ಪೋಸ್ಟ್‌ಗಳು

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ವ್ಯಾಪಕ ಪ್ರಚಾರ ಸಿಗಲಿ ಜಿ.ಪಂ ಉಪ ಕಾರ್ಯದರ್ಶಿ ಹಾಲ ಸಿದ್ದಪ್ಪ ಪೂಜೇರಿ ಸಲಹೆ

ಇಮೇಜ್
  ಮಸ್ಕಿ : ಪಟ್ಟಣದ ತಾಲೂಕು ಪಂಚಾಯತಿ, ತಹಸೀಲ್ದಾರ್ ಕಚೇರಿಗೆ ಜಿಪಂ ಉಪ ಕಾರ್ಯದರ್ಶಿಗಳಾದ ಹಾಲಸಿದ್ದಪ್ಪ ಪೂಜೇರಿ ಅವರು ಶನಿವಾರ ಭೇಟಿ ನೀಡಿ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿ ಕುರಿತು ಮಾಹಿತಿ ಪಡೆದರು.  ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ, ಸಮೀಕ್ಷೆಯ ನೋಡಲ್ ಅಧಿಕಾರಿಗಳೊಂದಿಗೆ ವಿ.ಸಿ ಮೂಲಕ ಸಭೆ ನಡೆಸಿದರು. ರಾಜ್ಯ ಸರ್ಕಾರದಿಂದ ಕೈಗೊಂಡಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕುರಿತು ವ್ಯಾಪಕ ಪ್ರಚಾರ ಕೈಗೊಂಡು, ಪ್ರತಿಯೊಂದು ಕುಟುಂಬದ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಪಡೆದು, ತಂತ್ರಾಂಶದಲ್ಲಿ ದಾಖಲಿಸಬೇಕು. ಗ್ರಾಮ ಪಂಚಾಯತಿ ಮಟ್ಟದ ಸ್ವ ಸಹಾಯ ಗುಂಪುಗಳ ಮಹಿಳೆಯರು ಸಮೀಕ್ಷೆ ಕುರಿತು ಗ್ರಾಮೀಣರಲ್ಲಿ ಜಾಗೃತಿ ಮೂಡಿಸಬೇಕು. ಸಮೀಕ್ಷೆ ಯಶಸ್ಸಿಗೆ ಗ್ರಾಮ ಪಂಚಾಯತಿಯಿಂದ ಸಂಪೂರ್ಣ ಸಹಕಾರ ಒದಗಿಸಬೇಕು. ಗಣತಿದಾರರು ಪ್ರತಿ ದಿನ ಸಮೀಕ್ಷೆ ಕಾರ್ಯದಲ್ಲಿ ಭಾಗವಹಿಸಿರುವುದನ್ನು ಖಚಿತ ಪಡಿಸಿಕೊಳ್ಳಬೇಕು. ಮೂರು ನಾಲ್ಕು ದಿನಗಳ ಒಳಗೆ ಸಮೀಕ್ಷೆ ಪೂರ್ಣಗೊಳಿಸಬೇಕು ಎಂದರು. ತದ ನಂತರ ಉದ್ಬಾಳ ಗ್ರಾಮ ಪಂಚಾಯತಿಯ ಕ್ಯಾತ್ನಟ್ಟಿ, ಚಿಕ್ಕಕಡಬೂರು, ಉದ್ಬಾಳ ಗ್ರಾಮಕ್ಕೆ ಭೇಟಿ ನೀಡಿ ಸಮೀಕ್ಷೆ ಕಾರ್ಯವನ್ನು ವೀಕ್ಷಿಸಿ ಸಿಬ್ಬಂದಿಗಳೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಮರೇಶ್, ವ್ಯವಸ್ಥಾಪಕರಾದ ಗಂಗಾಧರ ಮೂರ್ತಿ, ಸಿಬ್ಬಂದಿಗಳಾದ ಚಂದ್ರಶೇಖರ, ಬಸವರಾಜ್, ಉದ್ಬಾಳ ಗ...

