ಪೋಸ್ಟ್‌ಗಳು

ನಕಲಿ ಪಿ.ಎಚ್.ಡಿ ಪದವಿ ಧರರ ಮೇಲೆ ಕ್ರಮ ಜರುಗಿಸುವಂತೆ ಅಥಿತಿ ಉಪನ್ಯಾಸಕರ ಸಂಘ ಒತ್ತಾಯ

ಇಮೇಜ್
  ಮಸ್ಕಿ : ಇತ್ತೀಚೆಗೆ ಅತಿಥಿ ಉಪನ್ಯಾಸಕರ ನೇಮಕಾತಿಗಾಗಿ ಸಲ್ಲಿಸಿದ ಅರ್ಜಿಗಳಲ್ಲಿ ನಕಲಿ ಪಿ.ಎಚ್.ಡಿ ಪ್ರಮಾಣ ಪತ್ರಗಳನ್ನು ಪಡೆದು ಅರ್ಜಿಗಳಲ್ಲಿ ಸಲ್ಲಿಸಿದ ಶಂಕೆ ನಮ್ಮನ್ನು ಕಾಡುತ್ತಿದೆ ಅಂಥಹ ಉಪನ್ಯಾಸಕರ ಮೇಲೆ ಕ್ರಮ ಜರುಗಿಸಬೇಕು ಎಂದು ಅಥಿತಿ ಉಪನ್ಯಾಸಕರ ಸಂಘ ಸಂಭಂದಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸುವ ಮೂಲಕ ಒತ್ತಾಯ ಮಾಡಿದರು.  ಇತ್ತೀಚೆಗೆ ಅತಿಥಿ ಉಪನ್ಯಾಸಕರ ನೇಮಕಾತಿಗಾಗಿ ಸಲ್ಲಿಸಿದ ಅರ್ಜಿಗಳಲ್ಲಿ ನಕಲಿ ಪಿ.ಎಚ್.ಡಿ ಪ್ರಮಾಣ ಪತ್ರಗಳನ್ನು ಪಡೆದು ಅರ್ಜಿಗಳಲ್ಲಿ ಸಲ್ಲಿಸಿದ ಶಂಕೆ ನಮ್ಮನ್ನು ಕಾಡುತ್ತಿದೆ. ಇದರಿಂದ ಪ್ರಾಮಾಣಿಕವಾಗಿ ಪಿ.ಎಚ್.ಡಿ ಪಡೆದ ಪದವೀಧರರಿಗೆ ಮತ್ತು ಹೆಚ್ಚು ಕಾಲ ಸೇವಾನುಭವ ಹೊಂದಿರುವ ಅಥಿತಿ ಉಪನ್ಯಾಸಕರಿಗೆ ಸೇವೆಯಿಂದ ವಂಚಿತರಾಗುವ ಭಯ ಕಾಡುತ್ತಿದೆ. ಕಾರಣ ತಾವುಗಳು ಪ್ರಮಾಣ ಪತ್ರ ಪರಿಶೀಲನೆ ಸಮಯದಲ್ಲಿ ಅಂತಹ ನಕಲಿ ಪಿ.ಎಚ.ಡಿ ಪ್ರಮಾಣ ಪತ್ರವನ್ನು ಪತ್ತೆ ಹಚ್ಚಿ ಅಂತಹವರನ್ನು ಕಪ್ಪು ಪಟ್ಟಿಗೆ ಸೇರಿಸಲು ಉನ್ನತ ಶಿಕ್ಷಣ ಇಲಾಖೆಗೆ ಶಿಫಾರಸ್ಸು ಮಾಡಿ ಅಂಥವರ ವಿರುದ್ಧ ಸೂಕ್ತ ಕಾನೂನುಕ್ರಮ ಜರುಗಿಸಬೇಕು. ಯಾಕೆಂದರೆ ಕೆಲವರು ಪದವಿ ಕಾಲೇಜುಗಳಲ್ಲಿ ಅಥಿತಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ವೇಳೆಯಲ್ಲಿ  ಪಿ . ಎಚ್.ಡಿ ಪದವಿಯನ್ನು ಹೇಗೆ ಪಡೆದರು ಹಾಗೂ ಕೋರ್ಸ್ ವರ್ಕ್ ಮಾಡಲು ಹೋದರು ಆ ಸಂದರ್ಭದಲ್ಲಿ ಅವರ ಹಾಜರಾತಿ ಹಾಗೂ ಅವರ ಲೇಖನ ಪ್ರಕಟಿಸಿದ ಮಾಹಿತಿಯನ್ನು ಪಡೆದು ಸತ್ಯಾಸತ್ಯತೆಯ ...

