ಕೆಎಂಎಫ್ ಖಾಯಂ ಮುಚ್ಚುತ್ತೇವೆ:ಖಡಕ್ ಎಚ್ಚರಿಕೆ ನೀಡಿದ ನಾಗೇಂದ್ರ

 

ಬಳ್ಳಾರಿ:ಮಹಾನಗರ ಪಾಲಿಕೆಯ 35 ನೆಯ ವಾರ್ಡಿನಲ್ಲಿರುವ ಕೆಎಂಎಫ್‌ನ ರಾಬಕೊವಿ ಒಕ್ಕೂಟದ ಘಟಕದ ಡೈರಿಯಲ್ಲಿ ಹಾಲು ಪ್ಯಾಕ್ ಮಾಡುವಾಗ ಬರುವ ತ್ಯಾಜ್ಯ ನೀರನ್ನು ಸರಿಯಾಗಿ ನಿರ್ವಹಿಸದ ಹಿನ್ನೆಲೆಯಲ್ಲಿ ಸಾಕಷ್ಟು ಸಮಸ್ಯೆ ಆಗುತ್ತಿದ್ದು ಸರಿ ಪಡಿಸದೇ ಇದ್ದರೆ ಕೆಎಂಎಫ್ ಅನ್ನು ಮುಚ್ಚಿಬಿದುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕೆಡಿಪಿ ಸಭೆಯ ಅನುಪಾಲನಾ ವರದಿ ಮಂಡನೆ ವೇಳೆ ಕೆಎಂಎಫ್‌ನ ತ್ಯಾಜ್ಯ ನೀರು ನಿರ್ವಹಣೆ ಕುರಿತು ಹಿಂದಿನ ಸಭೆಯಲ್ಲಿ ಆದ ಚರ್ಚೆ ಪ್ರಸ್ತಾಪಿಸಿ ಮಾತನಾಡಿದ ಅವರು, ಕೆಎಂಎಪ್ ಡೈರಿಯಿಂದ ಹರಿದು ಬರುವ ತ್ಯಾಜ್ಯ ನೀರನ್ನು ಸರಿಯಾಗಿ ವಿಲೇವಾರಿ ಮಾಡಬೇಕು ಎಂದು ಕಳೆದ ಸಭೆಯಲ್ಲಿ ಚರ್ಚಿಸಲಾಗಿತ್ತು. ಆದರೆ, ಸಭೆಗೆ ರಾಬಕೊವಿ ಒಕ್ಕೂಟದ ಎಂಡಿ ಬಂದಿರಲಿಲ್ಲ. ಇದೇ ಕಾರಣಕ್ಕೆ ನೋಟೀಸ್ ನೀಡಲಾಗಿತ್ತು. ಈ ಬಾರಿ ನೀವು ಬಂದಿದ್ದೀರಾ. ಸಮಸ್ಯೆ ಗಂಭೀರ ಇದೆ. ನಾಳೆಯೇ ನೀವು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ಇಲ್ಲದೇ ಹೋದರೆ ಘಟಕ ಮುಚ್ಚಿಬಿಡುತ್ತೇವೆ ಎಂದು ಗುಡುಗಿದರು.

ನಿಮ್ಮ ಒಬ್ಬರಿಂದ ಸಾವಿರಾರು ಜನಕ್ಕೆ ತೊಂದರೆ ಆಗುತ್ತಿದೆ. ನಿಮಗೆ ಪದೇ ಪದೇ ಎಚ್ಚರಿಕೆ ನೀಡಿದರೂ ಪ್ರಯೋಜನ ಆಗುತ್ತಿಲ್ಲ. ನಿಮ್ಮ ಅಧ್ಯಕ್ಷರಿಗೂ ಮಾತನಾಡಿದ್ದೇನೆ. ನಿಮಗೇನು ಸಮಸ್ಯೆ, ಲಾಭದಲ್ಲಿದ್ದೀರಲ್ಲಾ ಎಂದು ಪ್ರಶ್ನಿಸಿದರು.

ಈ ವೇಳೆ ಮದ್ಯ ಪ್ರವೇಶ ಮಾಡಿದ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ, ಲಾಭ, ನಷ್ಟದ ಪ್ರಶ್ನೆ ಬರಲ್ಲ. ಮೊದಲು ಜನರಿಗೆ ತೊಂದರೆ ಆಗದ ಹಾಗೆ ನೋಡಿಕೊಳ್ಳೀ ಎಂದು ತಿಳಿಸಿ ಈಗಾಗಲೇ ನಿಮಗೆ ಸಿಅರ್‌ಪಿಸಿ ಆಡಿ ನೋಟಿಸ್ ನೀಡಿದ್ದೇವೆ. ತಪ್ಪಿದರೆ ಕಠಿಣ ಕ್ರಮ ಎಂದು ಎಚ್ಚರಿಸಿದರು.

ಆಗ ರಾಬಕೊವಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ತಿರುಪತೆಪ್ಪ ಮಾತನಾಡಿ, ನಾಳೆ ನಮ್ಮ ಆಡಳಿತ ಮಂಡಳಿ ಸಭೆ ಇದೆ. ಅಲ್ಲಿ ಖಂಡಿತ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