದು ಡಿಗ್ರಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಡಾ.ವಾಗೀಶಯ್ಯ ಪಿ.ಎಂ. ಇವರನ್ನು ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಠ್ ಸದಸ್ಯರಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಿದೆ.  ಇವರನ್ನು ದಿನಾಂಕ :೧೬-೦೬-೨೦೨೪ ರಿಂದ ಅನ್ವಯಿಸುವಂತೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಮುಂದುವರೆಯಲಿದ್ದಾರೆ.  ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಆಯ್ಕೆಯಾಗಿದ್ದಕ್ಕೆ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು ಆಡಳಿತಮಂಡಳಿ, ಸಿಬ್ಬಂದಿ ವರ್ಗ ಹಾಗೂ ಸಮಸ್ತ ವಿದ್ಯಾರ್ಥಿ ಬಳಗ ಅಭಿನಂದನೆಗಳನ್ನು ಸಲ್ಲಿಸದರು

ಆರುಂಧತಿ ರಾಯ್ ಮತ್ತಿತರರನ್ನು ಸುಳ್ಳು ಕೇಸ್ ದಾಖಲಿಸುತ್ತಿರುವುದು ಸಿಪಿಐಎಂಎಲ್ ಲಿಬರೇಶನ್ ಪಕ್ಷ ಖಂಡನೆ

ಇಮೇಜ್
ಖ್ಯಾತ ಲೇಖಕಿ ಅರುಂಧತಿ ರಾಯ್ ಮತ್ತು ಶೇಕ್ ಶೋಖಾತ್ ಹುಸೇನ್ ಮಾಜಿ ಪ್ರಾಧ್ಯಾಪಕ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು (ಯುಎಪಿಎ) ಅಡಿಯಲ್ಲಿ ಕಾನೂನು ಕ್ರಮಕ್ಕೆ ಅವಕಾಶ ನೀಡಿರುವುದಕ್ಕೆ ಸಿಪಿಐ (ಎಂಎಲ್) ಲಿಬರೇಶನ್ ಖಂಡನೆ ಕೊಟ್ಟೂರು: ಭಯೋತ್ಪಾದನಾ-ವಿರೋಧಿ ಪ್ರಕರಣದಲ್ಲಿ ಮಾನವ ಹಕ್ಕುಗಳ ಹೋರಾಟಗಾರರನ್ನು ದುರುದ್ದೇಶಪೂರ್ವಕವಾಗಿ ತಳುಕುಹಾಕಿ ಆರುಂಧತಿ ರಾಯ್ ಮತ್ತಿತರರನ್ನು ಸುಳ್ಳು ಕೇಸ್ ದಾಖಲಿಸುತ್ತಿರುವುದು ಸಿಪಿಐಎಂಎಲ್ ಲಿಬರೇಶನ್ ಬಲವಾಗಿ ಖಂಡಿಸಿ ಗುರುವಾರ ಕೊಟ್ಟೂರು ಉಪ ತಹಸಿಲ್ದಾರ್ ಅನ್ನದಾನೇಶ್ವರ  ಅವರಿಗೆ ಮನವಿ ಪತ್ರ ಸಲ್ಲಿಸಿದರು  ಆರುಂಧತಿ ರಾಯ್ ಅವರು ಸಂವಿಧಾನ ವಿರೋಧಿ, ಜನವಿರೋಧಿ ನೀತಿಗಳು, ಅನ್ಯಾಯಗಳ ವಿರುದ್ಧ ನಿರಂತರ ಧ್ವನಿ ಎತ್ತುತ್ತಾ ಬಂಧವರು, ದಮನಿತರ ಮೇಲೆ ದೇಶಾದ್ಯಂತ ನಡೆಯುತ್ತಿರುವ ದೌರ್ಜನ್ಯಗಳನ್ನು ಗುರುತಿಸಿ ಅವುಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸಿ ಜನವಿರೋಧಿ, ಅಪ್ರಜಾತಾಂತ್ರಿಕ ಆಳುವ ವರ್ಗಗಳ ನಿಜಬಣ್ಣವನ್ನು ಬಯಲುಗೊಳಿಸಿದ್ದಾರೆ. ದೇಶದಲ್ಲಿ ಜನಪರ ಹೋರಾಟಗಳನ್ನು ಸಂಘಟಿಸುವ ಯತ್ನ ನಡೆಸಿದರೆ, ಅವರ ಸ್ಥಿತಿ ಏನಾಗುತ್ತದೆ ಎನ್ನುವುದನ್ನು ಜನಪರ ಚಳಿವಳಿಗಾರರಿಗೆ ಎಚ್ಚರಿಕೆಯ ರೂಪದಲ್ಲಿ ತಿಳಿಸುವ ಉದ್ದೇಶದಿಂದ ಸರಣಿ ಬಂಧನ ನಡೆದಿದೆ. ಅಲ್ಲದೇ ದೇಶದ ಜನಪರವಾದ ಜನ ಚಳವಳಿಯನ್ನು ಬಗ್ಗು ಬಡಿಯುವುದು ಸರಕಾರಗಳ ದುರುದ್ದೇಶವಾಗಿದೆ. 14 ವರ್ಷಗಳ ಹಿಂದಿನ ಪ್ರಕರಣದಲ್ಲಿ ಲೇಖಕಿ ಅರುಂಧತಿ ರಾಯ್ ಮತ್ತು

ವಿಜಯಾನಂದ ಎಸ್ ಕಾಶಪ್ಪನವರು ಉಜ್ಜಯಿನಿ ಪೀಠಕ್ಕೆ ಭೇಟಿ

ಇಮೇಜ್
೨೦ ಕೊಟ್ಟೂರು ೦೨ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಉಜ್ಜಯಿನಿ ಪೀಠದ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಥೇಶ್ವರ ಶ್ರೀಶ್ರೀಶ್ರೀ ೧೦೦೮ ಜಗದ್ಗುರು ಅಭಿನವ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಅವರನ್ನು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಹುನಗುಂದ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ವಿಜಯಾನಂದ ಎಸ್ ಕಾಶಪ್ಪನವರ ಅವರು ಭೇಟಿ ಶ್ರೀ ಜಗದ್ಗುರು ಮಹಾ ಸನ್ನಿಧಿಯವರ ಆಶೀರ್ವಾದ ಪಡೆದರು.

*ಎರಡನೇ ಬಾರಿಗೆ ಶ್ರೀ ಬಿ. ದೊಡ್ಡಬಸಪ್ಪ ರೆಡ್ಡಿ ರಾಜ್ಯಾಧ್ಯಕ್ಷರು.*

ಇಮೇಜ್
  *ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರಸಂಘ (ರಿ) ದಾವಣಗೆರೆ.ಕ್ಕೆ ಕೊಟ್ಟೂರು ದಿನಾಂಕ: 16.06.2024 ರಂದು ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ಕರೆದ ರಾಜ್ಯ ಕಾರ್ಯಕಾರಿಣಿ ಸಭೆಯ ಅಚ್ಚುಕಟ್ಟಾದ ನಿರ್ವಹಣೆಗಾಗಿ ಹಾವೇರಿ ಜಿಲ್ಲಾಧ್ಯಕ್ಷರು ಹಾಗೂ ಹಾವೇರಿ ಜಿಲ್ಲೆಯ ಸಮಸ್ತ ಗ್ರಾಮ ಆಡಳಿತ ಅಧಿಕಾರಿಗಳಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಸಂಘಟನಾತ್ಮಕ ಸೇವಾ ಮನೋಭಾವದಿಂದ ಮತ್ತೊಮ್ಮೆ ಮಾತೃಸಂಘದ ಗತವೈಭವವನ್ನು ಸಾರುವ ನಿಟ್ಟಿನಲ್ಲಿ, ಮತ್ತೊಮ್ಮೆ ರಾಜ್ಯಾಧ್ಯಕ್ಷನಾಗಿ ಮುಂದುವರೆಯಲು ಅವಕಾಶ ನೀಡಿ, ಸೇವೆ ಸಲ್ಲಿಸಲು ಅನುವು ಮಾಡಿಕೊಟ್ಟು ಸಂಘದ ಇತಿಹಾಸದಲ್ಲಿ ಈ ದಿನವನ್ನು ಅಚ್ಚಳಿಯದಂತೆ ಛಾಪು ಮೂಡಿಸಿದ ಎಲ್ಲಾ ಜಿಲ್ಲಾಧ್ಯಕ್ಷರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಕಾರ್ಯಕಾರಿಣಿ ಸಭೆಗೆ ಆಗಮಿಸಿ ತಮ್ಮ ಸಂಘಟನಾ ಬದ್ಧತೆಯನ್ನು ತೋರಿದ ರಾಜ್ಯ ಸಂಘದ ಪದಾಧಿಕಾರಿಗಳು, ಜಿಲ್ಲಾ ಸಂಘದ ಪದಾಧಿಕಾರಿಗಳು, ತಾಲ್ಲೂಕು ಅಧ್ಯಕ್ಷರುಗಳು, ತಾಲ್ಲೂಕು ಪದಾಧಿಕಾರಿಗಳು ಹಾಗೂ ಸಮಸ್ತ ಗ್ರಾಮ ಆಡಳಿತ ಅಧಿಕಾರಿಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿದರು.

