ಪೋಸ್ಟ್‌ಗಳು

ಮಸ್ಕಿ : ಶ್ರೀಶೈಲ ಯಾತ್ರಾ ಭಕ್ತರಿಗೆ ಅನ್ನಸಂತರ್ಪಣೆ

ಇಮೇಜ್
  ಮಸ್ಕಿ : ಶ್ರೀಶೈಲ ಕ್ಷೇತ್ರಕ್ಕೆ ಮಸ್ಕಿ ಮಾರ್ಗವಾಗಿ ಪಾದಯಾತ್ರೆ ಮಾಡುತ್ತಿರುವ ಸಾವಿರಾರು ಭಕ್ತರಿಗೆ ಮೂರು ವರ್ಷಗಳಿಂದ ಮಹಿಳೆಯರು ಅನ್ನ ಸಂತರ್ಪಣೆ ಮಾಡುತ್ತಿರುವುದು ಶ್ಲಾಘನೀಯ' ಎಂದು ಮಲ್ಲಿಕಾರ್ಜುನ ದೇವಸ್ಥಾನದ ಪ್ರಧಾನ ಅರ್ಚಕರಾದ ಸಿದ್ದಯ್ಯ ಹಿರೇಮಠ ಅವರು ಹೇಳಿದರು. ಪಟ್ಟಣದ ತೇರ ಬಜಾರ್ ನಲ್ಲಿ ಪೂಜಾರಿ ಪೇಟೆ ಹಾಗೂ ತೇರ ಬಜಾರ್ ನ ಮಹಿಳೆಯರು ಕೈಗೊಂಡಿರುವ ಮೂರನೇ ವರ್ಷದ ದಾಸೋಹಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿ, 'ಯುಗಾದಿಯಂದು ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ವಿಜಯಪುರ, ಬಾಗಲಕೋಟೆ ಸೇರಿ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ತೆರಳುತ್ತಾರೆ. ಅಂಥ ಭಕ್ತರಿಗೆ ಪೂಜಾರಿ ಪೇಟೆಯ ಮಹಿಳೆಯರು ಸೇರಿದಂತೆ ಸುತ್ತ ಮುತ್ತಲಿನ ಮಹಿಳೆಯರು ಸೇರಿ ಭಕ್ತರಿಗೆ ಪ್ರಸಾದ ವ್ಯವಸ್ಥೆ, ತಂಪು ಪಾನೀಯ ವಿತರಣೆ, ಆರೋಗ್ಯ ತಪಾಸಣೆ, ಮಾಡುವ ಮೂಲಕ ಅಳಿಲು ಸೇವೆ ಮಾಡುತ್ತಿರುವುದು ಉತ್ತಮ ಕೆಲಸ' ಎಂದರು.  ಹಾಗೆಯೇ ಪಟ್ಟಣದ ದೇವಸ್ಥಾನಗಳಾದ ಮುದ್ದು ಮಲ್ಲಿಕಾರ್ಜುನ,ಜಡೆಯ ಶಂಕರಲಿಂಗೇಶ್ವರ,ನೀಲಕಂಠೇಶ್ವರ,ಮೌನೇಶ್ವರ, ಸೇರಿದಂತೆ ಹಳೇ ಕ್ಯಾತನಟ್ಟಿ, ಸೂಗಣ್ಣ ಬಾಳೆಕಾಯಿ ಮಿಲ್,ಮಯೂರ ಪ್ರಿಂಟಿಂಗ್ ಪ್ರೆಸ್ ಹತ್ತಿರಸೇರಿದಂತೆ ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಪ್ರಸಾದ, ತಂಪು ಪಾನೀಯ, ಉಚಿತ ಔಷಧ ಮಳಿಗೆಗಳನ್ನು ಆರಂಭಿಸಲಾಗಿದೆ. ಪಾದಯಾತ್ರಿಗಳು ಸಾಗುವ ದಾರಿಯುದ್ದಕ್ಕೂ ಹಣ್ಣು, ಮಜ್ಜಿಗೆ, ಕುಡಿಯುವ ನೀರಿನ ವ್ಯವಸ...