ಶ್ರೀಮತಿ ಲಲಿತಾ ಡಿ ಶೆಟ್ಟಿ ಇವರಿಗೆ.ಒಲಿದು ಬಂದ ಸ್ವಾಮಿ ವಿವೇಕಾನಂದ ಸದ್ಭಾವನಾ ಚಲನಚಿತ್ರ ರಾಷ್ಟ್ರ ಪ್ರಶಸ್ತಿ.

ಇಮೇಜ್
  ಲಿಂಗಸಗೂರು:ಬೆಂಗಳೂರಿನ ದರ್ಶನ್ ಸೋಶಿಯಲ್ ಅಂಡ್ ಕಲ್ಚರಲ್ ಅಕಾಡೆಮಿಯ(ಡಿಸಿಎ) ಸಂಸ್ಥಾಪಕರಾದ ಶ್ರೀಮತಿ ರೇಣುಕಾ ಪಿ ಸಂಸ್ಥಾಪಕ ಅಧ್ಯಕ್ಷರು ಹಾಗೂ ಅಧ್ಯಕ್ಷರಾದ ದರ್ಶನ್.ಯು.ಹಾಗೂ ಸ್ನೇಹಿತರ ಬಳಗ  ವತಿಯಿಂದ.ಕಳೆದ 17 ವರ್ಷಗಳಿಂದ ಸಮಾಜ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ 350 ಕ್ಕೂ ಹೆಚ್ಚು ಜನಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ.ಹಲವಾರು ಸಾಧನೆಗಳನ್ನು ಮಾಡುತ್ತಾ. ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿದಂತ ಗಣ್ಯ ಸಾಧಕರನ್ನು ಗುರುತಿ ಅವರಿಗೆ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಹಾಗೂ ಕಲಾ ಪ್ರತಿಭೆ.ಜಾಣ್ಮೆ ಹಾಗೂ ನುರಿತ ವಿದ್ಯೆಯನ್ನು ಹೊರ ತರಲು ಇಂತಹ ಕಾರ್ಯಕ್ರಮಗಳು.ಕಲಾ ಪ್ರದರ್ಶನಗಳು. ಅತ್ಯವಶ್ಯಕವಾಗಿದ್ದು.ಇದುವೇ ಈ ಸಂಸ್ಥೆಯ ಮೂಲ ಧ್ಯೇಯವಾಗಿದೆ. "ಯುವ ಸಂಭ್ರಮ"ದರ್ಶನ್ ಸೋಶಿಯಲ್ ಅಂಡ್ ಅಕಾಡೆಮಿ ಬೆಂಗಳೂರು ವತಿಯಿಂದ.98ನೆಯ ಸಾಂಸ್ಕೃತಿಕ ಕಾರ್ಯಕ್ರಮ.ಹಾಗೂ 2024 -25ನೇ ಸಾಲಿನ ಸಾಧಕರಿಗೆ ಸ್ವಾಮಿ ವಿವೇಕಾನಂದ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ ಯನ್ನು.ಸಾಂಸ್ಕೃತಿಕ ಕಲಾ ಗ್ರಾಮದಲ್ಲಿ ದರ್ಶನ್ ಸೋಶಿಯಲ್ ಅಂಡ್ ಕಲ್ಚರಲ್ ಅಕಾಡೆಮಿ ವತಿಯಿಂದ ಯುವ ಸಂಭ್ರಮ ವೇದಿಕೆಯಲ್ಲಿ.ಸ್ವಾಮಿ ವಿವೇಕಾನಂದ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ.ಕಾರ್ಯಕ್ರಮದ. ಅಧ್ಯಕ್ಷತೆ ಶ್ರೀನಿವಾಸ್ ಮೂರ್ತಿ ಚಲನಚಿತ್ರ ಮತ್ತು ಕಿರುತೆರೆ ನಟರು. ಪ್ರಶಸ್ತಿ ಪ್ರಧಾನ ಡಾಕ್ಟರ್ ಅಂಜನಪ್ಪ ವೈದ್ಯಕೀಯ ಕ್ಷೇತ್ರದ ರಾಜ್ಯೋತ್ಸವ ಪ್ರಶಸ್ತಿ...

