ಸರ್ವಪಲ್ಲಿ ರಾಧಾಕೃಷ್ಣ ದೇಶದ ಕೀರ್ತಿ ಪತಾಕೆ ಎತ್ತಿಹಿಡಿದರು
ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಧಾಕೃಷ್ಣನ್ ಅವರ ನೆನಪು ಹಾಗೂ ಪ್ರತಿಭಾವಂತ ಮಕ್ಕಳಿಗೆ ಬಹುಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಹುಮಾನ ವಿತರಿಸಿ ಮಾತನಾಡಿದ ಅವರು ರಾಧಾಕೃಷ್ಣನ್ ಅವರು ತತ್ವಜ್ಞಾನದ ಕುರಿತು ಎತಿಕ್ಸ್ ಆಫ್ ವೇದಾಂತ ಎಂಬ ಪ್ರಬಂಧ ಭಾರತೀಯ ಸನಾತನ ಹಿಂದೂ ಧರ್ಮದ ಸಂಪೂರ್ಣ ಮಾಹಿತಿ ಹೊಂದಿದ್ದು, ಅದರೊಳಗಿನ ತಾತ್ವಿಕ ವಿಚಾರಗಳು ಜನರನ್ನು ಎಚ್ಚರಿಸುವಂತೆ ಇದ್ದವು. ಆದ್ದರಿಂದ ವಿದ್ಯಾರ್ಥಿಗಳು ನಿರಂತರ ಅಧ್ಯಯನ ಹಾಗೂ ಸತತ ಪರಿಶ್ರಮ ಪಟ್ಟರೆ ಯಶಸ್ಸು ಕಂಡಿತ ಲಭಿಸುತ್ತದೆ ಎಂದು ಹೇಳಿದರು.
ಪ್ರತಿಭಾವಂತ ನಲಿಕಲಿ ವಿದ್ಯಾರ್ಥಿಗಳಾದ ಹರ್ಷ,ಭಾವನ,ಪ್ರಿಯಾಂಕಾ, ಅಂಜಲಿ, ಮೇಘಮಾಲ ಬಹುಮಾನ ಪಡೆದರು.
ಹಿರಿಯ ಶಿಕ್ಷಕರಾದ ಮೋದಿನ್ ಸಾಬ್ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರೆ,ಬಸವರಾಜ ಅವರು ಪೂಜೆ ನೆರವೇರಿಸಿದರು.
ಶಿಕ್ಷಕರಾದ ಮುನಾವರ ಸುಲ್ತಾನ, ದಿಲ್ಷಾದ್ ಬೇಗಂ, ಚನ್ನಮ್ಮ, ಸುಮತಿ, ವೈಶಾಲಿ,ಶ್ವೇತಾ, ಉಮ್ಮೆಹಾನಿ, ಶಶಮ್ಮ ಪುಷ್ಪ ನಮನ ಸಲ್ಲಿಸಿದರು. ಶಾಲಾ ಮಕ್ಕಳು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