ಸುಜ್ಞಾನ ನಿಧಿ ಶಿಷ್ಯವೇತನದಿಂದ ಮಕ್ಕಳ ಭವಿಷ್ಯ ಉಜ್ವಲ - ಸಿದ್ದಲಿಂಗ ಶ್ರೀ ಅಭಿಮತ

ಇಮೇಜ್
  ಕೊಟ್ಟೂರು: ಪಟ್ಟಣದ ಡೋಣೂರು ಚಾನುಕೋಟಿ ಮಠದ ಸಮುದಾಯ ಭವನದಲ್ಲಿ ೨೦೨೪ -೨೫ ನೇ ಸಾಲಿನ ೧೧೫ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ಡಾ. ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಯವರು ಹಾಗು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಎಂ ಎಂ ಜೆ  ಹರ್ಷವರ್ದನ್ ರವರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು. ಜಿಲ್ಲಾ ನಿರ್ದೇಶಕರು ಸತೀಶ್ ಶೆಟ್ಟಿ ಯವರು ಧರ್ಮಸ್ಥಳದಿಂದ ನಡೆಯುವ ಚತುರ್ವಿಧ ದಾನಗಳಾದ  ಅನ್ನದಾನ, ವಿದ್ಯಾದಾನ, ಅರೋಗ್ಯದಾನ, ಹಾಗು ಅಭಯ ದಾನಗಳ  ಬಗ್ಗೆ ತಿಳಿಸಿದರು ಸುಜ್ಞಾನ ನಿಧಿ ಶಿಷ್ಯ ವೇತನ ಕಾರ್ಯಕ್ರಮವನ್ನು ಕಳೆದ ೧೯ ವರ್ಷಗಳಿಂದ ನಿರಂತರವಾಗಿ ನೆಡೆದುಕೊಂಡು ಬರುತ್ತಿದೆ ಹಾಗು ನಿರ್ಗತಿಕರಿಗೆ ಮಾಶಾಸನ ತಿಂಗಳಿಗೆ ೧೦೦೦ ರೂ ಅಂತೆ ನೀಡಲಾಗುತ್ತಿದೆ  ವಿಜಯನಗರ ಜಿಲ್ಲೆಯಲ್ಲಿ ೮೦೦ ವಿದ್ಯಾರ್ಥಿಗಳಿಗೆ ಹಾಗು ನಮ್ಮ ಕೊಟ್ಟೂರು ತಾಲ್ಲೂಕಿನಲ್ಲಿ ಕಳೆದ ವರ್ಷ ೧೦೭ ಮತ್ತು ಈ ವರ್ಷ ೧೧೫ ಒಟ್ಟು ೨೨೨ ವಿದ್ಯಾರ್ಥಿಗಳಿಗೆ ೧೪,೫೨,೦೦೦ ಮೊತ್ತ ವನ್ನು ವಾರ್ಷಿಕವಾಗಿ ಹಣ ವಿದ್ಯಾರ್ಥಿಗಳ ಖಾತೆಗೆ ಹಾಕಲಾಗುತ್ತಿದೆ. ರಾಜ್ಯದಲ್ಲಿ ೯೫೦ ಕೆರೆಗಳನ್ನು ನಮ್ಮ ಊರು ನಮ್ಮ ಕೆರೆ ಕಾರ್ಯಕ್ರಮದಲ್ಲಿ ಕೆರೆ ಪುನಶ್ಚೇತನಗೊಳಿಸಲಾಗಿದೆ  ರಾಜ್ಯದಲ್ಲಿ ೧೦೫೦ ಜ್ಞಾನದೀಪಾ ಯೋಜನೆಯಡಿ ಸರ್ಕಾರಿ ಶಾಲೆಗಳಿಗ...

