ಕರ್ನಾಟಕ ಪ್ರೆಸ್ ಕ್ಲಬ್ ವತಿಯಿಂದ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಮೆಂಟ್
ಕೊಟ್ಟೂರಿನಲ್ಲಿ ಮೊಟ್ಟಮೊದಲ ಬಾರಿಗೆ ಕರ್ನಾಟಕ ಪ್ರೆಸ್ ಕ್ಲಬ್ ವತಿಯಿಂದ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಮೆಂಟ್ ಶನಿವಾರ ಆಯೋಜಿಸಲಾಗಿತ್ತು. ಕರ್ನಾಟಕ ಪ್ರೆಸ್ ಕ್ಲಬ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿಯವರಾದ ರಮೇಶ್ ಜಿ. ರವರು ಸಸಿಗೆ ನೀರೆರೆಯುವ ಮೂಲಕ ಉದ್ಘಾಟನೆ ಮಾಡಿದರು.
ಪ್ರೆಸ್ ಕ್ಲಬ್‌ನ ಸದಸ್ಯರು ಕ್ರಿಕೆಟ್ ಆಯೋಜಿಸುವ ಮೂಲಕ ದೈಹಿಕವಾಗಿ ಸದೃಢರಾಗಿ, ಮೌಲ್ಯಾಧಾರಿತ ಸುದ್ದಿಗಳನ್ನು ಮಾಡುವುದರ ಮೂಲಕ ಸಮಾಜವನ್ನು ಬದಲಾವಣೆ ಮಾಡುವ ನಿಟ್ಟಿನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು. ರಾಜ್ಯ ಉಪಾಧ್ಯಕ್ಷರಾದ ಹಲಗಿ ಸುರೇಶ್ ಮಾತನಾಡಿ, ಪತ್ರಕರ್ತರಾದವರು ಇಂತಹ ಸೃಜನಶೀಲ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ದೈಹಿಕವಾಗಿ ಸಮರ್ಥರಾಗಬೇಕು ಎಂದರು.
ಕೊಟ್ಟೂರಿನ ಪ್ರೆಸ್ ಕ್ಲಬ್‌ನ ತಾಲ್ಲೂಕು ಘಟಕದ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಿದ್ದಲ್ಲದೆ, ಕೆ.ಕೊಟ್ರೇಶ್‌ರವರನ್ನು ಕರ್ನಾಟಕ ಪ್ರೆಸ್ ಕ್ಲಬ್‌ನ ರಾಜ್ಯ ಉಪಾಧ್ಯಕ್ಷರಾಗಿ ನೇಮಕವಾಗಿ ಆದೇಶ ಪತ್ರ ನೀಡಿದರು. ತಾಲ್ಲೂಕು ಪದಾಧಿಕಾರಿಗಳನ್ನು ನೇಮಕ ಮಾಡಿದರು. ಹಸಿರು ಹೊನಲು ತಂಡದ ಬಿ.ಆರ್. ವಿಕ್ರಮ್ ಮಾತನಾಡಿ, ಒಳ್ಳೆಯ ಕಾರ್ಯಗಳನ್ನು ಮಾಡಲು ನೂರಾರು ವಿಘ್ನಗಳು ಎದುರಾಗುತ್ತವೆ. ಅದೇ ರೀತಿ ಈ ಕ್ರಿಕೆಟ್ ಟೂರ್ನಿಮೆಂಟ್ ಮಾಡಲೂ ಸಹ ಹಲವಾರು ವಿಘ್ನಗಳನ್ನು ಪತ್ರಕರ್ತರು ಇದೆಲ್ಲವನ್ನು ಮೀರಿ ಕರ್ನಾಟಕ ಪ್ರೆಸ್ ಕ್ಲಬ್ ಪ್ರೀಮಿಯರ್ ಲೀಗ್ ಮಾಡಿದ್ದಾರೆ. ಇವರ ಜೊತೆ ನಮ್ಮ ಸಹಕಾರ ಯಾವಾಗಲೂ ಇರುತ್ತದೆ ಎಂದರು. ಈ ಪ್ರೀಮಿಯರ್ ಲೀಗ್ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.
ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ರಕ್ಷಣ ವೇದಿಕೆ ತಾಲೂಕ ಅಧ್ಯಕ್ಷ ಎಂ ಶ್ರೀನಿವಾಸ್, ಬಿ ಆರ್ ವಿಕ್ರಂ, ಬಿಎಸ್ಆರ್ ಮೂಗಣ್ಣ, ಆರ್ ಮೂಗಜ್ಜ, ಪರಶುರಾಮ್ ಎಸ್, ಹಳೆ ಕೊಟ್ಟೂರು ಸೇವಾ ಟ್ರಸ್ಟ್ ಸಂಸ್ಥಾಪಕ ವಿಜಯ್ ಕುಮಾರ್ ಹಟ್ಟಿ, ಇಬ್ರಾಹಿಂ ಕಲೀಲ್, ವಕೀಲರು ಕಿಚ್ಚ ಗುರು ಬಸವರಾಜ್ ಉಪಸ್ಥಿತರಿದ್ದರು




ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