*ದಲಿತರು ಮೌಡ್ಯಾಚರಣೆಗಳನ್ನು ಬಿಟ್ಟು ಅಂಬೇಡ್ಕರ್ ಮಾರ್ಗದಲ್ಲಿ ಸಾಗಬೇಕು: ರಾಮು ಹೋಳೆಪ್ಪನವರ್*

ಮಾನವಿ: ದಲಿತರು ಸಾವಿರಾರು ವರ್ಷಗಳ ಕಾಲ ದೇವರ ಅರಿಕೆಮಾಡಿಕೊಂಡು ಕೋಣ, ಕುರಿ ಬಲಿಕೊಡುತ್ತಿದ್ದರು. ಇಂತಹ ಅನೇಕ ಮೌಡ್ಯಾಚರಣೆ ಮತ್ತು ಮದ್ಯಪಾನ ಸೇವಿಸುವುದರಿಂದ ದೂರವಿರಬೇಕು. ಶಿಕ್ಷಣ ಪಡೆದು ಅಭಿವೃದ್ಧಿ ಹೊಂದಲು ಸಾಂಸ್ಕೃತಿಕವಾಗಿ ಬದಲಾಗಬೇಕೆಂದು ಹೇಳಿದ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ಮಾರ್ಗದಲ್ಲಿ ಸಾಗಬೇಕು ಎಂದು ಮಾನವಿ ಸರಕಾರಿ ಆಸ್ಪತ್ರೆಯ ವಿಕಿರಣ ಶಾಸ್ತ್ರ ಚಿತ್ರಣ ಅಧಿಕಾರಿ ರಾಮು ಹೋಳೆಪ್ಪನವರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಮಾರಮ್ಮ - ಮಾರೆಪ್ಪ ಕೊಂಡಯ್ಯ ಇವರ ಮನೆಯಲ್ಲಿ ಬಹುಜನ ಸಂಘರ್ಷ ಸಮಿತಿಯಿಂದ ಶನಿವಾರ ಆಯೋಜಿಸಿದ್ದ, 114ನೇ ಮನೆ-ಮನೆಗೆ ಅಂಬೇಡ್ಕರ್ ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಮಾತನಾಡಿದರು.

ಪುರಸಭೆ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯ ಸಂತೋಷಿ ಪಿ.ಜಯಪ್ರಕಾಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ದೇಶದಲ್ಲಿ ಮಹಿಳೆಯರನ್ನು ಸೇವಕಿಯಾಗಿ, ಗಂಡನ ಗುಲಾಮಳಾಗಿ, ಅಸಹಾಯಕಿಯಾಗಿ ಕಾಣಲಾಗುತ್ತಿದ್ದರು. ಮಹಿಳೆ ಕೂಡ ಪುರುಷನಷ್ಟೇ ಸಮಾನಳು ಮತ್ತು ಸಮರ್ಥಳಾಗಿದ್ದಾಳೆ. ದೇಶದ ಪ್ರಧಾನಿಯಾಗಿದ್ದಾರೆ, ಮುಖ್ಯಮಂತ್ರಿಯಾಗಿದ್ದಾರೆ, ವಿಜ್ಞಾನಿಯಾಗಿ ಅಂತರಿಕ್ಷಕ್ಕೆ ಹಾರಿದ್ದಾರೆ. ಇಂತಹ ಅನೇಕ ಸಾಧನೆಗೈಯಲು ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಮುಕ್ತ ಅವಕಾಶಗಳನ್ನು ಸಂವಿಧಾನ ಬದ್ಧವಾಗಿ ಹಕ್ಕುಗಳನ್ನು ಕಲ್ಪಿಸಿಕೊಟ್ಟವರು ಬಾಬಾ ಸಾಹೇಬ್ ಅಂಬೇಡ್ಕರ್ ಎಂದರು.

ಪ್ರತಿಯೊಬ್ಬರೂ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ವೈರಿಗಳು ಕತ್ತಿ, ಬಂದೂಕುಗಳಿಗೆ ಅಂಜುವುದಕ್ಕಿಂತ ಜ್ಞಾನಕ್ಕೆ ಹೆದರುತ್ತಾರೆ ಎಂದರು.

ಪ್ರಾಸ್ತಾವಿಕವಾಗಿ ಬಹುಜನ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಜೆ.ಶರಣಪ್ಪ ಬಲ್ಲಟಗಿ, ಹಿರಿಯ ಹೋರಾಟಗಾರ, ಸಂಪನ್ಮೂಲ ವ್ಯಕ್ತಿ ರವೀಂದ್ರ ಜಾನೇಕಲ್, ಭಾರತೀಯ ದಲಿತ ಪ್ಯಾಂಥರ್ ರಾಯಚೂರು ಜಿಲ್ಲಾಧ್ಯಕ್ಷ ಲಕ್ಷ್ಮಣ ಜಾನೇಕಲ್, ಯುವ ಚಿಂತಕ, ನ್ಯಾಯವಾದಿ ರವಿಕುಮಾರ್ ಕೋನಾಪುರಪೇಟೆ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ, ದಸಂಸ ಹೋರಾಟಗಾರ ಸಂಪತ್ತುಕುಮಾರ್ ಜಾಗೀರಪನ್ನೂರು ಮಾತನಾಡಿದರು.

ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅಭಿಮಾನಿ ಮಾರೆಪ್ಪ ಕೊಂಡಯ್ಯ ಕೋನಾಪುರಪೇಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಹುಜನ ಸಂಘರ್ಷ ಸಮಿತಿ ಮಾನವಿ ತಾಲೂಕ ಉಪಾಧ್ಯಕ್ಷ ಕುಮಾರ್ ಕಾತರಕಿ ನಿರೂಪಿಸಿ ವಂದಿಸಿದರು.

ಈ ಸಂದರ್ಭದಲ್ಲಿ ಬಹುಜನ ಸಂಘರ್ಷ ಸಮಿತಿ ಮಾನವಿ ತಾಲೂಕಾಧ್ಯಕ್ಷ ಯಮುನಪ್ಪ ಜಾಗೀರಪನ್ನೂರು,ಮಾನವಿ ಬಸವ ಕೇಂದ್ರ ಅಧ್ಯಕ್ಷ ರಂಗಪ್ಪ ಮೇದಾರ್ ಮಾನವಿ, ಡಿ. ಅಂಬರೇಶ ಗವಿಗಟ್ಟ್, ದಸಂಸ ಮುಖಂಡ ಹುಸೇನಪ್ಪ ಜಗ್ಲಿ ಜಾಗೀರಪನ್ನೂರು, ಗೋಪಾಲ್ ಕೊಂಡಯ್ಯ, ಗಾಳೆಮ್ಮ, ಯಲ್ಲಮ್ಮ, ಸಾವಿತ್ರಮ್ಮ, ಸುಶೀಲಮ್ಮ, ಭರತ್ ಕುಮಾರ್, ಸಣ್ಣ ಮಾರೆಪ್ಪ ಕೊಂಡಯ್ಯ, ವಿದ್ಯಾರ್ಥಿಗಳು ಸೇರಿದಂತೆ ಕುಟುಂಬದವರು, ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*