ಪೋಸ್ಟ್‌ಗಳು

ಪಟ್ಟಣದಲ್ಲಿ ಬಿಕ್ಕಿ ಮರಡಿ ದುರ್ಗಮ್ಮ ದೇವಿಯ ಪಲ್ಲಕ್ಕಿ ಮಹೋತ್ಸವ

ಇಮೇಜ್
ಕೊಟ್ಟೂರು ಪಟ್ಟಣದಲ್ಲಿ ಶನಿವಾರ ಬೆಳಿಗ್ಗೆ ಬಿಕ್ಕಿಮರಡಿ ದುರ್ಗಮ್ಮ ದೇವಿಯ ಪಲ್ಲಕ್ಕಿ ಮಹೋತ್ಸವ ಭಕ್ತರ ಸಡಗರದೊಂದಿಗೆ ಸಾಗುತ್ತಿದ್ದಂತೆ ಮಹಿಳೆಯರು ರಸ್ತೆಯುದ್ದಕ್ಕೂ ಮಲಗಿ ದೇವಿಗೆ ನಮಿಸಿ ಭಕ್ತಿ ಸಮರ್ಪಿಸಿದರು. ಬಿಕ್ಕಿಮರಡಿ ದುರ್ಗಮ್ಮ ದೇವಿಯ ಪಲ್ಲಕ್ಕಿ ಮಹೋತ್ಸವ ಬುಧವಾರ ಪಟ್ಟಣ ಪ್ರವೇಶ ಮಾಡುವ ಮೂಲಕ ಭಕ್ತರ ಸಡಗರ ಸಂಭ್ರಮದೊಂದಿಗೆ ನೆರೆವೇರಿತು.  ಜೀವಂತ ಕೋಳಿಗಳನ್ನು ಭಕ್ತರು ತೂರುವ ಏಕೈಕ ರಥೋತ್ಸವ ಎಂದೇ ಹೆಗ್ಗಳಿಕೆ ಹೊಂದಿರುವ ಬಿಕ್ಕಿಮರಡಿ ದುರ್ಗಮ್ಮನ ರಥೋತ್ಸವ ಸೋಮವಾರ ನಡೆದ ಹಿನ್ನಲೆಯಲ್ಲಿ ದೇವಿಯ ಮೂರ್ತಿಯನ್ನು ಪಟ್ಟಣದೊಳಕ್ಕೆ ರಥೋತ್ಸವ ಜರುಗಿದ ಮೂರು ದಿನದಲ್ಲಿ ಪಲ್ಲಕ್ಕಿ ಮಹೋತ್ಸವ ಜರುಗುವುದು ಬಹಳ ವರ್ಷಗಳಿಂದ ನಡೆದುಕೊಂಡು ಬಂದ ಧಾರ್ಮಿಕ ವಿಧಿವಿಧಾನವಾಗಿದೆ.   ದುರ್ಗಮ್ಮ ದೇವಿಯ ದೇವಸ್ಥಾನದಿಂದ ಬೆಳಿಗ್ಗೆ ದೇವಿಯ ಮೂರ್ತಿಯನ್ನು ಹೊತ್ತ ಪಲ್ಲಕ್ಕಿ ಉತ್ಸವ ಕೆಳಗೇರಿ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು. ಪಲ್ಲಕ್ಕಿ ಉತ್ಸವದುದ್ದಕ್ಕೂ ವಾಲ್ಮೀಕಿ ಜನಾಂಗದವರು ಮತ್ತು ಆಯಾಗಾರ ಬಳಗದವರು ಪಾಲ್ಗೊಂಡು ಪರಸ್ಪರ ಕುಂಕುಮ, ಗುಲಾಲು ಇತ್ಯಾದಿಗಳನ್ನು ಮುಖಕ್ಕೆ ಹಚ್ಚಿಕೊಂಡು ಸಂಭ್ರಮಿಸಿದರು. ಪಲ್ಲಕ್ಕಿ ಮಹೋತ್ಸವ ಸಾಗುತ್ತಿದ್ದಂತೆ ಕೊಟ್ಟೂರೇಶ್ವರ ದೇವಸ್ಥಾನ, ಗಾಂಧಿ ವೃತ್ತ ಮತ್ತಿತರ ಕಡೆ ಮಹಿಳಾ ಭಕ್ತರು ರಸ್ತೆಯುದ್ದಕ್ಕೂ ಮಲಗಿಕೊಂಡು ಭಕ್ತಿ ಸಮರ್ಪಿಸಿದರು.  ಪಟ್ಟಣದ ಕೆಲವೊಂದು ಓಣಿಗಳಲ್ಲಿ ಭಕ್...

