ಮಸ್ಕಿ : ಶ್ರೀಶೈಲ ಯಾತ್ರಾ ಭಕ್ತರಿಗೆ ಅನ್ನಸಂತರ್ಪಣೆ
ಮಸ್ಕಿ : ಶ್ರೀಶೈಲ ಕ್ಷೇತ್ರಕ್ಕೆ ಮಸ್ಕಿ ಮಾರ್ಗವಾಗಿ ಪಾದಯಾತ್ರೆ ಮಾಡುತ್ತಿರುವ ಸಾವಿರಾರು ಭಕ್ತರಿಗೆ ಮೂರು ವರ್ಷಗಳಿಂದ ಮಹಿಳೆಯರು ಅನ್ನ ಸಂತರ್ಪಣೆ ಮಾಡುತ್ತಿರುವುದು ಶ್ಲಾಘನೀಯ' ಎಂದು ಮಲ್ಲಿಕಾರ್ಜುನ ದೇವಸ್ಥಾನದ ಪ್ರಧಾನ ಅರ್ಚಕರಾದ ಸಿದ್ದಯ್ಯ ಹಿರೇಮಠ ಅವರು ಹೇಳಿದರು. ಪಟ್ಟಣದ ತೇರ ಬಜಾರ್ ನಲ್ಲಿ ಪೂಜಾರಿ ಪೇಟೆ ಹಾಗೂ ತೇರ ಬಜಾರ್ ನ ಮಹಿಳೆಯರು ಕೈಗೊಂಡಿರುವ ಮೂರನೇ ವರ್ಷದ ದಾಸೋಹಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿ, 'ಯುಗಾದಿಯಂದು ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ವಿಜಯಪುರ, ಬಾಗಲಕೋಟೆ ಸೇರಿ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ತೆರಳುತ್ತಾರೆ. ಅಂಥ ಭಕ್ತರಿಗೆ ಪೂಜಾರಿ ಪೇಟೆಯ ಮಹಿಳೆಯರು ಸೇರಿದಂತೆ ಸುತ್ತ ಮುತ್ತಲಿನ ಮಹಿಳೆಯರು ಸೇರಿ ಭಕ್ತರಿಗೆ ಪ್ರಸಾದ ವ್ಯವಸ್ಥೆ, ತಂಪು ಪಾನೀಯ ವಿತರಣೆ, ಆರೋಗ್ಯ ತಪಾಸಣೆ, ಮಾಡುವ ಮೂಲಕ ಅಳಿಲು ಸೇವೆ ಮಾಡುತ್ತಿರುವುದು ಉತ್ತಮ ಕೆಲಸ' ಎಂದರು. ಹಾಗೆಯೇ ಪಟ್ಟಣದ ದೇವಸ್ಥಾನಗಳಾದ ಮುದ್ದು ಮಲ್ಲಿಕಾರ್ಜುನ,ಜಡೆಯ ಶಂಕರಲಿಂಗೇಶ್ವರ,ನೀಲಕಂಠೇಶ್ವರ,ಮೌನೇಶ್ವರ, ಸೇರಿದಂತೆ ಹಳೇ ಕ್ಯಾತನಟ್ಟಿ, ಸೂಗಣ್ಣ ಬಾಳೆಕಾಯಿ ಮಿಲ್,ಮಯೂರ ಪ್ರಿಂಟಿಂಗ್ ಪ್ರೆಸ್ ಹತ್ತಿರಸೇರಿದಂತೆ ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಪ್ರಸಾದ, ತಂಪು ಪಾನೀಯ, ಉಚಿತ ಔಷಧ ಮಳಿಗೆಗಳನ್ನು ಆರಂಭಿಸಲಾಗಿದೆ. ಪಾದಯಾತ್ರಿಗಳು ಸಾಗುವ ದಾರಿಯುದ್ದಕ್ಕೂ ಹಣ್ಣು, ಮಜ್ಜಿಗೆ, ಕುಡಿಯುವ ನೀರಿನ ವ್ಯವಸ...