ಪೋಸ್ಟ್‌ಗಳು

ಆಂಬುಲೆನ್ಸ್ ನ ಶಬ್ದದಿಂದ ರೋಗಿಗಳ ಯೋಗಕ್ಷೇಮದ ಮೇಲಾಗುವ ಪರಿಣಾಮಗಳು : ಹಾಗೂ ಪರಿಹಾರೋಪಾಯಗಳು

ಇಮೇಜ್
  ಬೆಂಗಳೂರು :ಆಂಬ್ಯುಲೆನ್ಸ್‌ಗಳು,ಮೂಲತಃ ತುರ್ತು ಪರಿಸ್ಥಿತಿಗಳಿಗಾನುಗುಣವಾಗಿ ವಿನ್ಯಾಸಗೊಳಿಸಲಾದ ವಾಹನಗಳಾಗಿವೆ, ಮತ್ತು ಅವುಗಳು ಸಾಮಾನ್ಯವಾಗಿ ತುರ್ತುಸ್ಥಿತಿಯನ್ನು ಸೂಚಿಸಲು ಮತ್ತು ವಾಹನ ದಟ್ಟಣೆಯ ಮೂಲಕ ಮಾರ್ಗವನ್ನು ತೆರವುಗೊಳಿಸಲು ಸೈರನ್‌ಗಳನ್ನು ಹೊಂದಿರುತ್ತವೆ. ಆಂಬ್ಯುಲೆನ್ಸ್ ಸೈರನ್‌ನ ಧ್ವನಿಯು ಸೂಕ್ಷ್ಮ ಕಾರ್ಯವನ್ನು ನಿರ್ವಹಿಸುತ್ತದೆ: ಇದು ಇತರ ಚಾಲಕರು ಮತ್ತು ಪಾದಚಾರಿಗಳನ್ನು ಎಚ್ಚರಿಸುತ್ತದೆ, ತುರ್ತು ವಾಹನಕ್ಕೆ ದಾರಿ ಮಾಡಿಕೊಡಲು ತಕ್ಷಣದ ಕ್ರಮದ ಅಗತ್ಯವನ್ನು ಸೂಚಿಸುತ್ತದೆ. ಆದಾಗ್ಯೂ, ದಟ್ಟಣೆಯನ್ನು ಸರಾಗಗೊಳಿಸುವ ಮತ್ತು ಆಸ್ಪತ್ರೆಗೆ ರೋಗಿಯನ್ನೂ ತ್ವರಿತವಾಗಿ ಸಾಗಿಸಲು ಸಕ್ರಿಯಗೊಳಿಸಲು ಈ ಧ್ವನಿಯು ಅತ್ಯಗತ್ಯವಾಗಿದ್ದರೂ, ಸಾಮಾನ್ಯವಾಗಿ ಈ ಶಬ್ದವನ್ನು ಯಾರು ಕಡೆಗಣಿಸುವುದಿಲ್ಲ. ಆಂಬ್ಯುಲೆನ್ಸ್‌ನಲ್ಲಿರುವ ರೋಗಿಯು ಸಾಮಾನ್ಯವಾಗಿ ಗಂಭೀರ ಸ್ಥಿತಿಯಲ್ಲಿದ್ದಾಗ, ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ. ಅಂತಹ ರೋಗಿಗಳು ಶಾಂತ ಮತ್ತು ಸ್ಥಿರ ಮನಸ್ಥಿತಿಲ್ಲಿರುವುದು ಅವರ ಯೋಗಕ್ಷೇಮಕ್ಕೆ ಒಳ್ಳೆಯದು. ಆದಾಗ್ಯೂ, ಜೋರಾಗಿ, ಮೊಳಗುವ ಸೈರನ್ ಪ್ರಯಾಣದ ಉದ್ದಕ್ಕೂ ನಿರಂತರ ಅಡಚಣೆ ಉಂಟಾಗಿ , ಇದು ರೋಗಿಗೆ ಮತ್ತಷ್ಟು ಒತ್ತಡವನ್ನು ಮತ್ತು ಅಸ್ವಸ್ಥತೆಯನ್ನು ಉಂಟುಮಾಡಬಹುದು ಮತ್ತು ಪ್ರಾಯಶಃ ಅವರ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲೂಬಹುದು. ತುರ್ತುಸ್ಥಿತಿಯನ್ನು ತಿಳಿಸುವ ಅಗಾಧವಾದ ಧ್ವನಿಯನ್ನೂ, ರೋಗಿಯು...

