ಪೋಸ್ಟ್‌ಗಳು

*ಬಯಲು ಸೀಮೆಯನ್ನು ಹಸುರಾಗಿಸಿದ ಹಸಿರು ಹೊನಲು ಸೇವಾ ಸಂಸ್ಥೆ*

ಇಮೇಜ್
"ಹಸಿರು ಹೊನಲು ಸೇವಾ ಸಂಸ್ಥೆಯಿಂದ ಕೊಟ್ಟೂರಿನ ಇತಿಹಾಸದಲ್ಲಿ ಮೊದಲ ಬಾರಿಗೆ ಗಿಡಗಳ ಮೆರವಣಿಗೆಗೆ ಸಾಕ್ಷಿ " ಮಕ್ಕಳಿಂದ ಪರಿಸರ ಬಗ್ಗೆ ಜಯ ಘೋಷ ಕೂಗುತ್ತಾ ಪರಿಸರ ಸಂದೇಶ ಕೊಟ್ಟೂರು: ಸದಾ ಬರಗಾಲಕ್ಕೆ ಹೆಸರುವಾಸಿವಾಗಿರುವ ಕಲ್ಯಾಣ ಕರ್ನಾಟಕದಲ್ಲಿ ಕೊಟ್ಟೂರು ಪಟ್ಟಣದಲ್ಲಿ ಹಸಿರು ಹೊನಲು ಸೇವಾ ಸಂಸ್ಥೆಯು ಸದಾ ಪರಿಸರ ಸಂರಕ್ಷಣೆ, ಜಾತ್ರೆ ಸಂದರ್ಭದಲ್ಲಿ ಸ್ವಚ್ಛತೆ ಹಾಗೂ ಮಡಿದವರ ಹೆಸರಿನಲ್ಲಿ ಗಿಡ ನೆಡುವ, ನೆಟ್ಟಿರುವ ಗಿಡವನ್ನು ಬೆಳೆಸಿ ಪರಿಸರ ಕಾಳಜಿಯನ್ನು ತೋರುತ್ತಿದ್ದಾರೆ. ಇದೇ ತರಹ ಪ್ರತಿಯೊಬ್ಬರೂ ಗಿಡ ನೆಡುವ ಕೆಲಸ ಮಾಡಬೇಕು ಎಂದು ಪರಿಸರ ತಜ್ಞ ಶಿವಾನಂದ ಕಳವೆ ಹೇಳಿದರು. ಇದಕ್ಕೂ ಮೊದಲು ಪಟ್ಟಣದಲ್ಲಿ ಹಸಿರು ಹೊನಲು ಸೇವಾ ಸಂಸ್ಥೆ ಇವರಿಂದ ಜೂನ್ ಒಂದರಿಂದ ಒಂದು ತಿಂಗಳ ಕಾಲ ಗಿಡ ನೆಡುವ ಅಭಿಯಾನವನ್ನು ಹಮ್ಮಿಕೊಂಡಿದ್ದರು. ಅದರ ಸಮಾರೋಪ ಸಮಾರಂಭ ಭಾನುವಾರದಂದು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನದಿಂದ ಹಸಿರ ಹಬ್ಬ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಾಮಾನ್ಯವಾಗಿ ಮೆರವಣಿಗೆ ಎಂದರೆ ವಧು-ವರರ ಮೆರವಣಿಗೆ ಅಥವಾ ಗಣ್ಯರ ಮೆರವಣಿಗೆ ನೋಡಿದ್ದೇವೆ ಕೇಳಿದ್ದೇವೆ ಆದರೆ ಕೊಟ್ಟೂರಿನ ಇತಿಹಾಸದಲ್ಲಿ ಮೊದಲ ಬಾರಿಗೆ ಗಿಡಗಳ ಮೆರವಣಿಗೆಯನ್ನು ನಡೆಸಲಾಯಿತು. ಈ ಮೆರವಣಿಗೆಗೆ ಸಮಾಳ, ನಂದಿಕೋಲುಗಳು ದಾರಿಯುದ್ದಕ್ಕೂ ಶಬ್ದದಿಂದ ಮೆರವಣಗೆಗೆ ಮೆರಗನ್ನು ತಂದಿತ್ತು. ಮಕ್ಕಳಿಂದ ಪರಿಸರ ಬಗ್ಗೆ ಜಯ ಘೋಷ ಕೂಗುತ್ತಾ ಪರಿಸರ...