ಸೈಬರ್ ಸವಾಲು ಎದುರಿಸಲು ಶ್ರೀ ಭಗವಾನ್ ಮಹಾವೀರ್ ಜೈನ್ ಪಿ.ಯು. ಕಾಲೇಜಿನಲ್ಲಿ ಅಪರಾಧಶಾಸ್ತ್ರ ಮತ್ತು ವಿಧಿವಿಜ್ಞಾನ ಅಧ್ಯಯನ ಕೇಂದ್ರ ಪ್ರಾರಂಭ

ಇಮೇಜ್
  ಬೆಂಗಳೂರು; ತಂತ್ರಜ್ಞಾನ ಆಧಾರಿತ ಮತ್ತು ಸೈಬರ್ ಅಪರಾಧ ವಲಯದಲ್ಲಿ ಸಾಟಿಯಿಲ್ಲದಷ್ಟು ಸವಾಲುಗಳು ಎದುರಾಗಿರುವ ಹಿನ್ನೆಲೆಯಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸಲು ಬೆಂಗಳೂರಿನ ವಿ.ವಿ. ಪುರಂನಲ್ಲಿರುವ ಶ್ರೀ ಭಗವಾನ್ ಮಹಾವೀರ್ ಜೈನ್ ಪಿ.ಯು. ಕಾಲೇಜಿನಲ್ಲಿ ‘ಡಾ. ಚೆನ್‍ರಾಜ್ ರಾಯ್‍ಚಂದ್ ಅಪರಾಧಶಾಸ್ತ್ರ ಮತ್ತು ವಿಧಿವಿಜ್ಞಾನ ಅಧ್ಯಯನ ಕೇಂದ್ರ’ವನ್ನು (ಸಿ.ಆರ್.ಸಿ.ಸಿ.ಎಫ್.ಎಸ್) ಆರಂಭಿಸಲಾಗಿದೆ. ಮುಂದಿನ ಪೀಳಿಗೆಗೆ ಅತ್ಯಾಧುನಿಕ ತಂತ್ರಜ್ಞಾನ ಯುಗದಲ್ಲಿ ಸುರಕ್ಷತೆ ಕಲ್ಪಿಸುವುದು ಈ ಕೇಂದ್ರದ ಪ್ರಧಾನ ಧ್ಯೇಯವಾಗಿದೆ.  ಈ ಅತ್ಯಾಧುನಿಕ ಸಂಶೋಧನಾ ಕೇಂದ್ರವು ವಿಧಿವಿಜ್ಞಾನ, ಅಪರಾಧಶಾಸ್ತ್ರ ಮತ್ತು ನ್ಯಾನೊ ತಂತ್ರಜ್ಞಾನದಲ್ಲಿ ಕ್ರಾಂತಿಕಾರಕ ಗುರಿಗಳನ್ನು ಹೊಂದಿದೆ. ಆರೋಗ್ಯ ಸಂರಕ್ಷಣೆ, ಪರಿಸರ ಮೇಲ್ವಿಚಾರಣೆ ಮತ್ತು ಅಂಗಾಂಶ ಇಂಜಿನಿಯರಿಂಗ್‍ನ ಪ್ರಗತಿಯ ಜೊತೆಗೆ ಅತ್ಯಾಧುನಿಕ ಅಪರಾಧಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸೂಕ್ತ ಮಾರ್ಗೋಪಾಯಗಳನ್ನು ರೂಪಿಸಲಿದೆ.  ನ್ಯಾನೊ ತಂತ್ರಜ್ಞಾನ ಅಭಿವೃದ್ಧಿ, ವಿಧಿವಿಜ್ಞಾನ, ನೈಜ ಸಮಯದ ಅಪರಾಧ ತನಿಖೆ, ಮಾದಕ ದ್ರವ್ಯಗಳ ಮತ್ತು ಸ್ಫೋಟಕಗಳ ಪತ್ತೆಯಲ್ಲಿ ವ್ಯಾಪಕ ಶ್ರೇಣಿಯ ಸಂಶೋಧನೆಗಳ ಜೊತೆಗೆ ಅಪರಾಧ ಪತ್ತೆ ಮಾಡಲು ಸೂಕ್ತ ರೀತಿಯಲ್ಲಿ ಉಪಯೋಗಕಾರಿ ಮಾರ್ಗೋಪಾಯಗಳನ್ನು ರೂಪಿಸಲಿದೆ.    ಅತ್ಯುತ್ತಮ ಆಪ್ಟಿಕಲ್ ಮತ್ತು ಫ್ಲೊರೊಸೆಂಟ್ ಗುಣ-ಲಕ್ಷಣಗಳನ್ನು ಅನಾವರಣಗೊಳಿಸುವ ಈ...