ಸಂಭ್ರಮದಿಂದ ಜರುಗಿದ ರಥೋತ್ಸವಕ್ಕೆ ಕೋಳಿ ತೂರಿ ನಮಿಸಿದ ಭಕ್ತರು

ಇಮೇಜ್
  "ಜೀವಂತ ಕೋಳಿಗಳನ್ನು ರಥಕ್ಕೆ ತೂರುವ ಏಕೈಕ ಸಂಪ್ರದಾಯ ಕೊಟ್ಟೂರಿನ ಬಿಕ್ಕಿಮರುಡಿ ದುರುಗಮ್ಮ ದೇವಿಯ ಜಾತ್ರೆ " ಕೊಟ್ಟೂರು : ಕೊಟ್ಟೂರಿನ ಬಿಕ್ಕಿಮರುಡಿ ದುರುಗಮ್ಮ ದೇವಿಯ ರಥೋತ್ಸವ ಸೋಮವಾರ ಸಂಜೆ ಜರುಗುತ್ತಿದ್ದಂತೆ ನೆರೆದಿದ್ದ ಸಾವಿರಾರು ಭಕ್ತರ ಪೈಕಿ ಕೆಲವರು ಹರಕೆ ಹೊತ್ತು ಜೀವಂತ ಕೋಳಿಗಳನ್ನು ತೂರಿ ಭಕ್ತಿ ಸಮರ್ಪಿಸಿದರು. ವಿಶಿಷ್ಟಾಚರಣೆಯ ಇಲ್ಲಿನ ಬಿಕ್ಕಿಮರಡಿ ದುರುಗಮ್ಮ ದೇವಿಯ ರಥೋತ್ಸವವು ಬೌದ್ದಪೊರ್ಣಿಮೆಯ ದಿನವಾದ ಸೋಮವಾರ ಸಂಜೆ ೬.೨೦ರ ಸುಮಾರಿನಲ್ಲಿ ಸಾವಿರಾರು ಭಕ್ತರ ಸಡಗರ ಸಂಭ್ರಮಗಳೊAದಿಗೆ ಜರುಗಿತು.ರಥಕ್ಕೆ ಚಾಲನೆ ದೊರಕುತಿದ್ದಂತೆ ದುರುಗಮ್ಮ ದೇವಿಗೆ ಹರಕೆ ಹೊತ್ತ ಕೆಲ ಭಕ್ತರು ಜೀವಂತ ೫-೬ ಕ್ಕೂ ಹೆಚ್ಚು ಕೋಳಿಗಳನ್ನು ತೂರಿ ತಮ್ಮ ಭಕ್ತಿ ಸಮರ್ಪಿಸಿದರು. ಜೀವಂತ ಕೋಳಿಗಳನ್ನು ರಥಕ್ಕೆ ತೂರುವ ಏಕೈಕ ಸಂಪ್ರದಾಯ ಕೊಟ್ಟೂರಿನ ಬಿಕ್ಕಿಮರಡಿ ದುರುಗಮ್ಮ ದೇವಿಯ ರಥೋತ್ಸವದ್ದಾಗಿದ್ದು ಇದನ್ನು ಕಣ್ತುಂಬಿಕೊಳ್ಳಲು ಭಕ್ತರು ದಂಡು ದಂಡಾಗಿ ಮಧ್ಯಾಹ್ನದಿಂದಲೇ ಇಲ್ಲಿನ ಕೆರೆಯ ದಂಡೆಯ ಮೇಲಿರುವ ದೇವಿಯ ಗುಡಿಯ ಬಳಿ ಜಮಾಯಿಸತೊಡಗಿದರು. ಈ ಪೈಕಿ ಹೊಸದಾಗಿ ಮದುವೆಯಾದ ದಂಪತಿಗಳ ಸಂಖ್ಯೆ ಹೆಚ್ಚಕ್ಕಿತ್ತು. ರಥೋತ್ಸವಕ್ಕೂ ಮೊದಲು ಗುಡಿಯಿಂದ ದುರುಗಮ್ಮ ದೇವಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಮೆರವಣಿಗೆಯೋಂದಿಗೆ ರಥದ ಬಳಿ ತರಲಾಯಿತು.ರಥದ ಸುತ್ತಲೂ ಮೂರು ಸುತ್ತು ಪಲ್ಲಕ್ಕಿ ಮೆರವಣಿಗೆ ಪ್ರದಕ್ಷಿಣೆ ನಡೆಯಿತು. ನಂತರ ದೇವಿಯನ್...

