ದೇವೇಗೌಡ 2 ನಾಲಿಗೆ ಮನುಷ್ಯ
ಸುದೀರ್ಘ ದಿನಗಳ ನಂತರ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರು ತಮ್ಮ ರಾಜಕೀಯ ಕಡುವೈರಿ ಎನಿಸಿದ್ದ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರನ್ನು ಗುಣಗಾನ ಮಾಡಿರುವುದು ಹಾಸ್ಯಾಸ್ಪದ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಅವರು ಟೀಕಿಸಿದ್ದಾರೆ. ರಾಮಕೃಷ್ಣ ಹೆಗಡೆ ಅವರು ಬದುಕಿದ್ದಾಗ ಒಂದು ರೀತಿ ಕಷ್ಟ ಕೊಟ್ಟು ಅವರನ್ನು ಪಕ್ಷದಿಂದಲೇ ಉಚ್ಛಟನೆ ಮಾಡಿಸಿದ್ದ ದೇವೇಗೌಡ ರು ಈಗ ಆತ್ಮೀಯತೆಯ ಮಾತಾಡಿರುವುದು ಎರಡು ಬಗೆಯ ನಾಲಿಗೆಗೆ ಉದಾಹರಣೆಯಾಗಿದೆ. ದೇವೇಗೌಡರು ರಾಮಕೃಷ್ಣ ಹೆಗ್ಗಡೆಯವರಿಗೆ ಮೋಸ ಮಾಡಿದ್ದಾರೆ 1994 ರಲ್ಲಿ ಮುಖ್ಯಮಂತ್ರಿ, 1996 ರಲ್ಲಿ ಪ್ರಧಾನಿಯಾಗಬೇಕಿದ್ದದ್ದು ದೇವೇಗೌಡರಲ್ಲ ಬದಲಾಗಿ ರಾಮಕೃಷ್ಣ ಹೆಗ್ಗಡೆಯವರು.1994 ರಲ್ಲಿ ಜನಾತಾಪಕ್ಷ ಅಧಿಕಾರಕ್ಕೆ ಬಂದಾಗ ವಿಧಾನಸೌಧದ ಸುತ್ತಲೂ ಸೇರಿದ್ದ ಅರ್ತಾತ್ ಸೇರಿಸಿದ್ದ ಜನಸಂದಣಿ ಯಾರ ವಿರುದ್ದ ಎಂಬುದು ಇತಿಹಾಸದಲ್ಲಿ ದಾಖಲಾಗಿದೆ ಹಾಗೆಯೇ ಹೆಗಡೆಯವರು ಮುಂದೆ ಹಾಸನದಲ್ಲಿ ಲೋಕ ಶಕ್ತಿ ಪಕ್ಷದ ಪ್ರಚಾರಕ್ಕೆ ಹೋದಾಗ ಹೆಗಡೆಯವರ ಮೇಲಾದ ಕಲ್ಲೆಸೆತದ ಹಿಂದೆ ಯಾರಿದ್ದರು ಎಂಬುದು ನಿಮ್ಮ ಊಹೆಗೆ ಬಿಟ್ಟಿದ್ದು. ವೀರೇಂದ್ರ ಪಾಟೀಲರು, ರಾಮಕೃಷ್ಣ ಹೆಗ್ಗಡೆ, ದೇವೇಗೌಡರು ಹಾಗೂ ಬೊಮ್ಮಯಿ ಈ ನಾಲ್ವರೂ ಒಬ್ಬರಿಗೊಬ್ಬರು ಪರಮ ಮಿತ್ರರು ಮೇಲಾಗಿ ನಿಜಲಿಂಗಪ್ಪನವರ ಪರಮ ಶಿಷ್ಯರು. ದೇವೇಗೌಡರು ಜನತಾ ಪಕ್ಷದ ಅಧ್ಯಕ್ಷರಾಗಿದ್ದ ಸಮಯದಲ್ಲಿ ದೇವೇಗೌಡರು ನೀಡಿದ ಕಿ...