ಪೋಸ್ಟ್‌ಗಳು

ಮಸ್ಕಿ : ಪುರಸಭೆ ಉಪಾಧ್ಯಕ್ಷೆ ವಿದ್ಯಾರ್ಥಿಗಳನ್ನು ಕಳಶ ಬೆಳಗುವ ಮೂಲಕ ವಿಶೇಷವಾಗಿ ಸ್ವಾಗತ

ಇಮೇಜ್
ಮಸ್ಕಿ : ಪಟ್ಟಣದ ಪಿಎಂ ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಧನಗರವಾಡಿ ಶಾಲೆಯಲ್ಲಿ 2025-2026 ನೇ ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ಸರಳ ಸುಂದರವಾಗಿ ಆಚರಣೆ ಮಾಡಲಾಯಿತು. ಸುಂದರ ಕಾರ್ಯಕ್ರಮದಲ್ಲಿ ಪುರಸಭೆಯ ಉಪಾಧ್ಯಕ್ಷರಾದ ಶ್ರೀಮತಿ ಗೀತಾ ಶಿವರಾಜ್ ಬುಕ್ಕಣ್ಣ ಇವರು ಮಕ್ಕಳಿಗೆ ಆರತಿ ಬೆಳಗುವುದರ ಮೂಲಕ ಶಾಲೆಗೆ ಬರಮಾಡಿಕೊಂಡರು.   ಶಾಲೆಯ ಬೂದಾನಿಗಳಾದ ಅರ್ಜುನ್ ಸಿಂಗ್ ಮಾಲಿ ಪಾಟೀಲ್ ಇವರು ಮಕ್ಕಳಿಗೆ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣೆಯನ್ನು ಮಾಡಿದರು. ಮಸ್ಕಿಯ ಸಿ. ಆರ್ .ಪಿ ಆದ ಶ್ರೀರಾಮಸ್ವಾಮಿ ತಳಕಲ್ ಇವರು ಮಕ್ಕಳಿಗೆ ಶುಭಾಶಯ ಕೋರುವ ಮೂಲಕ ಪ್ರತಿದಿನ ಶಾಲೆಗೆ ಬಂದು ಒಳ್ಳೆಯ ವಿದ್ಯಾವಂತರಾಗಿ, ಬುದ್ದಿವಂತರಾಗಿ,ಸಮಾಜಕ್ಕೆ ಒಳ್ಳೆ ಪ್ರಜೆಗಳಾಗಬೇಕೆಂದು ಹರಸಿದರು. ನಂತರ ಮುಖ್ಯ ಗುರುಗಳಾದ ಶ್ರೀಮತಿ ಶ್ರೀಕಾಂತಮ್ಮ ಅವರು ಎಲ್ಲ ಮಕ್ಕಳು ಪ್ರತಿದಿನ ಶಾಲೆಗೆ ಬರಬೇಕು ಮತ್ತು ಪ್ರತಿಯೊಬ್ಬ ಮಕ್ಕಳನ್ನು ಕರೆದುಕೊಂಡು ಬರಬೇಕು ದಾಖಲಾತಿಯು ಆರಂಭವಾಗಿದ್ದು ಆದಷ್ಟು ಬೇಗ ಎಲ್ಲರೂ ಶಾಲೆಗೆ ದಾಖಲಾಗಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಮಧುಮತಿ ಅವರು ಕಾರ್ಯಕ್ರಮದ ನಿರೂಪಣೆಯನ್ನು ನಿರ್ವಹಿಸಿದರು  ಇದೇ ಸಂದರ್ಭದಲ್ಲಿ ಮಲ್ಲಮ್ಮ ಮತ್ತು ಯಶೋಧ ಶಿಕ್ಷಕಿಯರು ಹಾಗೂ ಶಾಲಾ ವಿದ್ಯಾರ್ಥಿಗಳು ಇದ್ದರು.