"ಕರ್ನಾಟಕ ಪ್ರಸ್ ಕ್ಲಬ್ ಹಗರಿ ಬೊಮ್ಮನಹಳ್ಳಿ ತಾಲೂಕು ಅಧ್ಯಕ್ಷರಾಗಿ ಶಿವಶಂಕರ ಸ್ವಾಮಿ ಅವಿರೋಧವಾಗಿ ಆಯ್ಕೆ"

ಇಮೇಜ್
*ಕರ್ನಾಟಕ ಪ್ರಸ್ ಕ್ಲಬ್ ತಾಲೂಕು ಘಟಕ ಪ್ರಾರಂಭೋತ್ಸವ* ಹಗರಿಬೊಮ್ಮನಹಳ್ಳಿ:   ಕರ್ನಾಟಕ ಪ್ರಸ್ ಕ್ಲಬ್ ಹಗರಿ ಬೊಮ್ಮನಹಳ್ಳಿ ತಾಲೂಕು ನೂತನ ಅಧ್ಯಕ್ಷರಾಗಿ ಶಿವ ಶಂಕರ್ ಸ್ವಾಮಿ ಅವಿರೋಧವಾಗಿ ಆಯ್ಕೆಗೊಂಡರು. ಈ ಸಂಬಂಧ ಇಲ್ಲಿನ  ಸರ್ಕ್ಯೂಟ್ ಹೌಸ್ ನಲ್ಲಿ ಶನಿವಾರ ರಂದು ಕರ್ನಾಟಕ ಪ್ರಸ್ ಕ್ಲಬ್ ರಾಜ್ಯ ಉಪಾಧ್ಯಕ್ಷ ಕೆ ಕೊಟ್ರೇಶ್ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಕರ್ನಾಟಕ ಪ್ರಸ್ ಕ್ಲಬ್ ಸಂಘದಿಂದ ಆರೋಗ್ಯ ವಿಮೆ, ಮೃತ ಹೊಂದಿದ ಸದಸ್ಯರಿಗೆ ಸಹಾಯಧನ ಮತ್ತು ವಿವಿಧ ಸೌಲಭ್ಯಗಳ ಅನುಕೂಲಕ್ಕೆ ಸಂಘದಿಂದ ಪ್ರೋತ್ಸಾಹ ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ ಎಂದರು  ತಾಲೂಕು ಕರ್ನಾಟಕ ಪ್ರಸ್ ಕ್ಲಬ್ ಸಂಘದ ಸರ್ವಸದಸ್ಯರ  ಸಂಯುಕ್ತ ಕರ್ನಾಟಕ ವರದಿಗಾರರು ಉಮೇಶ್ ನೆಲ್ಕುದ್ರಿ, ಕನ್ನಡ ಪ್ರಭ ವರದಿಗಾರರು ಸುರೇಶ್ ಯಳಕಪ್ಪನವರನ್ನು ಒಮ್ಮತದಿಂದ ಜಿಲ್ಲಾ ಸಂಘಕ್ಕೆ ಆಯ್ಕೆ ಮಾಡಲಾಯಿತು. ಪದಾಧಿಕಾರಳ ವಿವರ: ಹಗರಿ ಬೊಮ್ಮನಹಳ್ಳಿ ತಾಲೂಕು ಉಪಾಧ್ಯಕ್ಷ ಫಕೀರಪ್ಪ, ಚಂದ್ರಶೇಖರ್, ಏಳು ಕೋಟಿ,ಪ್ರಧಾನ ಕಾರ್ಯದರ್ಶಿ ಪೂಜಾರ್ ಸಿದ್ದಪ್ಪ , ಸಹ ಕಾರ್ಯದರ್ಶಿ ಫಕ್ರುದ್ದೀನ್, ಸಂಘಟನಾ ಕಾರ್ಯದರ್ಶಿ ಸುರೇಶ್ ಬಡಿಗೇರ್, ಪ್ರಜಾಂಚಿ ಎನ್ ಪರಶುರಾಮ್,ಸದಸ್ಯರಾದ .ಆರ್ ಪ್ರಕಾಶ್ ದೊಡ್ಡ ಬಸವರಾಜ. ಮೈಲಪ್ಪ. ಸಂತೋಷ.ಇದ್ದರು ಈ ಸಂದರ್ಭದಲ್ಲಿ ಕೊಟ್ಟೂರಿನ ಹಿರಿಯ ಪತ್ರಕರ್ತರು ಡಿ ಸಿದ್ದಪ್ಪ ,ಹಿರಿಯ ಪತ್ರಕರ್ತರು ಪರುಶುರಾಮ ಎಸ್ ,ಎಸ್ ...