ವಿವಿಧ ಗ್ರಾಪಂಗಳಿಗೆ ಸಹಾಯಕ ನಿರ್ದೇಶಕರಾದ ಶಿವಾನಂದ ರಡ್ಡಿ ಭೇಟಿ

ಇಮೇಜ್
ಮಸ್ಕಿ : ತಾಲೂಕಿನ ಗುಡದೂರು, ಕೊಳಬಾಳ, ಗೌಡನಬಾವಿ ಗ್ರಾಮ ಪಂಚಾಯತಿಗೆ ಶುಕ್ರವಾರ ತಾ.ಪಂ ಸಹಾಯಕ ನಿರ್ದೇಶಕರಾದ (ಗ್ರಾಮೀಣ ಉದ್ಯೋಗ) ಶಿವಾನಂದರಡ್ಡಿ ಭೇಟಿ ನೀಡಿ ವಿವಿಧ ಕಾಮಗಾರಿ ಪರಿಶೀಲಿಸಿದರು. ಬೇಸಿಗೆ ಅವಧಿಯಲ್ಲಿ ಸ್ಥಳೀಯ ಕೂಲಿಕಾರರ ಬೇಡಿಕೆ ಅನುಸಾರ ಕೂಲಿ ಕೆಲಸ ಒದಗಿಸಿ ಗುಳೆ ತಡೆಯುವಲ್ಲಿ ಗ್ರಾ.ಪಂಗಳ ಪಾತ್ರ ಮಹತ್ವದಾಗಿತ್ತು. ಕೆಲ ದಿನಗಳಿಂದ ತಾಲೂಕಿನಲ್ಲಿ ಮುಂಗಾರು ಮಳೆ ಚುರುಕು ಪಡೆದಿದ್ದು, ಕೂಲಿಕಾರರು ಹೊಲದ ಕೆಲಸಗಳಲ್ಲಿ ನಿರತರಾಗಿದ್ದಾರೆ. ಪ್ರಸಕ್ತ ವರ್ಷದ ಸಾಮಗ್ರಿ ಕಾಮಗಾರಿಗಳನ್ನು ಕೂಡಲೇ ಆರಂಭಿಸಿ, ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದರು.  ಗುಡದೂರು ಗ್ರಾ.ಪಂ ಯ ಪರಾಪುರದಲ್ಲಿ ನಿರ್ಮಾಣ ಹಂತದಲ್ಲಿರುವ ದನದಶೆಡ್‌, ಹೈಟೆಕ್‌ ಟಾಯ್ಲೆಟ್‌, ಕೊಳಬಾಳ ಗ್ರಾ.ಪಂಯ ಕಣ್ಣೂರಿನ ಸ್ಮಶಾನ ಅಭಿವೃದ್ಧಿ ಕಾಮಗಾರಿ, ಕೊಳಬಾಳದ ಸಿಸಿ ರಸ್ತೆ, ಹೈಟೆಕ್‌ ಟಾಯ್ಲೆಟ್‌, ಗೌಡನಬಾವಿಯ ಸಿಸಿ ರಸ್ತೆ ಪರಿಶೀಲಿಸಿದರು. ಈ ವೇಳೆಯಲ್ಲಿ ಗುಡದೂರು ಗ್ರಾಪಂ ಪಿಡಿಒ ಮಲ್ಲಯ್ಯ, ತಾಂತ್ರಿಕ ಸಂಯೋಜಕರಾದ ಅಶೋಕ್‌, ತಾಂತ್ರಿಕ ಸಹಾಯಕ ಅಭಿಯಂತರರಾದ ರಾಘವೇಂದ್ರ, ಬಿಎಫ್ಟಿಗಳು ಇತರರಿದ್ದರು.

ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಹೋರಾಟಕ್ಕೆ ಕೊಪ್ಪಳ ಜಿಲ್ಲೆ ಬೆಂಬಲಿಸಲು ಮನವಿ : ಡಾ.ಕಳಸ

ಇಮೇಜ್
 ವರದಿ - ಮಂಜುನಾಥ್ ಕೋಳೂರು ಕೊಪ್ಪಳ. ಕೊಪ್ಪಳ :- ರಾಯಚೂರಿನಲ್ಲಿಯೇ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಏಮ್ಸ್ ಅನ್ನು ಸ್ಥಾಪಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಕಳೆದ 759 ದಿನಗಳಿಂದ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ರಾಯಚೂರಿನಲ್ಲಿ ನಡೆಯುತ್ತಿದೆ ಈ ಹೋರಾಟಕ್ಕೆ ಕೊಪ್ಪಳ ಜಿಲ್ಲೆ ಬೆಂಬಲಿಸುವಂತೆ ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಡಾ.ಬಸವರಾಜ ಕಳಸ ಮನವಿ ಮಾಡಿದರು.  ಅವರು ರವಿವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿದ್ದೇಶಿಸಿ ಮಾತನಾಡಿ ಈ ಹಿಂದೆ ಡಾ .ಡಿ .ಎಂ ನಂಜುಂಡಪ್ಪ ವರದಿಯ ಶಿಫಾರಸ್ಸಿನಂತೆ ಪ್ರಾದೇಶಿಕ ಅಸಮತೋಲನೆ ನಿವಾರಣೆಗಾಗಿ ರಾಯಚೂರಿನಲ್ಲಿ ಐಐಟಿ ಭಾರತೀಯ ತಂತ್ರಜ್ಞಾನ ಸಂಸ್ಥೆ ಸ್ಥಾಪನೆ ಆಗಬೇಕಾಗಿತ್ತು, ಆದರೆ ನಮ್ಮ ಸುದೀರ್ಘ ಹೋರಾಟದ ಹೊರತಾಗಿಯೂ ಕೇಂದ್ರ ಸರ್ಕಾರದಲ್ಲಿ ಪ್ರಭಾವಿ ರಾಜಕಾರಣಿಗಳ ಕುತಂತ್ರದಿಂದ ಅದು ಧಾರವಾಡದಲ್ಲಿ ಸ್ಥಾಪನೆಯಾಯಿತು. ಇದು ನಮ್ಮ ಕಲ್ಯಾಣ ಕರ್ನಾಟಕಕ್ಕೆ ಮಾಡಿದ ಮಹಾ ದ್ರೋಹ. ಕೇಂದ್ರ ಸರ್ಕಾರವೇ ಸಂವಿಧಾನಕ್ಕೆ ತಿದ್ದುಪಡಿ ತಂದು 371 ಜೆ .ಅನ್ವಯ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದೆ. ಆದರೆ ವಿಶೇಷವಾದ ಯಾವೊಂದು ಯೋಜನೆಗಳು ಇದುವರೆಗೂ ಜಾರಿಯಾಗಲಿಲ್ಲ .ಈಗಲಾದರೂ ರಾಯಚೂರಿನಲ್ಲಿ ಕೇಂದ್ರ ಸರಕಾರ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಸ್ಥಾಪನೆ ಮಾಡಲೇಬೇಕು . ಕೇಂದ್ರ ಸರ್ಕಾರವೇ ಘೋಷಿಸಿದಂತೆ ರಾಯಚೂರು ಜಿಲ್ಲೆಯನ್ನು ಮಹತ್ವಕಾಂಕ್ಷ