ಹಿರಿಯ ಪತ್ರಕರ್ತರು ಚಂದ್ರಶೇಖರ್ ಕಟಗಿಹಳ್ಳಿಮಠ ನಿಧನ

ಇಮೇಜ್
  ಕೊಟ್ಟೂರಿನ ಜನತಾವಾಣಿ ವರದಿಗಾರರಾದ 25 ವರ್ಷ ಸೇವೆ ಶ್ರೀ ಚಂದ್ರಶೇಖರ್ ಕಟಗಿಹಳ್ಳಿಮಠ 55 ವರ್ಷ ವಯಸ್ಸು ಇವರು 30.05.2025 ರಂದು ಬೆಳಗಿನಜಾವಾ  ನಿಧನಹೊಂದಿರುತ್ತಾರೆ.     ಮೃತರು , ಪತ್ನಿ, ಇಬ್ಬರು ಪುತ್ರಿಯರು, ಅಳಿಯ, ಸೋದರ, ಸೋದರಿ, ಅಪಾರ ಬಂಧು - ಮಿತ್ರರನ್ನು ಹಾಗೂ ಕರ್ನಾಟಕ ಪ್ರಸ್ ಕ್ಲಬ್ ಪತ್ರಿಕಾ ಮಾಧ್ಯಮದವರು,ಶಿಷ್ಯ ವರ್ಗವನ್ನು ಅಗಲಿದ್ದಾರೆ.    ಮೃತರ ಅಂತ್ಯಕ್ರಿಯೆಯು ಶನಿವಾರ 31.05.2025 12.30ಕ್ಕೆ ರಂದು ಕೊಟ್ಟೂರಿನ ರುದ್ರಭೂಮಿಯಲ್ಲಿ ನಡೆಯಲಿದೆ.

ಕೊಟ್ಟೂರು ರೈಲ್ವೇ ಸರಕು ಸಾಗಣಿಕೆ ರ್‍ಯಾಂಕ್ ಪಾಯಿಂಟ್ ಪರಿಶೀಲನೆ : ಸಂಸದ ತುಕಾರಾಮ್

ಇಮೇಜ್
  *ಅವಿಭಜಿತ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಅಭಿವೃದ್ಧಿಗಾಗಿ ಒತ್ತುಕೊಡುತ್ತೇನೆ. ಸಾರ್ವಜನಿಕರ ಸಹಕಾರ ಮುಖ್ಯ ಎಂದು ಹೇಳಿದರು * ಕೊಟ್ಟೂರು ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯದ ಕೇಂದ್ರದ ಆವರಣದಲ್ಲಿ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆಯಾಯಿತು. ಸಂಸದರಾದ ತುಕಾರಾಮ್‌ರವರು ಉದ್ಘಾಟನೆ ನೆರವೇರಿಸಿದರು.  ಕಟ್ಟಡ ಮತ್ತು ಕೃಷಿ ಕಾರ್ಮಿಕರಿಗೆ ಮತ್ತು ಕೂಲಿಕಾರ್ಮಿಕರಿಗೆ ಇದರ ಸದುಪಯೋಗ ಪಡೆಯಬಹುದು. ನಂತರ ಕೊಟ್ಟೂರು ರೈಲ್ವೆ ನಿಲ್ದಾಣಕ್ಕೆ ಹೋಗಿ ರಸಗೊಬ್ಬರ ಮತ್ತು ಸರಕುಗಳನ್ನು ಲೋಡ್ ಮಾಡುವ ರ್‍ಯಾಕ್ ಪಾಯಿಂಟ್ ನಿರ್ಮಾಣ ಕಾಮಗಾರಿ ಪರಿಶೀಲನೆ ನಡೆಸಿದರು.  ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಸಂಸದರು ಮಾತನಾಡುತ್ತಾ, ಇಂದಿರಾ ಕ್ಯಾಂಟಿನ್ ಮುಖ್ಯವಾಗಿ ಕೂಲಿ ಕಾರ್ಮಿಕರ, ಬಡವರ ಹಸಿವನ್ನು ನೀಗಿಸಲೆಂದು ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಹೇಳಿದ ಮಾತಿನಂತೆ ನಡೆದು ತೋರಿಸಿದ್ದೇವೆ. ಬಡ ಕೃಷಿ ಕೂಲಿ ಕಾರ್ಮಿಕರ ಹಸಿವನ್ನು ನೀಗಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು. ನಾನು ವಿಶೇಷವಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಲೋಕಸಭಾ ಕ್ಷೇತ್ರದ ವಿಧಾನಸಭಾ ಕ್ಷೇತ್ರಗಳಿಗೆ ತಲಾ ೮೦ ಲಕ್ಷ ರೂ.ಗಳನ್ನು ಸಂಸದರ ಅನುದಾನ ಮೀಸಲಾಗಿರಿಸಿದ್ದೇನೆ. ಇದರಲ್ಲಿ ಅಂಗವಿಕಲರಿಗಾಗಿ ಬೈಕ್‌ಗಳನ್ನು ವಿತರಿಸಲಾಗುವುದು ಎಂದರು. ಸರ್ಕಾರಿ ಸಮುದಾಯ ಆ...

