ಪೋಸ್ಟ್‌ಗಳು

ಕೊಟ್ಟೂರು ತಾಲೂಕು ಪಂಚಾಯಿತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಇಮೇಜ್
  ಕೊಟ್ಟೂರು ತಾಲ್ಲೂಕು ಪಂಚಾಯತ್ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕೊಟ್ಟೂರು ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಾನ್ಯ ಶ್ರೀ ಡಾ.ಬಾಳಪ್ಪನವರ ಆನಂದಕುಮಾರ್ ರವರು ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ತ್ಯಾಗ, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟಂತಹ ಮಹಾನೀಯರನ್ನು ಭಾರತದ ಪ್ರಜೆಗಳಾದ ನಾವು ಸ್ಮರಿಸಬೇಕು. ಬ್ರಿಟೀಷರನ್ನು ದೇಶದಿಂದ ಹೊರದೂಡಲು ನಡೆದಂತಹ ನಿರಂತರ ಹೋರಾಟ, ಚಳುವಳಿಗಳ ನಿಜ ದರ್ಶನವನ್ನು ಇಂದಿನ ಪೀಳಿಗೆಗೆ ತಿಳಿಸುವ ಕೆಲಸ ನಿರಂತರವಾಗಿ ಸಾಗಬೇಕು ಎಂದು ಹೇಳಿದರು.  ಈ ಸಂದರ್ಭದಲ್ಲಿ ಕೊಟ್ಟೂರು ತಾಲೂಕು ಪಂಚಾಯಿತಿಗೆ ಸರ್ಕಾರದಿಂದ ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಂಡಿರುವ ಶ್ರೀ ಕೆ.ಪರಸಪ್ಪ, ಶ್ರೀ ಎ.ಎಂ.ಹಾಲಯ್ಯ, ಶ್ರೀ ಗಂಗಾಧರ, ಶ್ರೀ ಅಣ್ಣೀಗೆರೆ ಬುಡೇನ್ ಸಾಬ್, ಶ್ರೀಮತಿ ದೀಪಾ, ಶ್ರೀ ಕೊಡದಪ್ಪ, ಸಹಾಯಕ ನಿರ್ದೇಶಕರು (ಗ್ರಾ.ಉ) ಶ್ರೀ ಎಚ್. ವಿಜಯಕುಮಾರ್, ವ್ಯವಸ್ಥಾಪಕರಾದ ಶ್ರೀಮತಿ ಪುಷ್ಪಲತಾ, ತಾಲೂಕು ಪಂಚಾಯಿತಿಯ ಎಲ್ಲಾ ಸಿಬ್ಬಂದಿಗಳು, ನರೇಗಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಐತಿಹಾಸಿಕ ಬಾವಿಯಲ್ಲಿ ಧ್ವಜಾರೋಹಣ

ಇಮೇಜ್
  ಕೊಟ್ಟೂರು:   ಉಜ್ಜಿನಿ  ಗ್ರಾಮ ಪಂಚಾಯಿತಿಯಿಂದ ಐತಿಹಾಸಿಕ ಬಾವಿಯಲ್ಲಿ ಧ್ವಜಾರೋಹಣ ಹದಿನೈದು ಶತಮಾನಕ್ಕೂ ಹೆಚ್ಚು ಆಯಸ್ಸು ಇರುವಂತಹ ಅರಸನ ಬಾವಿಯಲ್ಲಿ ಇಂದು ವಿಜ್ರಮಣೆಯಿಂದ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು ,  ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಬಿ ಚೌಡಪ್ಪ ಇವರಿಂದ ಧ್ವಜ ರೋಹಣ ನೆರವೇರಿತು ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷೆ ಎ ಪುಷ್ಪವತಿ ಹಾಗೂ ಸರ್ವ ಸದಸ್ಯರು, ಗ್ರಾಮ ಪಂಚಾಯಿತಿಯ ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಸಂಘದವರು ಹಾಗೂ ಮಹಿಳಾ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಆಪರೇಷನ್ ಸಿಂಧೂರ ಭಾರತ ದೇಶದ ಕೀರ್ತಿ - ಕೆ ನೇಮಿರಾಜ್ ನಾಯ್ಕ

