ಹಿರೇನಗನೂರು ಹಾಗೂ ಚುಕ್ಕನಟ್ಟಿ ಗ್ರಾಮದ ಮುಸ್ಲಿಂ ಬಾಂಧವರಿಂದ.ಈದ್ ಉಲ್ ಫಿತರ್ ಆಚರಣೆ.

 

ಹಟ್ಟಿ ಚಿನ್ನದ ಗಣಿ: ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಸಮೀಪದ ಹಿರೇನಗನೂರು ಹಾಗೂ ಚುಕ್ಕನಟ್ಟಿ ಗ್ರಾಮದ ಮುಸ್ಲಿಂ ಬಾಂಧವರು ಶೃದ್ಧಾಭಕ್ತಿಯೊಂದಿಗೆ ಸಂಭ್ರಮದಿಂದ ರಂಜಾನ್ ಹಬ್ಬ ಆಚರಿಸಿದರು. 

ಬೆಳಗಿನಿಂದಲೇ ಎರಡು ಗ್ರಾಮದ ಮುಸ್ಲಿಂ ಬಾಂಧವರು ಗ್ರಾಮದ ಹೊರವಲಯದ ಈದ್ಗಾ ಮೈದಾನಕ್ಕೆ ತೆರಳಿದ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

 ಇಸ್ಲಾಂ ಧರ್ಮ ಗುರುಗಳಾದ ಆಫೀಜ್ ಅಬ್ದುಲ್ ರೆಹಮಾನ್ ಸಾಬ್ ಮಾತನಾಡಿ.ಈದ್ ಉಲ್ ಫಿತಾರ್ ಎಂದರೆ?ಉಪವಾಸ ಮುರಿಯುವ ಹಬ್ಬ.ಇದು ರಂಜಾನ್ ಮಾಸದ ಪೂರ್ಣಗೊಳಿಸುವಿಕೆಯ ಆಚರಣೆಯಾಗಿದೆ.ಈ ದಿನ ಪೂಜೆ ಧ್ಯಾನ ಮತ್ತು ತಮ್ಮನ್ನು ತಾನು ತಿಳಿದುಕೊಳ್ಳುವ ಮತ್ತು ಅರ್ಥ ಮಾಡಿಕೊಳ್ಳುವ ತಿಂಗಳಾಗಿರುತ್ತದೆ.ಇದನ್ನು ಇಸ್ಲಾಮಿನ ಐದು ಪ್ರಮುಖ ಬೋಧನೆಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ.ಅಲ್ಲದೆ ಇದನ್ನು ಕೃತಜ್ಞತಾ ಪ್ರತಿಫಲ ಮತ್ತು ಸಂತೋಷದ ಸಂಕೇತವಾಗಿ ಆಚರಿಸಲಾಗುತ್ತದೆ.ಅದೇ ರೀತಿ ರಮ್ ದಾನ್ ಅಥವಾ ರಂಜಾನ್ ಪದದ ಅರ್ಥ ರಮ್ ದಾನ್ ಎಂದರೆ.ಅರಬ್ ಬಾಷೆಯಲ್ಲಿ ಅತಿಯಾದ ಶಾಖ ಎಂದರ್ಥ." ಬಿಸಿಲಿಗೆ ಕಾದ ಮರಳು"ಎಂಬ ಅರ್ಥವನ್ನು ಹೊಂದಿದೆ.ಬಿಸಿಲಿನ ಶಾಖ.ನೆಲವನ್ನು ಸುಡುವಂತೆ.ಮನುಷ್ಯನಲ್ಲಿ ಉದ್ಭವಿಸುವ ಹಸಿವಿನ ಶಾಖ ಹಾಗೂ ಮಾನವನಲ್ಲಿನ ಕೆಟ್ಟ ಆಲೋಚನೆಗಳನ್ನು ಸುಟ್ಟು ಹಾಕುತ್ತದೆ.ಎಂಬ ನಂಬಿಕೆ ನಮ್ಮದು.ಈ ಹಬ್ಬ ಕೇವಲ ಉಪವಾಸವಲ್ಲ.ಇದೊಂದು ಮುಸ್ಲಿಂ ಬಾಂಧವರ ತಪಸ್ಸು ಆಗಿದೆ.ಹಾಗೂ ರಂಜಾನ್ ದಿನದ ದಾನ-ಧರ್ಮದ ಮಹತ್ವದ ಕುರಿತು ಬೋಧನೆ ಮಾಡಿದರು. 

ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಪರಸ್ಪರ ಅಪ್ಪಿಕೊಂಡು ಸಹೋದರತ್ವ ಮೆರೆದರು.ಹಬ್ಬದ ಶುಭಾಶಯಗಳ ವಿನಿಮಯ ಮಾಡಿಕೊಂಡರು.

ಈ ಸಂದರ್ಭದಲ್ಲಿ ಆಫೀಜ್ ಅಬ್ದುಲ್ ರಹಿಮಾನ್ ಸಾಬ್.ಅಧ್ಯಕ್ಷರು ಅಬ್ಬಾಸಾಲಿ ಪತ್ತೆ ಸಾಬ್.ಉಪಾಧ್ಯಕ್ಷರು ಮೋನೋದ್ದೀನ್ ಹಿರೇಮನಿ.ಜಾಮಿಯಾ ಮಸೂದಿ ಖಜಾಂಚಿ ಮೌನುದ್ದೀನ್ ಬೂದಿನಾಳ.ನಜೀರ್ ಶಿಕ್ಷಕರು ಚುಕ್ಕನಟ್ಟಿ.ರಾಜಸಾಬ್ ಕೆಇಬಿ ಗುತ್ತೇದಾರರು.ಗ್ರಾ ಪಂ ಸದಸ್ಯರಾದ ದಾದಾಪೀರ್.ಮೌಜಾನ ಬಂದೆ ಸಾಬ್. ಹುಸೇನ್ ಸಾಬ್ ಅಬ್ಬಾಸಾಲಿ.ರಾಜಸಾಬ್ ಗೋರ್ಕಲ್.ಎಚ್ ಜಿ ಎಂ ಮೌನದ್ದೀನ್ ಹೊರಪೇಟಿ.ಎಚ್‌ಜಿಎಂ ರಫೀ ಕಾರ್ಪೆಂಟರ್.ಮೋದಿನ ಸಾಬ್ ಹುಣಸೆ ಹುಡ. ಮೌಲಾ ಬೂದಿನಾಳ.ರಾಜ ಸಾಬ್ ಆಡಿನಮನಿ.ಹುಸೇನ್ ಬುಡ್ಡ.ಅಜ್ಮೀರ್.ರಫಿ ಜವಳಗೇರಾ.ಹಾಗು ಎರಡು ಗ್ರಾಮಗಳ ಮುಸ್ಲಿಂ ಬಾಂಧವರು ಪ್ರಾರ್ಥನಾ ಕೂಟದಲ್ಲಿ ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*