ಪರಿಶಿಷ್ಟ ಜಾತಿಯ ಜಾತಿ ಸಮೀಕ್ಷೆ ಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ : ದಲಿತಪರ ಸಂಘಟನೆ ಆಗ್ರಹ

ಇಮೇಜ್
  ಮಸ್ಕಿ ; ಪರಿಶಿಷ್ಟ ಜಾತಿಯ ಜಾತಿ ಸಮೀಕ್ಷೆ ಲೋಪದೋಷಗಳನ್ನು ಸರಿಪಡಿಸಿ. ಸಮೀಕ್ಷೆ ಕಾರ್ಯದ ಅವಧಿಯನ್ನು ವಿಸ್ತರಿಸುವಂತೆ ಒತ್ತಾಯಿಸಿ ಇಂದು ಮಸ್ಕಿ ತಾಲ್ಲೂಕು ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ಮಸ್ಕಿ ಉಪ ತಹಶೀಲ್ದಾರ್ ಪ್ರಕಾಶ್ ಬುಳ್ಳಾ ಅವರಲ್ಲಿ ಮನವಿ ಪತ್ರವನ್ನು ಸಲ್ಲಿಸುವ ಮೂಲಕ ರಾಜ್ಯ ಸರ್ಕಾರ ನಿವೃತ್ತ ನಾಗಮೋಹನದಾಸ್ ಏಕ ಸದಸ್ಯ ಆಯೋಗಕ್ಕೆ ಆಗ್ರಹಿಸಲಾಯಿತು.ಈ ವೇಳೆ ಅನೇಕ ದಲಿತ ಪರ ಸಂಘಟನೆ ಪ್ರಮುಖ ಮುಖಂಡರು ಇದ್ದರು.