ಇಮೇಜ್
" ಸರಳವಾಗಿ 79 ನೇ ಸ್ವಾತಂತ್ರೋತ್ಸವ ದಿನಾಚರಣೆ" ಕೊಟ್ಟೂರು: ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ ವತಿಯಿಂದ  ಹಮ್ಮಿಕೊಂಡಿದ್ದ 79 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣವನ್ನು ನೆರವೇರಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ನೇಮಿರಾಜ್ ನಾಯ್ಕ್ ಮಾತನಾಡಿ ಪಾಕಿಸ್ನಾನದ ವಿರುದ್ಧ ಭಾರತ ದೇಶವು ಆಪರೇಷನ್ ಸಿಂಧೂರ ಕೈಗೊಂಡಿ ರುವುದು ದೇಶದ ಕೋಟ್ಯಂತರ ಜನರ ಪ್ರತಿಬಿಂಬವಾಗಿದೆ ಮತ್ತು ಭಯೋತ್ಪಾದಕರ ಹಡಗು ತಾಣ ಗಳನ್ನು ಧ್ವಂಸ ಮಾಡುವುದರಲ್ಲಿ ಭಾರತ ಸೇನೆ ಯಶಸ್ವಿಯಾಗಿದೆ ಇದು ನಮಗೆ ಹೆಮ್ಮೆಯ ವಿಷಯ. ನಮ್ಮ ಬೆಂಗಳೂರಿನಲ್ಲಿ ತಯಾರಾದ ಮೇಕ್ ಇನ್ ಇಂಡಿಯಾ ಡ್ರೋನ್ ಗಳು   ಪಾಕಿಸ್ತಾನದ ಗುಜರಿ ಡ್ರೋನ್ ಗಳನ್ನು ಹೊಡೆದು ಹಾಕಲು ನಮ್ಮ ರಕ್ಷಣಾ ಪಡೆ ಯಶಸ್ವಿಯಾಗಿದೆ ಎಂದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭಬಾಯಿ ಪಾಟೇಲ್. ಲಾಲ್ ಬಹದ್ದೂರ್ ಶಾಸ್ತ್ರಿ, ಸೇರಿದಂತೆ ಇತರ ನಾಯಕರನ್ನು ಸ್ಮರಿಸಿದರು ಈ ಕಾರ್ಯಕ್ರಮದಲ್ಲಿ ಪತ್ರಿಕೋ ದ್ಯಮದಲ್ಲಿ ಸಾಧನೆಗೈದ ವರದಿಗಾರರಾದ ಬಂದಾತರ  ಕೊಟ್ರೇಶ್, ಕೊಟ್ರೇಶ್ ಉತ್ತಂಗಿ, ಮಂಜುನಾಥ್, ಹಾಗೂ ಗ್ರಂಥಾಲಯ ಮೇಲ್ವಿಚಾರಕರ  ಶ್ರೀ ಮುರುಗೇಶ್ ಗೌಡ, ಸೇರಿದಂತೆ ಇತರ ಕ್ಷೇತ್ರದಲ್ಲಿ ಸಾಧನೆಗೈದ ಸನ್ಮಾನ ಮಾಡಲಾಯಿತು. ಇದಕ್ಕಿಂತ ಮುಂಚೆ ಪಿಎ...