ಪ್ರತಿಭಾ ಪುರಸ್ಕಾರಕ್ಕೆ ಅರ್ಜಿಆಹ್ವಾನ : ಹನುಮಂತಪ್ಪ ಕೌದಿ

ಇಮೇಜ್
ವರದಿ - ಮಂಜುನಾಥ್ ಕೋಳೂರು ಕೊಪ್ಪಳ ಕೊಪ್ಪಳ, :- ಹಾಲುಮತ ಮಹಾಸಭಾದಿಂದ ಕೊಪ್ಪಳ ತಾಲೂಕಿನ ಕುರುಬ ಸಮಾಜದ ಪ್ರತಿಭಾನ್ವಿತ 2023- 24ನೇ ಸಾಲಿನ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ಹನುಮಂತಪ್ಪ ಕೌದಿ ಹೇಳಿದರು. ಅವರು ಮಂಗಳವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿದ್ದೇಶಿಸಿ ಮಾತನಾಡಿ ಕೊಪ್ಪಳ ತಾಲೂಕಿನ ಕುರುಬ ಸಮಾಜದ ಪ್ರತಿಭಾನ್ವಿತ 2023-24 ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಶೇ. 85%ಕ್ಕಿಂತ ಹೆಚ್ಚು ಅಂಕ ಪಡೆದ ಮತ್ತು ದ್ವಿತೀಯ ವರ್ಷದ ಪಿಯುಸಿಯ ವಾಣಿಜ್ಯ.ಕಲಾ & ಶಿಕ್ಷಣ ವಿಭಾಗದಲ್ಲಿ ಶೇ. 85%ಕ್ಕಿಂತ ಹೆಚ್ಚು ಅಂಕ ಪಡೆದ ಮತ್ತು ವಿಶೇಷವಾಗಿ ದ್ವಿತೀಯ ವರ್ಷದ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ಶೇ. 80%ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಅರ್ಜಿ ಆಹ್ವಾನಿಸಿದ್ದು ಆಸಕ್ತರು ಅರ್ಜಿ ಪ್ರತಿಯೊಂದಿಗೆ 1.ಅಂಕಪಟ್ಟಿ 2) ಜಾತಿ ಪ್ರಮಾಣ ಪತ್ರ ಅಥವಾ ವರ್ಗಾವಣೆ ಪ್ರಮಾಣ ಪತ್ರ 3) ಎರಡು ಪಾಸ್ ಪೋರ್ಟ್ ಫೋಟೋ ದೊಂದಿಗೆ ಅರ್ಜಿಯನ್ನು ಶ್ರೀಲಕ್ಷ್ಮೀನಾರಾಯಣ ಜೆರಾಕ್ಸ್ ಸೆಂಟರ್-9611083605. ತಿಕೋಟಿಕರ್ ವೆಟ್ರೋಲ್ ಬಂಕ್ ಹತ್ತಿರ ಸೆಂಟ್ರಲ್ ಬಸ್ ನಿಲ್ದಾಣ ಕೊಪ್ಪಳ ಇಲ್ಲಿಗೆ ಇದೇ ತಿಂಗಳು ಜೂನ್ 19 ರೊಳಗಾಗಿ ಅರ್ಜಿ ಸಲ್ಲಿಸಬೇಕು ಎಂದು ತ

ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿ ಐತಿಹಾಸಿಕ

ಇಮೇಜ್
೦೯ ಕೊಟ್ಟೂರು ೦೨ ನರೇಂದ್ರ ಮೋದಿ  ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ  ೨೦೨೪ರ ಎನ್‌ಡಿಎ ಮೈತ್ರಿಕೂಟವು ೨೯೩ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಸ್ಪಷ್ಟ ಬಹುಮತ ಪಡೆದಿದ್ದು, ಟಿಡಿಪಿ, ಜೆಡಿಯು, ಎಲ್‌ಜೆಪಿ, ಜೆಡಿಎಸ್ ಸೇರಿ ಹಲವು ಮಿತ್ರಪಕ್ಷಗಳೊಂದಿಗೆ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುತ್ತಿದೆ.  ಮೋದಿ ಪ್ರಮಾಣವಚನ ಕಾರ್ಯಕ್ರಮದ ನಿಮಿತ್ತ ಕೊಟ್ಟೂರಿನಲ್ಲಿ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದರು. ಪಟ್ಟಣದ ಶ್ರೀಗುರು ಕೊಟ್ಟೂರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ದ್ವಾರಬಾಗಿಲಿನಿಂದ ಪ್ರಾರಂಭಿಸಿ ಮುಖ್ಯ ರಸ್ತೆ, ಉಜ್ಜಯಿನಿ ರಸ್ತೆ, ರೇಣುಕ ಟಾಕೀಸ್ ರಸ್ತೆ, ಬಸ್‌ನಿಲ್ದಾಣದ ಮುಂಬಾಗ , ಎಪಿಎಂಸಿ ಮುಖಾಂತರ ಮರಿಕೊಟ್ಟೂರೇಶ್ವರ ದೇವಸ್ಥಾನದವರೆಗೆ ಬೈಕ್ ರಾಲಿ ಕೈಗೊಂಡರು. ಮೋದಿ ಪ್ರಧಾನಿ ಮೂರನೇ ಅವಧಿಯ ವಿಜಯೋತ್ಸವ ಬಿಜೆಪಿ ಕಾರ್ಯಕರ್ತರು ಆಚರಿಸಿ ಸಹಿ ಹಂಚಿದರು.. ಸAದರ್ಭದಲ್ಲಿ ಬಿಜೆಪಿ ಘಟಕದ ಅಧ್ಯಕ್ಷ ಪಿ.ಭರಮನಗೌಡ , ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಕೆ.ಎಸ್.ಈಶ್ವರಗೌಡ, ಬೋರ್‌ವೆಲ್ ತಿಪ್ಪೇಸ್ವಾಮಿ, ಅಂಗಡಿ ಪಂಪಾಪತಿ, ಶಿವಪ್ರಕಾಶ್ , ಜಿ.ಸಿದ್ದಯ್ಯ, ಗುರ, ಅಭಿಷೇಕ್, ಡೊಂಬಳ ಮಲ್ಲಿಕಾರ್ಜುನ, ಕೊನಾಪುರ ಬಸವರಾಜ, ಸೋಮಶೇಖರಗೌಡ ಮತ್ತಿತರರು ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಕೊಟ್ -೧ ಜವಾಹರಲಾಲ್ ನೆಹರೂ ನಂತರ ಮೂರನೇ ಬಾರಿಗೆ ಪ್ರಧಾನಿಯಾಗುತ್ತಿರುವ ಮೊದಲ ನಾಯ

ಅನೇಕತೆಯಲ್ಲಿ ಐಕ್ಯತೆಯನ್ನು ಕಾಣುವಂತ ಭ್ರಾತೃತ್ವದ ರಾಷ್ಟç ಭಾರತ-ಉಜ್ಜಿನಿ ಶ್ರೀಗಳು

ಇಮೇಜ್
೦೯ ಕೊಟ್ಟೂರು -೦೧ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತ ರಾಷ್ಟçವಾದಲ್ಲಿ ದಾಖಲೆಯ ಮೂರನೇ ಭಾರಿಗೆ ಪ್ರಾಧಾನಿಯಾಗುತ್ತಿರುವ ಶ್ರಿಯುತ ನರೇಂದ್ರ ಮೋದಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳು.  ಈ ದೇಶ ಸನಾತನಾವದ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರತಕ್ಕAತಹ ರಾಷ್ಟç ಹಲವು ಮತ ಧರ್ಮ ಜಾತಿ ಇವುಗೆಳ್ಳವುಗಳ ಮದ್ಯೆ ವಿವಿದತೆಯಲ್ಲಿ ಏಕತೆಯನ್ನು ಅನೇಕತೆಯಲ್ಲಿ ಐಕ್ಯತೆಯನ್ನು ಕಾಣುವಂತ ಬ್ರಾತೃತ್ವದ ರಾಷ್ಟç ಭಾರತ.  ಇಂತಹ ಬಹುವಿದ ಆರಾದನೆಯ ಬಹು ಸಂಸ್ಕೃತಿಯ ದೇಶದಲ್ಲಿ ಆಡಳಿತದ ಚುಕ್ಕಾಣಿಯನ್ನು ಮೂರನೇ ಬಾರಿಗೆ ಹಿಡಿಯುತ್ತಿರುವುದು ಅತಿ ದೊಡ್ಡ ದಾಖಲೆಯ ಸಂಗತಿ ನರೇಂದ್ರ ಮೋದಿಯವರಿಗೆ ತಮ್ಮದೇ ಆದ ಅನೇಕ ಕನಸುಗಳು ಇವೆ. ಅದಕ್ಕೆ ಎಲ್ಲಾ ಕನಸುಗಳು ಈ ಮೂರನೇ ಅವಧಿಯಲ್ಲಿ ಸಹಕಾರಗೊಳ್ಳಲಿ ಅದಕ್ಕೆ ಬೇಕಾದಂತಹ ಎಲ್ಲಾ ಜಂಗಾ ಬಲವನ್ನು ಆತ್ಮ ಬಲವನ್ನು ಮನೋಬಲವನ್ನು ಆ ಭಗವಂತ ಅವರುಗೆ ನೀಡಲಿ ಆಯುಷ್ಯು ಆರೋಗ್ಯ ಭಾಗ್ಯ ಅವರಿಗೆ ಪ್ರಾಪ್ತಿಯಾಗಲಿ ಅನಂತ ಸನ್ಮಂಗಳನ್ನ ಜಗದ್ಗುರು ಪಂಚಾರ್ಯರು ಅನುಗ್ರಹಿಸಲಿ ಅನ್ನುವಂತಹ ಶುಭಹಾರೈಕೆಗಳನ್ನು ಈ ಸಂದರ್ಭದಲ್ಲಿ ನಾವು ಅವರಿಗೆ ಅಭಿನಂದನೆಗಳೊAದಿ ಆರ್ಶಿವಾದ ಮಾಡತಕ್ಕಂತವರಾಗಿದ್ದೇವೆ.