ಆಂಜನೇಯ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ₹150000 ಸಾವಿರ ಮೊತ್ತದ ಡಿ ಡಿ ವಿತರಣೆ ಕಾರ್ಯಕ್ರಮ.

ಇಮೇಜ್
ಮಸ್ಕಿ : ಆಂಜನೇಯ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ  ₹150000 ಸಾವಿರ ಮೊತ್ತದ ಡಿ ಡಿ ವಿತರಣೆ ಕಾರ್ಯಕ್ರಮ ನೆಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ (ರಿ) ಮಸ್ಕಿ ವತಿಯಿಂದ ತಾಲೂಕಿನ ಮೆದಿಕಿನಾಳ ವಲಯದ ತಲೆಖಾನ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನಕ್ಕೆ ಶ್ರೀ ಕ್ಷೇತ್ರದಿಂದ ಪೂಜ್ಯರು ಮಂಜೂರು ಮಾಡಿರುವ ₹150000 ಸಾವಿರ ಮೊತ್ತದ DD ವಿತರಣೆ ಮಾಡಲಾಯಿತು. ಈ ವೇಳೆ, ಜಿಲ್ಲಾ ನಿರ್ದೇಶಕರಾದ ಮೋಹನ್ ನಾಯ್ಕ್ ಅವರು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯು ಸಮುದಾಯ ಅಭಿವೃದ್ಧಿ, ಸಾಮಾಜಿಕ ಯೋಜನೆಯ ಸೇರಿದಂತೆ ಹಲವು ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದ್ದರು. ಮಸ್ಕಿ ತಾಲೂಕಿನ ಯೋಜನಾಧಿಕಾರಿಗಳು ಶ್ರೀಮತಿ ಶಾಲಿನಿ ರವರು ಮಾತನಾಡಿ ತಾಲುಕಿನ ವಿವಿಧ ಗ್ರಾಮೀಣ ಮಟ್ಟದಲ್ಲಿರುವ ದೇವಸ್ಥಾನ ಜೀರ್ಣೋದ್ದಾರಕ್ಕೆ ಕೈ ಜೋಡಿಸುತ್ತಿರುವ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಿಗೆ ಅಭಿನಂದನೆ ಗಳನ್ನು ಸಲ್ಲಿಸಿ ನಂತರ ಕ್ಷೇತ್ರದಿಂದ ಪೂಜ್ಯರು ಮಂಜೂರು ಮಾಡಿರುವ 150000/-ಮೊತ್ತವನ್ನು ವಿತರಿಸಲಾಯಿತು ಈ ಸಂದರ್ಭದಲ್ಲಿ, ಶ್ರೀ ಆಂಜನೇಯ ದೇವಸ್ಥಾನದ ಟ್ರಸ್ಟ್ ನ ಅಧ್ಯಕ್ಷ ನಾಗಪ್ಪ, ಕಾರ್ಯದರ್ಶಿ ಮಾಹಾಂತೇಶ,ಜನಜಾಗೃತಿ ಸದಸ್ಯ ರಾಜಣ್ಣ ಪರಡ್ಡಿ , ವಲಯದ ಮೇಲ್ವಿಚಾರಕ ಪ್ರಸನ್ನ,ಶರಣಮ್ಮ, ಸೇರಿದಂತೆ ಸ್ವಸಹಾಯ ಸಂಘದ ಸದಸ್ಯರು ದೇವಸ್ಥಾನ ಕಮಿಟಿ ಸದಸ್ಯರು ಗ್ರಾಮಸ್ಥರು...