ಸಚ್ಚಾರಿತ್ರ‍್ಯ ಮತ್ತು ಸಮಾಜ ಮುಖಿ ವ್ಯಕ್ತಿಗಳಾಗಿ ಬದಲಾವಣೆ ಗೊಳ್ಳಬೇಕು -ಸಲೀಂ ಪಾಷ

ಇಮೇಜ್
  ಕೊಟ್ಟೂರು : ಅಪರಾದ ಕೃತ್ಯಗಳಲ್ಲಿ ನಿರಂತರ ಭಾಗವಹಿಸುವುದರಿಂದ ಬದುಕಿನ ಎಲ್ಲಾ ಬಗೆಯ ಸಂಕಷ್ಟಗಳನ್ನು ಸಂಬAದಿಕರು ಅನುಭವಿಸಬೇಕಾಗುತ್ತದೆ ಪೊಲೀಸ್ ಪ್ರಕರಣಗಳಲ್ಲಿ ದಾಖಲಾದ ಮತ್ತು ಶಿಕ್ಷೆಗೆ ಒಳಗಾದ ಆರೋಪಿಗಳು ನಂತರ ಮನಃ ಪರಿವರ್ತನೆಗೊಂಡು ಉತ್ತಮ ಪ್ರಜೆಯಾಗಿ ಜೀವಿಸುವತ್ತ ಮನಸ್ಸು ಮಾಡಬೇಕು ಇಲ್ಲದಿದ್ದರೆ ಜೀವಂತ ಇರುವವರೆಗೂ ಅಪರಾದಿ ಪ್ರಜ್ಞೆಯಲ್ಲೆ ಮುಳುಗಿರಬೇಕಾಗಿರುತ್ತದೆ ಎಂದು ವಿಜಯನಗರ ಜಿಲ್ಲಾ ಅಡಿಷನಲ್ ಎಸ್ಪಿ ಸಲೀಂ ಪಾಷ ಹೇಳಿದರು. ಭಾನುವಾರ ಪಟ್ಟಣದ ಪೊಲೀಸ್‌ಠಾಣೆಯ ಆವರಣದಲ್ಲಿ ಆಯೋಜಿಸಿದ್ದ ಕೂಡ್ಲಿಗಿ ಪೊಲೀಸ್ ಉಪವಿಭಾಗದ ೮ ಪೊಲೀಸ್ ಠಾಣೆಗಳ ರೌಡಿ ಪೇರೆಡ್‌ನಲ್ಲಿ ಭಾಗವಹಿಸಿದ್ದವರನ್ನು ಉದ್ದೇಶಿಸಿ ಅವರು ಮಾರ್ಗದರ್ಶನ ನೀಡಿದರು. ಯಾವುದೋ ಕಾರಣಕ್ಕೆ ಅಪರಾದಿಗಳಾಗಿ ಪ್ರಕರಣ ದಾಖಲಿಸಿಕೊಂಡಿರುವ ಆರೋಪಿಗಳು ಶಾಶ್ವತವಾಗಿ ಅಪರಾದ ಕೃತ್ಯಗಳಲ್ಲಿ ಮುಂದುವರಿಯದೆ ಸಚ್ಚಾರಿತ್ರ‍್ಯ ಮತ್ತು ಸಮಾಜ ಮುಖಿ ವ್ಯಕ್ತಿಗಳಾಗಿ ಬದಲಾವಣೆ ಗೊಳ್ಳಬೇಕು ಇದಕ್ಕೆ ಪೊಲೀಸ್ ಆಡಳಿತ ಸದಾ ಬೆಂಬಲ ನೀಡುತ್ತದೆ ಎಂದರು. ದುರಾದುಷ್ಠವಶಾತ್ ಅಪರಾದ ಕೃತ್ಯ ಮಾಡಿ ನಂತರ ಇದರಲ್ಲೆ ಮುಂದುವರಿಯುವ ಮನಸ್ಸು ಮಾಡದೇ ಸನ್ನಡತೆಯನ್ನು ಮೈಗೂಡಿಸಿ ಕೊಂಡರೆ ಪೊಲೀಸ್ ಆಡಳಿತದಿಂದ ಕೆಲವೊಂದು ಪ್ರಕರಣಗಳಿಂದ ಮುಕ್ತಗೊಳಿಸುವ ಕ್ರಮವನ್ನು ಹಿರಿಯ ಅಧಿಕಾರಿಗಳು ಕೈಗೊಳ್ಳುಲಿದ್ದಾರೆ ಎಂದರು. ಕೂಡ್ಲಿಗಿ ಡಿವೈಎಸ್ಪಿ ದೊಡ್ಡಮನಿ ಮಾತನಾಡಿ ಪ್ರತಿ ಪ್ರಜೆ ಪೊಲೀಸ್ ಸ್ನೇಹಿಯಾಗಬೇಕ...