ಬೆಸ್ಟ್ ಪಬ್ಲಿಕ್ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಇಮೇಜ್
  ಮಸ್ಕಿ : ತಾಲ್ಲೂಕಿನ ಹಾಲಾಪೂರದ ಬೆಸ್ಟ್ ಪಬ್ಲಿಕ್ ಶಾಲೆಯಲ್ಲಿ ವೈದೇಹಿ ಆಸ್ಪತ್ರೆ ಬೆಂಗಳೂರು, ದಿ ಬೆಸ್ಟ್ ಎಜ್ಯುಕೆಷನ್ ಟ್ರಸ್ಟ್ ಹಾಗೂ ಮಾರುತಿ ಆಪ್ಟಿಕಲ್ಸ್ ಮಸ್ಕಿ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಜರುಗಿತು. ನಂತರ ಮಾತನಾಡಿದ ವೈದೇಹಿ ಆಸ್ಪತ್ರೆ ಬೆಂಗಳೂರು ನ ವೈದ್ಯರಾದ ಮಲ್ಲಿಕಾರ್ಜುನ ಹಚ್ಚೊಳ್ಳಿ ಯವರು ಈ ಒಂದು ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಕಣ್ಣು, ನರರೋಗ, ಹೃದಯ ಸಂಬಂಧಿ ಖಾಯಿಲೆ, ಎಲುಬು ಕಿಲುಗಳ ಸಮಸ್ಯೆ, ಕಿಡ್ನಿಯಲ್ಲಿ ಕಲ್ಲು ಇನ್ನೂ ಮುಂತಾದ ಖಾಯಿಲೆ ಸಂಬಂಧಿಸಿದ ರೋಗಗಳ ಬಗ್ಗೆ ತಪಾಸಣೆ ಮಾಡಿ, ಹೆಚ್ಚಿನ ತೊಂದರೆ ಕಂಡುಬಂದರೆ ಬೆಂಗಳೂರು ನಲ್ಲಿ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗುವುದು ಎಂದು ಹೇಳಿದರು, ನಂತರ ಶಿಬಿರದಲ್ಲಿ ನೂರಕ್ಕೂ ಅಧಿಕ ರೋಗಿಗಳು ತಪಾಸಣೆಗೆ ಒಳಗಾದರು. ಈ ಸಂದರ್ಭದಲ್ಲಿ ಬೆಂಗಳೂರಿನ ವೈದೇಹಿ ಆಸ್ಪತ್ರೆ ವೈದರು,ಬಳ್ಳಾರಿ ಕಣ್ಣಿನ ವೈದ್ಯರಾದ ಡಾ.ವಿರೇಶ, ಬೆಸ್ಟ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಬಿ ಗದ್ದೆಪ್ಪ, ಆಡಳಿತಾದಿಕಾರಿ ಕೆ ಶೇಖರಪ್ಪ, ಕಾರ್ಯದರ್ಶಿ ಸಿದ್ಧಲಿಂಗಪ್ಪ,ಮುಖ್ಯಗುರು ರವಿಕುಮಾರ ತೋರಣದಿನ್ನಿ, ಕೃಷ್ಣಕುಮಾರ, ಕುಮಾರ ಮಸ್ಕಿ, ದೇವೆಂದ್ರಕುಮಾರ ಇನ್ನಿತರರು ಇದ್ದರು.

ಶಿಕ್ಷಣ ಪ್ರೇಮಿ ಸಾಮಾಜಿಕ ಕಳಕಳಿಯ ಸರಳ ಸಜ್ಜನಿಕೆಯ ವ್ಯಕ್ತಿ ಮೌನುದ್ದಿನ್ ಬೂದಿನಾಳ .

ಇಮೇಜ್
ಲಿಂಗಸ್ಗೂರು : ತಾಲೂಕಿನ ಹಟ್ಟಿ ಸಮೀಪದ ಹಿರೇನಗನೂರು ಚುಕನಟ್ಟಿ ಗ್ರಾಮದ ಯುವಕರ ಕಣ್ಮಣಿ ಸಮಾಜ ಸೇವೆಯಲ್ಲಿ ಸದಾ ಮುಂದೆ ಬರುವ,ಶಿಕ್ಷಣ ಪ್ರೇಮಿ ಮೌನುದ್ದಿನ್ ಬೂದಿನಾಳ.ರವರು ತಮ್ಮ ಹುಟ್ಟು ಹಬ್ಬವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿ ಕೊಂಡರು. ಜೂನ್ 05 ತಾರೀಕು ಆದ ಅಂದು ವಿಶ್ವ ಪರಿಸರ ದಿನಾಚರಣೆ ಕೂಡ ಇರುವುದು ವಿಶೇಷ. ಈ ದಿನ ತಮ್ಮ ಹುಟ್ಟು ಹಬ್ಬವನ್ನು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಚುಕನಟ್ಟಿ ಯಲ್ಲಿ ಶಾಲಾ ಮಕ್ಕಳೊಂದಿಗೆ ವಿಶೇಷವಾಗಿ ಒಂದನೇ ತರಗತಿಗೆ ದಾಖಲಾದ ಮಕ್ಕಳಿಗೆ ಶಾಲಾ ಬ್ಯಾಗ್, ನೋಟ್ ಪುಸ್ತಕಗಳು ಮತ್ತು ಕಲರ್ ಪೆನ್ಸಿಲ್‌ಗಳನ್ನು ನೀಡುವ ಮೂಲಕ ಅಲ್ಲದೆ ಉಳಿದ ಎಲ್ಲಾ ತರಗತಿಯ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿ ಅಲ್ಲದೆ ಶಾಲೆಗೆ ಪ್ರತಿ ದಿನ ಒಂದು ಕನ್ನಡ ದಿನಪತ್ರಿಕೆ ಶೈಕ್ಷಣಿಕ ವರ್ಷ ಪೂರ್ತಿ ನೀಡುವುದಾಗಿ ಹೇಳಿ ಸಾಂಕೇತಿಕವಾಗಿ ನೀಡಿ ಚಾಲನೆ ಮಾಡಿ ತಮ್ಮ ಸಾಮಾಜಿಕ ಸೇವೆಯನ್ನು ಹುಟ್ಟು ಹಬ್ಬದ ಪ್ರಯುಕ್ತವು ಶಾಲಾ ಮಕ್ಕಳಿಗೆ ಅನುಕೂಲಕರವಾಗಲೆಂದು ಚಿಂತನೆ ಮಾಡಿ ಆಚರಿಸಿಕೊಂಡ ಸರಳ ವ್ಯಕ್ತಿ ಶ್ರೀಯುತ ಮೌನದಿನ್ ಬೂದಿಹಾಳ. ತದನಂತರ ಸರಕಾರಿ ಪ್ರೌಢಶಾಲೆ ಹಿರೇನಗನೂರು ಶಾಲಾ ಆವರಣದಲ್ಲಿ ಪರಿಸರ ದಿನಾಚರಣೆ ನಿಮಿತ್ತ ಹಾಗೂ ತಮ್ಮ ಹುಟ್ಟು ಹಬ್ಬದ ಪ್ರಯುಕ್ತವಾಗಿ ಸಸಿ ನೆಡುವ ಮೂಲಕ ವಿಶೇಷವಾಗಿ ಆಚರಿಸಿಕೊಂಡು ಅಲ್ಲದೆ ಪ್ರೌಢಶಾಲೆಯ 10 ನೇ ತರಗತಿಯ 27 ವಿದ್ಯಾರ್ಥಿಗಳಿಗೆ ಜಾಣರ ಗುರು ಎಂಬ ದಿನ ಪತ್ರಿಕೆ ಪ್ರತಿ

*ಶ್ರೀ ರಾಮೋಜಿ ರಾವ್ ರವರು ಚಲನಚಿತ್ರಗಳಲ್ಲಿ ಹೊಸತನ ಸೃಷ್ಟಿಸಿದರು*.

ಇಮೇಜ್
*ಶ್ರೀ ಎನ್ ಪ್ರಕಾಶ್* ಬಳ್ಳಾರಿ: ಇಂದು ರಾಘವ ಮೆಮೋರಿಯಲ್ ಅಸೋಸಿಯೇಷನ್ ಬಳ್ಳಾರಿ ವತಿಯಿಂದ ಈನಾಡು ಗ್ರೂಪ್ ಸಂಸ್ಥೆ ಛೇರ್ಮನ್ ಶ್ರೀ ರಾಮೋಜಿರಾವುರವರು ಸಂತಾಪ ಸಭೆಯನ್ನು ರಾಘವ ಕಲಾ ಮಂದಿರದಲ್ಲಿ ಸಂಜೆ 6 ಗಂಟಗೆ ಸಂತಾಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂತಾಪ ಸಭೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಶ್ರೀ ಎನ್ ಪ್ರಕಾಶ್, ಚೆಲ್ಲಾ ಅಮರೇಂದ್ರ ನಾಥ ಚೌದರಿ, ಶ್ರೀ ಎನ್ ಬಸವರಾಜ್ ಅವರ ಸಾಧನೆಗಳನ್ನು ಸ್ಮರಿಸಿದರು. ಸಂತಾಪ ಸಭೆಯಲ್ಲಿ ಸಂಸ್ಥೆಯ ಗೌರವಧ್ಯಕ್ಷ ಶ್ರೀ ಕೆ ಚನ್ನಪ್ಪ, ಅಧ್ಯಕ್ಷರಾದ ಶ್ರೀ ಕೆ ಕೊಟೆಶ್ವರ ರಾವ್, ಕೆ ಚಂದ್ರಶೇಖರ್,ಕೆ ಕೃಷ್ಣ, ಶ್ರೀ ಭೀಮನೇನಿ ಭಾಸ್ಕರ್, ರಮಣಪ್ಪ ಭಜಂತ್ರಿ ಭಾಗವಹಿಸಿದ್ದರು.

