ತಲೇಖಾನ್ : ವಸತಿ ಹಂಚಿಕೆ ಗೋಲ್ಮಾಲ್ ರಾಜೀವ್ ಗಾಂಧಿ ವಸತಿ ನಿಗಮ ವ್ಯವಸ್ಥಾಪಕ ನಿರ್ದೇಶಕರ ಭೇಟಿ
ವರದಿ : ಗ್ಯಾನಪ್ಪ ದೊಡ್ಡಮನಿ ಮಸ್ಕಿ : ತಾಲೂಕಿನ ತಲೇಖಾನ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ 200 ಮನೆಯ ಅಕ್ರಮ ಮಂಜೂರು ಮಾಡಿದ ಪಟ್ಟಿ ರದ್ದು ಪಡಿಸಬೇಕು ಎಂಬ ತನಿಖಾ ಸಭೆಯಲ್ಲಿ ಮಾತನಾಡಿದ ರಾಜೀವ್ ಗಾಂಧಿ ವಸತಿ ನಿಗಮ ಬೆಂಗಳೂರು ವ್ಯವಸ್ಥಾಪಕ ನಿರ್ದೇಶಕರು ಆದ ಉಸ್ಮಾನ್ ಪಾಷಾ ಇವರು ರಾಜ್ಯದಲ್ಲಿ ನೂತನ ವಸತಿ ನಿರ್ಮಾಣಕ್ಕೆ ನಿಗಮದಲ್ಲಿ 2 ಸಾವಿರ ಕೋಟಿ ಹಣವಿದ್ದು ಬರೀ 125 ಕೋಟಿ ಖರ್ಚು ಮಾಡಲಾಗಿದೆ ಸದ್ಭಳಕೆ ಮಾಡಿಕೊಳ್ಳಿ. ಸಭೆಯ ಸ್ಥಳದಲ್ಲಿಯೇ 412 ಮನೆ ಪಟ್ಟಿಯನ್ನು ಎಲ್ಲಾ ಗ್ರಾಮ ಪಂಚಾಯತ್ ಸದಸ್ಯರುಗಳಿಗೆ ವಾರ್ಡ್ ವಾರು ಪಟ್ಟಿ ವಿತರಿಸಿದರು. ಮಸ್ಕಿ ತಾಲೂಕಿಗೆ 7241 ಮನೆ ಬಂದಿದ್ದು 2 ಸಾವಿರ ಮನೆ ಮಾತ್ರ ಮಂಜೂರು ಮಾಡಲಾಗಿದೆ ಎಂದು ತನಿಖಾ ವಿಷಯದ ಬಗ್ಗೆ ಸಭೆಯಲ್ಲಿಯೇ ಶಾಂತ ರೀತಿಯಲ್ಲಿ ತಿಳಿಸಿದರು. ನಂತರ ಮದ್ಯಾಹ್ನದ ಊಟ ಆದ ಮೇಲೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜ್ಯೋತಿ ಬಾಯಿ ಸಿಬ್ಬಂದಿ ಮತ್ತು ಮಸ್ಕಿ ಠಾಣೆಯ ರಂಗಯ್ಯ ಕೆ ಮತ್ತು ಸಿಬ್ಬಂದಿ ಹಾಗೂ ರಿಸರ್ವ್ ಪೊಲೀಸರ ತಂಡದ ಸಹಕಾರದೊಂದಿಗೆ ಯರದೊಡ್ಡಿ ಗ್ರಾಮಕ್ಕೆ ತೆರಳಿ 200 ಮನೆಯಲ್ಲಿನ ಫಲಾನುಭವಿ ಪರಿಶೀಲನೆ ನಡೆಸಲಾಯಿತು. ಪರಿಶೀಲನೆ ಸಂದರ್ಭದಲ್ಲಿ ಮೊದಲ ಮನೆ ಪರಿಶೀಲನೆ ಮಾಡಿದಾಗ ಮಂಜುರಿಗೆ ಮೊದಲೇ ಮನೆ ಕಟ್ಟಿದ್ದು ಈಗ ಪ್ರಸ್ತುತ ಮನೆ ಮಂಜೂರು ಪಟ್ಟಿಯಲ್ಲಿ ಮನೆ ಮಾಲಿಕೆಯ ಹೆಸರಿದೆ, 10 ರಿಂದ 20 ಸಾವಿರ ಹಣ ಕೊಟ್ಟವರಿಗೆ ಮನೆ,ಮನೆ ಇದ್ದವರ...