ಪೋಸ್ಟ್‌ಗಳು

ಉಜ್ಜಯಿನಿ ಭಾರತ ಹುಣ್ಣಿಮೆ ಹಬ್ಬವನ್ನು ವಿಶಿಷ್ಠವಾಗಿ ಆಚರಣೆ

ಇಮೇಜ್
  ಕೊಟ್ಟೂರು: ಉಜ್ಜಯಿನಿ ಸದ್ಧರ್ಮ ಪೀಠದ ಆಚರಣೆಯಲ್ಲಿ ಭಾರತ ಹುಣ್ಣಿಮೆಯ ಮಹತ್ವ ಪಂಚಪೀಠಗಳಲ್ಲಿ ಒಂದಾದ ಉಜ್ಜಯಿನಿ ಸದ್ಧರ್ಮ ಪೀಠವು ಅನೇಕ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಿದ್ದು ಅದರಲ್ಲೂ ಭಾರತ ಹುಣ್ಣಿಮೆ ಹಬ್ಬವನ್ನು ವಿಶಿಷ್ಠವಾಗಿ ಆಚರಿಸಲಾಗುತ್ತದೆ.   ರಾಜಯೋಗದಲ್ಲಿ ಪ್ರಥಮವಾಗಿ ದಾರುಕ ಜಯಂತಿಯಾದರೆ ಕೊನೆಯದಾಗಿ ರಾಜಯೋಗದಲ್ಲಿ ವೀರಶೈವರನ್ನು ನೆಲೆಗೊಳಿಸಲು ಪೂರ್ವಚಾರ್ಯರು ಕೈಗೊಂಡ ಧರ್ಮ ದಿಗ್ವಿಜಯ ದ್ಯೋತಕವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ.  ಭಾರತ ಹುಣ್ಣಿಮೆಗೆ ೯ ದಿವಸಗಳ ಮುಂಚಿತವಾಗಿ ಸಪ್ತಮಿ ದಿನವಾದ ಫೆಬ್ರವರಿ ೧೧ ರಂದು ಉಜ್ಜಯಿನಿ ಪಾದದಿಂದ ಹೊರಡುವ ಉತ್ಸವ ಮೂರ್ತಿಯು ಭುಜಂಗ ಪಾದದವರೆಗೆ ೯ ಪಾದಗಳನ್ನು ಮೂರ್ತಿ ಸುತ್ತಿ ಬರುತ್ತದೆ. ಮಧ್ಯೆ ಮಧ್ಯೆ ನಿರ್ದಿಷ್ಠ ಕ್ಷೇತ್ರಗಳಲ್ಲಿ ಮೆರವಣಿಗೆಯ ಮುಖಾಂತರ ವಾಸ್ತವ್ಯ ಮಾಡುತ್ತದೆ.   ಕ್ಷೇತ್ರ ಪ್ರದಕ್ಷಣೆ ಯಾತ್ರೆಗೆ ಹೊರಟ ಮೂರ್ತಿಯ ಹಿಂದೆ ಭಕ್ತರು ಸೈನಿಕರಂತೆ ಕೈಯಲ್ಲಿ ಗಗ್ಗರಣೆ ಹಿಡಿದುಕೊಂಡು ಸ್ವಾಮಿಗೆ ಘೋಷಣೆ ಮಾಡುತ್ತಾ ಸಾಗುತ್ತಾರೆ. ವಾಸ್ತವ್ಯ ಮಾಡುವ ಗ್ರಾಮದ ಭಕ್ತರು ತಳಿರು ತೋರಣಗಳೊಂದಿಗೆ ಸ್ವಾಗತಿಸಲು ಸಿದ್ದರಿರುತ್ತಾರೆ. ಗಗ್ಗರಣೆ ಹಿಡಿದವರು ತೋರಣವನ್ನು ಹರಿದು ಪುನಃ ಮೂರ್ತಿಯ ಬಳಿ ಬರುತ್ತಾರೆ. ಇದರ ಸಂಕೇತ ಸ್ವಾಗತ ಕೋರುತ್ತಿದ್ದಾರೆ ಎಂಬುದು ಇದರ ಅರ್ಥ.   ಗ್ರಾಮದ ಪ್ರಮುಖರು ಮಂಗಲದ್ರವ್ಯಗಳೊAದಿಗೆ ಸ್ವಾಮಿಗ...