ಶ್ರೀ ಸಿದ್ದಗಂಗಾ ಮಠದಲ್ಲಿ 118 ಮಕ್ಕಳಿಗೆ ನಾಮಕರಣ ಮಹೋತ್ಸವ

ಇಮೇಜ್
  ಬೆಂಗಳೂರು, ಮಾ.16- ಡಾ ಶ್ರೀ.ಶಿವಕುಮಾರ ಮಹಾ ಸ್ವಾಮಿಗಳವರ 118ನೇ ಹುಟ್ಟುಹಬ್ಬದಂದು ಶ್ರೀ ಸಿದ್ದಗಂಗಾ ಮಠದಲ್ಲಿ 118 ಮಕ್ಕಳಿಗೆ ನಾಮಕರಣ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ. ಶ್ರೀ ಶಿವಕುಮಾರಸ್ವಾಮೀಜಿ ದಾಸೋಹ ಟ್ರಸ್ಟ್‌ ತಿಳಿಸಿದೆ.ಮಾ.1 ದಂದು ಬೆಳ್ಳಿಗ್ಗೆ 7.30 ರಿಂದ 9.30 ರ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ.ಶ್ರೀ.ಸಿದ್ದಲಿಂಗ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ನಾಮಕರಣದ ಅರ್ಜಿ ನಾಮಕರಣದ ಅರ್ಜಿಯು, ಸಿದ್ದಗಂಗಾ ಮಠ ಆಡಳಿತಾಧಿಕಾರಿಗಳ ಕಚೇರಿಯಲ್ಲಿ ಲಭ್ಯವಿರುತ್ತದೆ. ನಾಮಕರಣಕ್ಕೆ ಅರ್ಜಿ : 73488 53276 ಸಂಖ್ಯೆಯನ್ನು ಸಂಪರ್ಕಿಸಬಹುದು. ಇನ್ನು ಅರ್ಜಿಯೊಂದಿಗೆ ದಾಖಲೆಗಳನ್ನು ಲಗತ್ತು ಮಾಡಬೇಕು. ನಾಮಕರಣಗೊಳ್ಳುವ ಮಗುವಿನ ಜನನ ಪ್ರಮಾಣ ಪತ್ರ.ತಂದೆ ಅಥವಾ ತಾಯಿಯ ಆಧಾರ ಕಾರ್ಡ್ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಕೊನೆಯ ಮಾ.31 ಕೊನೆ ದಿನ,ನಾಮ ಕರಣಗೊಳ್ಳ ಬಯಸುವ ಮಕ್ಕಳ ವಯಸ್ಸು : ನವಜಾತ ಶಿಶುವಿನಿಂದ 1 ವರ್ಷದೊಳಗಿನ ಮಕ್ಕಳು ಮಾತ್ರ. ಗಂಡು ಮಗುವಿಗೆ ಹುಟ್ಟು ಹೆಸರು ಶಿವಕುಮಾರಸ್ವಾಮಿ ಎಂತಲೂ ಹೆಣ್ಣು ಮಕ್ಕಳಿಗೆ ಶಿ ಅಕ್ಷರದಿಂದ ಪ್ರಾರಂಭವಾಗುವ ಹುಟ್ಟು ಹೆಸರನ್ನು ನಾಮಾಂಕಿತಗೊಳಿಸಲು ಕೋರಲಾಗಿದೆ.