ಸರಕಾರಿ ಶಾಲೆಯಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ

ಇಮೇಜ್
ಮಸ್ಕಿ : ಪಟ್ಟಣದ ಪಿ.ಎಂ.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಕೆಂಪೇಗೌಡರ ಭಾವ ಚಿತ್ರಕ್ಕೆ ಹೂವಿನ ಹಾರ ಹಾಕಿ ಕರ್ಪೂರ ಹಚ್ಚಿ ಕಾಯಿ ಒಡೆಯುವ ಮೂಲಕ ಜಯಂತಿ ಆಚರಣೆ ಮಾಡಲಾಯಿತು. ನಂತರ ಜಯಂತಿಯ ಕುರಿತು ಮಾತನಾಡಿ ಶಿಸ್ತುಬದ್ಧ ಆಡಳಿತ, ಯೋಜನೆ-ಯೋಚನೆಗಳ ಮೂಲಕ ಬಾಲ್ಯದಲ್ಲಿ ಕಂಡ ಜನಪರ ಕನಸನ್ನು ನನಸಾಗಿಸಲು ಕೆಂಪೇಗೌಡರ ತ್ಯಾಗ ಹಾಗೂ ಶ್ರಮವನ್ನು ನೆನಪು ಮಾಡಿಕೊಳ್ಳಬೇಕು ಎಂದು ಶಾಲೆ ಮುಖ್ಯ ಗುರುಗಳಾದ ಶ್ರೀಕಾಂತಮ್ಮ ರವರು ಹೇಳಿದರು. ಇಪ್ಪತ್ತಮೂರು ವರ್ಷಗಳ ಕಾಲ ಆಡಳಿತ ನಡೆಸಿ ಇಂದಿನ ಬಹುದೊಡ್ಡ ಸುಸಜ್ಜಿತ ನಗರ ವೊಂದಕ್ಕೆ ಶಾಶ್ವತ ಬದ್ರಬುನಾದಿ ಹಾಕಿದ ನಾಡಪ್ರಭು ಕೆಂಪೇಗೌಡರು ಸದಾ ಸ್ಮರಣೀಯರು ಎಂದು ಶಾಲೆಯ ಶಿಕ್ಷಕರಾದ ಸಿದ್ದಯ್ಯ ಹಿರೇಮಠ ರವರು ತಿಳಿಸಿದರು. ಈ ವೇಳೆ, ಶಿಕ್ಷಕರಾದ,ಮಧುಮತಿ,ಬಸವರಾಜ, ಶಿವನಂದಾ,ಪವಿತ್ರ, ಮಲ್ಲಮ್ಮ,ಯಶೋಧ, ಸೇರಿದಂತೆ ಶಿಕ್ಷಕರು ಮಕ್ಕಳು ಇದ್ದರು.