ಶೋಭಾ.ಪಿ ಅವರಿಗೆ ಪಿಎಚ್.ಡಿ ಪದವಿ

ಇಮೇಜ್
೦೭ ಕೊಟ್ಟೂರು ೦೧:  ಕೊಟ್ಟೂರು ತಾಲ್ಲೂಕಿನ ಎಲ್.ಬಿ.ಶಾಸ್ರೀ ಬಡವಾಣಿಯ ನಿವಾಸಿಯಾಗಿದ್ದು ನಿವೃತ ಶಿಕ್ಷಕರಾದ ಬಸವನಗೌಡ ಇವರ ಪೃತ್ರಿ ಶ್ರೀಮತಿ ಶೋಭಾ ಇವರು ಪಿ.ಹೆಚ್.ಡಿ. ಪದವಿ ಘೋಷಿಸಿರುವುದು ಕೊಟ್ಟೂರಿನ ಜನತೆಗೆ ಅಶಯ ವ್ಯಕ್ತಪಡಿಸಿದರು.  ಇವರು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ ವಿಭಾಗದ ಪೂರ್ಣಕಾಲಿಕ ಪಿ.ಹೆಚ್.ಡಿ ವಿದ್ಯಾರ್ಥಿಯಾಗಿದ್ದ ಶೋಭಾ.ಪಿ ಅವರಿಗೆ ವಿವಿಯು ಪಿ.ಹೆಚ್.ಡಿ ಪದವಿ ಘೋಷಿಸಿದೆ. ಶೋಭಾ.ಪಿ ಅವರು ಮಂಡಿಸಿದ “ಸ್ಟಡಿ ಆನ್ ರ‍್ನ್‍ಔಟ್ ಎಮೋಷನಲ್ ಇಂಟೆಲಿಜೇನ್ಸ್ ಪರ್ಸನ್‍ಲಿಟಿ ಫ್ಯಾಕ್ಟರ್ಸ್ ಮೆಂಟಲ್ ಹೆಲ್ತ್ ಮತ್ತು ಜಾಬ್ ಸ್ಯಾಟಿಸ್‍ಪ್ಯಾಕ್ಷನ್ ಅಮೊಂಗ್ ಡಿಗ್ರಿ ಕಾಲೇಜ್ ಟೀಚರ್ಸ್” ಎಂಬ ಮಹಾ ಪ್ರಬಂಧಕ್ಕೆ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ಪ್ರದಾನ ಮಾಡಿದೆ. ಶಿಕ್ಷಣ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಪ್ರಶಾಂತ ಕುಮಾರ.ಟಿ.ಎಂ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದರು ಎಂದು ಪತ್ರಿಕೆಗೆ  ತಿಳಿಸಿದರು.

ಸೇತುವೆ ನಿರ್ಮಾಣಕ್ಕೆ ೨ ಕೋಟಿ ರೂ ಅನುದಾನ -ಶಾಸಕ ಕೆ ನೇಮಿರಾಜ ನಾಯ್ಕ

ಇಮೇಜ್
ಕೊಟ್ಟೂರು ತಾಲೂಕಿನ ಮಲ್ಲನಾಯಕಹಳ್ಳಿ ಬಳಿ ಇರುವ ವಡ್ಡರ ಹಳ್ಳ ಪ್ರತಿ ಬಾರಿ ಮಳೆಗಾಲದಲ್ಲಿ ರಸ್ತೆ ಮೇಲೆ ತುಂಬಿ ಹರಿದು ಕೊಟ್ಟೂರು ಕೂಡ್ಲಿಗಿ ಮುಖ್ಯ ಹೆದ್ದಾರಿಯು ಸಂಚಾರ ಸ್ಥಗಿತಗೊಳ್ಳುತ್ತದೆ. ಇದರಿಂದ ವಾಹನ ಸವಾರರು ಗಂಟೆಗಟ್ಟಲೆ ಕಾಯುವಂತ ಪರಿಸ್ಥಿತಿ ನಿರ್ಮಾಣಗುತ್ತದೆ. ಸಣ್ಣ ಪುಟ್ಟ ಘಟನೆಗಳು ನಡೆದಿರುವ ಕಾರಣಕ್ಕಾಗಿ ಈ ಹಳ್ಳಕ್ಕೆ ಸೇತುವೆ ನಿರ್ಮಿಸುವ ಕಾರ್ಯಕ್ಕೆ ಲೋಕೋಪಯೋಗಿ ಇಲಾಖೆ ಕೂಡಲೇ ಮುಂದಾಗಬೇಕೆAದು ಹಗರಿಬೊಮ್ಮನಹಳ್ಳಿ ಶಾಸಕ ಕೆ. ನೇಮಿರಾಜ ನಾಯ್ಕ ಸೂಚಿದರು. ಬುದುವಾರ ಬಾರಿ ಮಳೆಯಿಂದಾಗಿ ವಡ್ರ ಹಳ್ಳ ತುಂಬಿ ಹರಿದು ಎರಡು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಈ ಹಿನ್ನಲೆಯಲ್ಲಿ ಶುಕ್ರವಾರದಂದು ಮಾನ್ಯ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಇಲ್ಲಿರುವ ಪರಿಸ್ಥಿತಿಯನ್ನು ಚರ್ಚಿಸಿದರು. ನೂತನ ಸೇತುವೆ ನಿರ್ಮಿಸುವ ಕಾರ್ಯ ಸುಮಾರು ನಾಲ್ಕು ದಶಕಗಳಿದಲೂ ಆಗದೇ ಇರುವುದು, ಈ ಭಾಗದ ಜನರಿಗೆ ಮಳೆ ಬಂದಾಗ ವಡ್ರಹಳ್ಳ ಸೇತುವೆ ಮೇಲೆ ಓಡಾಡಲು ತುಂಬ ಕಷ್ಟ ಅನುಭವಿಸುತ್ತಿದ್ದಾರೆ. ಸೇತುವೆ ನಿರ್ಮಾಣ ಕಾರ್ಯ ಕೈಗೊಳ್ಳಲು ಲೋಕೋಪಯೋಗಿ ಇಲಾಖೆಯವರಿಗೆ ಸೂಚಿಸಿರುವೆ ಈ ಹಿಂದೆ ಸೇತುವೆ ನಿರ್ಮಾಣಕ್ಕೆ ೨ ಕೋಟಿರೂಗಳ ಯೋಜನೆ ರೂಪಿಸಿದ್ದು ಸೇತುವೆಯನ್ನು ಮತ್ತೊಷ್ಟು ವಿಸ್ತಾರಗೊಳಿಸಿ ನಿರ್ಮಿಸಲು ಬೇಕಾಗುವ ಮತ್ತೊಷ್ಟು ಅನುದಾನವನ್ನು ಕೊಡುವಂತೆ ಸರ್ಕಾರಕ್ಕೆ ಒತ್ತಾಯ ಪಡಿಸುತ್ತೇನೆ ಎಂದು ತಿಳಿಸಿದರು. ಅಭಿವೃದ್ದಿ ಕಾಮಗಾರಿಗಳನ್ನು

ಸಸಿ ನೆಡುವ ಮೂಲಕ ವಿಶೇಷವಾಗಿ ಹುಟ್ಟು ಹಬ್ಬ ಆಚರಣೆ

ಇಮೇಜ್
ಮಸ್ಕಿ : ಪಟ್ಟಣದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಗುರುವಾರ ಶ್ರೀ ಬಸವ ಸಂಸ್ಥೆ ಮಸ್ಕಿ ಅಧ್ಯಕ್ಷರಾದ ಯಂಕಪ್ಪ ಬಸಾಪುರ (ಸಿವಿಲ್ ಇಂಜಿನಿಯರ್ ) ಮತ್ತು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಮಸ್ಕಿ ತಾಲೂಕ ಸಮಿತಿಯಾ ಅಧ್ಯಕ್ಷರಾದ ಬಾಲರಾಜ ವಿರೂಪಾಪುರ ಇವರ ಹುಟ್ಟುಹಬ್ಬದ ನಿಮಿತ್ತ ಹಸಿರು ಮರಗಳನ್ನು ನೆಡುವ ಮೂಲಕ ವಿಶೇಷವಾಗಿ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಯಿತು.  ಶ್ರೀ ಬಸವ ಸಂಸ್ಥೆ ಮಸ್ಕಿ ಅಧ್ಯಕ್ಷರಾದ ಯಂಕಪ್ಪ ಬಸಾಪುರ (ಸಿವಿಲ್ ಇಂಜಿನಿಯರ್ ) ಮತ್ತು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಮಸ್ಕಿ ತಾಲೂಕ ಸಮಿತಿಯಾ ಅಧ್ಯಕ್ಷರಾದ ಬಾಲರಾಜ ವಿರೂಪಾಪುರ ಇವರ ಹುಟ್ಟುಹಬ್ಬದ ನಿಮಿತ್ತ ಶ್ರೀ ಪ್ರಕೃತಿ ಫೌಂಡೇಶನ್ ಮಸ್ಕಿ ಇವರ ಸಂಯುಕ್ತಾ ಆಶ್ರಯದಲ್ಲಿ ಬಿಸಿಲ ನಾಡೇ ಎಂದು ಹೆಸರಾದ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಡಾ!! ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಹಾಸ್ಟೆಲ್ ನಲ್ಲಿ ಸುಮಾರು 25 ಕ್ಕೂ ಹೆಚ್ಚು ಹಸಿರು ಗಿಡಗಳನ್ನು ನೆಡುವ ಮೂಲಕ ವಿಶೇಷ ರೀತಿಯಲ್ಲಿ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳಲಾಯಿತು.  ನಂತರ ಮಾತನಾಡಿದ ಎಸ್ ಎಫ್ ಐ ತಾಲೂಕ ಅಧ್ಯಕ್ಷ ಬಸವಂತ ಹಿರೇಕಡಬೂರು ಶ್ರೀ ಬಸವ ಸಂಸ್ಥೆ ಮಸ್ಕಿ ಅಧ್ಯಕ್ಷರಾದ ಯಂಕಪ್ಪ ಬಸಾಪುರ ಇವರು ಇಲ್ಲಿಯತನಕ ಯಾವುದೇ ರೀತಿಯ ಸರಕಾರಿ ಸೌಲಭ್ಯವನ್ನು ಪಡೆಯದೆ, ಯಾವುದೇ ರೀತಿ ಒಂದು ರೂಪಾಯಿ ದೇಣಿಗೆ ಸಹ ಪಡೆಯದೆ, ಸ್ವತಹ ತಾವು ಗಳಿಸಿದ ದುಡಿಮೆಯಲ್ಲಿ