ರೈತಾಪಿ ವರ್ಗದ ಚಾಲಕನಿಗೆ : ವೈದ್ಯಾಧಿಕಾರಿಯ ದರ್ಪ

ಇಮೇಜ್
  ಕೊಟ್ಟೂರು : ಮತ್ತಿಹಳ್ಳಿ ಮೇಡಿಕಲ್ ಅಫೀಸ್ರ ಡಾಕ್ಟರ್ ಪೃಥ್ವಿರಾಜ್ ಮತ್ತು ಪ್ರಸ್ತುತ ಪ್ರಭಾರಿ ಹಾಗಿ ಹರಪನಹಳ್ಳಿ  ತಾಲೂಕು ವೈದ್ಯಾಧಿಕಾರಿ ಕಾರ್ಯನಿರ್ವಾಸುತ್ತಿದ್ದಾರೆ. ಯೂನಿಯನ್ ಬ್ಯಾಂಕ್ ಪಕ್ಕದಲ್ಲಿ ಸೋಮವಾರ ರಾತ್ರಿ  ಈ ಮಹಾನುಭಾವ ಕಾರ್ ನ್ನು  ರಸ್ತೆಗೆ ಅಡ್ಡಲವಾಗಿ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದು ರೈತಾಪಿ ವರ್ಗದ ಮ್ಯಾಕ್ಸ್ ಬೊಲೆರೋ ವಾಹನ ಚಾಲಕನು ಕಾರು ತೆಗೆದುಕೊಳ್ಳಿ ಎಂದರೂ ತೆಗೆದುಕೊಳ್ಳದೆ ಅಹಂಕಾರ ತೋರಿಸಿ ಆ ಹುಡುಗನ ಮೇಲೆ ದರ್ಪ ತೋರುತ್ತಿದ್ದಾನೆ. ಗಾಡಿ ಕ್ರಾಚ್ ಆಗಿರುವುದಕ್ಕೆ ಶೋರೂಮ್ ಗೆ ಬಿಡುತ್ತೇನೆ ಆಗುವ ಖರ್ಚನ್ನು ಕಟ್ಟು ಎಂದು ಎದುರಿಸುವ ಕಾರ್ಯ ಮಾಡುತ್ತಿದ್ದಾರೆ ಒಬ್ಬ ಸರ್ಕಾರಿ ನೌಕರ ಸಾರ್ವಜನಿಕರೇ ತೊಂದರೆ ನೀಡುತ್ತಿರುವುದು ಸರಿಯೇ..? ಮೇಡಿಕಲ್ ಅಫೀಸ್ರ ಪೃಥ್ವಿರಾಜ್ ಇವರಿಗೆ ಮೊದಲು  ಕಾನೂನು ಕ್ರಮ ಜರುಗಿಸಬೇಕು ಏಕೆಂದರೆ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ನೀಡಿದ್ದಾಕ್ಕೆ.. ಪ್ರಜ್ಞಾವಂತ ನೌಕರರಾಗಿದ್ದರೆ  ಪ್ರಕರಣ ದಾಖಲು ಮಾಡಿ  ಇನ್ಸೂರೆನ್ಸ್ ಕ್ಲೈಮ ಪಡೆದುಕೊಳ್ಳುತ್ತಿದ್ದರು ಇದು ಸಾಲದು ಎಂದು ಪೊಲೀಸರನ್ನು ಕರೆತರಿಸಿ ಪೋಸ್ ಕೊಡುತ್ತಿದ್ದಾನೆ ಅಮಾಯಕ ರೈತಾಪಿ ಗೆ ಎದುರಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಇಲ್ಲಿಯ ಸ್ಥಳಿಯರಾದ ಪ್ರಕಾಶ್, ಮಂಜು ಪತ್ರಿಕೆಗೆ ತಿಳಿಸಿದರು. ಕೊಟ್ -1 ಡಿಎಚ್ಓ ಅವರಿಗೆ ತಮ್ಮ ತಾಲೂಕು ವ...