ಜ್ಞಾನಾಕ್ಷಿ ರಾಜರಾಜೇಶ್ವರಿ ಮ್ಯೂಸಿಕ್ ವಿಡಿಯೋ ಆಲ್ಬಮ್ ಶೀರ್ಷಿಕೆ ಅನಾವರಣ

ಇಮೇಜ್
  ಬೆಂಗಳೂರಿನ ಸುಪ್ರಸಿದ್ದ ಐತಿಹಾಸಿಕ ಶ್ರೀ ಜ್ಞಾನಾಕ್ಷಿ ರಾಜರಾಜೇಶ್ವರಿ ದೇವಸ್ಥಾನ, ಶ್ರೀ ಕೈಲಾಸ ಆಶ್ರಮದಲ್ಲಿ ಪರಮಪೂಜ್ಯ ಪರಮಾಚಾರ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಜಯೇಂದ್ರ ಪುರಿ ಮಹಾಸ್ವಾಮೀಜಿಯವರ 64 ನೇ ಜಯಂತಿ ಮಹೋತ್ಸವ ಸಲುವಾಗಿ ಹಲವಾರು ಸಾಂಸ್ಕೃತಿಕ ಆಚರಣೆಗಳು ಅಪಾರ ಭಕ್ತಸಮೂಹದೊಂದಿಗೆ ಅದ್ದೂರಿಯಾಗಿ ನಡೆದವು. ಈ ಸಂದರ್ಭದಲ್ಲಿ ದೇವಿ ಶ್ರೀ ರಾಜರಾಜೇಶ್ವರಿಯನ್ನು ಸ್ತುತಿಸುವ “ಜ್ಞಾನಾಕ್ಷಿ ರಾಜರಾಜೇಶ್ವರಿ” ಎಂಬ ಬಹುಭಾಷಾ ಮ್ಯೂಸಿಕಲ್ ವಿಡಿಯೋ ಆಲ್ಬಮ್ ಶೀರ್ಷಿಕೆಯನ್ನು ಜಗದ್ಗುರು ಶ್ರೀ ಶ್ರೀ ಜಯೇಂದ್ರಪುರಿ ಮಹಾಸ್ವಾಮೀಜಿಯವರು ಅನಾವರಣಗೊಳಿಸಿದರು.  ಸ್ವಾಮೀಜಿಯವರ ಕೃಪಾಶೀರ್ವಾದದೊಂದಿಗೆ ಸಂಸ್ಕೃತ, ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಸೇರಿದಂತೆ ಆರು ಭಾಷೆಗಳಲ್ಲಿ ಈ ಆಲ್ಬಮ್ ತಯಾರಾಗುತ್ತಿದ್ದು ಸಾಂಪ್ರದಾಯಿಕ ಸ್ತೋತ್ರಗಳು, ಶಾಸ್ತ್ರೀಯ ಕೃತಿಗಳು, ಹಾಡುಗಳು ಮತ್ತು ಭಜನೆಗಳನ್ನು ಒಳಗೊಂಡಿದೆ. ಈ ಆಲ್ಬಂ ಅನ್ನು ಖ್ಯಾತ ಸಂಗೀತ ಸಂಯೋಜಕ ಮಹೇಶ್ ಮಹದೇವ್ ಸಂಗೀತ ಸಂಯೋಜನೆ ಮಾಡಿ ನಿರ್ದೇಶನ ಮಾಡಿದ್ದು ಖ್ಯಾತ ಬಹುಭಾಷಾ ಹಿನ್ನೆಲೆ ಗಾಯಕಿ ಡಾ.ಪ್ರಿಯದರ್ಶಿನಿ ಮತ್ತು ಇತರರು ಹಾಡಿದ್ದಾರೆ. ಮಲಯಾಳಂ ಸಾಹಿತ್ಯವನ್ನು ಸಿಜು ತುರವೂರ್, ಸಂಸ್ಕೃತ, ಹಿಂದಿ ಮತ್ತು ಕನ್ನಡ ಸಾಹಿತ್ಯವನ್ನು ಮಹೇಶ್ ಮಹದೇವ್ ರಚಿಸಿದ್ದಾರೆ.  ಇನ್ನೊಂದು ವಿಶೇಷವೆಂದರೆ ಸಂಗೀತ ಸಂಯೋಜಕ ಮಹೇಶ್ ಮಹದೇವ್ ಅವರು ದೇವಿಯ ಮೇಲೆ ಸೃಷ್ಟಿ...