ಸಸಿ ನೆಡುವುದರಿಂದ ಆರೋಗ್ಯ ಸಮೃದ್ಧಿ ಶ್ರೀ ಶ್ರೀ ಶ್ರೀ ವಾಮದೇವ ಶಿವಾಚಾರ್ಯರು ಕರೆ

ಇಮೇಜ್
ಮಸ್ಕಿ : ತಾಲೂಕಿನ ಅಂಕುಶದೊಡ್ಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜನೆ ಮಾಡಿದ ವಿಶ್ವ ಪರಿಸರ ದಿನಾಚರಣೆಯಲ್ಲಿ ಸಸಿ ನೆಡುವುದರಿಂದ ಆರೋಗ್ಯ ಸಮೃದ್ಧಿ ಎಂದು ಷಡಕ್ಷರಿ ಬ್ರಹ್ಮ ಶ್ರೀ ಶ್ರೀ ಶ್ರೀ ವಾಮದೇವ ಶಿವಾಚಾರ್ಯರು ಸಸಿ ನೆಡುವ ಮುಖಾಂತರ ಕರೆ ನೀಡಿದರು.  ಪ್ರಾಸ್ತಾವಿಕವಾಗಿ ಶ್ರೀ ಶಾಂತಪ್ಪ ಸೋಮನಮರಡಿ ಉಜ್ಜೀವನ ಯೋಜನೆಯ ಸಂಯೋಜಕರು ಶುದ್ಧ ನೀರು ಶುದ್ದ ಗಾಳಿ ಶುದ್ಧ ಪರಿಸರ ಸಂರಕ್ಷಣೆ ಮಾಡುವದಕ್ಕೆ ಸಸಿ ನೆಡುವುದು ಅಗತ್ಯ ಇದೆಯೆಂದು ಮಾತನಾಡಿದರು.  ನಂತರ ಶಾಲಾ ಮುಖ್ಯೋಪಾಧ್ಯಯರಾದ ಶ್ರೀ ದುರ್ಗಣ್ಣ ಮುಖ್ಯ ಶಿಕ್ಷಕರು ಇವರು ಮನೆಗೊಂದು ಮರ ಊರಿಗೊಂದು ವನ ಎಂದು ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.  ಈ ಕಾರ್ಯಕ್ರಮದಲ್ಲಿ ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷರಾದ ಶೇಖರಪ್ಪ ಕಾಟಿಗಲ್, ಗ್ರಾಮ ಪಂಚಾಯತಿ ಸದಸ್ಯರಾದ ಮಾನಪ್ಪ, ಗ್ರಾಮದ ಹಿರಿಯರಾದ ಸಿದ್ದಯ್ಯ ಸ್ವಾಮಿ, ಮುದುಕಪ್ಪ ಪರಾಪುರ. ಹನುಮಂತ ಬೆನಕನಾಳ, ವಿಜಯ ಕಾಟಗಲ, ಅಮೃತಮ್ಮ ಮುದ್ಬಾಳ, ಶಾಲಾ ಶಿಕ್ಷಕ ವೃಂದದವರು ,ಸ್ಥಳೀಯ ರೈತರು,ಮುದ್ದು ಮಕ್ಕಳು, ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸರ್ವಧರ್ಮ ಸೇವಾ ವೆಲ್ಪೇರ್ ಟ್ರಸ್ಟ್ (ರಿ) ವತಿಯಿಂದ ಉಚಿತವಾಗಿ ಚರ್ಮ ಶಿಲ್ಪಗಳಿಗೆ ನೆರಳಿನ ಚತ್ರಿ ಶಾಲೆ ಮಕ್ಕಳಿಗೆ ನೋಟ್ ಬುಕ್ ವಿತರಣೆ

ಇಮೇಜ್
ಮಸ್ಕಿ : ಸರ್ವಧರ್ಮ ಸೇವಾ ವೆಲ್ಪೇರ್ ಟ್ರಸ್ಟ್ (ರಿ)ಮಾನವಿ ಇವರ ವತಿಯಿಂದ ಪಟ್ಟಣದ ಅಂಬೇಡ್ಕರ್ ವೃತ್ತದ ಹತ್ತಿರ ಇಂದು ಉಚಿತವಾಗಿ ಚರ್ಮ ಶಿಲ್ಪಗಳಿಗೆ ನೆರಳಿನ ಚತ್ರಿ ವಿತರಣೆ ಹಾಗೂ,ಶಾಲೆ ಮಕ್ಕಳಿಗೆ ನೋಟ್ ಬುಕ್ ವಿತರಣೆ ಕಾರ್ಯಕ್ರಮ ನೆಡೆಯಿತು. ಸರ್ವಧರ್ಮ ಸೇವಾ ವೆಲ್ಪೇರ್ ಟ್ರಸ್ಟ್ (ರಿ) ಸಂಘದ ಸಂಸ್ಥಾಪಕರಾದ ಹನುಮಂತ ಕೋಟೆ ಮಾನ್ವಿ ರವರು ಮಾತನಾಡಿ ದಿನ ದಲಿತರು ಬಡವರ ಹೀಗೆ ಅನೇಕ ಅನಾಥ,ಅಂಗವಿಕಲರ ಸೇವೆ ಮಾಡುವ ಅವಕಾಶ ಸಿಕ್ಕಿದು ನನ್ನ ಪುಣ್ಯವಾಗದೆ ಎಂದರು. ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು ಶಾಲಾ ಬ್ಯಾಗ್‌ನ್ನು ದಲಿತ ಸಾಹಿತಿಗಳಾದ ದಾನಪ್ಪ ನೀಲೋಗಲ್  ವಿತರಿಸಿದರು ನಂತರ ಮಾತನಾಡಿದ ಅವರು ಸಾಕಷ್ಟು ಜನ ಹಣವಂತರಿದ್ದರೂ ಕೊಡುವ ಮನಸ್ಸಿರುವುದಿಲ್ಲ. ಆದರೆ ಹನುಮಂತಪ್ಪ ಕೋಟೆ ಮಾನ್ವಿ ರವರ ಸೇವೆ ನಿಸ್ವಾರ್ಥ ಸೇವೆಯಾಗಿದ್ದು, ಅವರು ಗಳಿಸಿದ ಹಣದಲ್ಲಿ ಸ್ವಲ್ಪ ಬಾಗವನ್ನು ಸಮಾಜ ಸೇವೆಗೆ ಮೀಸಲಿರಿಸುವ ಮೂಲಕ ತಮ್ಮ ಜೀವನವನ್ನು ಸಾರ್ಥಕ ಪಡೆಸಿಕೊಳ್ಳುತ್ತಿದ್ದಾರೆ. ಆ ದೇವರು ಅವರಿಗೆ ಆಯೂರಾರೋಗ್ಯ ಸಿರಿ ಸಂಪತ್ತು ಕರುಣಿಸಿ ಇನ್ನು ಹೆಚ್ಚಿನ ಸಮಾಜ ಸೇವೆ ಮಾಡಲು ಶಕ್ತಿ ನೀಡಲಿ ಎಂದು ಹರಸಿದರು. ಅದೇ ರೀತಿ, ದಲಿತ ಮುಖಂಡರಾದ ದೊಡ್ಡಪ್ಪ ಮುರಾರಿ ಮಾತನಾಡಿ,ಇಂದಿನ ಜಾಗತಿಕ ಯುಗದಲ್ಲಿ ವಿಶ್ವ ಒಂದು ಹಳ್ಳಿಯಾಗುತ್ತಿದ್ದರೂ ಬಡವರು ಕಡುಬಡತನದಲ್ಲಿಯೇ ಜೀವನ ಸವೆಸುತ್ತಿದ್ದಾರೆ. ಇಂತಹ ಕುಟುಂಬಗಳ ವಿದ್ಯಾರ್ಥಿಗಳು ಇಂದಿಗೂ ಸಹ ನೋಟ್ ಪ

ಸರ್ಕಾರ, ಜನಪ್ರತಿನಿಧಿಗಳು, ನಿರ್ಲಕ್ಷ್ಯಕ್ಕೆ ಗ್ರಾಮದ ಜನರು ಹಿಡಿಶಾಪ ! !