ಕೊಟ್ಟೂರಿನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಣೆ

ಇಮೇಜ್
  ಕೊಟ್ಟೂರು ಪಟ್ಟಣದ ಎ.ಪಿ.ಎಂ.ಸಿ. ಆವರಣದಲ್ಲಿ ಭಾನುವಾರ ಸಂಭ್ರಮದಿಂದ ಆಚರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್.ಎಫ್.ಐ.ಡಬ್ಲುದ ಉಪಾಧ್ಯಕ್ಷರಾದ ಕಾ|| ವೈ.ಮಹಾದೇವಮ್ಮ ವಹಿಸಿ ಅವರು ಸಮಾಜದಲ್ಲಿನ ಮಹಿಳೆಯರ ಸ್ಥಿತಿಗತಿಗಳು ಮುಂದಿನ ವರ್ತಮಾನವನ್ನು ಹೇಗೆ ಎದುರುಗೊಳ್ಳಬೇಕೆಂದು ಸವಿಸ್ತಾರವಾಗಿ ಮಾತನಾಡಿದರು. ಕಾರ್ಯಕ್ರಮದ ಅತಿಥಿಗಳಾದ ವಿಶಾಲಾಕ್ಷಿ ಮೇಡಂ ಅವರು ಮೊಟ್ಟ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಪುಲೆ ಅವರು ಅಪಮಾನಗಳನ್ನು ಎದುರಿಸಿ ಮೊಟ್ಟ ಮೊದಲಿಗೆ ಮಹಿಳೆಯರಿಗೆ ಶಿಕ್ಷಣ ನೀಡಿದರು. ಸಾವಿತ್ರಿ ಪುಲೆಯವರ ಹಾದಿಯಲ್ಲಿ ಅವರ ಮಾರ್ಗದರ್ಶನದಂತೆ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ಆದರ್ಶಗಳಂತೆ ಬಸವಣ್ಣನವರ ಸಮಾನತೆ ಗುಣಗಳನ್ನು ಅನುಸರಿಸಿ ನಡೆಯಬೇಕು. ಮಹಿಳೆಯರು ರಾಜಕೀಯವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಶಿಕ್ಷಣವಂತರಾಗಿ ಬಾಲ್ಯ ವಿವಾಹ ಮತ್ತು ಇನ್ನಿತರ ವ್ಯವಸ್ಥೆಗಳನ್ನು ಮಹಿಳೆಯರ ಮೇಲೆ ಇರುವ ಕಪ್ಪು ಕಳಂಕಗಳನ್ನು ತೊಡೆದು ಹಾಕಬೇಕು ಸಮಾನತೆಯಿಂದ ಬಾಳಬೇಕು ಎಂಬುವುದು ಟಿಜಿiತಿ ರಾಜ್ಯಮಟ್ಟದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮಹಿಳೆಯರಿಗೆ ಸಮಾನತೆ ಸಾರುತ್ತದೆ ಎಂದು ಹೇಳಿದ್ದರು.  ಪ್ರಾಧ್ಯಾಪಕರಾದ ನಿರ್ಮಲ ಶಿವನ ಗುತ್ತಿ ಅವರು ಮಾತನಾಡಿ, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಶೋಷಣೆಗಳು ಕೊನೆಯಾಗಬೇಕು ಮಹಿಳೆಯರನ್ನು ಸಮಾನತೆಯಿಂದ ಕಾಣಬೇಕು ಮಹಿಳೆಯರು ದು...

ಹಟ್ಟಿ ಚಿನ್ನದ ಗಣಿಯಲ್ಲಿ ನದಾಫ್/ಪಿಂಜಾರ್ ಸಂಘದ ವತಿಯಿಂದ .ವರದಿಗಾರರಿಗೆ ಪತ್ರಿಕೆ ಹೇಳಿಕೆ.

