*ಬಯಲು ಸೀಮೆಯನ್ನು ಹಸುರಾಗಿಸಿದ ಹಸಿರು ಹೊನಲು ಸೇವಾ ಸಂಸ್ಥೆ*
"ಹಸಿರು ಹೊನಲು ಸೇವಾ ಸಂಸ್ಥೆಯಿಂದ ಕೊಟ್ಟೂರಿನ ಇತಿಹಾಸದಲ್ಲಿ ಮೊದಲ ಬಾರಿಗೆ ಗಿಡಗಳ ಮೆರವಣಿಗೆಗೆ ಸಾಕ್ಷಿ " ಮಕ್ಕಳಿಂದ ಪರಿಸರ ಬಗ್ಗೆ ಜಯ ಘೋಷ ಕೂಗುತ್ತಾ ಪರಿಸರ ಸಂದೇಶ ಕೊಟ್ಟೂರು: ಸದಾ ಬರಗಾಲಕ್ಕೆ ಹೆಸರುವಾಸಿವಾಗಿರುವ ಕಲ್ಯಾಣ ಕರ್ನಾಟಕದಲ್ಲಿ ಕೊಟ್ಟೂರು ಪಟ್ಟಣದಲ್ಲಿ ಹಸಿರು ಹೊನಲು ಸೇವಾ ಸಂಸ್ಥೆಯು ಸದಾ ಪರಿಸರ ಸಂರಕ್ಷಣೆ, ಜಾತ್ರೆ ಸಂದರ್ಭದಲ್ಲಿ ಸ್ವಚ್ಛತೆ ಹಾಗೂ ಮಡಿದವರ ಹೆಸರಿನಲ್ಲಿ ಗಿಡ ನೆಡುವ, ನೆಟ್ಟಿರುವ ಗಿಡವನ್ನು ಬೆಳೆಸಿ ಪರಿಸರ ಕಾಳಜಿಯನ್ನು ತೋರುತ್ತಿದ್ದಾರೆ. ಇದೇ ತರಹ ಪ್ರತಿಯೊಬ್ಬರೂ ಗಿಡ ನೆಡುವ ಕೆಲಸ ಮಾಡಬೇಕು ಎಂದು ಪರಿಸರ ತಜ್ಞ ಶಿವಾನಂದ ಕಳವೆ ಹೇಳಿದರು. ಇದಕ್ಕೂ ಮೊದಲು ಪಟ್ಟಣದಲ್ಲಿ ಹಸಿರು ಹೊನಲು ಸೇವಾ ಸಂಸ್ಥೆ ಇವರಿಂದ ಜೂನ್ ಒಂದರಿಂದ ಒಂದು ತಿಂಗಳ ಕಾಲ ಗಿಡ ನೆಡುವ ಅಭಿಯಾನವನ್ನು ಹಮ್ಮಿಕೊಂಡಿದ್ದರು. ಅದರ ಸಮಾರೋಪ ಸಮಾರಂಭ ಭಾನುವಾರದಂದು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನದಿಂದ ಹಸಿರ ಹಬ್ಬ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಾಮಾನ್ಯವಾಗಿ ಮೆರವಣಿಗೆ ಎಂದರೆ ವಧು-ವರರ ಮೆರವಣಿಗೆ ಅಥವಾ ಗಣ್ಯರ ಮೆರವಣಿಗೆ ನೋಡಿದ್ದೇವೆ ಕೇಳಿದ್ದೇವೆ ಆದರೆ ಕೊಟ್ಟೂರಿನ ಇತಿಹಾಸದಲ್ಲಿ ಮೊದಲ ಬಾರಿಗೆ ಗಿಡಗಳ ಮೆರವಣಿಗೆಯನ್ನು ನಡೆಸಲಾಯಿತು. ಈ ಮೆರವಣಿಗೆಗೆ ಸಮಾಳ, ನಂದಿಕೋಲುಗಳು ದಾರಿಯುದ್ದಕ್ಕೂ ಶಬ್ದದಿಂದ ಮೆರವಣಗೆಗೆ ಮೆರಗನ್ನು ತಂದಿತ್ತು. ಮಕ್ಕಳಿಂದ ಪರಿಸರ ಬಗ್ಗೆ ಜಯ ಘೋಷ ಕೂಗುತ್ತಾ ಪರಿಸರ...