ಈಶ್ವರಗೌಡ್ರ ಅವರನ್ನು ರಾಜ್ಯ ಸಮಿತಿ ಗೆ ಸೇರಿಸುವಂತೆ ಬಿ.ಜೆ.ಪಿ ಕಾರ್ಯಕರ್ತರು ಆಗ್ರಹ

ಇಮೇಜ್
  ಕೊಟ್ಟೂರು ತಾಲ್ಲೂಕು ಹಾಗೂ ಸುತ್ತಮುತ್ತಲಿನ ಬಿ.ಜೆ.ಪಿ. ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಜಿಲ್ಲಾಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು. ಶ್ರೀಯುತ ಕೆ.ಎಸ್. ಈಶ್ವರಗೌಡ್ರು ನಮ್ಮೆಲ್ಲರ ನೆಚ್ಚಿನ ನಾಯಕರಾಗಿ ಸದಾ ಕಾರ್ಯಕರ್ತರಿಗೆ ಸ್ಪಂದಿಸುತ್ತ ಕೊಟ್ಟೂರು ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ 4 ದಶಕಗಳಿಂದ ಬಿ.ಜೆ.ಪಿ. ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು. ತಮ್ಮ 10ನೇ ವಯಸ್ಸಿನಲ್ಲಿ ಆರ್.ಎಸ್.ಎಸ್. ಗೆ ಪಾದಾರ್ಪಣೆ ಮಾಡಿ ಅನೇಕ ಆರ್.ಎಸ್.ಎಸ್. ನ ಸಂಘ ಚಟುವಟಿಕೆಗಳಲ್ಲಿ ಭಾಗಿಯಾದವರು. ಶ್ರೀ ಗೋಮಧುಸೂದನ್ ಆರ್.ಎಸ್.ಎಸ್. ಸಂಚಾಲಕ ಇವರು ಹುಬಳ್ಳಿಯಲ್ಲಿ ಸುಮಾರು 40 ವರ್ಷಗಳ ಹಿಂದೆ ಆಯೋಜಿಸಿದ್ದ ಸಭೆಯಲ್ಲಿ ಭಾಗಿಯಾಗಿ ತುರ್ತುಪರಿಸ್ಥಿತಿ ವಿರೋಧಿಸಿ ಧರಣಿ ಸತ್ಯಾಗ್ರಹಗಳಲ್ಲಿ ಪಾಲ್ಗೊಂಡಿದ್ದು. ಅಂದಿನಿಂದ ಇಂದಿನವರೆಗೂ ಬಿ.ಜೆ.ಪಿ. ಗೆ ನಿಷ್ಟಾವಂತರಾಗಿರುತ್ತಾರೆ. ಫ್ಯಾಕಲ್ಟಿ ಮೆಂಬರ್ ಮತ್ತು ಚಾಟರ್ಡ್ ಎಂಜಿನಿಯರ್ ಪ್ರಧಾನ ಮಾಡಲಾಗಿದೆ. ವೃತ್ತಿಯಿಂದ ಚಾಟರ್ಡ್ ಇಂಜಿನಿಯರ್, ವ್ಯಾಲುವರ್ ಮತ್ತು ಟಿ.ಎ.ಪಿ.ಸಿ.ಎಂ.ಎಸ್. ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ ನಿ, ಕೊಟ್ಟೂರು ಇದರ ಹಾಲಿ ಅಧ್ಯಕ್ಷರು (ಸಂಸ್ಥಾಪಕ ಅಧ್ಯಕ್ಷರು) ಹಾಗೂ ತಾಲ್ಲೂಕು ಹೋರಾಟ, ರೈಲ್ವೇ ಹೋರಾಟ, ಕೆರೆ ನೀರು ತುಂಬಿಸುವ ಜನಪರ ಹೋರಾಟಗಳಲ್ಲಿ ಮುಂಚೂಣಿ ನಾಯಕತ್ವವನ್ನು ಹೊಂದಿರುತ್ತಾರೆ. ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ ಜನಿಸಿರುತ್ತಾರೆ. ಹ...

"ಶವವಾದ ಲೈನ್ ಮ್ಯಾನ್, ಜೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ಆರೋಪ"