ಮಸ್ಕಿ : ಸರ್ವೇ ಇಲಾಖೆ ಧ್ವಜಾರೋಹಣ ಮಾಡದೇ ಅಪಮಾನ

ಇಮೇಜ್
  ವರದಿ : ಗ್ಯಾನಪ್ಪ ದೊಡ್ಡಮನಿ  ಮಸ್ಕಿ : ದೇಶದಾದ್ಯಂತ 79ನೇ ಸ್ವಾತಂತ್ರೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದರೆ ಪಟ್ಟಣದ ಕೆಲವು ಕಚೇರಿ ಹಾಗೂ ಸಹಕಾರಿ ಬ್ಯಾಂಕ್‌'ಗಳಲ್ಲಿ ಧ್ವಜಾರೋಹಣ ಮಾಡದೇ ನಿರ್ಲಕ್ಷ್ಯ ಮೆರೆದಿದ್ದು, ಸಾರ್ವಜನಿಕ ವಲಯದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪಟ್ಟಣದಲ್ಲಿರುವ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿಯಲ್ಲಿರಾಷ್ಟ್ರ ಧ್ವಜಾರೋಹಣ ಮಾಡದೇ ಅಗೌರವ ತೋರಿ ಅಪಮಾನ ಮಾಡಿದ್ದಾರೆ. ಯಾವುದೇ ರೀತಿ ಕಟ್ಟಡ ಜಾಗದ ವ್ಯವಸ್ಥೆ ಇಲ್ಲದೆ ಸ್ವಯಂ ಪ್ರೇರಿತರಾಗಿ ಆಟೋ ಮತ್ತು ಹಮಾಲರ ಸಂಘಗಳು ಹಬ್ಬದಂತೆ ಸ್ವಾತಂತ್ರೋತ್ಸವನ್ನು ಆಚರಣೆ ಮಾಡಿರುವುದಕ್ಕೆ ಸಾರ್ವಜನಿಕರು ಪ್ರಶಂಸೆ ವಕ್ತಪಡಿಸಿದ್ದಾರೆ. ಇವರೊಟ್ಟಿಗೆ ರೈತರಿಗೆ ಇರುವಂತಹ ಪರಿಕಲ್ಪನೆಗಳು ಈ ವಿದ್ಯಾವಂತರಿಗೆ ಇಲ್ಲದಿರುವುದು ಒಂದು ನೋವಿನ ಸಂಗತಿ. ಈ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳನ್ನು ಸಂಪರ್ಕಿಸಿದ್ದು ಯಾವುದೇ ರೀತಿಯ ಸ್ಪಂದನೆ ನೀಡಿರುವುದಿಲ್ಲ.ಬಹುತೇಕ ಸಾರ್ವಜನಿಕರ ಮೊಬೈಲ್ ಸಂಖ್ಯೆಯನ್ನು ಕಪ್ಪು ಪಟ್ಟಿಗೆ ಸೇರಿಸಿದ್ದಾರೆ. 79 ನೇ ಸ್ವಾತಂತ್ರೋತ್ಸವದ ದಿನ ಇಂತಹ ದೇಶಕ್ಕೆ ಅಗೌರವ ತರುವ ರೀತಿಯಲ್ಲಿ ನಿರ್ಲಕ್ಷ್ಯ ವಹಿಸಿರುವ ಸಂಸ್ಥೆಗಳ ವಿರುದ್ಧ ಸಂಭಂದಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವರೇ ಕಾದುನೋಡಬೇಕಿದೆ. ಹೇಳಿಕೆ ೧ ಈ ವಿಷಯವನ್ನು ನಮ್ಮ ಮೇಲಾಧಿಕಾರಿಗಳ ಗಮನಕ್ಕೆ ತಂದು ಅವರು ಏನು ಹೇಳುವರೋ ಅದನ್ನು ಪಾಲನೆ ಮಾಡಲಾಗುವುದು. ಪ್ರ...