ಗ್ರಾಮ ಪಂಚಾಯತಿ ಮನೆಗಳೆಲ್ಲ ಭ್ರಷ್ಟರ ಪಾಲು ಬಡವರೆಲ್ಲಾ ಬೀದಿಪಾಲು : ಶರಣಬಸವ ಸೊಪ್ಪಿಮಠ

ಇಮೇಜ್
  ಮಸ್ಕಿ : ತಾಲೂಕಿನ ಮಾರಲದಿನ್ನಿ ಗ್ರಾಮದಲ್ಲಿ ಪ್ರತಿಭಟನೆ ಮಾಡುವ ಮೂಲಕ ಆಡಳಿತ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಂಜುಳಾ ಇವರಲ್ಲಿ ಮನವಿ ಪತ್ರವನ್ನು ಸಲ್ಲಿಸಿದರು. ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯಿತಿಗಳಲ್ಲಿ ವಸತಿ ಯೋಜನೆ ಭ್ರಷ್ಟಾಚಾರದ ಕುರಿತು ಪ್ರತಿಭಟನೆ ಮಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸುತ್ತಿದ್ದು, ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷರಾದ ಶರಣಬಸವ ಸೊಪ್ಪಿಮಠ ಮಾತನಾಡಿ ಬಿಜೆಪಿಯ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ಅವರ ಆದೇಶದಂತೆ ರಾಜ್ಯಾದ್ಯಂತ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಪ್ರತಿಭಟನೆ ಮಾಡಲಾಯಿತು ಅದರಂತೆ ಇಂದಿನಿಂದ ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಸಂತೆಕೆಲ್ಲೂರ್ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮಾರಲದಿನ್ನಿ, ಸಂತೆಕೆಲ್ಲೂರ್ ಮಟ್ಟೂರು, ಮತ್ತು ಸರ್ಜಾಪುರ ಗ್ರಾಮ ಪಂಚಾಯತಿಗಳಲ್ಲಿ ಮನೆಗಳೆಲ್ಲ ಭ್ರಷ್ಟರ ಪಾಲು ಬಡವರೆಲ್ಲ ಬೀದಿಪಾಲು ಕಾಂಗ್ರೆಸ್ ಸರಕಾರದ ವಸತಿ ನಿಗಮದಲ್ಲಿ ನಡೆದ ಭ್ರಷ್ಟಾಚಾರದ ವಿರುದ್ಧ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳ ಮುಂದೆ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪಕ್ಷದ ಹಿರಿಯ ಮುಖಂಡರಾದ ಬಸವಂತರಾಯ ಕುರಿ ಅವರು ಹಾಗೂ ಯುವ ಮುಖಂಡರಾದ ಪ್ರಸನ್ನ ಪಾಟೀಲ್ ಅವರು ಭ್ರಷ್ಟ ಕಾಂಗ್ರೆಸ್ ಸರ್ಕಾರ ವಿರುದ್ಧ ಮಾತನಾಡಿದರು....

ಸಂಪ್ರದಾಯಕ್ಕೆ ಮಾತ್ರ ಸೀಮಿತಗೊಂಡ ಮಣ್ಣೆತ್ತಿನ ಅಮಾವಾಸ್ಯೆ

ಇಮೇಜ್
  ಮಸ್ಕಿ : ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮುಂಗಾರು ಮಳೆಯು ಸಮೃದ್ಧವಾಗಿದ್ದು, ರೈತಾಪಿ ವರ್ಗವೂ ಮಣ್ಣೆತ್ತು ಪೂಜಿಸುವ ಮೂಲಕ ಮಳೆ, ಬೆಳೆಯು ಚೆನ್ನಾಗಿ ಬರಲಿ ಎಂದು ಪ್ರಾರ್ಥಿಸಲು ತಯಾರಿ ನಡೆಸಿದ್ದಾರೆ. ಇದಕ್ಕೆ ಪೂರಕವಾಗುವಂತೆ ಸ್ಥಳೀಯ ಕುಂಬಾರರು ವಿವಿಧ ಬಗೆಯ ಮಣ್ಣೆತ್ತಿನ ಮೂರ್ತಿಗಳನ್ನು ಸಿದ್ಧಪಡಿಸಿದ್ದಾರೆ. ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆ ಪೂಜೆಗಾಗಿ ತಯಾರಿಸಿರುವ ಮಣ್ಣಿನ ಎತ್ತುಗಳ ಮಾರಾಟ ನಡೆದಿತ್ತು. ಸಾರ್ವಜನಿಕರು ಸಂಭ್ರಮದಿಂದ ಮಣ್ಣೆತ್ತು ಖರೀದಿಸಿದರು. ಎತ್ತುಗಳ ಅಳತೆಯ ಮೇಲೆ ಅವುಗಳಿಗೆ ದರ ನಿಗದಿ ಮಾಡಲಾಗಿದೆ. ಮಣ್ಣೆತ್ತು ಜೋಡಿಗೆ ₹20ರಿಂದ 50 ಮಾರಾಟ ಮಾಡಲಾಗುತ್ತಿದೆ. ಪಟ್ಟಣ ಹಾಗೂ ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಸಂಭ್ರಮದಿಂದ ಮಣ್ಣೆತ್ತಿನ ಅಮಾವಾಸ್ಯೆ ಮಾಡಲಾಗುತ್ತಿದೆ. ಮಕ್ಕಳು, ಹಿರಿಯರೊಡನೆ ಸೇರಿ ಮಣ್ಣಿನ ಎತ್ತುಗಳನ್ನು ಸ್ಥಳೀಯವಾಗಿ ಸಿಗುವ ವಸ್ತುಗಳಿಂದ ಅಲಂಕಾರ ಮಾಡುವ ಮೂಲಕ ಆಚರಣೆ ಮಾಡುತ್ತಾರೆ. ಸುಮಾರು 50 ವರ್ಷಗಳಿಂದ ನಮ್ಮ ಮನೆಯಲ್ಲಿ ಮಣ್ಣೆತ್ತು ತಯಾರು ಮಾಡುತ್ತಿದ್ದು, ನಾವು ಜಹಗೀರ ಗುಡದೂರ ಕೆರೆಯಿಂದ ಮಣ್ಣು ತಂದು ತಯಾರಿಸುತ್ತೇವೆ. ಆದರೆ ಈ ವರ್ಷ ಪಿಒಪಿ ಎತ್ತುಗಳು ಮಾರಾಟಕ್ಕೆ ಬಂದ ಹಿನ್ನೆಲೆ ನಮ್ಮ ಮಣ್ಣೆತ್ತುಗಳಿಗೆ ಬೇಡಿಕೆ ಕಡಿಮೆಯಾಗಿದೆ ಎಂದು ಕೋಳಬಾಳ ಗ್ರಾಮದ ನಿವಾಸಿ ಯಲ್ಲಮ್ಮ ಕುಂಬಾರ ತಿಳಿಸಿದ್ದಾರೆ.

