ಉಜ್ಜಯಿನಿ ಭಾರತ ಹುಣ್ಣಿಮೆ ಹಬ್ಬವನ್ನು ವಿಶಿಷ್ಠವಾಗಿ ಆಚರಣೆ
ಕೊಟ್ಟೂರು: ಉಜ್ಜಯಿನಿ ಸದ್ಧರ್ಮ ಪೀಠದ ಆಚರಣೆಯಲ್ಲಿ ಭಾರತ ಹುಣ್ಣಿಮೆಯ ಮಹತ್ವ ಪಂಚಪೀಠಗಳಲ್ಲಿ ಒಂದಾದ ಉಜ್ಜಯಿನಿ ಸದ್ಧರ್ಮ ಪೀಠವು ಅನೇಕ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಿದ್ದು ಅದರಲ್ಲೂ ಭಾರತ ಹುಣ್ಣಿಮೆ ಹಬ್ಬವನ್ನು ವಿಶಿಷ್ಠವಾಗಿ ಆಚರಿಸಲಾಗುತ್ತದೆ. ರಾಜಯೋಗದಲ್ಲಿ ಪ್ರಥಮವಾಗಿ ದಾರುಕ ಜಯಂತಿಯಾದರೆ ಕೊನೆಯದಾಗಿ ರಾಜಯೋಗದಲ್ಲಿ ವೀರಶೈವರನ್ನು ನೆಲೆಗೊಳಿಸಲು ಪೂರ್ವಚಾರ್ಯರು ಕೈಗೊಂಡ ಧರ್ಮ ದಿಗ್ವಿಜಯ ದ್ಯೋತಕವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಭಾರತ ಹುಣ್ಣಿಮೆಗೆ ೯ ದಿವಸಗಳ ಮುಂಚಿತವಾಗಿ ಸಪ್ತಮಿ ದಿನವಾದ ಫೆಬ್ರವರಿ ೧೧ ರಂದು ಉಜ್ಜಯಿನಿ ಪಾದದಿಂದ ಹೊರಡುವ ಉತ್ಸವ ಮೂರ್ತಿಯು ಭುಜಂಗ ಪಾದದವರೆಗೆ ೯ ಪಾದಗಳನ್ನು ಮೂರ್ತಿ ಸುತ್ತಿ ಬರುತ್ತದೆ. ಮಧ್ಯೆ ಮಧ್ಯೆ ನಿರ್ದಿಷ್ಠ ಕ್ಷೇತ್ರಗಳಲ್ಲಿ ಮೆರವಣಿಗೆಯ ಮುಖಾಂತರ ವಾಸ್ತವ್ಯ ಮಾಡುತ್ತದೆ. ಕ್ಷೇತ್ರ ಪ್ರದಕ್ಷಣೆ ಯಾತ್ರೆಗೆ ಹೊರಟ ಮೂರ್ತಿಯ ಹಿಂದೆ ಭಕ್ತರು ಸೈನಿಕರಂತೆ ಕೈಯಲ್ಲಿ ಗಗ್ಗರಣೆ ಹಿಡಿದುಕೊಂಡು ಸ್ವಾಮಿಗೆ ಘೋಷಣೆ ಮಾಡುತ್ತಾ ಸಾಗುತ್ತಾರೆ. ವಾಸ್ತವ್ಯ ಮಾಡುವ ಗ್ರಾಮದ ಭಕ್ತರು ತಳಿರು ತೋರಣಗಳೊಂದಿಗೆ ಸ್ವಾಗತಿಸಲು ಸಿದ್ದರಿರುತ್ತಾರೆ. ಗಗ್ಗರಣೆ ಹಿಡಿದವರು ತೋರಣವನ್ನು ಹರಿದು ಪುನಃ ಮೂರ್ತಿಯ ಬಳಿ ಬರುತ್ತಾರೆ. ಇದರ ಸಂಕೇತ ಸ್ವಾಗತ ಕೋರುತ್ತಿದ್ದಾರೆ ಎಂಬುದು ಇದರ ಅರ್ಥ. ಗ್ರಾಮದ ಪ್ರಮುಖರು ಮಂಗಲದ್ರವ್ಯಗಳೊAದಿಗೆ ಸ್ವಾಮಿಗ...