ಇಮೇಜ್
ಕೊಟ್ಟೂರು: ತಾಲೂಕಿನ ವ್ಯಾಪ್ತಿಗೆ ಬರುವ ಇಲ್ಲಿನ ಸುಂಕದ ಕಲ್ಲು ಗ್ರಾಮದ ಹೊಸ ಕ್ಯಾಂಪ್ ನಗರ ಜನರ ಗೋಳು ಕೇಳುವವರು ಯಾರು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ದಶಕಗಳೆ ಕಳೆದರೂ ಇನ್ನೂವರೆಗೆ ಗ್ರಾ ಪಂ ಮೂಲ ಸೌಲಭ್ಯ ಒದಗಿಸುವಲ್ಲಿ ಕೈಸೋತು ಕುಳಿತಿದೆ. ಸರಿಯಾದ ರಸ್ತೆ ಹಾಗೂ ಗಟಾರವಿಲ್ಲದ ಕಾರಣ ಈ ಭಾಗದ ಜನರು ರೋಸಿಹೋಗಿದ್ದಾರೆ. ಭಾಗೀರಥಿ ಶಾಸಕರಾಗಿರುವಾಗ ಸುಂಕದಕಲ್ಲು ಗ್ರಾಮದ ಹೊಸ ಕ್ಯಾಂಪ್ ನಿರ್ಮಾಣವಾಗಿದೆ ಈ ವಾರ್ಡಿಗೆ ಸಂಬಂದಿಸಿದಂತೆ ಕಳಪೆಯಾಗಿರುವ ಚರಂಡಿ,ಸಿಸಿ ರಸ್ತೆ ಸರಿಯಾಗಿ ಇಲ್ಲ. ಕಳೆದ ಹತ್ತು ವರ್ಷಗಳಿಂದ ಇದೇ ಗೋಳು ಕೇಳುವವರಿಲ್ಲದಂತಾಗಿದೆ.ಎಂದರು ಆದರೆ ಇದುವರೆಗೂ ಸರಿಯಾದ ಚರಂಡಿ ನಿರ್ಮಾಣ ಮಾಡಿಲ್ಲ. ರಸ್ತೆಯ ಎರಡು ಬದಿಯ ಹಳೆಯ ಗುಂಡಿಗಳಲ್ಲಿ ತುಂಬಿ ಕೊಂಡಿದ್ದರೂ ಹೂಳು ತೆಗೆಸಿಲ್ಲ. ಇದರಿಂದ ಮಳೆ ಬಂದಾಗ ಮಳೆಯ ನೀರು ಇಲ್ಲಿ ವಾಸಿಸುವ ಮನೆಗಳಿಗೆ ನೀರು ನುಗ್ಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಮತ್ತು ಇಲ್ಲಿಯ ಟಾಯ್ಲೆಟ್ ಗುಂಡಿಗಳಲ್ಲಿ ತುಂಬಿ ಬಿಡುತ್ತಿದೆ. ಎಂದು ಗುಡ್ಡಪರ ಬಸವರಾಜ್, ನಾಗರಾಜ್, ಅಗ್ರಹಾರ ಮಂಜಣ್ಣ , ಕೊಡಿಹಳ್ಳಿ ನಾಗಮ್ಮ,ಗಂಗಮ್ಮನಹಳ್ಳಿ ಈರಯ್ಯ,ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಕೊಟ್ -1 ಅಲ್ಲದೆ ಸೊಳ್ಳೆಗಳ ಕಾಟದಿಂದ ಇಲ್ಲಿಯ ಜನರು ಪದೆ ಪದೆ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಮತ್ತೊಂದು ರಸ್ತೆಯು ಮಣ್ಣಿನಿಂದ ಕೂಡಿದ ಪರಿಣಾಮೆ ಮಳೆಗಾಲದಲ್ಲಿ ರಸ್ತೆಯು ಕೆಸರು ಗದ್ದೆಯಾಗಿ ಇಲ್ಲಿ ಓಡಾಡ

ಕೆರೆ ದಡದಲ್ಲಿ ಸಸಿ ಹಚ್ಚಿದ ತಾ.ಪಂ ಇಒ

ಇಮೇಜ್
ಮಸ್ಕಿ : ಅಮೃತ ಸರೋವರ ಯೋಜನೆಯಡಿ ಅಭಿವೃದ್ಧಿಪಡಿಸಿದ ಗುಂಡ ಗ್ರಾಮ ಪಂಚಾಯತಿಯ ಹೊಗರನಾಳ ಗ್ರಾಮದ ಕೆರೆ ದಡದಲ್ಲಿ ಬುಧವಾರ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.  ಕೆರೆ ದಡದಲ್ಲಿ ಸಸಿ ಹಚ್ಚುವ ಮೂಲಕ ಕಾರ್ಯಕ್ರಮಕ್ಕೆ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಅಂಬರೀಶ್ ಅವರು ಚಾಲನೆ ನೀಡಿದರು.  ನಂತರ ಮಾತನಾಡಿ, ಮಾನವನ ತೀವ್ರ ಹಸ್ತಕ್ಷೇಪದಿಂದ ಪರಿಸರ ಇಂದು ತೀವ್ರ ಕಳವಳ ಮಟ್ಟಕ್ಕೆ ತಲುಪಿದೆ. ಜೀವ ಸಂಕುಲದ ಉಳಿವಿಗೆ ಪರಿಸರ ಸಂರಕ್ಷಣೆ ಇಂದು ಅತ್ಯವಶ್ಯವಾಗಿದೆ. ಪರಿಸರ ಮಾಲಿನ್ಯ ತಡೆಗೆ ಎಲ್ಲೆಡೆ ಮರಗಳನ್ನು ಬೆಳೆಸಬೇಕಿದೆ. ಇಂಥ ಮಹತ್ವ ಪೂರ್ಣ ಕೆಲಸವನ್ನು ಅರಣ್ಯ ಇಲಾಖೆ ಅಥವಾ ಸರ್ಕಾರದ ಮೇಲೆ ಹೇರದೆ ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು. ಈ ಹಿನ್ನಲೆಯಲ್ಲಿ ಅಮೃತ ಸರೋವರದಲ್ಲಿ ಪರಿಸರ ದಿನ ಆಚರಿಸಲಾಗಿದೆ ಎಂದರು. ತಾಪಂ ಸಹಾಯಕ ನಿರ್ದೇಶಕರಾದ (ಗ್ರಾಮೀಣ ಉದ್ಯೋಗ) ಶಿವಾನಂದರಡ್ಡಿ ಮಾತನಾಡಿ, ನರೇಗಾ ಯೋಜನೆಯಡಿ ನರ್ಸರಿ ಅಭಿವೃದ್ಧಿ, ರಸ್ತೆಯ ಎರಡು ಬದಿಗಳಲ್ಲಿ ಸಸಿ ನೆಡಲು ಕೂಲಿ ಕಾರ್ಮಿಕರನ್ನು ನಿಯೋಜಿಸಲಾಗುತ್ತಿದೆ. ಪ್ರಸಕ್ತ ವರ್ಷದ ಕ್ರಿಯಾ ಯೋಜನೆಯಲ್ಲಿಯೂ ಅರಣ್ಯ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ. ಅರಣ್ಯ ಇಲಾಖೆಯವರು ಹೊಲಗಳಲ್ಲಿ ನೆಡುವ ಗಿಡಗಳನ್ನು ರೈತರು ಸಂರಕ್ಷಿಸಿದರೆ ಮಾತ್ರ ಇಲಾಖೆಯ ಉದ್ದೇಶ ಸಕಾರವಾಗಲಿದೆ ಎಂದರು.  ಈ ವೇಳೆಯಲ್ಲಿ ಗುಂಡ ಗ್ರಾಪಂ ಪಿಡಿಒ ಸುಧೀರ್, ಗ್ರಾಪಂ ಸಿಬ್ಬಂದಿ ರಮೇಶ್, ಕಂಪ್ಯೂಟರ್ ಆಪರೇ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ : ವಿಜಯಲಕ್ಷ್ಮಿ ಮುಖ್ಯ ಶಿಕ್ಷಕರು