*ನೂರಾ ಐವತ್ತು ಎಕರೆ ಜಮೀನುಗಳಲ್ಲಿ ಮೆಕ್ಕೆಜೋಳ ಬೀಜ ಬಿತ್ತನೆ,ಮೊಳಕೆ ಬರದೆ ರೈತರು ಅಕ್ಷರಶಃ ಕಂಗಾಲು *

ಇಮೇಜ್
" ಕಳಪೆ ಗುಣಮಟ್ಟದ ಮೆಕ್ಕೆಜೋಳ ವಿತರಣೆ" ಕೊಟ್ಟೂರು ತಾಲ್ಲೂಕು ತಾಲ್ಲೂಕಿನಾದ್ಯಂತ ಇತ್ತೀಚೆಗೆ ಮಳೆ ಚೆನ್ನಾಗಿ ಆಗಿದ್ದು, ಗಾಣಗಟ್ಟೆ ಗ್ರಾಮದಲ್ಲಿನ ಇಪ್ಪತ್ತೈದಕ್ಕೂ ಹೆಚ್ಚು ರೈತರು ಸುಮಾರು ನೂರಾ ಐವತ್ತು ಎಕರೆ ಜಮೀನುಗಳಲ್ಲಿ ಮೆಕ್ಕೆಜೋಳ ಬೀಜವನ್ನು ಬಿತ್ತನೆ ಮಾಡಿದ್ದರು. ಮೆಕ್ಕೆಜೋಳ ಕಳಪೆ ಗುಣಮಟ್ಟದಿಂದ ಕೂಡಿದ್ದು, ಸರಿಯಾಗಿ ಹುಟ್ಟಿರುವುದಿಲ್ಲವೆಂದು ರೈತರು ಗೋಳಾಡುತ್ತಿದ್ದಾರೆ. ಗಾಣಗಟ್ಟೆ ಗ್ರಾಮದ ರೈತರಾದ ಹನುಮಂತಪ್ಪ, ಎನ್ ಮಹಾಂತೇಶ, ಮಾರುತಿ, ಪ್ರವೀಣ, ಮಹಾಂತೇಶ, ವೆಂಕಟೇಶ, ರಾಜಶೇಖರ, ಎಸ್ ಮಾಯಪ್ಪ, ಬಸವರಾಜ, ಆನಂದಪ್ಪ, ಬುಡ್ರಿ ಮಹೇಶ, ರಾಜಣ್ಣ, ಇನ್ನು ಹೆಚ್ಚು ರೈತರು ರಾಣೇಬೆನ್ನೂರಿನಿಂದ ಬೀಜವನ್ನು ಶಿವಂ ಸೀಡ್ಸ್ ಅಂಗಡಿಯಿಂದ ಖರೀದಿ ಮಾಡಿ ತಂದಿದ್ದರು. ಮಳೆ ಬಂದ ನಂತರ ಬಿತ್ತನೆಯನ್ನು ಮಾಡಿದ್ದರು ಆದರೆ ಬೀಜಗಳ ಗುಣಮಟ್ಟ ಸರಿಯಿಲ್ಲದ ಕಾರಣ ಬಿತ್ತನೆ ಮಾಡಿದ ಸಸಿಗಳು ಮೊಳಕೆ ಬಂದಿರುವುದಿಲ್ಲ. ಕೃಷಿ ಇಲಾಖೆಯ ಅಧಿಕಾರಿಗಳು ಕಳಪೆ ಬೀಜಕ್ಕೆ ಕಾರಣರಾದವರ ಮೇಲೆ ಕೂಡಲೇ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ರೈತರು ಕೇಳಿಕೊಳ್ಳುತ್ತಿದ್ದಾರೆ. ಮೊಳಕೆ ಬರದ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುವರೋ ಕಾದು ನೋಡಬೇಕಾಗಿದೆ. ಎಂದರು  ಕೋಟ್-೧ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ ಮತ್ತು ಸ್ಥಳೀಯವಾಗಿ ವಿಶ್ವಾಸಾರ್ಹ ಮತ್ತು ಪರವಾನಗಿ ಪಡೆದ ಮಾರಾಟಗಾರರಿಂದ ಬೀಜಗಳನ್ನು ಖರೀದಿಸಬ...