ಜವಾಹರ ನವೋದಯ ಪ್ರವೇಶ ಪರೀಕ್ಷೆ ಶಾಂತಿಯುತ

ಇಮೇಜ್
  ಮಸ್ಕಿ : ಜವಾಹರ ನವೋದಯ ವಿದ್ಯಾಲಯದ ಪ್ರವೇಶಕ್ಕಾಗಿ ಶನಿವಾರ ನಡೆದ ಪರೀಕ್ಷೆಗೆ 36 ವಿದ್ಯಾರ್ಥಿಗಳು ಗೈರು ಹಾಜರು. ಪಟ್ಟಣದ ಬಾಲಕಿಯ ಪ್ರೌಢ ಶಾಲೆ ಹಾಗೂ ಜೋಗಿನ್ ರಾಮಣ್ಣ ಸ್ಮಾರಕ ಪ್ರೌಢಶಾಲಾ ಶಾಲೆಯ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, 565 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದರು. ಬೆಳಗ್ಗೆ 11.30ರಿಂದ 1.30ರವರೆಗಿನ ಪರೀಕ್ಷೆಯಲ್ಲಿ 565 ವಿದ್ಯಾರ್ಥಿಗಳು ಹಾಜರಾಗಿದ್ದರು. ಪಾರದರ್ಶಕತೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಪರೀಕ್ಷೆ ಜರುಗಿತು. ಈ ಬಗ್ಗೆ ತಹಶೀಲ್ದಾರರು ಮಾತನಾಡಿ ಶಾಲೆ ಪ್ರವೇಶಕ್ಕಾಗಿ 2 ಕೇಂದ್ರಗಳಲ್ಲಿ ಪರೀಕ್ಷೆ ಆಯೋಜಿಸಿದ್ದು, ಶಾಂತಿಯುತವಾಗಿ ಸುಸೂತ್ರವಾಗಿ ಪೂರ್ಣಗೊಂಡಿವೆ ಎಂದರು. ಪರೀಕ್ಷಾ ಕೇಂದ್ರ ಸುತ್ತಲೂ ನಿಷೇದಾಜ್ಞೆ ಜಾರಿಗೊಳಿಸಲಾಗಿತ್ತು.

ಮಸ್ಕಿ : ಕ್ರಮ ಜರುಗಿಸದೇ ಹೋದರೆ ಧರಣಿ ನಡೆಸಲಾಗುವುದು ಎಚ್ಚರಿಕೆ

ಇಮೇಜ್
  ಮಸ್ಕಿ : ಪಟ್ಟಣದ ಆಸ್ತಿ ಸಂಖ್ಯೆ: 3-1-98 ಈ ಆಸ್ತಿಯ ಬಗ್ಗೆ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳ ಆದೇಶವಿದ್ದರೂ ವಿಳಂಬದ ನಡೆ ಕುರಿತು ಕ್ರಮ ಜರುಗಿಸದೇ ಹೋದರೆ ಪುರಸಭೆ ಆವರಣದ ಮುಂದೆ ಧರಣಿ ನಡೆಸಲಾಗುವುದು ಎಂದು ಸಾರ್ವಜನಿಕ ಮನವಿಯಲ್ಲಿ ಒತ್ತಾಯ. ಇಲ್ಲಿನ ಪುರಸಭೆ ವ್ಯಾಪ್ತಿಯ ಆಸ್ತಿ ಸಂಖ್ಯೆ: 3-1-98 ಈ ಆಸ್ತಿಯ ಬಗ್ಗೆ ಕ್ರಮ ಕೈಗೊಳ್ಳಲು 24-09-2024 ರಂದು ಮಾನ್ಯ ತಹಶೀಲ್ದಾರರು, ಮುಖ್ಯಾಧಿಕಾರಿಗಳಿಗೆ ಪತ್ರದ ಮುಖೇನ ಕ್ರಮ ಕೈಗೊಳ್ಳಲು ತಿಳಿಸಿರುತ್ತಾರೆ. ಅದೇ ರೀತಿ 19-09-2024 ರಂದು ಮಸ್ಕಿ ಪುರಸಭೆ ಮುಖ್ಯಾಧಿಕಾರಿಗಳಿಗೆ ನಿಯಮಾನುಸಾರ ಕ್ರಮ ಕೈಗೊಳ್ಳಲು ಮಾನ್ಯ ಸಹಾಯಕ ಆಯುಕ್ತರು, ಲಿಂಗಸುಗೂರು ತಿಳಿಸಿರುತ್ತಾರೆ. ಮಾನ್ಯ ಸಹಾಯಕ ಆಯುಕ್ತರು ಲಿಂಗಸುಗೂರು ಇವರು 19-12-2024 ರಂದು ಪುನಃ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡಲು ಮಸ್ಕಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಪತ್ರದ ಮುಖೇನ ತಿಳಿಸಿರುತ್ತಾರೆ. ಅದೇ ರೀತಿಯಾಗಿ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ರಾಯಚೂರು ಇವರು ಈ ಆಸ್ತಿ ಬಗ್ಗೆ 05-12-2024 ರಂದು ಈ ಆಸ್ತಿಯ ಬಗ್ಗೆ ಕ್ರಮ ತೆಗೆದುಕೊಂಡು ಈ ಕಚೇರಿಗೆ ವರದಿಯನ್ನು ಸಲ್ಲಿಸಲು ತಿಳಿಸಿದ್ದು ಒಂದು ವೇಳೆ ಕ್ರಮ ಕೈಗೊಂಡ ವರದಿ ಸಲ್ಲಿಸದಿದ್ದರೆ, ತಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. ಈ ಮೇಲೆ ತಿಳಿಸಿದ ಎಲ್ಲಾ ಅಧಿಕಾರಿಗಳು ಆದೇಶ ಮಾಡಿದ ನಂತರ ನಿಮ್ಮ ಪುರಸಭೆಯಿಂದ ಕಾನೂನು ಪ್ರಕಾರ ಅವರಿಗೆ ನೆ...