ಭತ್ತ,ತೊಗರಿ ಕೇಂದ್ರ ತೆರೆದು, ಬೆಳೆ ಹಾನಿಯಾದ ರೈತರಿಗೆ ಪರಿಹಾರ ನೀಡಬೇಕು ಎಂದು ತಹಶೀಲ್ದಾರ್ ಅವರಲ್ಲಿ ಕರ್ನಾಟಕ ರೈತ ಸಂಘ ಮನವಿ

ಇಮೇಜ್
ಮಸ್ಕಿ : ಪಟ್ಟಣದ ಬಸವೇಶ್ವರ ನಗರದ ತಹಶೀಲ್ದಾರರ ಕಚೇರಿಯಲ್ಲಿ ಭತ್ತ, ತೊಗರಿ ಖರೀದಿ ಕೇಂದ್ರ ಶೀಘ್ರಗತಿಯಲ್ಲಿ ತೆರೆಯಬೇಕು ಹಾಗು ದಿ:14-11-2024 ಕ್ಕೆ ಸುರಿದ ಭಾರಿ ಮಳೆಗೆ ಭತ್ತದ ಬೆಳೆ ನೆಲಕಚ್ಚಿದ್ದು, ಭತ್ತ ಹಾನಿಯಾದ ರೈತರಿಗೆ ಬೆಳೆ ನಷ್ಟ ಪರಿಹಾರ ಒದಗಿಸಿ ಮತ್ತು ರೈತರ ಕೃಷಿ ಉತ್ಪನ್ನಗಳ ಮಾರಾಟಗಳಿಗೆ ಅನುಕೂಲ ಕಲ್ಪಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ತಹಶೀಲ್ದಾರ್ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ತುಂಗಭದ್ರ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ರಾಯಚೂರು ಮತ್ತು ಕೊಪ್ಪಳ ಬಳ್ಳಾರಿ ಜಿಲ್ಲೆಗಳಲ್ಲಿ ಕಳೆದ 20 ದಿನಗಳಿಂದ ಭತ್ತ ಕಟಾವು ಪ್ರಾರಂಭಗೊಂಡಿದೆ. ಸರ್ಕಾರ ಅತ್ಯಂತ ತೀವ್ರ ಗತಿಯಲ್ಲಿ ಭತ್ತ ಹಾಗು ತೊಗರಿ ಖರೀದಿ ಕೇಂದ್ರ ತೆರೆಯಬೇಕು. ಸರ್ಕಾರ ಪ್ರತಿ ವರ್ಷ ರೈತರ ಭತ್ತ, ತೊಗರಿ ಖಾಲಿಯಾದ ಮೇಲೆ ಖರೀದಿ ಕೇಂದ್ರ ತೆರೆದು ವರ್ತಕರಿಗೆ ಹಾಗು ದಲ್ಲಾಳಿಗಳಿಗೆ ಅನುಕೂಲ ಮಾಡಿದಂತೆ ಆಗುತ್ತದೆ. ತಾವುಗಳು ಈ ರೈತ ವಿರೋಧಿ ಧೋರಣೆಗಳಿಗೆ ಕಡಿವಾಣ ಹಾಕಬೇಕಾಗಿದೆ. ಸ್ಥಳೀಯ ಅಧಿಕಾರಿಗಳು ದಲ್ಲಾಳಿಗಳೊಂದಿಗೆ ಶಾಮೀಲಾಗಿ ರೈತರಿಗೆ ನಷ್ಟವುಂಟು ಮಾಡುತ್ತಾರೆ. ದಿನಾಂಕ: 04-11-2024 ರಂದು ರಾಯಚೂರಿನಲ್ಲಿ ನಡೆದ ಕೆ.ಡಿ.ಪಿ. ಸಭೆಯಲ್ಲಿ ಭತ್ತ ತೊಗರಿ ಖರೀದಿ ಕೇಂದ್ರತೆರೆಯುವ ಕುರಿತು ನಮ್ಮ ಜಿಲ್ಲೆಯ ಉಸ್ತುವಾರಿ ಮಂತ್ರಿ ಶರಣು ಪ್ರಕಾಶ ಪಾಟೀಲ್ ಮತ್ತು ಸಣ್ಣ ನೀರಾವರಿ ಸಚಿವರಾದ ಎನ್.ಎಸ್. ಬೋಸರಾಜ್ ಮಾತನಾಡದಿರುವುದು ಅತ್ಯಂತ ನ...