ಅನಿರ್ದಿಷ್ಟಾವಧಿ ಮುಷ್ಕರದ ಪರಿಣಾಮ : ಎಲ್ಲೆಂದರಲ್ಲಿ ಕಸ

ಇಮೇಜ್
* ಅನಿರ್ದಿಷ್ಟಾವಧಿ ಮುಷ್ಕರ ಹೋರಾಟಕ್ಕೆ ಪೌರ ನೌಕರರಿಂದ ಬಾಹ್ಯ ಬೆಂಬಲ*  "ಹೊರಗುತ್ತಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂದು ಧ್ವನಿ ಎತ್ತುತ್ತೇನೆ. ಅಲ್ಲದೇ ಈ ಮುಷ್ಕರಕ್ಕೆ ನನ್ನ ಬೆಂಬಲವೂ ಇದೆ ಎಂದು ಹೇಳಿದರು " ಕೊಟ್ಟೂರು : ರಾಜ್ಯ ಪೌರ ನೌಕರರ ಸಂಘದ ಆದೇಶದ ಮೇರೆಗೆ ನಗರದ ಪೌರ ಸಂಘ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ನಡೆಸಿದ ಅನಿರ್ಧಿಷ್ಟಾವಧಿ ಮುಷ್ಕರ ಮತ್ತೇ  ಗುರುವಾರ ಮುಂದುವರಿದಿದೆ.  ಪೌರಕಾರ್ಮಿಕರ ಮುಷ್ಕರಕ್ಕೆ ಕೊಟ್ಟೂರು ಪಟ್ಟಣ ಪಂಚಾಯಿತಿ ಕಸ ವಿಲೇವಾರಿ ಮಾಡುವ ಸಾಲಗಟ್ಟಿಗಿಂತ ಸ್ಥಿತಿಯಲ್ಲಿರುವ ವಾಹನಗಳು ಸ್ಥಗಿತ, ಪಟ್ಟಣದಲ್ಲೆಲ್ಲಾ ಕಸದ ರಾಶಿಗಳು ಎದ್ದುಕಾಣುತ್ತಿವೆ. ಕೂಡಲೇ ಸರ್ಕಾರ, ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ, ಪಟ್ಟಣವೆಲ್ಲಾ ಕಲುಷಿತಗೊಂಡು, ಗಬ್ಬು ನಾರುವ ಪರಿಸ್ಥಿತಿಗೆ ತಲುಪುತ್ತದೆ. ಜನರು ಬೀದಿಗಿಳಿದು ಹೋರಾಟಕ್ಕೆ ಸಜ್ಜಾಗುವ ಮುನ್ನ ಇತ್ತ ಕಡೆ ಗಮನ ಹರಿಸಬೇಕಾಗಿದೆ. ಸಂವಿಧಾನಶಿಲ್ಪಿ ಬಾಬಾಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೂರನೇ ದಿನದ ಹೋರಾಟವನ್ನು ಮುಂದುವರಿಸಿದರು. ಸರ್ಕಾರ ಆದಷ್ಟು ಬೇಗ ನಮ್ಮ ಬೇಡಿಕೆಗಳನ್ನು ಈಡೇರಿಸುತ್ತದೆ ಎನ್ನುವ ಭರವಸೆಯಿದೆ. ರಾಜ್ಯಾಧ್ಯಕ್ಷರು ಮುಷ್ಕರವನ್ನು ಹಿಂಪಡೆಯಲು ತಿಳಿಸುವವರೆಗೆ ಮುಷ್ಕರ ನಡೆಯುತ್ತದೆ ಎಂದು ಎಂ. ಕೊಟ್ರೇಶ್ ಪತ್ರಿಕೆ...

