ನಕಲಿ ಪಿ.ಎಚ್.ಡಿ ಪದವಿ ಧರರ ಮೇಲೆ ಕ್ರಮ ಜರುಗಿಸುವಂತೆ ಅಥಿತಿ ಉಪನ್ಯಾಸಕರ ಸಂಘ ಒತ್ತಾಯ
ಮಸ್ಕಿ : ಇತ್ತೀಚೆಗೆ ಅತಿಥಿ ಉಪನ್ಯಾಸಕರ ನೇಮಕಾತಿಗಾಗಿ ಸಲ್ಲಿಸಿದ ಅರ್ಜಿಗಳಲ್ಲಿ ನಕಲಿ ಪಿ.ಎಚ್.ಡಿ ಪ್ರಮಾಣ ಪತ್ರಗಳನ್ನು ಪಡೆದು ಅರ್ಜಿಗಳಲ್ಲಿ ಸಲ್ಲಿಸಿದ ಶಂಕೆ ನಮ್ಮನ್ನು ಕಾಡುತ್ತಿದೆ ಅಂಥಹ ಉಪನ್ಯಾಸಕರ ಮೇಲೆ ಕ್ರಮ ಜರುಗಿಸಬೇಕು ಎಂದು ಅಥಿತಿ ಉಪನ್ಯಾಸಕರ ಸಂಘ ಸಂಭಂದಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸುವ ಮೂಲಕ ಒತ್ತಾಯ ಮಾಡಿದರು. ಇತ್ತೀಚೆಗೆ ಅತಿಥಿ ಉಪನ್ಯಾಸಕರ ನೇಮಕಾತಿಗಾಗಿ ಸಲ್ಲಿಸಿದ ಅರ್ಜಿಗಳಲ್ಲಿ ನಕಲಿ ಪಿ.ಎಚ್.ಡಿ ಪ್ರಮಾಣ ಪತ್ರಗಳನ್ನು ಪಡೆದು ಅರ್ಜಿಗಳಲ್ಲಿ ಸಲ್ಲಿಸಿದ ಶಂಕೆ ನಮ್ಮನ್ನು ಕಾಡುತ್ತಿದೆ. ಇದರಿಂದ ಪ್ರಾಮಾಣಿಕವಾಗಿ ಪಿ.ಎಚ್.ಡಿ ಪಡೆದ ಪದವೀಧರರಿಗೆ ಮತ್ತು ಹೆಚ್ಚು ಕಾಲ ಸೇವಾನುಭವ ಹೊಂದಿರುವ ಅಥಿತಿ ಉಪನ್ಯಾಸಕರಿಗೆ ಸೇವೆಯಿಂದ ವಂಚಿತರಾಗುವ ಭಯ ಕಾಡುತ್ತಿದೆ. ಕಾರಣ ತಾವುಗಳು ಪ್ರಮಾಣ ಪತ್ರ ಪರಿಶೀಲನೆ ಸಮಯದಲ್ಲಿ ಅಂತಹ ನಕಲಿ ಪಿ.ಎಚ.ಡಿ ಪ್ರಮಾಣ ಪತ್ರವನ್ನು ಪತ್ತೆ ಹಚ್ಚಿ ಅಂತಹವರನ್ನು ಕಪ್ಪು ಪಟ್ಟಿಗೆ ಸೇರಿಸಲು ಉನ್ನತ ಶಿಕ್ಷಣ ಇಲಾಖೆಗೆ ಶಿಫಾರಸ್ಸು ಮಾಡಿ ಅಂಥವರ ವಿರುದ್ಧ ಸೂಕ್ತ ಕಾನೂನುಕ್ರಮ ಜರುಗಿಸಬೇಕು. ಯಾಕೆಂದರೆ ಕೆಲವರು ಪದವಿ ಕಾಲೇಜುಗಳಲ್ಲಿ ಅಥಿತಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ವೇಳೆಯಲ್ಲಿ ಪಿ . ಎಚ್.ಡಿ ಪದವಿಯನ್ನು ಹೇಗೆ ಪಡೆದರು ಹಾಗೂ ಕೋರ್ಸ್ ವರ್ಕ್ ಮಾಡಲು ಹೋದರು ಆ ಸಂದರ್ಭದಲ್ಲಿ ಅವರ ಹಾಜರಾತಿ ಹಾಗೂ ಅವರ ಲೇಖನ ಪ್ರಕಟಿಸಿದ ಮಾಹಿತಿಯನ್ನು ಪಡೆದು ಸತ್ಯಾಸತ್ಯತೆಯ ...