ಹಡಗಲಿ ಗ್ರಾಮದ ಸಾರ್ವಜನಿಕ ಸ್ಮಶಾನ ಜಾಗದ ಹದ್ದುಬಸ್ತ್ ಗೆ ಆಗ್ರಹಿಸಿ ತಹಸೀಲ್ದಾರ್‌ಗೆ ಮನವಿ

ಇಮೇಜ್
  ಮಸ್ಕಿ : ತಾಲೂಕಿನ ಹಡಗಲಿ ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನ ಜಾಗದ ಹದ್ದುಬಸ್ತು ಮಾಡಿ, ಮೃತರ ಗೌರವಯುತ ಅಂತ್ಯಕ್ರಿಯೆಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿ, ಗ್ರಾಮಸ್ಥರು ತಹಸೀಲ್ದಾರ್ ಡಾ.ಮಲ್ಲಪ್ಪ ಕೆ.ಯರಗೋಳ ಅವರ ಮೂಲಕ ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಹಡಗಲಿ ಸೀಮಾದಲ್ಲಿ ಬರುವ ಸರ್ವೆ ನಂ.04*/2 ವಿಸ್ತೀರ್ಣ 27 ಗುಂಟೆ ಜಮೀನಿನಲ್ಲಿ ನೂರಾರು ವರ್ಷಗಳಿಂದ ಗ್ರಾಮದ ಎಲ್ಲ ಸಮುದಾಯದವರು ಶವ ಸಂಸ್ಕಾರ ಮಾಡುತ್ತ ಬಂದಿದ್ದಾರೆ. ಆದರೆ, ಸ್ಮಶಾನ ಜಾಗದ ಪಕ್ಕದಲ್ಲಿ ಜಮೀನು ಹೊಂದಿರುವ ಅಮರಮ್ಮ ಬಸಪ್ಪ ಎಂಬುವವರು ಇತ್ತೀಚಿಗೆ ನಾಲ್ಕೈದು ವರ್ಷಗಳಿಂದ ಸ್ಮಶಾನದ ಭೂಮಿಯನ್ನು ಅತಿಕ್ರಮಿಸಿ ಶವ ಸಂಸ್ಕಾರಕ್ಕೆ ಅವಕಾಶ ಕೊಡದೇ ವಿನಾಕಾರಣ ಅಡ್ಡಿಪಡಿಸುತ್ತಿದ್ದಾರೆ. ಈ ಕುರಿತು ತಹಸೀಲ್ದಾರ್ ಅವರಿಗೆ ನವೆಂಬರ್ 6, 2023ರಂದು ಮನವಿ ಸಲ್ಲಿಸಿ, ವಿವಾದವನ್ನು ಪರಿಹರಿಸಲು ಸಾರ್ವಜನಿಕ ಸ್ಮಶಾನ ಜಾಗದ ಹದ್ದುಬಸ್ತು ಮಾಡಿಕೊಡುವಂತೆ ಒತ್ತಾಯಿಸಲಾಗಿತ್ತು. ಆದರೆ, ಇಲ್ಲಿಯವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇದರಿಂದ ಗ್ರಾಮದಲ್ಲಿ ಯಾರೇ ಮೃತಪಟ್ಟರೂ ಅಂತ್ಯಕ್ರಿಯೆ ನೆರವೇರಿಸಲು ಸಮಸ್ಯೆ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ತಹಸೀಲ್ದಾರ್ ಅವರ ಗಮನ ಸೆಳೆದರು.   ಆದಷ್ಟು ಶೀಘ್ರ ಹದ್ದುಬಸ್ತು ಕಾರ್ಯ ಪೂರ್ಣಗೊಳಿಸಿ ಸಾರ್ವಜನಿಕ ಸ್ಮಶಾನ ಜಾಗದ ವಿವಾದವನ್ನು ಸುಖಾಂತ್ಯಗೊಳಿಸಬೇಕು, ಒಂದು ವೇಳೆ ನಿರ್ಲಕ್ಷ ಮುಂದುವರಿಸಿದ...