ಚಿತ್ರನಟ ಶ್ರೀ ಗಂಗಾಧರ್ ಗೋಗಿ ಇವರಿಗೆ.ಒಲಿದು ಬಂದ ಸ್ವಾಮಿ ವಿವೇಕಾನಂದ ಸದ್ಭಾವನಾ ಚಲನಚಿತ್ರ ರಾಷ್ಟ್ರ ಪ್ರಶಸ್ತಿ.

ಇಮೇಜ್
ಲಿಂಗಸಗೂರು:ಬೆಂಗಳೂರಿನ ದರ್ಶನ್ ಸೋಶಿಯಲ್ ಅಂಡ್ ಕಲ್ಚರಲ್ ಅಕಾಡೆಮಿಯ(ಡಿಸಿಎ) ಸಂಸ್ಥಾಪಕರಾದ ಶ್ರೀಮತಿ ರೇಣುಕಾ ಪಿ ಸಂಸ್ಥಾಪಕರು  ಮತ್ತು ಧ್ಯಕ್ಷರಾದ ದರ್ಶನ್.ಯು.ಹಾಗೂ ಸ್ನೇಹಿತರ ಬಳಗ  ವತಿಯಿಂದ. "ಯುವ ಸಂಭ್ರಮ"ದರ್ಶನ್ ಸೋಶಿಯಲ್ ಅಂಡ್ ಅಕಾಡೆಮಿ ಬೆಂಗಳೂರು ವತಿಯಿಂದ.98ನೆಯ ಸಾಂಸ್ಕೃತಿಕ ಕಾರ್ಯಕ್ರಮ.ಹಾಗೂ 2024 -25ನೇ ಸಾಲಿನ ಸಾಧಕರಿಗೆ ಸ್ವಾಮಿ ವಿವೇಕಾನಂದ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ ಯನ್ನು.ಸಾಂಸ್ಕೃತಿಕ ಕಲಾ ಗ್ರಾಮದಲ್ಲಿ. ಅದ್ದೂರಿಯಾಗಿ ನಡೆಯಿತು. ದರ್ಶನ್ ಸೋಶಿಯಲ್ ಅಂಡ್ ಕಲ್ಚರಲ್ ಅಕಾಡೆಮಿ ವತಿಯಿಂದ ಯುವ ಸಂಭ್ರಮ ವೇದಿಕೆಯಲ್ಲಿ.ಸ್ವಾಮಿ ವಿವೇಕಾನಂದ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ. ಕಾರ್ಯಕ್ರಮದ ಅಧ್ಯಕ್ಷತೆ ಶ್ರೀನಿವಾಸ್ ಮೂರ್ತಿ ಚಲನಚಿತ್ರ ಮತ್ತು ಕಿರುತೆರೆ ನಟರು. ಪ್ರಶಸ್ತಿ ಪ್ರಧಾನ ಡಾಕ್ಟರ್ ಅಂಜನಪ್ಪ ವೈದ್ಯಕೀಯ ಕ್ಷೇತ್ರದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.ಮಹೇಂದ್ರ ಮುನ್ನೋತ್ ಚಲನಚಿತ್ರ ನಿರ್ಮಾಪಕರು ಮತ್ತು ಸಮಾಜ ಸೇವಕರು.ಶ್ರೀಲಕ್ಷ್ಮಿ ಪತಯ್ಯ ಸಹಕಾರ ಸಂಘಗಳ ಅಪರ ನಿಬಂಧಕರು ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ಸಹಕಾರ ಮಂಡಳಿ.ಗಣೇಶ್ ರಾವ್ ಚಲನಚಿತ್ರ ನಟರು ನವೀನ್ ಶಂಕರ್ ಚಲನಚಿತ್ರನಟರು ಈ ಎಲ್ಲಾ ಗಣ್ಯಮಾನ್ಯರಿಂದ.ದೀಪಾ ಬೆಳಗಿಸುವ ಮುಖಾಂತರ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ನಂತರ ಸ್ವಾಮಿ ವಿವೇಕಾನಂದ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾದ ಚಲನಚಿತ್ರ ಮತ್ತು ಧಾರವಾಹಿ ನ...