"ಕೊಟ್ಟೂರಿನಲ್ಲಿ ಫಾರಂ 3 ಮೇಳ "

ಇಮೇಜ್
ಕೊಟ್ಟೂರು : ಮಾನ್ಯ ಜಿಲ್ಲಾಧಿಕಾರಿಗಳ ಹಾಗೂ ಮಾನ್ಯ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ದಿ  ಕೋಶ  ಇವರ ಆದೇಶದ ಮೇರೆಗೆ ಮಂಗಳವಾರದಂದು  ಪಟ್ಟಣದ ಗಚ್ಚಿನಮಠದ ಮುಂಭಾಗದಲ್ಲಿ  ಪಟ್ಟಣ ಪಂಚಾಯತಿ  ಫಾರಂ 3 ಮೇಳವನ್ನು ಹಮ್ಮಿಕೊಳ್ಳಲಾಗಿತ್ತು. ಈ ಫಾರಂ 3 ಮೇಳವನ್ನು ಕುರಿತು ಪಟ್ಟಡ ಪಂಚಾಯಿತಿ ಮುಖ್ಯಧಿಕಾರಿ   ಎ ನಸ್ರುಲ್ ಅವರು ಮಾತನಾಡಿದರು  ಜಿಲ್ಲಾಧಿಕಾರಿಗಳ ಆದೇಶ ಮನೆ ಬಾಗಿಲಿಗೆ   ಫಾರಂ 3 ಯೋಜನಾ ಅಡಿಯಲ್ಲಿ ನಡೆಯುತ್ತಿದ್ದು  ಸಾರ್ವಜನಿಕರು ತಮ್ಮ ಆಸ್ತಿಯ ಮಾಲಿಕತ್ವ ದೃಢೀಕರಿಸುವ  ನೊಂದಾಯಿತ  ದಾಖಲಾತಿಗಳನ್ನು  ನೀಡಿ ಪಡೆದುಕೊಳ್ಳಬಹುದು  ಈ ಯೋಜನೆಯನ್ನು  ಸಾರ್ವಜನಿಕರು  ಸದುಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಿದರು. ನಂತರ ಮಾತನಾಡಿದ ಡಿಎಸ್ಎಸ್ ಮುಖಂಡ ಬದ್ದಿ ಮರಿಸ್ವಾಮಿ ರವರು  ಸಾರ್ವಜನಿಕರು ತಮ್ಮ  ಕೆಲಸಗಳಿಗೆ  ಮನೆಯಿಂದ ಕಚೇರಿ ಕಚೇರಿಯಿಂದ ಮನೆಗೆ  ಅಲೆದಾಡುವ ಪರಿಸ್ಥಿತಿ ನೋಡಿದ್ದೇವೆ ಇದರಿಂದ ಮುಕ್ತಿ ಪಡೆಯಲು  ಜಿಲ್ಲಾಧಿಕಾರಿಗಳವರು ನಿಮ್ಮ ಕೆಲಸವನ್ನು ಮನೆ ಬಾಗಿಲು ತಲುಪುವ ಯೋಜನೆಯನ್ನು ಜಾರಿಗೆ  ತಂದಿದ್ದಾರೆ. ಇನ್ನು ಮುಂದೆ ಅಂತ್ಯಸಂಸ್ಕಾರ   ಸೌಕರ್ಯವನ್ನು ಪಟ್ಟಣ ಪಂಚಾಯತಿ  ಪಂಚಾಯಿತಿಯಿಂದ  ಉಚಿತವಾಗಿ  ನೀಡುತ್ತದೆ. ಸಾರ್ವಜನಿಕರು ತಮ್ಮ...

ನೌಕರ ಸಂಘದ ಮಸ್ಕಿ ತಾಲೂಕ ನೂತನ ಪದಾಧಿಕಾರಿಗಳ ಆಯ್ಕೆ

ಇಮೇಜ್
  ಮಸ್ಕಿ: ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ ರಾಜ್ಯ ಸಮಿತಿ ಬೆಂಗಳೂರು ಇವರ ಆದೇಶದಂತೆ ಮಸ್ಕಿ ತಾಲೂಕಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.  ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ ಮಸ್ಕಿ ತಾಲೂಕಿನ ನೂತನ ಅಧ್ಯಕ್ಷರಾಗಿ ಶ್ರೀ ಹುಸೇನ್ ಸಾಬ್ ಗುರಿಕಾರ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ರವೀಂದ್ರ ಕುಂಬಾರ, ಖಜಾಂಚಿ ಶ್ರೀಮತಿ ಭಾಗ್ಯಲಕ್ಷ್ಮಿ, ಜಿಲ್ಲಾ ಪರಿಷತ್ ಸದಸ್ಯರಾಗಿ ಬಸವರಾಜ್.ಬಿ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಶ್ರೀ ನಾಗೇಶ್ ಗೌಡ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ. ತಾಲೂಕಿನ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸುವ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಯಾವುದೇ ಬಗೆಯ ತೊಂದರೆಯನ್ನು ನಿವಾರಿಸುವ ಸಲುವಾಗಿ ಸಂಘಟನೆ ಬಲಪಡಿಸಲು ತಿಳಿಸಿದ್ದಾರೆ.

