ಅಕ್ಕಿ ಬದಲು ದುಡ್ಡು ನೀಡುವುದಕ್ಕೆ ಹೆಗಡೆ ಆಕ್ಷೇಪ











ಬಳ್ಳಾರಿ: ಸರ್ಕಾರವು ಕೊಟ್ಟ ಮಾತಿನಂತೆ 10 ಕೆಜಿ ಅಕ್ಕಿ ನೀಡದೆ ಪಡಿತರ ಖಾತೆಗೆ ಹಣ ನೀಡಲು ಮುಂದಾಗಿರುವುದಕ್ಕೆ  ಬಳ್ಳಾರಿ ಜಿಲ್ಲಾ ಪಡಿತರ(ನ್ಯಾಯ ಬೆಲೆ ಅಂಗಡಿ ಮಾಲೀಕರ ಸಂಘ) ವಿತರಕರ ಸಂಘವು ಆಕ್ಷೇಪ ವ್ಯಕ್ತಪಡಿಸುತ್ತದೆ ಎಂದು  ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ  ಜಿಲ್ಲಾ ಕಾರ್ಯಧ್ಯಕ್ಷರು ವೆಂಕಟೇಶ್ ಹೆಗಡೆ ತಿಳಿಸಿದ್ದಾರೆ.

ಸರ್ಕಾರವು ಕೊಟ್ಟ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘ 10 ಕೆಜಿ ಅಕ್ಕಿ ನೀಡಿ, ಬದಲಾಗಿ ನೀವು ಹಣ ನೀಡುವ ನಿರ್ಧಾರದಿಂದ ಮಾತು ತಪ್ಪಿದಂತೆ ಆಗುತ್ತದೆ. ಆದುದರಿಂದ ಪಡಿತರದಾರರ ಖಾತೆಗೆ ಹಣ ಹಾಕುವ ಬದಲು ಆಹಾರ ಧಾನ್ಯಗಳಾದ ಸಕ್ಕರೆ, ಗೋಧಿ, ಜೋಳ, ರಾಗಿ ಮುಂತಾದ ಆಹಾರ ಪದಾರ್ಥಗಳನ್ನು ರೈತರಿಂದ ನೇರವಾಗಿ ಖರೀದಿ ಮಾಡಿ ಮೂರು ಕೆ.ಜಿ ರಾಗಿ ಎರಡು ಕೆ.ಜಿ ಗೋಧಿ  ಮತ್ತು ಈಗಾಗಲೇ ಬಿಪಿಎಲ್ ಪಡಿತರದಾರರಿಗೆ ಐದು ಕೆ.ಜಿಸಿಸಿ ಅಕ್ಕಿ, ಕೊಡುತ್ತಿರುವುದರಿಂದ ಒಟ್ಟಾಗಿ 10 ಕೆ.ಜಿ ಕೊಟ್ಟಂತಾಗುತ್ತದೆ. ಹಾಗೂ ರಾಜ್ಯದಲ್ಲಿರುವ ರೈತರಿಗೂ ಅನುಕೂಲವಾಗುತ್ತದೆ ಮತ್ತು ಸಕ್ಕರೆ ಕೊಟ್ಟಲ್ಲಿ ನಷ್ಟದಲ್ಲಿರುವ ಶುಗರ್ ಫ್ಯಾಕ್ಟರಿಗಳಿಗೂ, ಮತ್ತು ಕಬ್ಬು ಬೆಳೆಗಾರರಿಗೂ ಸಹಾಯವಾಗುತ್ತದೆ.

ಆದಾಗ್ಯು ಆಹಾರ ಧ್ಯಾನಗಳನ್ನು ಕೊಡದೆ, ಹಣವನ್ನೆ  ಪಡಿತರ ದಾರರಿಗೆ ಕೊಟ್ಟಲ್ಲಿ ಹಿಂದೆ ಕೇಂದ್ರ ಸರ್ಕಾರವು ಪುದುಚೇರಿ ಮತ್ತು ಛತ್ತೀಸ್ಗಡದಲ್ಲಿ ಅಕ್ಕಿ ಬದಲು ಹಣ ನೀಡುವ ಯೋಜನೆ ಆರಂಭಿಸಿತ್ತು ಯೋಜನೆ ಆರಂಭವಾಗಿ ಕೆಲ ತಿಂಗಳಲ್ಲೇ ಸ್ಥಗಿತಗೊಂಡಿತ್ತು. ಈಗ ರಾಜ್ಯ ಸರ್ಕಾರ ಅದೇ ಮಾದರಿ  ಅನುಸರಿಸುತ್ತಿರಿವುದು ಸರಿಯಲ್ಲ. 10 ಕೆ.ಜಿ ಅಕ್ಕಿ ಅಥವಾ ಆಹಾರದಾನ್ಯಗಳನ್ನು ನೀಡಿದ್ದಲ್ಲಿ, ನಾವುಗಳು ಪಡಿತರದಾರರಿಗೆ ವಿತರಿಸಲು ಸಿದ್ಧರಿದ್ದೇವೆ ಎಂದು ಅವರು ತಿಳಿಸಿದ್ದಾರೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