ಇಮೇಜ್
ಕೊಟ್ಟೂರು ತಾಲೂಕಿನ ದೂಪದಹಳ್ಳಿ ಗ್ರಾಮದಲ್ಲಿ ವಿದ್ಯುತ್ ಕಂಬದಲ್ಲಿ ಲೈನ್ ಬದಲಾವಣೆ ಮಾಡುವ ವೇಳೆ ವಿದ್ಯುತ್‌ ಪ್ರವಹಿಸಿ ಕಂಬದ ಮೇಲೆ ಲೈನ್ ಮ್ಯಾನ್ ಇರುವ ದುರ್ಘಟನೆ ಬುಧವಾರ ನಡೆದಿದೆ. ಮೃತ ದುರ್ದೈವಿ ಲೈನ್ ಮ್ಯಾನ್ ಅಜ್ಜಯ್ಯ(29), ದೂಪದಹಳ್ಳಿ ಗ್ರಾಮದ ಕಂಬಳ ವಿದ್ಯುತ್ ಸಮಸ್ಯೆ ಪರಿಹರಿಸಲು ವಿದ್ಯುತ್ ಮೇಲೇರಿ ಕೆಲಸ ಮಾಡುತ್ತಿದ್ದಾರೆ. ವೇಳೆ ಈ ಘಟನೆ ನಡೆದಿದೆ. ಕೆಲಸಕ್ಕೂ ಮುನ್ನ ಕೊಟ್ಟೂರು ಉಪಕೇಂದ್ರದಿಂದ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲು ಸೂಚಿಸಲಾಗಿದೆ. ಬಳಿಕ ಕಂಬ ಹತ್ತಿದ್ದಾನೆ. ಆದರೆ ಕಂಬದ ಮೇಲೇರಿ ಕೆಲಸ ನಿರ್ವಹಿಸುತ್ತಿದ್ದ ಏಕಾಏಕಿ ಲೈನ್ ನಲ್ಲಿ ವಿದ್ಯುತ್ ಪೂರೈಕೆಯಾದ ಹಿನ್ನಲೆಯಲ್ಲಿ ಕಂಬದ ಮೇಲಿನ ಲೈನ್ ಮ್ಯಾನ್ ಶವವಾಗಿದ್ದಾನೆ. ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ಕರ್ತವ್ಯನಿರತ ಲೈನ್ ಮ್ಯಾನ್ ಕಂಬದ ಮೇಲೆಯೇ ಶವವಾಗಿ ನೇತಾಡುತ್ತಿರುವ ದೃಶ್ಯ ಮನ ಕಲಕುವಂತಿದೆ. ಜೆಸ್ಕಾಂ ಅಧಿಕಾರಿಗಳು ಸರಿಯಾದ ಮಾಹಿತಿ ನೀಡದೇ, ಲೈನ್ ಬದಲಾವಣೆ ಮಾಡಲು ಸೂಚಿಸಿರುವ ತಪ್ಪು ಮಾಹಿತಿ ನೀಡಿರೋದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಮೃತ ಲೈನ್ ಮ್ಯಾನ್‌ ಅಜ್ಜಯ್ಯನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಜೆಸ್ಕಾಂ ಮೇಲಾಧಿಕಾರಿಗಳು ಬರುವಂತೆ ಸ್ಥಳೀಯರು ಮತ್ತು ಕುಟುಂಬಸ್ಥರು ಆಗ್ರಹಿಸಿದ್ದಾರೆ. ವಿದ್ಯುತ್ ಕಂಬದ ಮೇಲಿಂದ ಮೃತದೇಹವನ್ನು ಕೆಳಗಿಸದಂತೆ ಪಟ್ಟು ಹಿಡಿದಿದ್ದಾರೆ. ಈ ಸಾವಿಗೆ ಜೆಸ್ಕಾಂ ಇಲಾಖ...

"ವಿಜಯಮಾಲೆ ಧರಿಸಿದ ಕೆ ಕೆ ಕಿಂಗ್ಸ್ ಕ್ರಿಕೆಟರ್ಸ್ ತಂಡ"

