ಬಾಬು ಜಗಜೀವನ್ ರಾಂ ಬಗ್ಗೆ ಹೆಚ್ಚು ತಿಳಿಯಿರಿ


ಬಳ್ಳಾರಿ: ಡಾ.ಬಾಬು ಜಗಜೀವನ್ ರಾಂ ರವರ ಜಯಂತಿ ನಿಮಿತ್ತ ಇಂದು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ನಮನ ಸಲ್ಲಿಸಲಾಯಿತು. 
ಮಾಲಾರ್ಪಣೆ ಬಳಿಕ ಮಾತನಾಡಿದ ಕೆಪಿಸಿಸಿ ವಕ್ತಾರ  ವೆಂಕಟೇಶ್ ಹೆಗಡೆ, ಭಾರತದ ಇತಿಹಾಸದಲ್ಲೇ ಅತಿ ಹೆಚ್ಚು ಅವಧಿ ಅಂದರೆ 30 ವರ್ಷ ಸಚಿವರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಬಾಬು ಜಗಜೀವನ್ ರಾಮ್ ರವರುದು, ನೆಹರು ಸಂಪುಟದಲ್ಲಿ ಅತ್ಯಂತ ಕಿರಿ ವಯಸ್ಸಿನ ಸಚಿವ ಎಂಬ ಹೆಗ್ಗಳಿಕೆ ಅವರದ್ದು, ಉಪ ಪ್ರಧಾನಿ ಆಗಿ ಹಸಿರು ಕ್ರಾಂತಿ ಮಾಡಿದ ಮಹನೀಯ. ಆಹಾರ ಸಮಸ್ಯೆ ಎದುರಾದಾಗ ಎದೆಗುಂದದೆ ಸವಾಲಾಗಿ ಸ್ವೀಕರಿಸಿದ ಸಚಿವ. ಹಿಂದುಳಿದವರು ಎಂಬ ಕಾರಣಕ್ಕೆ ಅವರ ಪರ ಹೆಚ್ಚು ಪ್ರಚಾರ ಮಾಡಲಾಗಲಿಲ್ಲ ಎಂದರು.

ಅಂಬೇಡ್ಕರ್, ಜಗಜೀವನ್ ರಾಮ್ ಈ ದೇಶದ ದೊಡ್ಡ ಆಸ್ತಿ. ನಾವು ಯುವ ಜನಾಂಗಕ್ಕೆ ಇದನ್ನು ಹೇಳಬೇಕಿದೆ. ಸ್ವಾಭಿಮಾನ ಬೆಳೆಸಿಕೊಳ್ಳಲು ಇಂತಹ ನಾಯಕರ ಬಗ್ಗೆ ಹೆಚ್ಚು ಹೇಳಬೇಕು ಎಂದರು.

  ಎಂ,ಎರುಕುಲಸ್ವಾಮಿ, ಅಧ್ಯಕ್ಷರು, ಪರಿಶಿಷ್ಟ ಜಾತಿ ಕಾಂಗ್ರೆಸ್ ವಿಭಾಗ, ಮಲ್ಲಿಕಾರ್ಜುನ ಬರಿಮರ, ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ, ಬಳ್ಳಾರಿ. ಟಿ.ಆನಂದ್, ರಾಜ, ತಿಪ್ಪೇಸ್ವಾಮಿ, ರವಿಕುಮಾರ್ ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*