ಆಶ್ರಯ ನೀಡಿದ ಮರಗಳು ಇಲ್ಲದೆ ರಸ್ತೆಗಳು ಖಾಲಿ ಖಾಲಿ : ಗಿಡಗಳ ನೆಟ್ಟು ಪರಿಸರ ಉಳಿಸಿ ಪ್ರಕೃತಿ ಫೌಂಡೇಶನ್ ಶಿವಮೂರ್ತಿ ಗದ್ಗಿಮಠ ಮನವಿ

ಇಮೇಜ್
  ಮಸ್ಕಿ : ಪಟ್ಟಣದಲ್ಲಿ ಶತಮಾನಗಳ ಕಾಲ ನೆರಳನ್ನು ನೀಡಿ, ಸಾವಿರಾರು ಜನರಿಗೆ ಆಶ್ರಯ ನೀಡಿದ ಗಿಡಗಳನ್ನು ರಸ್ತೆ ಅಗಲೀಕರಣಕ್ಕಾಗಿ ಕಡಿದು ಪುನಃ ಮರಗಳನ್ನು ನೆಡದೇ ಮಸ್ಕಿ ಪಟ್ಟಣದ ಹಸಿರು ಗಿಡಗಳನ್ನು ಉಳಿಸಿ ಬೆಳೆಸುವ ಅಧಿಕಾರಿಗಳು ಮಾತ್ರ ಮೌನಕ್ಕೆ ಜಾರಿದ್ದಾರೆ. ಹಿಂದೆ  ಪಟ್ಟಣದ ಗಳೇ ಬಸ್‌ನಿಲ್ದಾಣದೊಳಗಿದ್ದ ಮರಗಳು ಬಹು ಕಾಲದಿಂದ ಸಾರ್ವಜನಿಕರಿಗೆ ಹಾಗೂ ಶಾಲೆಯ ಮಕ್ಕಳಿಗೆ,ಪ್ರಯಾಣಿಕರಿಗೆ ಆಶ್ರಯವಾಗಿದ್ದ ಮರಗಳೇ ಇಲ್ಲದೆ ರಸ್ತೆಗಳು ಅನಾಥವಾಗಿವೆ.ಹಿಂದೆ ತಾಲ್ಲೂಕಿನ ವಿವಿಧ ಸರ್ಕಾರಿ ಕಚೇರಿ, ಬ್ಯಾಂಕ್‌ಗಳಿಗೆ ಮರದ ಕೆಳಗೆ ನೆರಳಿನಲ್ಲಿ ವಿಶ್ರಮಿಸುತ್ತಿದ್ದರು. ಆದರೆ ಇಂದು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಇಚ್ಚಾಸಕ್ತಿ ಕೊರತೆ ಯಿಂದ ತಾಲ್ಲೂಕಿನ ವಿವಿಧ ಪ್ರಮುಖ ರಸ್ತೆಯ ಎರಡೂ ಬದಿ ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಮರಗಳು ಇಲ್ಲವಾದ್ದರಿಂದ ರಸ್ತೆಗಳು ಬೋಳು ಬೋಳಾಗಿ ಕಾಣುತ್ತಿದೆ. ಸರ್ಕಾರ ಗಿಡ ನೆಡಿ, ಪರಿಸರ ಉಳಿಸಿ, ಪರಿಸರವಿದ್ದರೆ ನಾಡಿಗೆ ಮಳೆ, ಮಳೆ ಇದ್ದರೆ ಬೆಳೆ ಎಂದು ಪ್ರಚಾರ ಮಾಡುತ್ತದೆ. ಇನ್ನೊಂದೆಡೆ ಗಿಡ-ಮರಗಳನ್ನು ಪರೋಕ್ಷವಾಗಿ ಕಡಿಸುತ್ತಿದೆ ಎಂಬ ಆರೋಪವು ಕೇಳಿಬರುತ್ತದೆ. ಹೀಗಾಗಿ ರಸ್ತೆ ಬದಿಯಲ್ಲಿ ನೆರಳು ಮಾಯವಾಗುತ್ತಿದೆ. ಮರಗಳನ್ನು ಕಡಿದ ಪ್ರಮಾಣದಲ್ಲೇ ಪಟ್ಟಣದಲ್ಲಿ ಬೇರೆ ಸಸಿಗಳನ್ನು ನೆಡುವುದು ಅಗತ್ಯವಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಇನ್ನಾದೂರು ಸಂಬಂಧಿಸಿದ ಅಧಿಕಾರಿಗಳು ಹ...

