ಲಿಂಗಸಗೂರು ತಾಲೂಕ ಆಡಳಿತದಿಂದ.ಸಮಾನತೆಯ ದೀಪ.ಹಸಿರು ಕ್ರಾಂತಿ ಹರಿಕಾರ ಬಾಬೂಜೀರವರ 118ನೇ ಜಯಂತೋತ್ಸವ. ಆಚರಣೆ.

 

ಲಿಂಗಸಗೂರು:ಪಟ್ಟಣದ ಜೂನಿಯರ್ ಕಾಲೇಜ್ ಮೈದಾನದಲ್ಲಿ ತಾಲೂಕ ಆಡಳಿತ ವತಿಯಿಂದ. ದೇಶ ಕಂಡ ಆಪ್ರತಿಮಾ ನಾಯಕ ಡಾಕ್ಟರ್ ಬಾಬು ಜಗಜೀವನ್ ರಾಮ್ ರವರ 118ನೆಯ ಜಯಂತ್ಯೋತ್ಸವವನ್ನು ದೀಪಾ ಬೆಳಗಿಸುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಇದಕ್ಕೂ ಮುನ್ನ ಪ್ರಾರ್ಥನೆ ಗೀತೆ ಹಾಗೂ ಭಾರತದ ಸಂವಿಧಾನ ಪೀಠಿಕೆಯನ್ನು ಓದಲಾಯಿತು.ಹಾಗೂ ಬಾಬು ಜಗಜೀವನ್ ರಾಮ್ ರವರ ಭಾವಚಿತ್ರಕ್ಕೆ ಗಣ್ಯ ಮಾನ್ಯರಿಂದ ಹೂಮಾಲೆ ಹಾಗೂ ಪುಷ್ಪಾರ್ಚನೆ ಮಾಡಲಾಯಿತು.

ಕಾರ್ಯಕ್ರಮದ ಪ್ರಸ್ತಾವಿಕ ನುಡಿಯನ್ನು ಶ್ರೀರವೀಂದ್ರ ಉಪ್ಪಾರ್ ಸಹಾಯಕ ನಿರ್ದೇಶಕರು ಗ್ರೇಡ್1ಸಮಾಜ ಕಲ್ಯಾಣ ಇಲಾಖೆ ಇವರು ಮಾತನಾಡಿ.ಭಾರತ ದೇಶದ ಇತಿಹಾಸವನ್ನು ಅವಲೋಕಿಸಿ ನೋಡಿದಾಗ ಶತಾಶತಮಾನಗಳಿಂದ. ಸಮಾನತೆಯಿಂದ ವಂಚಿತವಾದ ಸಮಾಜಕ್ಕೆ ನಿಜವಾದ ಸಾಮಾಜಿಕ ನ್ಯಾಯ.ಹಾರ್ದಿಕ.ರಾಜಕೀಯ. ಮತ್ತು ಇನ್ನಿತರ ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲಿಕ್ಕೆ ನಮಗೆ ಮೂಲಭೂತವಾಗಿ ಸಂವಿಧಾನವೇ ಆಸೆಯೇ.ಸಂವಿಧಾನದ ಆಶಯದಂತೆ ಇಬ್ಬರು ಮಹಾನ್ ವ್ಯಕ್ತಿಗಳಗೀರುವ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್.ಹಗೂ ಡಾಕ್ಟರ್ ಬಾಬು ಜಗಜೀವನ್ ರಾಮ್(ಬಾಬೂಜಿ)ರವರು.ಇವರು ಈ ದೇಶದ ಎರಡು ಕಣ್ಣುಗಳಿದ್ದಂತೆ ಏಕೆಂದರೆ ನಮ್ಮ ಸಂವಿಧಾನದ ಅಡಿಯಲ್ಲಿ ಸಾಮಾಜಿಕ ಆರ್ಥಿಕ ರಾಜಕೀಯ ಮತ್ತು ಶೈಕ್ಷಣಿಕವಾಗಿ ಎಲ್ಲಾ ಜನಾಂಗದವರು ಜನರ ಅಭಿವೃದ್ಧಿ ಹೊಂದಬೇಕು ಹಾಗೂ ತುಳಿತಕ್ಕೆ ಒಳಗಾದ ಜನಾಂಗದವರು ಈ ಎಲ್ಲಾ ಸಮಾಜಿಕ ನ್ಯಾಯವನ್ನು ಪಡೆಯಬೇಕು ಎನ್ನುವಂತ ನಿಟ್ಟಿನಲ್ಲಿ ಮಹನೀಯರು ಸಾಧನೆ ಅವಿಸ್ಮರಣಿಯ.ಎಂದು ಮಾತನಾಡಿದರು.

ಕಾರ್ಯಕ್ರಮದ ಉದ್ಘಾಟಕರಾದ ಶ್ರೀ ಬಸವಣ್ಣಪ್ಪ ಕಲಶೆಟ್ಟಿ ಮಾನ್ಯ ಸಹಾಯಕ ಆಯುಕ್ತರು ಲಿಂಗಸೂರು ಮಾತನಾಡಿ.ಡಾಕ್ಟರ್ ಬಾಬು ಜಗಜೀವನ್ ರಾಮ್ ರವರು ತಮ್ಮ ಇಡೀ ಜೀವನ ಹಿಂದುಳಿದ ವರ್ಗದವರ ಏಳಿಗೆಗಾಗಿ 