"ಕಲ್ಲೇಶ್ ಅವರಿಗೆ ಮುಂಬಡ್ತಿ ನೀಡಿ ಸನ್ಮಾನ"

ಇಮೇಜ್
ಕೊಟ್ಟೂರು: ಪೊಲೀಸ್ ಇಲಾಖೆಯಲ್ಲಿ ಪ್ರಮಾಣಿಕ ಸೇವೆ ಸಲ್ಲಿಸಿದ್ದ ಕೊಟ್ಟೂರು ಪೊಲೀಸ್ ಠಾಣೆಯ ಕಾನ್ ಸ್ಟೇಬಲ್  ಕಲ್ಲೇಶ್ ಅವರು ಹೆಡ್ ಕಾನ್‌ಸ್ಟೇಬಲ್ ಹುದ್ದೆಗೆ ಮುಂಬಡ್ತಿ ನೀಡಲಾಯಿತು  ಹಗರಿಬೊಮ್ಮನಹಳ್ಳಿ ಸಿಪಿಐ ವಿಕಾಸ್ ಲಮಾಣಿ ಹಾಗೂ ಕೊಟ್ಟೂರು ಪಿಎಸ್‌ಐ ಗೀತಾಂಜಲಿ ಸಿಂಧೆ ಶುಕ್ರವಾರ ಠಾಣೆಯಲ್ಲಿ ಅಭಿನಂದಿಸಿ ಗೌರವಿಸಿದರು.  ಪಡೆದಿರುವ ಹುದ್ದೆಯಲ್ಲಿ ಪ್ರಾಮಾಣಿಕ ,ಶ್ರದ್ದೆ ಮತ್ತು ನಿಷ್ಠೆಯಿಂದ ಸೇವೆಯನ್ನು ಸಲ್ಲಿಸಿ ಇನ್ನೂ ಉನ್ನತ ಹುದ್ದೆಯು ದೊರೆಯುವಂತಾಗಲಿ ಎಂದು ಪಿಎಸ್‌ಐ ಗೀತಾಂಜಿಲಿ ಸಿಂಧೆ ಶುಭ ಹಾರೈಸಿದರು.  ಒಳ್ಳೆಯ ಕರ್ತವ್ಯ ನಿರ್ವಹಿಸಿದ ಕಾನ್ ಸ್ಟೇಬಲ್  ಕಲ್ಲೇಶ್ ಅವರಿಗೆ ಸಾರ್ವಜನಿಕ ವಲಯದಲ್ಲಿ ಮುಂಬಡ್ತಿ ಪಡೆದಿದ್ದಕ್ಕೆ  ಸಂಘ, ಸಂಸ್ಥೆ ,ಸಂಘಟನೆಗಳು ಮೆಚ್ಚುಗೆ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ ಶಶಿಧರ ಸ್ವಾಮಿ, ಚಂದ್ರಶೇಖರ್,ವಿಷ್ಣು , ಬಸವರಾಜ್,   ಶಂಕ್ರಪ್ಪ, ಸಿದ್ದಪ್ಪ, ರಮೇಶ್, ಸಂತೋಷ, ಬಸವರಾಜ್,  ಎರ್ರಿಸ್ವಾಮಿ ಹಾಗೂ ಠಾಣೆಯ ಎಲ್ಲಾ ಸಿಬ್ಬಂದಿ ಇದ್ದರು.