ಪಂಚ ದೀಪಗಳ ಬೆಳಕಿನ ಹಬ್ಬ.ಕ್ರಿಸ್ಮಸ್
ಲಿಂಗಸ್ಗೂರು : ತಮ್ಮೆಲ್ಲರಿಗೂ ಕ್ರಿಸ್ತ ಆಗಮನ ದಿನಮಾನಗಳ ಶುಭಾಶಯಗಳು.ಕ್ರೈಸ್ತ ಬಂದವರು ಪ್ರಾರ್ಥನಾ ಪೂರಕವಾಗಿಯೂ ಹಾಗೂ ಶ್ರದ್ಧಾ ಭಕ್ತಿಯಿಂದಲೂ ಆಚರಿಸಲ್ಪಡುವ ಪ್ರಮುಖವಾದ ಹಬ್ಬಗಳೆಂದರೆ ಕ್ರಿಸ್ಮಸ್ ಗುಡ್ ಫ್ರೈಡೇ ಹಾಗೂ ಈಸ್ಟರ್."ಕ್ರಿಸ್ಮಸ್" ಹಬ್ಬವನ್ನು ಬೆಳಕಿನ ಹಬ್ಬವೆಂದು ಕರೆಯುವುದು ಉಂಟು. ಈ ಎಲ್ಲಾ ಹಬ್ಬಗಳ ಬುನಾದಿ ಕ್ರಿಸ್ಮಸ್ ಎಂದು ಹೇಳಿದರೆ ತಪ್ಪಾಗಲಾರದು. ಕ್ರಿಸ್ಮಸ್ ಏಸುಕ್ರಿಸ್ತನ ಜನನದ ಸಂದೇಶವನ್ನು ಸಾರುವತ್ತ ಹಬ್ಬವಾಗಿದೆ. ವಿಶ್ವದಲ್ಲೇ ಡಿಸೆಂಬರ್ 25ನೇ ತಾರೀಖಿನ ದಿನದಂದು ಈ ಹಬ್ಬವನ್ನು ಆಚರಿಸುತ್ತಾರೆ. ನವಂಬರ್ ತಿಂಗಳ ಕೊನೆಯವಾರದಿಂದ ಹಿಡಿದು ಕ್ರಿಸ್ಮಸ್ ಹಬ್ಬದವರೆಗೂ ಈ ದಿನಗಳನ್ನು ಕ್ರಿಸ್ತನ ಆಗಮನ ದಿನಗಳು(Advent) ಎಂದು ಕರೆಯುತ್ತಾರೆ.ಅಂದರೆ ಕ್ರಿಸ್ಮಸ್ ದಿನಕ್ಕಿಂತಲೂ ನಾಲ್ಕು ವಾರಗಳ ಮುಂಚಿತವಾಗಿ ಕ್ರೈಸ್ತ ಬಂದವರು ಕ್ರಿಸ್ಮಸ್ ಹಬ್ಬದವರಿಗೂ ಪ್ರತಿಯೊಂದು ಭಾನುವಾರ ಒಂದೊಂದು ಮೇಣದ ಬತ್ತಿಯನ್ನು ಬೆಳಗಿಸುವುದರ ಮೂಲಕ ಐದು ವಿಧವಾದ ಸಂದೇಶಗಳನ್ನು ಧ್ಯಾನಿಸುತ್ತಾರೆ.ಈ ಲೇಖನದಲ್ಲಿ ಈ ಸಂಪ್ರದಾಯ ಒಪ್ಪಿಕೊಂಡಿರುವ ಹಿನ್ನೆಲೆ ಹಾಗೂ ಅವುಗಳ ಅರ್ಥವನ್ನು ತಮ್ಮೊಡನೆ ಹಂಚಿಕೊಳ್ಳಲು ಇಚ್ಚಿಸುತ್ತೇನೆ. ಐದು ಮೇಣದ ಬತ್ತಿಗಳ ಹಿನ್ನೆಲೆ: ಕ್ರೈಸ್ತ ಬಂದವರು ಕ್ರಿಸ್ಮಸ್ ಹಬ್ಬವನ್ನು ಆಚರಿಸುವವರಿಗೆ ಸುಮಾರು ಐದು ವಿಧವಾದ ಬಣ್ಣದ ಮೇಣದಬತ್ತಿಗಳನ್ನು ಪ್ರತಿಯೊಂದು ಭಾನುವಾರ ಬೆಳಗುತ್ತಾ ಆ ಮೇಣದ ಬತ್...