ಪೌರ ಕಾರ್ಮಿಕರ ಬೇಡಿಕೆ ಈಡೇರಿಸುವವರೆಗೆ ಧರಣಿ ಹಿಂಪಡೆಯಲ್ಲ : ಶಿವಣ್ಣ ಒತ್ತಾಯ

ಇಮೇಜ್
  ಮಸ್ಕಿ : ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪೌರ ಕಾರ್ಮಿಕರು ಇಲ್ಲಿಯ ಪುರಸಭೆ ಕಚೇರಿ ಎದುರು ಬುಧುವಾರ ಎರಡನೇ ದಿನದ ಅನಿರ್ದಿಷ್ಟಾವಧಿ ಧರಣಿ ನಡೆಸಿದರು. ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಶಿವಣ್ಣ ಮಾತನಾಡಿ, ಪೌರ ಕಾರ್ಮಿಕರನ್ನು ರಾಜ್ಯ ಸರಕಾರಿ ನೌಕರರು ಎಂದು ಪರಿಗಣಿಸಬೇಕು, ಎಲ್ಲ ನೌಕರರಿಗೆ ಎಸ್ಎಫ್‌ಸಿ ವೇತನ ನೀಡುವುದು, ಹೊರಗುತ್ತಿಗೆ ನೌಕರರನ್ನು ನೇರ ಪಾವತಿಗೆ ಒಳಪಡಿಸಬೇಕು. ಬೇಡಿಕೆ ಈಡೇರಿಸುವವರೆಗೆ ಧರಣಿ ಮುಂದುವರಿಯಲಿದೆ ಎಂದರು.  ಈ ಸಂದರ್ಭದಲ್ಲಿ ಧರಣಿ ನಿರತ ಮಸ್ಕಿ ಪುರಸಭೆಯ ಸಿಬ್ಬಂದಿಗಳು ಹಾಗೂ ಪೌರ ಕಾರ್ಮಿಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅರ್ಚಕರು ಡಿ.ಬಿ.ಟಿ. ಮೂಲಕ ತಸ್ತೀಕ್ ಭತ್ಯೆ ಪಡೆಯಲು ಆನ್ ಲೈನ್ ಅರ್ಜಿ ಸಲ್ಲಿಸಿ : ಡಾ.ಮಲ್ಲಪ್ಪ.ಕೆ.ಯರಗೋಳ

ಇಮೇಜ್
  ಮಸ್ಕಿ : ಪಟ್ಟಣದ ತಹಶೀಲ್ದಾರರ ಕಾರ್ಯಾಲಯದಲ್ಲಿ ಅರ್ಚಕರಿಗೆ ಡಿ.ಬಿ.ಟಿ. ಮೂಲಕ ತಸ್ತೀಕ್ ಭತ್ಯೆ ಪಡೆದುಕೊಳ್ಳಲು ಆನ್-ಲೈನ್ ಅರ್ಜಿ ಸಲ್ಲಿಸಿ ಎಂದು ತಹಶಿಲ್ದಾರರಾದ ಡಾ.ಮಲ್ಲಪ್ಪ.ಕೆ. ಯರಗೋಳ ರವರು ಪತ್ರಿಕೆ ಪ್ರಕಟಣೆ ಮೂಲಕ ತಿಳಿಸಿದ್ದಾರೆ.  ಪತ್ರಿಕೆಯೊಂದಿಗೆ ಮಾತನಾಡಿರುವ ಅವರು ಮಾನ್ಯ ಆಯುಕ್ತರು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಬೆಂಗಳೂರು ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರ ರವರ ಆದೇಶದನ್ವಯ  ಅರ್ಚಕರಿಗೆ ಡಿ.ಬಿ.ಟಿ. ಮೂಲಕ ತಸ್ವೀಕ ಭತ್ಯೆ ಪಾವತಿಸಲು ತಾಲೂಕಿನ ಎಲ್ಲಾ ಆರ್ಚಕರು ತಮ್ಮ ಅರ್ಜಿಯನ್ನು ಆನ್-ಲೈನ್ ನಲ್ಲಿ ಸಲ್ಲಿಸಬೇಕು.ಮಸ್ಕಿ ತಾಲೂಕಿನ ತಸ್ತಿಕ್ ಭತ್ಯೆ ಪಡೆಯುತ್ತಿರುವ ಎಲ್ಲಾ ಅರ್ಚಕರು ತಮ್ಮ ಕೆ.ವೈ.ಸಿ. ದಾಖಲೆಗಳಾದ ಆಧಾರ ಕಾರ್ಡ, ತಸ್ತಿಕ್ ಭತ್ಯೆ ಪಡೆಯುತ್ತಿರುವ ಅರ್ಚಕ ಕುಟುಂಬ ಸದಸ್ಯರುಗಳ ಒಪ್ಪಿಗೆ ಪತ್ರ, ಮತ್ತು ಬ್ಯಾಂಕ ಪಾಸ ಬುಕ್, ಇನಾಂ ಪ್ರತಿ,ದೇವಸ್ಥಾನದ ಮುಂಭಾಗ ನಿಂತಿರುವ ಅರ್ಚಕರ ಛಾಯಚಿತ್ರದೊಂದಿಗೆ ಸಂಬಂಧಪಟ್ಟ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳ ಮೂಲಕ ತಹಶೀಲ್ದಾರರಿಂದ ಆರ್ಚಕರ ಧೃಡೀಕರಣ ಪ್ರಮಾಣ ಪತ್ರ ಪಡೆದು ಕೊಂಡು ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬೇಕು.ನಂತರದ ದಿನಗಳಲ್ಲಿ ಅರ್ಚಕರ ಕುಂದುಕೊರತೆಗಳ ಸಭೆ ಕರೆದು ಅರ್ಚಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ವರದಿ ಫಲಶೃತಿ ಕೊಟ್ಟೂರಿನಲ್ಲಿ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆ

ಇಮೇಜ್
  * ಮಾಜಿ ಶಾಸಕರ ಭಾವಚಿತ್ರದ ಬ್ಯಾನರ್ ನಿಂದ ,ಇಂದಿರಾ ಕ್ಯಾಂಟಿನ್ ಉದ್ಘಾಟನೆಯಲ್ಲಿ,ರಾಜಕೀಯ ಎರಚಾಟವು * "ಅಧಿಕಾರಿಗಳಿಗೆ ಶಿಷ್ಟಾಚಾರದ ನಿಯಮಗಳು ಗೊತ್ತಿಲ್ಲವೇ ಅಥವಾ ಗೊತ್ತಿದ್ದರೂ ರಾಜಕೀಯ ಒತ್ತಡಕ್ಕೆ ಮಣಿದರೋ ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಕೆ ನೇಮಿರಾಜ ನಾಯ್ಕ್ ಆಕ್ರೋಶ ವ್ಯಕ್ತಪಡಿಸಿದರು " ಕೊಟ್ಟೂರು ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯದ ಕೇಂದ್ರದ ಆವರಣದಲ್ಲಿ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆಯಾಯಿತು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಶಾಸಕ ನೇಮಿರಾಜನಾಯ್ಕ ಹಾಗೂ ಸಂಸದ ತುಕಾರಾಮ್ ಉದ್ಘಾಟನೆಯನ್ನು ಗುರುವಾರ ಮಾಡಿದರು.  ಆಸ್ಪತ್ರೆಯ ಹೆಬ್ಬಾಗಿಲಿನ ಪಕ್ಕದಲ್ಲಿ ಶಿಷ್ಟಾಚಾರದ ಉಲ್ಲಂಘನೆಯಾಗಿರುವುದು ಕ್ಷೇತ್ರದ ಶಾಸಕರಿಗೆ ಇರುಸುಮುರುಸು ಉಂಟಾಯಿತು. ಮಾಜಿ ಶಾಸಕರ ಭಾವಚಿತ್ರದ ಬ್ಯಾನರ್ ಇಂದಿರಾ ಕ್ಯಾಂಟಿನ್ ಪಕ್ಕದಲ್ಲಿ ಹಾಕಿರುವುದರಿಂದ ಅದನ್ನು ತೆರವುಗೊಳಿಸುವವರೆಗೆ ಶಾಸಕ ನೇಮಿರಾಜನಾಯ್ಕ ಒಳಗಡೆ ಬರಲಿಲ್ಲ ಕೂಡಲೇ ಅಧಿಕಾರಿಗಳು ತೆರವುಗೊಳಿಸಿದ ನಂತರ ಶಾಸಕರು ಆಗಮಿಸಿದರು. ಅಧಿಕಾರಿಗಳಿಗೆ ಶಿಷ್ಟಾಚಾರದ ನಿಯಮಗಳು ಗೊತ್ತಿಲ್ಲವೇ? ಅಥವಾ ಗೊತ್ತಿದ್ದರೂ ರಾಜಕೀಯ ಒತ್ತಡಕ್ಕೆ ಮಣಿದರೋ? ಸ್ಥಳೀಯ ರಾಜಕೀಯ ಎರಚಾಟವು ಸಾರ್ವಜನಿಕರ ಗಮನಕ್ಕೆ ಬಂದಿತು. ಹಸಿವುಮುಕ್ತ ರಾಜ್ಯವನ್ನು ಮಾಡುತ್ತೇವೆಂಬ ಮಹತ್ವಾಕಾಂಕ್ಷೆ ಹೊಂದಿರುವ ಸಿದ್ದರಾಮಯ್ಯ ನೇತೃತ್ವ...