ಕೃಷ್ಣಾ ಬಿ ಸ್ಕೀಮ್ ತಕ್ಷಣ ಜಾರಿ ಮಾಡಿ - ಕರ್ನಾಟಕ ರೈತ ಜನ ಸಂಘ ಹಾಗೂ ಹಸಿರು ಸೇನೆ ಆಗ್ರಹ!

ಇಮೇಜ್
ವರದಿ - ಮಂಜುನಾಥ ಕೋಳೂರು ಕೊಪ್ಪಳ  ಕೊಪ್ಪಳ:ನ,19: -ಜಿಲ್ಲೆಯಲ್ಲಿ ಕೃಷ್ಣಾ ಬಿ ಸ್ಕೀಮ್ ತಕ್ಷಣ ಜಾರಿ ಮಾಡಿ ಕೊಪ್ಪಳ,ಕುಷ್ಟಗಿ, ಯಲಬುರ್ಗಾ, ಕನಕಗಿರಿ,ಎಲ್ಲಾ ತಾಲೂಕುಗಳು ಸಂಪೂರ್ಣ ನೀರಾವರಿ ಪ್ರದೇಶಗಲಾಗುತ್ತವೆ ಎಂದು ರಾಜ್ಯಾಧ್ಯಕ್ಷ ವೀರನಗೌಡ ಮಾಲಿಪಾಟೀಲ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಜಿಲ್ಲೆಯಲ್ಲಿ ತುಂಗಭದ್ರಾ ಯೋಜನೆ ವ್ಯಾಪ್ತಿಯಲ್ಲಿ ಸ್ವಲ್ಪ ಪ್ರಮಾಣದ ಭೂಮಿ ನೀರಾವರಿಯಾಗಿದೆ ಅಷ್ಟೇ ಅಲ್ಲದೆ 70% ಒಣ ಭೂಮಿ ಇದೆ , ಈ ಭೂಮಿಯು ಮಳೆಯ ಆಧಾರಿತ ಪ್ರದೇಶಗಳಾಗಿವೆ ಮಳೆಬಂದ್ರು   ಬೆಳೆ ಇಲ್ಲಾ , ಬೆಂಗಳೂರು, ಮಂಗಳೂರು,ಮುಂಬೈಗೆ ದುಡಿಯಲು ವಲಸೆ ಹೋಗಬೇಕಾಗುತ್ತದೆ. ಕೃಷ್ಣ ಬಿ ಸ್ಕೀಮ್ ಯೋಜನೆ ಹೋರಾಟ ಪ್ರಾರಂಭವಾಗಿ ಸುಮಾರು 10-12 ವರ್ಷಗಳಾಗಿವೆ ಇನ್ನು ಯೋಜನೆ ಪರಿಪೂರ್ಣ ಆಗಿಲ್ಲ , ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆ ಸಂದರ್ಭದಲ್ಲಿ ಈ ಯೋಜನೆ ಅನುಷ್ಠಾನಕ್ಕಾಗಿ ಬೇವೂರಿನಲ್ಲಿ ಒಂದು ಕಾರ್ಯಕ್ರಮ ಮಾಡಲಾಗಿತ್ತು. ಈ ಯೋಜನೆ ಸಂಪೂರ್ಣ ಅನುಷ್ಠಾನವಾದರೆ, ಸುಮಾರು 2.701% ಲಕ್ಷ ಎಕರೆ ಭೂಮಿ ನೀರಾವರಿ ಪ್ರದೇಶವಾಗಿ ಮಾರ್ಪಾಡಾಗುತ್ತದೆ . ರೈತರು, ಕಾರ್ಮಿಕರು , ಬಡವರು ಗುಳೇ ಹೋಗುವುದು ತಪ್ಪುತ್ತದೆ ಇದರಿಂದ ಜನ ಇಲ್ಲಿ ಬದುಕನ್ನು ಕಟ್ಟಿಕೊಳ್ಳಲು ಈ ಯೋಜನೆ ಆದಷ್ಟು ಬೇಗ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಜನ ಪ್ರತಿನಿಧಿ...