ಇಮೇಜ್
*ಕರ್ನಾಟಕ ಪ್ರೆಸ್ ಕ್ಲಬ್ ಪ್ರೀಮಿಯರ್ ಲೀಗ್ ಸೀಸನ್ 01 ರಲ್ಲಿ ವಿವಿಧ ಇಲಾಖೆಯ ಕ್ರಿಕೆಟ್ ಕ್ರೀಡಾಪಟುಗಳು ಡಾಕ್ಟರ್ಸ್ , ಪೊಲೀಸ್, ಗ್ರಾಮ ಲೆಕ್ಕಾಧಿಕಾರಿಗಳು, ಟೀಚರ್ಸ್ ,ಬ್ಯಾಂಕ್ ಸಿಬ್ಬಂದಿಗಳು ಭಾಗವಹಿಸಿ ಈ ಟೂರ್ನಮೆಂಟ್ ಗೆ ಮೇರಗು ಮೂಡಿಸಿತು* ಕೊಟ್ಟೂರಿನಲ್ಲಿ ಮೊಟ್ಟಮೊದಲ ಬಾರಿಗೆ ಕರ್ನಾಟಕ ಪ್ರೆಸ್ ಕ್ಲಬ್ ವತಿಯಿಂದ ನಡೆದ ಪ್ರೀಮಿಯರ್ ಲೀಗ್ ಸೀಸನ್ 01 ನಾಲ್ಕು ದಿನಗಳ ಕಾಲ ಸ್ಟಂಪರ್ ಬಾಲ್  ಟೂರ್ನಮೆಂಟ ಪಂದ್ಯಾವಳಿಗಳ ಆಯೋಜಿಸಿದು ಮಂಗಳವಾರ ಸುಖಾಂತ್ಯ ಕಂಡಿತು. ಕೊಟ್ಟೂರು : ಕರ್ನಾಟಕ ಪ್ರೆಸ್ ಕ್ಲಬ್ ವತಿಯಿಂದ ಪ್ರಪಥಮ ಬಾರಿಗೆ ಪ್ರೀಮಿಯರ್ ಲೀಗ್ ಸೀಸನ್ 01 ಆಯೋಜಿಸಿದ ಸ್ಟಂಪರ್ ಬಾಲ್  ಟೂರ್ನಮೆಂಟ  ಏಪ್ರಿಲ್ 19 ರಿಂದ 22 ವರೆಗೂ ನಾಲ್ಕು ದಿನ ಆಯೋಜಿಸಲಾಗಿತ್ತು.  ತಾಲೂಕಿನ ಹಳ್ಳಿ ಕ್ರೀಡಾಪಟುಗಳು ಒಳಗೊಂಡು ಜಿ ಬಿ ಕ್ರಿಕೆಟರ್ಸ್, ಕೆ ಕೆ ಕಿಂಗ್ಸ್ ಕ್ರಿಕೆಟರ್ಸ್,ನೈಸ್ ಕ್ರಿಕೆಟರ್ಸ್, ಶಿವಾನಿ ಕ್ರಿಕೆಟರ್ಸ್, ರೈಲ್ವೆ ಕ್ರಿಕೆಟರ್ಸ್,ಅರ್ ಸಿ ಕೆ ಕ್ರಿಕೆಟರ್ಸ್, ಎಸ್ ಎಸ್ ಸ್ಟ್ರೈಕರ್ಸ್,ಲಾಯನ್ಸ್ ಕ್ರಿಕೆಟರ್ಸ್, ಒಟ್ಟು 08 ತಂಡಗಳು ಭಾಗವಹಿಸಿದ್ದವು. ಪ್ರಥಮ ಸೆಮಿಫೈನಲ್ ಪಂದ್ಯದ ಸೆಣಸಾಟಕ್ಕಾಗಿ ಕೆ ಕೆ ಕಿಂಗ್ಸ್ ಕ್ರಿಕೆಟರ್ಸ್ ತಂಡ ಮತ್ತು ರೈಲ್ವೆ ಕ್ರಿಕೆಟರ್ಸ್ ತಂಡ ನಡುವಿನ ಸೆಮಿಫೈನಲ್‌ ಹಣಾಹಣಿಯಾಲ್ಲಿ ಕೆ ಕೆ ಕಿಂಗ್ಸ್ ಕ್ರಿಕೆಟರ್ಸ್ ಜಯಗಳಿಸಿ ಫೈನಲ್‌ಗೆ ಲಗ್ಗೆಯಿಟ್ಟಿತು. ನಂತರ ಲಾಯನ್ಸ್ ಕ್ರಿಕ...