ಗಂಗಾ ಕಲ್ಯಾಣ ಪಂಪ್ ಸೆಟ್ ಗುಣಮಟ್ಟ ತನಿಖೆಗೆ ಕ್ರಮ:ನಾಗೇಂದ್ರ

ಬಳ್ಳಾರಿ:ಗಂಗಾ ಕಲ್ಯಾಣ ಯೋಜನೆ ಅಡಿ ಹಾಕಲಾಗಿರುವ ಪಂಪ್‌ಸೆಟ್‌ಗಳ ಗುಣಮಟ್ಟ ಖಾತರಿಗೆ ತನಿಖೆ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ತಿಳಿಸಿದರು.

ವಾರ್ಷಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಅನುಪಾಲನಾ ವರದಿ ಮಂಡನೆ ವೇಳೆ ವಿವಿಧ ನಿಗಮಗಳಿಂದ ಗಂಗಾ ಕಲ್ಯಾಣ ಯೋಜನೆ ಅಡಿ ಕೊರೆದ ಬೋರ್‌ವೆಲ್‌ಗೆ ಹಾಕಿದ ಪಂಪ್ ಸೆಟ್ ಗುಣಮಟ್ಟ ಕುರಿತು ಗಂಭೀರ ಆರೋಪ ಬಂದಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ತನಿಖೆಗೆ ಮುಂದಾಗಿದೆ ಎಂದರು.

ಇನ್ನು ಗಂಗಾ ಕಲ್ಯಾಣ ಯೋಜನೆ ಅಡಿ ಮಂಜೂರು ಮಾಡಿದ ಬೋರ್ ವೆಲ್ ಕೊರೆಯಲು ಹಿಂದೇಟು ಹಾಕಬೇಡಿ. ಲಾರಿ ಹೋಗಲ್ಲ ಎಂಬ ಕಾರಣಕ್ಕೆ ಆಯ್ಕೆಯಾದ ರೈತನನ್ನು ಕೈ ಬಿಡಬೇಡಿ ಎಂದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