ಅಧ್ಯಕ್ಷರಾಗಿ ನಾಗಪ್ಪ ಬಾರಿಕೇರ್ ಹಾಗೂ ಉಪಾಧ್ಯಕ್ಷರಾಗಿ ನಿರ್ಮಲ ಎಸ್ ಸರ್ ಗಣಾಚಾರಿ ಆಯ್ಕೆ

ಇಮೇಜ್
 ಮಸ್ಕಿ : ಪತ್ತಿನ ಸಹಕಾರ ಸಂಘದ ಚುನಾವಣೆ ಕಾಂಗ್ರೆಸ್ ತೆಕ್ಕೆಗೆ  ಮಸ್ಕಿ : ತೀವ್ರ ಕುತೂಹಲ ಕೆರಳಿಸಿದ್ದ ಮಸ್ಕಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 12 ಸ್ಥಾನಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅದೃಷ್ಟ ಎನ್ನುವಂತೆ ಲಾಟರಿಯಲ್ಲಿ ಗೆದ್ದ ಸಾಲಗಾರರಲ್ಲದ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನಾಗಪ್ಪ ಬಾರಿಕೇರ್ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ನಿರ್ಮಲ ಎಸ್ ಸರ್ ಗಣಾಚಾರಿ ಗೆಲವು ಸಾಧಿಸಿದರು. ಗೆದ್ದ ಅಭ್ಯರ್ಥಿಗಳಿಗೆ ಶಾಸಕ ಆರ್ ಬಸನಗೌಡ ತುರುವಿಹಾಳ ರವರು ಕಾರ್ಯಕೃತರ ಸಮ್ಮುಖದಲ್ಲಿ ಅಭಿನಂದನೆ ಸಲ್ಲಿಸಿದರು. ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಶಾಂತಿಯುತವಾಗಿ ಜರುಗಲು ಮಸ್ಕಿ ಠಾಣೆಯ ಪೊಲೀಸರು ಬಿಗಿ ಬಂದೋಬಸ್ತ್ ನೀಡಿದರು. ಈ ಸಂದರ್ಭದಲ್ಲಿ ಬಸನಗೌಡ ಪೊಲೀಸ್ ಪಾಟೀಲ, ನಿರುಪಾದೆಪ್ಪ ವಕೀಲರು, ನೀಲಕಂಠಪ್ಪ ಗೋನಾಳ, ಬಿ.ಜಿ ನಾಯಕ,ಕೃಷ್ಣ ಚಿಗಿರಿ,ಆನಂದ ವಿ,ಮಲ್ಲಯ್ಯ ಮುರಾರಿ, ರವಿಕುಮಾರ್ ಮಡಿವಾಳ,ಮಹಿಬೂಬು ಹಣಿಗಿ,ಪಂಪಾಪತಿ ಗಣಾಚಾರಿ,ರವಿಕುಮಾರ್ ಮಡಿವಾಳ, ಮಲ್ಲಿಕ್ ಮುರಾರಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.