ಕೊಟ್ಟೂರು ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಚನೆ

ಇಮೇಜ್
  ಕೊಟ್ಟೂರು : ಕೊಟ್ಟೂರು ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಚನೆಗೊಂಡಿದ್ದುಕೊಟ್ಟೂರು ತಾಪಲೂಕು ಪಂಚಾಯಿತಿಯ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಕಾರ್ಯದರ್ಶಿಗಳೂ ಆದ ಶ್ರೀ ಡಾ.ಬಿ.ಆನಂದಕುಮಾರ ಅವರು ಸರ್ಕಾರದಿಂದ ನೇಮಕಗೊಂಡ ಅಧ್ಯಕ್ಷರು ಹಾಗೂ ಸದಸ್ಯರರುಗಳಿಗೆ ಆದೇಶ ಪ್ರತಿಯನ್ನು ನೀಡಿದರು. ಕೊಟ್ಟೂರು ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗೆ ಶ್ರೀ ಅನಿಲ್ ಹೊಸಮನಿ (ಅಧ್ಯಕ್ಷರು), ಸದಸ್ಯರಾಗಿ ಶ್ರೀ ಪ್ರಭುದೇವ್, ಶ್ರೀ ಮಾರಪ್ಪ ದೊಡ್ಡಮನಿ, ಶ್ರೀ ಹರೀಶ್ ನಾಯ್ಕ್ ಎಲ್.ಎನ್., ಶ್ರೀಮತಿ ಸುಶೀಲಮ್ಮ , ಶ್ರೀಮತಿ ಗಾಯತ್ರಿ ಎ.ಎಸ್, ಶ್ರೀ ಶಿವರಾಜ್ ಟಿ, ಶ್ರೀ ನಾಗಪ್ಪ, ಶ್ರೀ ಪಿ.ಕೆ. ಇಂದ್ರಜಿತ್, ಶ್ರೀ ತಿರುಕಪ್ಪ ಕರಡಿ, ಶ್ರೀ ಎನ್.ಚಂದ್ರಪ್ಪ, ಶ್ರೀ ಬಸವರಾಜ್, ಶ್ರೀ ಜೆ.ಆನಂದ, ಶ್ರೀ ಮಾಲವಿ ಜಮಿರ್ ಖಾನ್, ಶ್ರೀ ಉಮಾಪತಿ ಸ್ವಾಮಿ ಎಂ.ಎಂ. ಅವರು ಸಮಿತಿ ಸದಸ್ಯರಾಗಿ ನೇಮಕಗೊಂಡಿರುತ್ತಾರೆ.  ಈ ವೇಳೆ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರರಾದ ಶ್ರೀ ಅನಿಲ್ ಹೊಸಮನಿ ಅವರು ಮಾತನಾಡಿ, ತಾಲೂಕಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ ಯಾವುದೇ ಕುಂದು ಕೊರತೆ ಇದ್ದಲ್ಲಿ, ಅನುಷ್ಠಾನ ಸಮಿತಿಗೆ ದೂರು ಸಲ್ಲಿಸುವಂತೆ ಮನವಿ ಮಾಡಿದರು.

ಕೊರಮ ಮತ್ತು ಕೊರಚ ಜನಾಂಗದವರಲ್ಲಿ ಮನವಿ

ಇಮೇಜ್
ಬಳ್ಳಾರಿ: ರಮಣಪ್ಪ ಭಜಂತ್ರಿ ರಾಜ್ಯ ಖಜಾಂಚಿ ಅಖಿಲ ಕರ್ನಾಟಕ ಕುಳುವ ಮಹಾ ಸಂಘ (ಕೊರಮ,ಕೊರಚ,ಕೊರವ ಸಮುದಾಯಗಳ ಒಕ್ಕೂಟ) ವತಿಯಿಂದ  ಸರ್ಕಾರ ನಡೆಸುತ್ತಿರುವ ಶೈಕ್ಷಣಿಕ ಮತ್ತು ಸಾಮಾಜಿಕ ಜಾತಿಗಣತಿಯಲ್ಲಿ ತಾವು ಜಾತಿ ಪ್ರಮಾಣದ ಪ್ರಕಾರ ಕೊರಚ ಇದ್ದರೆ ಅಂತ ಕೋಡ್. 053.1*ಕೊರಚ* ಬರೆಸಿ, ಕೊರಮ ಇದ್ದರೆ ಕೋಡ್ 054.1*ಕೊರಮ* ಅಂತ ಬರೆಸಿ  ಸಂವಿಧಾನ ಪ್ರಕಾರ *ಕೊರಚ ಮತ್ತು ಕೊರಮ* ಆದಕಾರಣ *ಕೊರಚ ಅಥವಾ ಕೊರಮ ಅಂತ ಬರೆಸಬೇಕು* ಎಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. 

