ನಮ್ಮ ಪ್ರಜಾ ಸಾಕ್ಷಿ ವರದಿಗೆ ಎಚ್ಚೆತ್ತು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಹಾಗೂ ತಹಶೀಲ್ದಾರ್ ಸ್ಥಳ ಭೇಟಿ
ಫಲಶ್ರುತಿ ವರದಿ ವರದಿ : ಗ್ಯಾನಪ್ಪ ದೊಡ್ಡಮನಿ ಮಸ್ಕಿ : ಪಟ್ಟಣದ ತಹಶೀಲ್ದಾರ ಕಚೇರಿಯ ಹಿಂಭಾಗದ ಪರಿಶಿಷ್ಟ ಪಂಗಡ ಬಾಲಕಿಯರ ಮೆಟ್ರಿಕ್ ಪೂರ್ವ ವಸತಿ ನಿಲಯದ ವಿದ್ಯಾರ್ಥಿಗಳು ನಿಲಯ ಮೂಲಭೂತ ಸೌಕರ್ಯ ಹಾಗೂ ಪಾಲಕರ ವರ್ತನೆಯ ಕುರಿತು ತಹಶೀಲ್ದಾರರಾದ ಡಾ.ಮಲ್ಲಪ್ಪ.ಕೆ. ಯರಗೋಳ ಅವರಲ್ಲಿ ತಮ್ಮ ನೋವಿನ ಅಳಲನ್ನು ಪರಿಹರಿಸುವಂತೆ ವಿದ್ಯಾರ್ಥಿನಿಯರು ಮನವಿ ಪತ್ರವನ್ನು ಸಲ್ಲಿಸಿದ್ದಾರೆ.ನಮ್ಮ ಹಾಸ್ಟೆಲ್ ನಲ್ಲಿ 108 ವಿದ್ಯಾರ್ಥಿನಿಯರ ಹಾಜರಾತಿ ದಾಖಲಾಗಿದ್ದು ಇದರಲ್ಲಿ 48 ವಿದ್ಯಾರ್ಥಿನಿಯರು ಪ್ರಸ್ತುತ ಇದ್ದೇವೆ ನಮಗೆ ನಮ್ಮ ವಾರ್ಡನ್ ಮೇಡಂ, ಇವರು ಸರಿಯಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸದೇ ತಿಂಗಳಗೊಮ್ಮೆ ಸರಿಯಾಗಿ ಕಿಟ್ ಕೊಡುತ್ತಿಲ್ಲ ಜೂನ್ ತಿಂಗಳಿಂದ ಇಲ್ಲಿಯರೆಗೆ ಒಂದು ಸಲ ಮಾತ್ರ ಕಿಟ್ ಕೊಟ್ಟಿದ್ದಾರೆ ಮತ್ತು ಅದರಲ್ಲಿ ನಮಗೆ ಕಡಿಮೆ ವಸ್ತುಗಳನ್ನು ಕೊಟ್ಟಿದ್ದಾರೆ. ನಮಗೆ ಈ ಸಾಮಗ್ರಿಗಳು ಸಾಕಾಗುತ್ತಿಲ್ಲ, ಆದುದರಿಂದ ನಾವು ಮನೆಯಿಂದ ಅಂಗಡಿಯಿಂದ ತರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಊಟದ ವಿವರಣೆಯಲ್ಲಿ ಮೂರು ವಾರಕ್ಕೊಮ್ಮೆ ಚಿಕನ್ ಮಾಡಬೇಕೆಂದು ಮೆನು ಚಾಟ್ ಪ್ರಕಾರ ನಿಯಮ ಇದೆ ಆದರೆ ನಮ್ಮ ವಾರ್ಡನ್ ಮೇಡಂ ಜೂನ್ ತಿಂಗಳಿಂದ ಇಲ್ಲಿಯವರೆಗೆ ಒಂದು ಸಲ ಮಾತ್ರ ಚಿಕನ್ ಮಾಡ್ಸಿದ್ದಾರೆ ಮತ್ತು ಎರಡು ವಾರದಿಂದ ಬಾಳೆಹಣ್ಣು ಕೊಟ್ಟಿಲ್ಲ ದಿನ ಪತ್ರಿಕೆ ತರಿಸುತ್ತಿಲ್ಲ ನಮಗೆ ಆಗಸ್ಟ್ 31 ರಂದು ಬೆಳಗ್ಗೆ 6 ರಿಂದ ಸಾಯಂಕಾ...