ಆವಿರಥವಾಗಿ ಶ್ರಮಿಸಿದ್ದಾರೆ.ಬಾಬೂಜಿ ರವರು ಒಬ್ಬ ಸಂಸದರಾಗಿ.ಮಂತ್ರಿಯಾಗಿ. ಮತ್ತು ಒಬ್ಬ ಜನ ನಾಯಕನಾಗಿ ಅವರು ಈ ದೇಶಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ.ನಮ್ಮ ಇಡೀ ಜೀವನ ಅವರ ಒಂದು ಕೊಡುಗೆ.ಮತ್ತು ಅವರು ಬಿಟ್ಟು ಹೋಗಿರುವಂತ ಆದರ್ಶಗಳನ್ನು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಮತ್ತು ನಾವೆಲ್ಲರೂ ಅದನ್ನು ಮುಂದುವರಿಸಬೇಕು.ಎಂದು ಮಾತನಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ದತಾತ್ರಯ ಕಾರ್ನಾಡ್ ಪೊಲೀಸ್ ಅದಿಕ್ಷಕರು ಲಿಂಗಸೂರು ಮಾತನಾಡಿ ಮಹಾನ್ ಪುರುಷರ ಆದರ್ಶಗಳು ನಮಗೆ ಆದರ್ಶವಾಗಿರಬೇಕು.ಡಾಕ್ಟರ್ ಬಾಬು ಜಗಜೀವನ್ ರಾಮ್ ಅವರನ್ನು ಇಡೀ ಪ್ರಪಂಚ ಬಾಬೂಜೀ ಎಂದು ಕರೆಯುತ್ತಾರೆ.ಬಾಬೂಜೀ ಎಂದರೆ ತಂದೆ.ಅಂತಹ ತಂದೆಯ ವಿಚಾರಗಳನ್ನು ನಾವು ಮಕ್ಕಳಾಗಿ ಪರಿಪಾಲಿಸಬೇಕು.ಅವರು ನಮಗೆ ಹಾಕಿಕೊಟ್ಟ ಆದರ್ಶ ಮಾರ್ಗಗಳನ್ನು ನಾವು ಪಾಲಿಸಬೇಕು.ಬಾಬೂಜಿ ಅವರು ಮಹಾತ್ಮ ಗಾಂಧೀಜಿಯ ಅಪ್ಪಟ ಅನುಯಾಯಿಗಳು ಆಗಿದ್ದರು.ಅಹಿಂಸ ತತ್ವದಲ್ಲಿ ಅವರು ನಂಬಿಕೆ ಇಟ್ಟಿದ್ದರು.ಸಮಾನತೆಯಲ್ಲಿ ನಂಬಿಕೆ ಇಟ್ಟಿದ್ದರು ಎನ್ನುವಂತ ವಿಚಾರ ನಮಗೆಲ್ಲ ಗೊತ್ತಿದೆ.ಆದುದರಿಂದ ಬಾಬೂಜೀ ಅವರ ಆದರ್ಶನವನ್ನು ನಾವು ನೀವೆಲ್ಲರೂ ಪಾಲಿಸೋಣ ಅವರ ಮಾರ್ಗದರ್ಶನದಲ್ಲಿ ನಡೆಯೋಣ ಎಂದು ಹೇಳಿದರು.

ಇದೇ ರೀತಿ ಉಪನ್ಯಾಸಕರಾದ ಮಂಜುನಾಥ್ ಕೆ ಹಾಗೂ ಪಾಮಯ್ಯ ಮುರಾರಿ ಬಾಬೂಜೀ ಅವರ ಕುರಿತು ಮಾತನಾಡಿದರು. ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ತಾಲೂಕ ಆಡಳಿತದಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಉದ್ಘಾಟಕರಾದ ಬಸವಣ್ಣಪ್ಪ ಕಲಶೆಟ್ಟಿ ಮಾನ್ಯ ಸಹಾಯಕ ಆಯುಕ್ತರು ಲಿಂಗಸೂರ್.ತಾಸಿಲ್ದಾರ ಎನ್ ಶಂಶಾಲಂ.ಪುರಸಭೆ ಅಧ್ಯಕ್ಷ ಬಾಬುರೆಡ್ಡಿ ಮುನ್ನರು.ತಾ ಪಂ ಇ ಓ ಉಮೇಶ್.ಡಿ ವೈ ಎಸ್ ಪಿ ದತ್ತಾತ್ರೇಯ ಕಾರ್ನಾಡ್.ಬಿ ಇ ಓ ಹುoಬಣ್ಣ ರಾಥೋಡ್.ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರವೀಂದ್ರ ಉಪ್ಪಾರ್.ಮಂಜುಳಾ ಆಸುಂಡಿ.ಪಾಮಯ್ಯ ಮುರಾರಿ.ರವಿಕುಮಾರ್ ಹಟ್ಟಿ. ಇನ್ನೂ ಅನೇಕ ಅಧಿಕಾರಿಗಳು ಭಾಗವಹಿಸಿದ್ದರು.

ರವಿ ಹಟ್ಟಿ ಸ್ವಾಗತಿಸಿದರು.ಶಿಕ್ಷಕರಾದ ಸಂಗಮೇಶ್ ಕಾರ್ಯಕ್ರಮದ ನಿರೂಪಣೆ ಮಾಡಿದರು.ಹಾಗೂ ಕಾರ್ಯಕ್ರಮದ ವಂದನಾರ್ಪಣೆಯನ್ನು ರವಿಕುಮಾರ್ ನೆರವೇರಿಸಿದರು.

ತಾಲೂಕ ಆಡಳಿತವು ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡಸಿ ಕೊಟ್ಟರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*