"ಯುವಜನರ ಅಭಿರುಚಿ ಬದಲಾಗದೆ,ಸಂಸ್ಕೃತಿ ಉಳುವಿಗೆ ಸಾಧ್ಯವಿಲ್ಲ : ವಿರೂಪಾಕ್ಷಪ್ಪ ಪಂಡಿತ್ "

ಇಮೇಜ್
ದಾವಣಗೆರೆ: ಯುವಜನರ ಅಭಿರುಚಿ ಬದಲಾಗದ ಹೊರತು ಸಂಸ್ಕೃತಿ ನಾಶವನ್ನ ತಡೆಯಲು ಯಾರಿಂದಲೂ ಸಾದ್ಯವಿಲ್ಲ ಸಂಸ್ಕೃತಿ ನಾಶವನ್ನು ತಡೆಗಟ್ಟುವಲ್ಲಿ ಯುವ ಜನರ ಅಭಿರುಚಿಯನ್ನು ಬದಲಾಯಿಸುವಲ್ಲಿ ಪೋಸಕರು ಶಿಕ್ಷಣವ್ಯವಸ್ಥೆ,ಸಮಾಜ, ಸಮೂಹ ಮಾದ್ಯಮಗಳು ಜವಾಬ್ದಾರಿ ನಿರ್ವಹಿಸುವಲ್ಲಿ ಸೋತಿದೆ ಎಂದು ಹಿರಿಯ ಪತ್ರಕರ್ತ ವಿರೂಪಾಕ್ಷಪ್ಪ ಪಂಡಿತ್ ವಿಷಾದ ವ್ಯಕ್ತ ಪಡಿಸಿದರು. ಅವರು ನಿನ್ನೆ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಕರ್ನಾಟಕ ರತ್ನ ದಿ. ಡಾ/ವಿಷ್ಣುವರ್ಧನ್ ರವರ ಜನ್ಮದಿನಾಚರಣೆ ಹಾಗೂ ಗಾಯಕ ದಿ. ಎಸ್.ಪಿ ಬಾಲಸುಬ್ರಹ್ಮಣ್ಯಂ ಹಾಗೂ ದಿ. ಪುನೀತ್ ರಾಜಕುಮಾ‌ರ್ ಸಂಸ್ಮರಣೆ ಆಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಐಕ್ಯತಾ ಸಾಸ್ಕೃತಿಕ ಅಕಾಡೆಮಿ ,ಅಕ್ಷರ ನ್ಯೂಸ್ ಯೂಟೂಬ್ ಚಾನಲ್, ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಗೀತ ನಮನ ರಸಮಂಜರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. ಯುವಜನರನ್ನ ಮೊಬೈಲ್ ಓದುವ ಸಂಸ್ಕೃತಿಯಿಂದ ದೂರ ತಳ್ಳಿದೆ. ಪರಿಣಾಕಾರಿಯಾದ ಮಾದ್ಯಮವಾದ ಸಿನಿಮಾ ಮತ್ತು ಅದರ ಸಾಹಿತ್ಯ ಕೂಡ ಲಾಂಗು ಮಚ್ಚು ಗಳನ್ನು ಹಿಡಿಯಲು ಯುವಜನರಿಗೆ ಪ್ರೇರೇಪಿಸುತ್ತಿವೆ ಸಾಮಾನ್ಯ ಜನರಿಗೆ ಮೇಲ್ಪಂಕ್ತಿ ಹಾಕಿಕೊಡಬೇಕಾದ ಸಿನಿಮಾ ನಟರು ಬಾಯಲ್ಲಿ ಹೇಳಿ ಕೇಸರಿ ಎಂದು ಜಾಹೀರಾತು ನೀಡಿ ಯುವಜನರ ಬದುಕನ್ನು ಕೆಸರು ಮಾಡುತ್ತಿದ್ದಾರೆ. ಇಂತಹ ಸಿನಿಮಾ ನಟರಿಂದ ಸಮಾಜ ಏನು ಕಲಿಯಬೇಕು? ಒಬ್ಬ ರೌಡಿ ಸ...

