ಜಗದೀಶ್ ಶೆಟ್ಟರ್ ಹೇಳಿದ್ದು ಲಿಂಗಾಯತರಿಗೆ ಅರ್ಥ ಆಗುತ್ತಾ?
ಬಳ್ಳಾರಿ:ಲಿಂಗಾಯತ ಸಮಾಜದ ಭಗವಂತ ಖೂಬಾ, ವಕ್ಕಲಿಗ ಸಮಾಜದ ಶೋಭಾ ಕರಂದ್ಲಾಜೆ, ದಲಿತ ಸಮುದಾಯದ ನಾರಾಯಣ ಸ್ವಾಮಿ ಕೇಂದ್ರದಲ್ಲಿ ರಾಜ್ಯ ಖಾತೆ ಸಚಿವರಾಗಿದ್ದಾರೆ. ಉಳಿದ ಮತ್ತೊಬ್ಬರು ಕ್ಯಾಬಿನೆಟ್ ದರ್ಜೆ ಹೊಂದಿದ್ದಾರೆ. ಅಲ್ಲೇ ತಿಳಿಯುತ್ತೆ ಯಾರ್ಯಾರಿಗೆ ಅನ್ಯಾಯ ಆಗಿದೆ ಎಂಬುದು. ಇದನ್ನ ರಾಜ್ಯದ ಜನ ತಿಳಿದಿದ್ದಾರೆ ಎಂಬ ಜಗದೀಶ್ ಶೆಟ್ಟರ್ ಅವರ ಮಾತು ನಿಜಕ್ಕೂ ಬಿಜೆಪಿಯ ಒಳ ಉದ್ದೇಶ(hidden agenda) ಏನೂ ಎಂಬುದನ್ನು ಬಯಲು ಮಾಡಿದೆ.
ಬಿಜೆಪಿಯಲ್ಲಿ ಬಹಳ ವರ್ಷಗಳ ಕಾಲ ಇದ್ದು, ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಶೆಟ್ಟರ್ ಮಾತಲ್ಲಿ ಸಾಕಷ್ಟು ಅರ್ಥ ಇದೆ. ಸದ್ಯ ಅವರು ಆಡಿರುವ ಮಾತುಗಳಿಂದಲೇ ತಿಳಿಯುತ್ತದೆ ಬಿಜೆಪಿಯಲ್ಲಿ ನೇಪೋಟಿಸಂ ಅರ್ಥಾತ್ ಸ್ವಜನ ಪಕ್ಷಪಾತ ಬಹು ದೊಡ್ಡ ಮಟ್ಟದಲ್ಲಿ ಇದೆ ಎಂಬುದು.
ಬಿಜೆಪಿಯಲ್ಲಿ ಇದ್ದುಕೊಂಡು ಕತ್ತೆ ಹಾಗೆ ಪಕ್ಷ ನಿಷ್ಠೆಯಿಂದ ದುಡಿಯುತ್ತಿರುವ ಲಿಂಗಾಯತ ಸೇರಿದಂತೆ ಹಿಂದೂ ಧರ್ಮೀಯರ ಕಾರ್ಯಕರ್ತರು ಇದನ್ನು ಅರ್ಥ ಮಾಡಿಕೊಳ್ಳುವ ಜರೂರು ಇದೆ. ಬಿಜೆಪಿ ನಾಯಕರು ಅಂದ್ರೆ ಕೇವಲ ಒಂದು ಜಾತಿಯವರು ಮಾತ್ರ. ಅದು ಬ್ರಾಹ್ಮಣ ಎಂಬ ಅರ್ಥದಲ್ಲಿ ಶೆಟ್ಟರ್ ಹೇಳಿದ್ದಾರೆ. 25 ಜನ ಎಂಪಿಗಳನ್ನು ನೀಡಿದ ರಾಜ್ಯದ ಜನರಿಗೆ ಬಿಜೆಪಿ ಅನ್ಯಾಯ ಮಾಡಿದೆ ಎಂಬುದು ಅವರ ನೇರ ಮಾತು ಆದರೆ ನಿಗೂಢವಾಗಿ ಬಿಜೆಪಿಯಲ್ಲಿ ಬ್ರಾಹ್ಮಣರಿಗೆ ಹೆಚ್ಚಿನ ಆದ್ಯತೆ, ಅವರ ಏಳಿಗೆಗೆ ಉಳಿದವರು ದುಡಿಯಬೇಕು ಎಂದು ಅರ್ಥ ನೀಡುತ್ತದೆ.
ಇದು ನಿರಂತರವೂ ನಡೆದುಕೊಂಡು ಬಂದಿದೆ. ಈ ಹಿಂದೆ ಅನಂತಕುಮಾರ್ ಇದ್ದಾಗ ಯಡಿಯೂರಪ್ಪ ಅವರಿಗೆ ಇನ್ನಿಲ್ಲದ ಕಾಟ ಕೊಟ್ಟರು. ಅವರು ತೀರಿದ ಬಳಿಕ ಇದೀಗ ಬಿಜಪಿಯಲ್ಲಿ ಜೋಶಿ ರಾಷ್ಟ್ರೀಯ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಮುಂದೆ ಅವರ ನಂತರ ಮತೊಬ್ಬ ಬ್ರಾಹ್ಮಣ ಅವರ ಜಾಗ ಅಲಂಕರಿಸಿರುವ ಕೆಲಸ ಮಾಡುತ್ತಾರೆ ಎಂಬುದು ಶೆಟ್ಟರ್ ಹೇಳಿರುವುದು.
ಇನ್ನಾದರೂ ಬಿಜೆಪಿ ನಾಯಕರು ತಾವು ಮಾಡುವ ತಪ್ಪನ್ನು ತಿದ್ದಿಕೊಳ್ಳಬೇಕು. ಒಂದು ವೇಳೆ ಹಿಂದುತ್ವ ಜಪ ಮಾಡಿಕೊಂಡೆ ರಾಜಕಾರಣ ಮಾಡುವುದಾದರೆ ಈ ಆಧುನಿಕ ಅಸ್ಪೃಶ್ಯತೆಗೆ ಅಂತ್ಯ ಹಾಡಬೇಕು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