537ನೇ ಕನಕದಾಸರ ಜಯಂತಿ ಆಚರಣೆ

ಇಮೇಜ್
  ಮಸ್ಕಿ : ತಾಲೂಕಿನ ಬುದ್ದಿನ್ನಿ ಎಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 537ನೇ ಕನಕದಾಸರ ಜಯಂತಿ ಅಂಗವಾಗಿ ಭಕ್ತ ಕನಕದಾಸರ ಫೋಟೋಗೆ ಮಾಲಾರ್ಪಣೆ ಮಾಡುವ ಮೂಲಕ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ನಾಗರೆಡ್ಡೆಪ್ಪ ದೇವರಮನಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.  ನಂತರ ಶಾಲೆಯ ಅತಿಥಿ ಶಿಕ್ಷಕಿ ರಾಚಮ್ಮ ಸಾರಂಗಮಠ ಕನಕದಾಸರ ಜೀವನ ಚರಿತ್ರೆಯ ಕುರಿತು ಮಕ್ಕಳಿಗೆ ಉಪನ್ಯಾಸ ನೀಡಿದರು. ಹಿರಿಯ ಶಿಕ್ಷಕಿ ಪ್ರೇಮಾ ಸ್ವಾಗತಿಸಿ ನಿರೂಪಿಸಿದರು. ಈ ಸಂದರ್ಭದಲ್ಲಿ ಶಾಲೆಯ ಪ್ರಭಾರಿ ಮುಖ್ಯಗುರುಗಳಾದ ಹೊಳೆಬಸಪ್ಪ ಸಜ್ಜನ್,ಹಿರಿಯ ಶಿಕ್ಷಕರಾದ ಆದೇಶ ಸಾನಬಾಳ, ಅತಿಥಿ ಶಿಕ್ಷಕರಾದ ಸಿದ್ದಪ್ಪ ಹೂವಿನಭಾವಿ, ಹನುಮಂತ ಭಜಂತ್ರಿ ,ಆರೋಗ್ಯಮೇರಿ ಹೂವಿನಭಾವಿ, ಸವಿತಾ ಮಸ್ಕಿ,ಎಲ್ ಕೆ ಜಿ ಯುಕೆಜಿ ಸಹಾಯಕಿ ಹುಲಿಗೆಮ್ಮ ದೇವರಮನಿ ಹಾಗೂ ಶಾಲಾ ಮಕ್ಕಳು ಹಾಜರಿದ್ದರು.