ಬಳ್ಳಾರಿಯ ಪ್ರತಿಭೆ, ಮುಖ್ಯ ಶಿಕ್ಷಕ ಎಚ್ .ತಿಪ್ಪೇಸ್ವಾಮಿಗೆ ಉತ್ತಮ ಶಿಕ್ಷಕ ಪ್ರಶಸ್ತಿ.

ಇಮೇಜ್
ಯಾದಗಿರಿ ಜಿಲ್ಲೆಯ, ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾವಿನಹಳಿಯ ಪ್ರಭಾರ ಮುಖ್ಯಗುರುಗಳಾದ ತಿಪ್ಪೇಸ್ವಾಮಿ.ಹೆಚ್ ಅವರಿಗೆ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.  ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ ಯಾದಗಿರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯ ಶಾಲಾ ಶಿಕ್ಷಣ ಇಲಾಖೆ ಯಾದಗಿರಿ ನೇತೃತ್ವದಲ್ಲಿ 2025 26 ನೇ ಸಾಲಿನ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಉತ್ತಮ ಶಿಕ್ಷಕರಿಗೆ ಸನ್ಮಾನ ಸಮಾರಂಭ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಕಾರ್ಯಕ್ರಮ ನಡೆಯಿತು  ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾವಿನಹಳಿಯ ಆವರಣದಲ್ಲಿ ಪ್ರಭಾರ ಮುಖ್ಯಗುರುಗಳಾದ ಇವರು 101 ಮರಗಳ ನೆಟ್ಟು ನೀರು ಹಾಕಿ ಪೋಷಿಸಿದ್ದಾರೆ.ಇನ್ನು ತಿಪ್ಪೇಸ್ವಾಮಿ.ಹೆಚ್ ಅವರು ಮಕ್ಕಳೊಂದಿಗೆ ಮಕ್ಕಳಂತೆ ಇದು ಉತ್ತಮವಾಗಿ ಸೃಜನಾತ್ಮಕವಾಗಿ, ಮಾನವೀಯ ಮೌಲ್ಯಗಳೊಂದಿಗೆ, ಪ್ರಾಯೋಗಿಕ ಬೋಧನೆ ಮಾಡಿ ಗಮನ ಸೆಳೆದಿದ್ದಾರೆ.  ಮೂಲತಃ ಬಳ್ಳಾರಿ ಗ್ರಾಮಾಂತರ ಸಿಂಧವಾಳ ಗ್ರಾಮದ ದಂಪತಿ ಧರ್ಮ ರೆಡ್ಡಿ, ರೇಣಕಮ್ಮ ಅವರ ಎರಡನೇ ಪುತ್ರ ರಾಗಿದ್ದಾರೆ. ಈ ಎಲ್ಲಾ ಸಾಧನೆಗೆ ತಂದೆ ತಾಯಿಗಳು ಮತ್ತು ಪೋಷಕರು ಹಾಗೂ ಯಾದಗಿರಿ ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಶಿಕ್ಷಕರು ಪ್ರೋತ್ಸಾಹಕ್ಕೆ ಧನ್ಯವಾದಗಳು ತಿಳಿಸಿದ್ದಾರೆ. ಈ ಸಮಯದಲ್ಲಿ ಬಾಬುರಾವ್ ಚಿಂಚನಸೂರು, ಶಾಸಕರಾದ ಚನ್ನ ...