ಇಮೇಜ್
ಹಟ್ಟಿ ಚಿನ್ನದ ಗಣಿ :ಲಿಂಗಸಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ನದಾಫ್ / ಪಿಂಜಾರ್ ಸಂಘ(ರಿ) ಲಿಂಗಸಗೂರು ತಾಲೂಕ ಘಟಕದ ವತಿಯಿಂದ ಹಾಗೂ ಹಟ್ಟಿ ಚಿನ್ನದ ಗಣಿ ನದಾಫ್/ಪಿಂಜಾರ್ ಸಂಘದ ವತಿಯಿಂದ.ಇಂದು ಹಟ್ಟಿ ಚಿನ್ನದ ಗಣಿಯಲ್ಲಿ ನದಾಫ್/ಪಿಂಜಾರ್ ಲಿಂಗಸ್ಗೂರು ತಾಲೂಕ ಅಧ್ಯಕ್ಷರಾದ ಟಿ ಅಮಿನುದ್ದೀನ್ ಜಾಂತಾಪುರ.ಹಾಗೂ ಸಂಘದ ಸದಸ್ಯರು.ಪತ್ರಿಕಾ ವರದಿಗಾರರಿಗೆ ಪತ್ರಿಕಾ ಹೇಳಿಕೆ ನೀಡಿದರು. ಕರ್ನಾಟಕ ರಾಜ್ಯದಲ್ಲಿ ನದಾಫ್/ಪಿಂಜಾರ್ ಸಮುದಾಯದ ಸುಮಾರು 25 ಲಕ್ಷ ಜನಸಂಖ್ಯೆ ಇದ್ದು.ನಮ್ಮ ಜನಾಂಗದವರ ಕುಲ ಕಸುಬು ಹತ್ತಿಯಿಂದ ಹಾಸಿಗೆ.ದಿಂಬು.ಹಗ್ಗ.ಕಣ್ಣಿ.ಇತ್ಯಾದಿ ಉತ್ಪನ್ನಗಳನ್ನು ಮಾಡಿ ಮಾರಾಟ ಮಾಡುವುದು ಇವು ಜೀವನುಪಾಯದ ದಾರಿಯಾಗಿರುತ್ತದೆ.ಎಂದು ಪತ್ರಿಕಾ ವರದಿಗಾರರಿಗೆ ತಿಳಿಸಿದರು.ಹಾಗೂ ನಮ್ಮ ಸಮಾಜದವರು ಅರೆ ಅಲೆಮಾರಿಗಳಾಗಿದ್ದು.ಆರ್ಥಿಕವಾಗಿ.ಶೈಕ್ಷಣಿಕವಾಗಿ.ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಸಮಾಜ ವಾಗಿರುತ್ತದೆ.ಅದೇ ರೀತಿ ನಮ್ಮ ಸಮಾಜದವರು ಅತ್ಯಂತ ಹಿಂದುಳಿದ ಸಮಾಜವೆಂದು ಸರ್ಕಾರ ಗುರುತಿಸಿ.1993ರಲ್ಲಿ ವೃತ್ತಿ ಆಧಾರದ ಮೇಲೆ ಪ್ರವರ್ಗ-1 ರಲ್ಲಿ ಮೀಸಲಾತಿಯನ್ನು ನೀಡಿರುತ್ತಾರೆ.ನಮ್ಮ ಜನಾಂಗದವರು ಪ್ರ ವರ್ಗ-1 ರಲ್ಲಿ ಇತರೆ 117 ಜಾತಿಯವರೊಂದಿಗೆ ಸ್ಪರ್ಧೆ ಮಾಡಿ ಶೇಕಡ 4ರ ಒಟ್ಟು ಮೀಸಲಾತಿಯಲ್ಲಿ ಸರಕಾರಿ ಹುದ್ದೆಗೆ ಆಯ್ಕೆ ಆಗುವುದು ಕಷ್ಟ ಸಾಧ್ಯವಾಗಿರುತ್ತದೆ.ಆದುದರಿಂದ ನದಾಫ್/ ಪ...