ನಾವು ಮಾಡುವ ಸೇವೆ ನಮ್ಮ ಹೆಸರಿಗಾಗಿ ಬೇಡ ಮತ್ತೊಂದು ಉಸಿರಿಗಾಗಿ ಇರಲಿ : ಶಿವಮೂರ್ತಿ ಗದ್ಗೀಮಠ

ಇಮೇಜ್
  ಮಸ್ಕಿ : ತಾಲ್ಲೂಕಿನ ಬಳಗಾನೂರ ಗ್ರಾಮದ ಶ್ರೀ ಬಸವೇಶ್ವರ ಕಿರಿಯ ಪ್ರಾಥಮಿಕ ಶಾಲೆಯಲ್ಲಿಪ್ರಕೃತಿ ಫೌಂಡೇಷನ್ ವತಿಯಿಂದ ಭಾರತಮಾತೆಗೆ ಸ್ವಾತಂತ್ರೋತ್ಸವ ಪ್ರಕೃತಿಮಾತೆಗೆ ವನಮಹೋತ್ಸವ ಅದ್ದೂರಿಯಾಗಿ ಜರುಗಿತು. ಶಾಲೆಯ ಮುಖ್ಯ ಗುರುಗಳು ಧ್ವಜಾರೋಹಣ ನೆರವೇರಿಸಿ ನಂತರ ಶಾಲಾ ಆವರಣದಲ್ಲಿ ಸಸಿಗಳನ್ನು ಹಚ್ಚಿ ವಿದ್ಯಾರ್ಥಿಗಳಿಗೆ ದೇಶ ಹಾಗೂ ಪರಿಸರದ ಬಗ್ಗೆ ಜಾಗೃತಿ ಮೂಡಿಸಿದರು. ಶಾಲೆಯ ಮುಖ್ಯಗುರುಗಳಾದ ಗೀತಾ ಸುರೇಶ ರವರ ಮಾತನಾಡಿ, ಪ್ರಕೃತಿ ಫೌಂಡೇಶನ್ ನಿಸ್ವಾರ್ಥ ಸೇವೆ ಮಕ್ಕಳಿಗೆ ಸ್ಫೂರ್ತಿ ಯಾಗಲಿ ನಮಗೆ ಗಾಳಿ ನೆರಳು ಹಣ್ಣುಗಳನ್ನು ನೀಡುವ ಪರಿಸರಕ್ಕೆ ನಮ್ಮ ಕೈಯಿಂದಾದ ಸೇವೆ ಮಾಡೋಣ ಎಂದರು.  ನಂತರ ಮಾತನಾಡಿದ ಪ್ರಕೃತಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಶಿವಮೂರ್ತಿ ಗದ್ಗಿಮಠ (ಗ್ರೀನ್ ಆರ್ಮಿ) ಭಾರತ ಮಾತೆಯ ಸೇವೆಯಲ್ಲಿ ನಮ್ಮನೆಲ್ಲ ವೀರ ಯೋಧರು ರಕ್ಷಿಸುತ್ತಾರೆ ನಾವೆಲ್ಲ ಪ್ರಕೃತಿಮಾತೆಯ ಸೇವೆ ಮಾಡೋಣ ನಾವು ಮಾಡುವ ಸೇವೆ ನಮ್ಮ ಹೆಸರಿಗಾಗಿ ಬೇಡ ಮತ್ತೊಂದು ಉಸಿರಿಗಾಗಿ ಇರಲಿ ಎಂದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕಿ ಶ್ರೀದೇವಿ ಕಲ್ಮನಿ ,ಪಾರ್ವತಿ, ಪರಿಸರ ಪ್ರೇಮಿಗಳಾದ ಮಂಜುನಾಥ, ದಾವುದ,ಮತ್ತು ಶಾಲೆಯ ವಿದ್ಯಾರ್ಥಿಗಳು ಇದರು.