ಬಳ್ಳಾರಿ ಜಿಲ್ಲೆಯ ಕನ್ನಡದ ಹೊಸ ಕಾವ್ಯ ಪ್ರವರ್ತಕರು ಹಿ.ಮ.ನಾಗಯ್ಯ

ಇಮೇಜ್
  ಕೊಟ್ಟೂರು : ಕನ್ನಡ ಸಾಹಿತ್ಯ ಲೋಕದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಮೊದಲಿಗೆ ಹೊಸ ಕಾವ್ಯವನ್ನು ರಚಿಸಿದ್ದ ದಿ.ಹಿ.ಮ.ನಾಗಯ್ಯನವರು ಅಂದಿನ ದಿನಗಳಲ್ಲಿ ಹೊಸ ಕಾವ್ಯದ ಪ್ರವರ್ತಕರಾಗಿ ಹೊರ ಹೊಮ್ಮಿದ್ದರು ಎಂದು ಹೊಸಪೇಟೆಯ ಶಿಕ್ಷಕ ಬಿ.ಎಂ.ರಾಜಶೇಖರ ಹೇಳಿದರು. ಪಟ್ಟಣದ ಶ್ರೀ ರೇಣುಕ ಸಭಾಭವನದಲ್ಲಿ ತಾಲೂಕು ಕ.ಸಾ.ಪ. ಆಯೋಜಿಸಿದ್ದ ದಿ.ಹಿ.ಮ.ನಾಗಯ್ಯನವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಶನಿವಾರ ವಿಶೇಷ ಉಪನ್ಯಾಸ ನೀಡಿದರು.  ಕೂಡ್ಲಿಗಿ ತಾಲೂಕಿನ ಹಿರೇಕುಂಬಳಕುAಟೆ ಗ್ರಾಮದ ಹಿ.ಮ.ನಾ.ಅವರು, ಕವಿ ಮತ್ತು ಕವಿತೆ ಬೇರೆ ಅಲ್ಲ ಎಂದು ಭಾವಿಸಿದ್ದರಿಂದಲೇ ಅವರ ಸಾಹಿತ್ಯ ಸರಳ ಭಾಷೆಯಲ್ಲಿದೆ. ಪತ್ರಕರ್ತರಾಗಿ, ಸ್ವಂತ ಪತ್ರಿಕೆ ನಡೆಸಿ, ಬೆಂಗಳೂರು ಮಹಾ ನಗರ ಪಾಲಿಕೆ ಸದಸ್ಯರಾಗಿ, ಆಸ್ತಿ ತೆರಿಗೆ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು ರಾಮಕೃಷ್ಣ ಹೆಗಡೆಯವರಿಗೆ ಆತ್ಮೀಯರಾಗಿದ್ದ ಅವರಿಗೆ ದೊಡ್ಡ ರಾಜಕೀಯ ನಂಟು ಇದ್ದರೂ ಆಮಿಷಕ್ಕೊಳಗಾಗದೇ ಕೊನೆವರೆಗೂ ಸರಳ ಜೀವನ ನಡೆಸಿದ್ದರು ಎಂದರು. ಬಳ್ಳಾರಿ ಜಿಲ್ಲೆಯಲ್ಲಿ ಕನ್ನಡ ಶಾಲೆಗಳನ್ನು ತೆರೆದು, ಭಾಷೆ ಬೆಳಸಿ ರಾಜ್ಯದಲ್ಲಿಯೇ ಉಳಿಯುವಂತೆ ಮಾಡಿದ ಕೀರ್ತಿ ಹಿರಿಯ ಸಾಹಿತಿ ನಾಗೇಶಶಾಸ್ತಿçಗಳಿಗೆ ಸಲ್ಲುತ್ತದೆ. ಅದರಂತೆ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಕಾವ್ಯ ರಚನೆ ಆರಂಭವಾಗಿದ್ದರೂ ಜಿಲ್ಲೆಯಲ್ಲಿ ಮೊದಲಿಗೆ ಹೊಸ ಕಾವ್ಯ ರಚಿಸಿದ್ದ ಕೀರ್ತಿ ಹಿ.ಮ.ನಾ.ರದ್ದಾಗಿದೆ. ಸ್ವಾತಂತ್ರö್ಯ ಹೋ...