ಹಿರೇನಗನೂರು ಪ್ರೌಢಶಾಲೆಯಲ್ಲಿ.ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ. ಹಾಗೂ ವರ್ಗಾವಣೆಗೊಂಡ ಶಿಕ್ಷಕರಿಗೆ ಸನ್ಮಾನ.

ಇಮೇಜ್
  ಹಟ್ಟಿ ಚಿನ್ನದ ಗಣಿ:ಪಟ್ಟಣದ ಸಮೀಪದ ಹಿರೇನಗನೂರು ಸರಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ.ಹಾಗೂ ವರ್ಗಾವಣೆಗೊಂಡ ಶಿಕ್ಷಕರಿಗೆ ಸನ್ಮಾನ ಸಮಾರಂಭ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷರಾದ ಚಿನ್ನಪ್ಪ ಕೋಟ್ರಿಕಿ. ಮುಖ್ಯ ಅತಿಥಿಗಳಾಗಿ ಶ್ರೀ ಶಂಕರಯ್ಯ ಸ್ವಾಮಿ ಕನ್ನಡ ಶಿಕ್ಷಕರು ಕವಿತಾಳ ಹಾಗೂ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ವಿಜಯಲಕ್ಷ್ಮಿ ಹಿರೇಮಠ ಎ ಡಿ ಎಂ ಸಿ ಎಲ್ಲಾ ಸದಸ್ಯರು ಹಾಗೂ ಗ್ರಾಮದ ಹಿರಿಯರಾದ ಬಸವರಾಜಪ್ಪ ಕುರುಗೋಡ್ ಹಾಗೂ ವಿರೂಪಾಕ್ಷಪ್ಪ ಮಾಲಿಪಾಟೀಲ್.ಶಿಕ್ಷಣ ಪ್ರೇಮಿಗಳಾದ ಮೌನದ್ದೀನ್ ಬೂದಿನಾಳ.ಅಬ್ರಹಾಂ ಸಲಬೂರು.ಹಬ್ಬ ಸಲಿ.ನಿಂಗಪ್ಪ ಹುಬ್ಬಳ್ಳಿ.ನಿಂಗಪ್ಪ ಬೆಂಚಮಟ್ಟಿ.ಬಸವರಾಜ್ ಹೊರಪೇಟಿ.ಹಾಗೂ ವರ್ಗಾವಣೆಗೊಂಡ ಶಿಕ್ಷಕರಾದ ರಾಘವೇಂದ್ರ ಸರ್ ಹಾಗೂ ಗೋಪಿ ಚಂದ್.ಹಾಗೂ ಪ್ರೌಢಶಾಲೆಯ ಸಹ ಶಿಕ್ಷಕರ ಹಾಗೂ ಮುದ್ದು ವಿದ್ಯಾರ್ಥಿಗಳ ಬಿಳ್ಕೊಡುಗೆ ಕಾರ್ಯಕ್ರಮವು  ವಿದ್ಯಾರ್ಥಿನಿಯಿಂದ ಪ್ರಾರ್ಥನ ಗೀತೆ ಹಾಗೂ ವಿದ್ಯಾ ಸರಸ್ವತಿಗೆ ಪೂಜೆ ಮತ್ತು ಸಸಿಗೆ ನೀರುಣಿಸುವ ಮುಖಾಂತರ ಕಾರ್ಯಕ್ರಮಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು.ನಂತರ ನಮ್ಮ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ಬೇರೆ ಶಾಲೆಗಳಿಗೆ ವರ್ಗಾವಣೆಗೊಂಡ ಶಿಕ್ಷಕರಾದ ರಾಘವೇಂದ್ರ ಸರ್ ಹಾಗೂ ಗೋಪಿ ಚಂದು ಸರ್ ಇವರಿಗೆ ಶಾಲೆ ವತಿಯಿಂದ ಹಾಗೂ ಗ್ರಾಮದ ವತಿಯಿಂದ ಮತ್ತು ಹಳೆ ವಿದ್ಯಾರ್ಥಿಗಳು ವತಿಯಿಂದ ಗ...