*ಗ್ರಂಥಾಲಯ ಮೇಲ್ವಿಚಾರಕರ ಶ್ರೀ ಮುರುಗೇಶ್ ಗೌಡ ಸನ್ಮಾನ*

ಇಮೇಜ್
ಕೊಟ್ಟೂರು : ಕೊಟ್ಟೂರು ತಾಲೂಕು ಆಡಳಿತ ವತಿಯಿಂದ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕೆ ನೇಮಿರಾಜ್ ನಾಯ್ಶ ಅಧ್ಯಕ್ಷತೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸೇವೆ ಮಾಡಿರುವವರು ಈ ಕಾರ್ಯಕ್ರಮದಲ್ಲಿ ಶ್ರೀ ಮುರುಗೇಶ್ ಗೌಡ ಇವರ ಕೆ. ಐಯ್ಯನಹಳ್ಳಿಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾರಕರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

ಇಮೇಜ್
  ಕೊಟ್ಟೂರು :ಹದಿನೇಳು ವರ್ಷಗಳ ನಂತರ ಚಿರಿಬಿ ಮೂಗಬಸವೇಶ್ವರ ಸ್ವಾಮಿಯ ರಥೋತ್ಸವ ನಡೆಯುವುದೋ ಇಲ್ಲವೋ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ. ಜಾತ್ರೆಯ ಪ್ರಯುಕ್ತ ಚಿರಿಬಿ ಗ್ರಾಮಸ್ಥರ ಸಭೆಯನ್ನು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು. ಈ ಸಭೆಯಲ್ಲಿ ಚಿರಿಬಿ ಗ್ರಾಮಸ್ಥರು ಹಾಜರಾಗಿ, ಮೂಗಬಸವೇಶ್ವರ ದೇವಸ್ಥಾನವು ಚಿರಿಬಿ ಗ್ರಾಮಕ್ಕೆ ಸೇರಿದ್ದೆಂದು ಇತಿಹಾಸದ ದಾಖಲೆಗಳನ್ನು ಮತ್ತು ಜರ್ಮಲಿಯ ಪಾಳೆಗಾರರಾದ ಇಮ್ಮಡಿ ಸಿದ್ದಪ್ಪನಾಯಕ ಈ ದೇವಸ್ಥಾನಕ್ಕೆ ಭೂ ದಾನ ನೀಡಿ, ಮೂಗಬಸವೇಶ್ವರ ಸ್ವಾಮಿ ದೇವಸ್ಥಾನಕ್ಕೆ ಕಾರಣಕರ್ತರಾಗಿದ್ದಾರೆ.  ಆಗ ಕಂದಾಯ ಜಮೀನು ರಾಂಪುರ ಎಂದು ಇದ್ದುದ್ದಕ್ಕೆ ಅದನ್ನು ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ, ರಾಂಪುರ ಎಂದು ಕರೆಯುತ್ತಿರುವುದಕ್ಕೆ ನಮ್ಮ ತಕರಾರಿದೆ. ಅಲ್ಲದೆ ರಥೋತ್ಸವದ ಬ್ಯಾನರ್‌ಗಳಲ್ಲಿಯೂ ಸಹ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ, ರಾಂಪುರ ಎಂದು ಹಾಕಿರುವುದಕ್ಕಷ್ಟೇ ನಮ್ಮ ತಕರಾರು ಎಂದರು. ಈ ಬಗ್ಗೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ವಿಚಾರಿಸಿದರೆ, ಡಿ.ಸಿ.ಯವರನ್ನು ಕೇಳಿ, ಎ.ಸಿ.ಯವರನ್ನು ಕೇಳಿ ಎಂಬ ಉಡಾಫೆಯ ಮಾತುಗಳನ್ನು ಚಿರಿಬಿ ಗ್ರಾಮದ ಮುಖಂಡರಿಗೆ ಹೇಳಿದ್ದು, ಈ ಸಭೆ ನಡೆಯಲು ಕಾರಣಕರ್ತರಾಗಿದ್ದಾರೆ ಎಂದರು. ಎರಡು ಗ್ರಾಮಗಳ ಈ ಗೊಂದಲಕ್ಕೆ ಧಾರ್ಮಿಕ ದತ್ತಿ ಇಲಾಖೆಯ ಇ.ಒ. ಹನುಮಂತಪ್ಪರವರೇ ಕಾರಣ ಎಂದರು. ...