ಕೊಟ್ಟೂರು ಪಟ್ಟಣ ಪಂಚಾಯಿತಿಗೆ ಹೊಸ ಜೆ.ಸಿ.ಬಿ. ಯಂತ್ರ : ಅಧ್ಯಕ್ಷರಾದ ರೇಖಾ ಬದ್ದಿ ರಮೇಶ್ ರವರಿಂದ ಉದ್ಘಾಟನೆ

ಇಮೇಜ್
  ಕೊಟ್ಟೂರು ಪಟ್ಟಣದ ಪಟ್ಟಣ ಪಂಚಾಯಿತಿ ವತಿಯಿಂದ ಹೊಸದಾಗಿ ಜೆ.ಸಿ.ಬಿ. ಯಂತ್ರವನ್ನು ಖರೀದಿ ಮಾಡಿ ಮಂಗಳವಾರ  ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ರೇಖಾ ಬದ್ದಿ ರಮೇಶ್ ರವರು ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಾಧಿಕಾರಿ ನಸುರುಲ್ಲಾ ಈ ಜೆ.ಸಿ.ಬಿ. ಯಂತ್ರವನ್ನು ಪಟ್ಟಣದ ಸಾರ್ವಜನಿಕರಿಗೆ ಶವ ಸಂಸ್ಕಾರ ಮಾಡಲು ಗುಂಡಿ ತೆಗೆಯುವ ಸಲುವಾಗಿ ಉಪಯೋಗಿಸಲಾಗುತ್ತದೆ ಎಂದು ತಿಳಿಸಿದರು. ಪಟ್ಟಣದಲ್ಲಿ ಯಾರೇ ಮೃತರಾದರೂ ಪಟ್ಟಣ ಪಂಚಾಯಿತಿಯ ಕಿರಿಯ ಆರೋಗ್ಯ ಸಹಾಯಕರನ್ನು ಸಂಪರ್ಕಿಸಿದರೆ, ಈ ಜೆ.ಸಿ.ಬಿ. ಯಂತ್ರ ಹಾಗೂ ಮುಕ್ತಿ ವಾಹನವನ್ನು ಕಳಿಸಿಕೊಡಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಸಿದ್ದಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷರು ಅಂಜಿನಮ್ಮ, ಪಟ್ಟಣ ಪಂಚಾಯಿತಿ ಸದಸ್ಯರ ಕೆ ಶಫೀ , ಕೆಂಗರಾಜ್, ತೋಟದ ರಾಮಣ್ಣ, ವಿನಯ್ ಕುಮಾರ್ ಹೊಸಮನಿ, ಟಿ ರುಕ್ಸನ ಭಾನು, ಕಡ್ಲಿ ವೀರೇಶ,,ಪ್ರಮುಖ ಮುಖಂಡರಾದ ಬದ್ದಿ ಮರಿಸ್ವಾಮಿ,ರಾಜೀವ್, ವಿರುಪಾಕ್ಷಿ ,ಕಾಸಲ್ ಪ್ರಕಾಶ್, ಉಪಸ್ಥಿತರಿದ್ದರು.

13 ನೇ ಕುಂಭಮೇಳದಲ್ಲಿ ಮಂಜುನಾಥ ಚರಿತೆ ನೃತ್ಯ ರೂಪಕ

ಇಮೇಜ್
ಮೈಸೂರು; ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಮೈಸೂರು ಜಿಲ್ಲೆ, ಟಿ. ನರಸೀಪುರ, ತ್ರಿವೇಣಿ ಸಂಗಮ, ಶ್ರೀಕ್ಷೇತ್ರ ತಿರುಮಕೂಡಲು ನಲ್ಲಿ 13 ನೇ ಕುಂಭಮೇಳ-2025 ಮಹೋದಯ ಪುಣ್ಯಕಾಲದ ಮಹಾಮಾಘ ಸ್ನಾನ ಕಾರ್ಯಕ್ರಮ, ಕಾವೇರಿ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗುರು, ಬಿ. ನಾಗೇಶ್ ಮತ್ತು ಶಿಷ್ಯರಿಂದ ಶ್ರೀ ಮಂಜುನಾಥ ಚರಿತೆ ನೃತ್ಯ ರೂಪಕ ಪ್ರದರ್ಶನ ನಡೆಯಿತು.

