ರಾಜ್ಯದಲ್ಲಿ 33 ರೂಗೆ ಕೆಜಿ ಅಕ್ಕಿ ಸಿಗುತ್ತೆ:ಕೃಷ್ಣ

ಬಳ್ಳಾರಿ:ರಾಜ್ಯದಲ್ಲಿಯೇ ಸೋನಾ ಮಸೂರಿ ಅಕ್ಕಿ 33.5 ರೂಪಾಯಿಯಂತೆ ಸಿಗಲಿದ್ದು, ಸರ್ಕಾರ ಇದನ್ನೇ ಖರೀದಿಸಿ, ಇಲ್ಲಿನ ರೈತರ ನೆರವಿಗೆ ಬರಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿಯೇ ಸೋನಾ ಮಸೂರಿ ಭತ್ತ 2100 ರೂ.ಗೆ ಒಂದು ಕ್ವಿಂಟಾಲ್ ಸಿಗಲಿದೆ. ಇದನ್ನು ಗಿರಣಿ ಮಾಡಿಸಿದರೆ 65 ಕೆಜಿ ಅಕ್ಕಿ ಬರಲಿದೆ. ತೌಡು, ನುಚ್ಚು ಅಕ್ಕಿ ಬಿಟ್ಟುಕೊಟ್ಟರು ಮಿಲ್ ನವರು ಫ್ರೀ ಆಗಿ ಗಿರಣಿ ಮಾಡಿಕೊಡುತ್ತಾರೆ. ಅಲ್ಲಿಗೆ 33.5 ರೂ.ಗೆ ಇಲ್ಲೇ ಸೋನಾ ಮಸೂರಿ ಅಕ್ಕಿ ಖರೀದಿಸುವ ಅವಕಾಶ ಸರ್ಕಾರಕ್ಕೆ ಇದೆ ಎಂದರು.
ರಾಜ್ಯದಲ್ಲಿಯೇ ಭತ್ತ ಖರೀದಿ ಮಾಡುವುದರಿಂದ ರೈತರಿಗೂ ಅನುಕೂಲ ಆಗಲಿದೆ. ಭತ್ತಕ್ಕೆ ಒಳ್ಳೆಯ ಬೆಲೆ ಬಂದು ಭತ್ತ ಬೆಳೆಯುವ ರೈತರಿಗೆ ಉತ್ತಮ ಬೆಲೆ ಸಿಗಲಿದೆ ಎಂದು ಅವರು ತಿಳಿಸಿದರು.
ಇದೂ ಅಲ್ಲದೆ ಒಂದು ವೇಳೆ ಮಿಲ್ ಮಾಲೀಕರ ಜೊತೆ ಮಾತುಕತೆ ನಡೆಸಿದರೆ ಮಿಲ್ ಮಾಲೀಕರೆ 33.5 ರೂ.ಗೆ ಅಕ್ಕಿ ಮಾರಾಟ ಮಾಡಲು ಸಿದ್ಧರಿದ್ದಾಋಎ. ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು ಎಂದು ಅವರು ತಿಳಿಸಿದರು.
ಬೇರೆ ರಾಜ್ಯದಲ್ಲಿ ಖರೀದಿ ಮಾಡಿದರೆ ಸಾಗಣೆ ವೆಚ್ಚದ ಹೊರೆ ಬೀಳಲಿದೆ. ಮುಖ್ಯಮಂತ್ರಿಗಳು ಈ ಕುರಿತು ಯೋಚಿಸಬೇಕು ಎಂದು ಅವರು ತಿಳಿಸಿದರು.
ಇನ್ನು 2012ರಲ್ಲಿ ಭೂಮಿ ಸರ್ವೆಮಾಡಲು ರಾಜ್ಯ ಸರ್ಕಾರ 2000 ರೂ. ಕಟ್ಟಿಸಿಕೊಂಡಿತ್ತು. ಆದರೆ, ಈವೆರೆಗೆ ಸರ್ವೆ ಕಾರ್ಯಮಾಡಿಲ್ಲ. ಈಗ ಸರ್ವೆ ಮಾಡುವ ಬದಲು ಮತ್ತೆ 2 ಸಾವಿರ ರೂ. ನೀಡುವಂತೆ ಸೂಚಿಸಿದೆ. ಇದನ್ನು ತಕ್ಷಣ ಹಿಂಪಡೆದು, ಹಿಂದೆ ಕಟ್ಟಿದ ಹಣದಲ್ಲಿಯೇ ಸರ್ವೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಸಂಘದ ತಾಲ್ಲೂಕು ಅಧ್ಯಕ್ಷ ಮಾರೆಣ್ಣ, ಪ್ರಧಾನ ಕಾರ್ಯದರ್ಶಿ ಈಶ್ವರಪ್ಪ, ಕೊಳಗಲ್ಲು ತಿಮ್ಮಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