ಇಮೇಜ್
ಲಿಂಗಸಗೂರು : ಹಟ್ಟಿ ಚಿನ್ನದ ಗಣಿ ಸಮೀಪದ ಸರಕಾರಿ ಪ್ರೌಢಶಾಲೆಯಲ್ಲಿ ಇಂದು ಪರಿಸರ ದಿನಾಚರಣೆಯನ್ನು ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಯಿಂದ 5 ಸಸಿಗಳನ್ನು ನೆಡುವುದರ ಮೂಲಕ ಪರಿಸರ ಪ್ರಜ್ಞೆ ಮೆರೆದರು. ಅದೇ ರೀತಿ ಊರಿನ ಶಿಕ್ಷಣ ಪ್ರೇಮಿ ಹಾಗೂ ಸಮಾಜಸೇವಕರಾದ ಮೌನುದ್ದೀನ್ ಬೂದಿನಾಳರವರು ಸಸಿ ನೆಡುವುದರ ಮೂಲಕ ಹಾಗೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಜಾಣರ ಗುರು ದಿನಪತ್ರಿಕೆನ್ನು ಶೈಕ್ಷಣಿಕ ವರ್ಷ ಮುಗಿಯುವವರೆಗೂ ಪ್ರತಿ ವಿದ್ಯಾರ್ಥಿಗಳಿಗೆ ಒಂದೊಂದು ನೀಡುವುದರ ಮೂಲಕ ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ  ಚುಕ್ಕನಟ್ಟಿ.ಮತ್ತು ಉನ್ನತಿ ಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇನಗನೂರು ಶಾಲೆಗಳಿಗೆ.ಶೈಕ್ಷಣಿಕ ವರ್ಷ ಮುಗಿಯುವ ತನಕ ಪ್ರತಿದಿನ ಒಂದೊಂದು ದಿನ ಪತ್ರಿಕೆ ಕೊಡುವ ಮೂಲಕ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಪರಿಸರ ದಿನಾಚರಣೆ ಕುರಿತು ಮಾತನಾಡಿದ ವಿಜ್ಞಾನ ಶಿಕ್ಷಕರಾದ ರಾಘವೇಂದ್ರರವರು ಪರಿಸರ ದಿನಾಚರಣೆ ಮೊದಲ ಬಾರಿ 1972 ರಲ್ಲಿ ಜಾರಿಗೆ ಬಂದಿದ್ದು. (UNEP)ಯುಎನ್ಇಪಿ ಮೂಲಕ ಆಚರಿಸಲಾಯಿತು. ಪ್ರತಿವರ್ಷವು ಒಂದೊಂದು ದೇಶ ವಿಶ್ವ ಪರಿಸರ ದಿನಾಚರಣೆಯ ಆತಿಥ್ಯವನ್ನು ವಹಿಸುತ್ತವೆ.ನಮ್ಮ ಭಾರತ ದೇಶ 2011 ರಲ್ಲಿ ವಹಿಸಿತ್ತು ಎಂದರು. ಈ ವರ್ಷ ಪರಿಸರ ದಿನಾಚರಣೆಯ ಥೀಮ್ "ನಮ್ಮ ಭೂಮಿ" ಮರುಭೂಮೀಕರಣ ತಡೆಯುವುದಾಗಿದೆ ಎಂದರು. ನಂತರ ಮಾತನಾಡಿದ ಎಸ್ ಡಿ ಎಂ ಸಿ ಅಧ್ಯಕ್ಷರಾದ ಚಿನ್ನಪ್ಪ ಕೊಟ್ರಿಕ

ಸಿಡಿಲು ಬಡಿದು ಯುವಕ ಸಾವು

ಇಮೇಜ್
ಕೊಟ್ಟೂರು ತಾಲ್ಲೂಕಿನ ಗೂಲ್ಲರಹಳ್ಳಿ ಗ್ರಾಮದ ಬಳಿ ಬುಧವಾರ ಸಂಜೆ ಸಿಡಿಲು ಬಡಿದು ಮದ್ನಪ್ಪ (18) ಸಾವಿಗೀಡಾಗಿದ್ದಾರೆ. ಗೊಲ್ಲರಹಳ್ಳಿ ಹೊರವಲಯದಲ್ಲಿ ಕುರಿ ಮೇಯಿಸುವಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ದೂಪದಹಳ್ಳಿ ಗ್ರಾಮದ ಯುವಕ ಮದ್ನಪ್ಪ ತಂದೆ ಕೊಟ್ರೇಶಪ್ಪ  ಸಿಡಿಲು ಬಡಿದು  ಸಾವಿಗೀಡಾಗಿದೆ. ಧಾರಾಕಾರ ಮಳೆ: ಕೊಟ್ಟೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ಸಂಜೆ ಗುಡುಗು, ಸಿಡಿಲಿನೊಂದಿಗೆ ಧಾರಾಕಾರ ಮಳೆಯಾಗಿದೆ

ಬೀಳುವ ಹಂತದ ಕಟ್ಟಡದಲ್ಲಿ ಪಾಠ -ಪ್ರವಚನ,ವಿದ್ಯಾರ್ಥಿಗಳ ಸಾವು ನೋವಿಗೆ ಹೊಣೆ ಯಾರು ?

ಇಮೇಜ್
ವರದಿ : ಗ್ಯಾನಪ್ಪ ದೊಡ್ಡಮನಿ  ಮಸ್ಕಿ: ಪಟ್ಟಣದಲ್ಲಿರುವ ಸರ್ಕಾರಿ ಐಟಿಐ ಕಾಲೇಜು10ವರ್ಷಗಳಿಂದ ಕಟ್ಟಡ ಇಲ್ಲದೆ ಶಾಲೆ ಯಿಂದ ಶಾಲೆಗೆ ಸ್ಥಳ ಬದಲಾವಣೆ ಮಾಡುವ ಪರಿಸ್ಥಿತಿ ಬಂದಿದೆ ಮೊದಲು ಕೇಂದ್ರ ಶಾಲೆ ಯಲ್ಲಿ ಇದ್ದ ಕಾಲೇಜು ಈಗ  ಬಾಲಕರ ಪ್ರೌಢಶಾಲೆ ಕಟ್ಟಡದಲ್ಲಿ ನಡೆಯುತ್ತಿದ್ದು, ಇದುವರೆಗೆ ವಿದ್ಯಾರ್ಥಿಗಳಿಗೆ ಸ್ವಂತ ಕಟ್ಟಡದ ಭಾಗ್ಯ ದೊರೆತಿಲ್ಲ.ಇದರಿಂದ ವಿದ್ಯಾರ್ಥಿಗಳ ಸಾವು - ನೋವಿಗೆ ಹೊಣೆ ಯಾರು ? ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಬಡ ವಿದ್ಯಾರ್ಥಿಗಳು ತಾಂತ್ರಿಕ ತರಬೇತಿ ಪಡೆದು ಸರ್ಕಾರಿ, ಖಾಸಗಿ ಇಲ್ಲವೇ ಸ್ವಂತ ಉದ್ಯೋಗ ಅವಕಾಶ ಹೊಂದಲಿ ಎನ್ನುವ ಸದಾಸೆಯಿಂದ ಸರ್ಕಾರವು ತಾಲ್ಲೂಕಿಗೆ ಕೈಗಾರಿಕಾ ತರಬೇತಿ ಕೇಂದ್ರ ನೀಡಿದೆ. ಆದರೆ, ಕೇಂದ್ರಕ್ಕೆ ಇರಲೇಬೇಕಾದ ಮೂಲಸೌಕರ್ಯ ಗಳಾದ ಶುಚಿ ಕೊಠಡಿ, ಶುದ್ಧ ಕುಡಿಯುವ ನೀರು, ಶೌಚಾಲಯ ಇತ್ಯಾದಿ ಸೌಕರ್ಯಗಳಿಲ್ಲ. ಈ ಕಟ್ಟಡ ಮೇಲ್ಚಾವಣಿ ಉದುರುವುದರಿಂದ  ಯಾವಾಗ ಗೋಡೆ ಬೀಳುವುದೋ ಮತ್ತು ಮೇಲ್ಚಾವಣಿ ಬೀಳುವದು ಎಂಬ ಜೀವ ಭಯದಲ್ಲೇ ಉಪನ್ಯಾಸಕರು ಪಾಠ ಮಾಡಬೇಕು. ವಿದ್ಯಾರ್ಥಿಗಳು ಜೀವ ಭಯದಲ್ಲೇ ಪಾಠ ಕೇಳುವಂಥ ಪರಿಸ್ಥಿತಿ ಉಂಟಾಗಿದೆ.  ಕಾಲೇಜಿನ ಅವ್ಯವಸ್ಥೆಯಿಂದ ಕಾಲೇಜಿಗೆ ವಿದ್ಯಾರ್ಥಿಗಳು ದಾಖಲಾಗುವ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ ಇದರಿಂದಾಗಿ ತಾಲ್ಲೂಕಿನ ವಿದ್ಯಾರ್ಥಿಗಳು ಐಟಿಐ ಕಲಿಕೆಯಿಂದ ವಂಚಿತರಾಗುವ ಸಾಧ್ಯತೆ ಇದೆ.  ಉಪನ್ಯಾಸಕರ ಕೊರತೆ : ಮಸ್ಕಿ ಐಟಿಐ ಕಾಲೇಜಿನಲ್