ಜೀವನದ ಮೊದಲ ಆರಾಧಕರು ನಿಮ್ಮ ತಂದೆ ತಾಯಿ - ಎರಡನೇ ಆರಾಧಕರು ನೆಚ್ಚಿನ ಶಿಕ್ಷಕರು ಆಗಿರಲಿ : ಡಾ.ಮಲ್ಲಪ್ಪ.ಕೆ. ಯರಗೋಳ

ಇಮೇಜ್
  ಮಸ್ಕಿ : ವಿದ್ಯಾರ್ಥಿಗಳಲ್ಲಿ ಸಂಕುಚಿತ ಮನೋಭಾವ ಹೋಗಲಾಡಿಸಲು ಶಾಲಾ ವಾರ್ಷಿಕೋತ್ಸವ ಉತ್ತಮವಾದ ವೇದಿಕೆಯಾಗಿದೆ ಎಂದು ತಹಶೀಲ್ದಾರರಾದ ಡಾ.ಮಲ್ಲಪ್ಪ.ಕೆ.ಯರಗೋಳ ರವರ ಹೇಳಿದರು. ತಾಲೂಕಿನ ಹಾಲಾಪುರ ಗ್ರಾಮದ ಜನನಿ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿದ ಅವರು ನಿಮ್ಮ ಜೀವನದಲ್ಲಿ ಮೊದಲ ಆರಾಧಕರು ನಿಮ್ಮ ತಂದೆ ತಾಯಿ ಆಗಿರಲಿ,ಎರಡನೇ ಆರಾಧಕರು ನಿಮ್ಮ ನೆಚ್ಚಿನ ಶಿಕ್ಷಕರು ಆಗಿರಲಿ ನಂತರದ ಸ್ಥಾನ ನಿಮ್ಮ ಇಚ್ಛಾಸಕ್ತಿಗೆ ಬಿಟ್ಟ ವಿಚಾರ.ಶಿಕ್ಷಕರು ಉತ್ತಮ ಅಂಕ ಪಡಿಯಬೇಕು ಎಂದು ಕಲಿಸುವುದು ಬೇಡ ಜೊತೆ ಜೊತೆಗೆ ಜೀವನದ ಉತ್ತಮ ಮೌಲ್ಯವನ್ನು ಕಲಿಸಿಕೊಡಬೇಕು.ವಿದ್ಯಾರ್ಥಿಗಳಿಗೆ ಅನ್ನದ ಮಹತ್ವ ತಿಳಿಸಿ ನಾವು ಎಂತಹ ಮಾತುಗಳನ್ನಾಡಬೇಕು ಎಂದು ಕಲಿಯಬೇಕು.ಪ್ರೀತಿ ಪ್ರೇಮ ಪ್ರಣಯದ ವಯಸ್ಸಿದು ಯಾವುದಕ್ಕೂ ತಲೆಕೊಡದೆ ಯಾವುದೇ ವಾಮ ಮಾರ್ಗದಲ್ಲಿ ನಡೆಯದೇ ಒಳ್ಳೆಯ ಮಾರ್ಗದಲ್ಲಿ ನಡೆಯಿರಿ ಎಂದು ಹೇಳಿದರು. ನಂತರ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ನಾಗೇಶ್ ಜಂಗಮರಹಳ್ಳಿ ಅವರು ಸಾಂಸ್ಕೃತೀಕ ಹಾಗೂ ಕ್ರೀಡಾ ಚಟುವಟಿಕೆ ಮೂಲಕ ಪ್ರತಿಭೆಗಳನ್ನು ಗುರುತಿಸಲು ಶಾಲಾ ವಾರ್ಷಿಕೋತ್ಸವ ಉತ್ತಮ ವೇದಿಕೆಯಾಗಿದೆ. ಅಲ್ಲದೆ ಮಕ್ಕಳ ಮುಂದಿನ ಶೈಕ್ಷಣಿಕ ಭವಿಷ್ಯ ಉಜ್ವಲಗೊಳಿಸಲು ಮಕ್ಕಳ ಸಾಮರ್ಥ್ಯಕ್ಕೇ ಅನುಗುಣವಾಗಿ ಅವರ ಸರ್ವತೋಮುಖ ಅಭಿವೃದ್ಧಿಯ ಪೂರಕವಾದ ವಾತಾವರಣ ಸೃಷ್ಟಿಸುವ ...

ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸೋಮನಮರಡಿಯಲ್ಲಿ ನೂತನ ಎಸ್ ಡಿ ಎಂ ಸಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

ಇಮೇಜ್
  ದೇವದುರ್ಗ : ಜಾಲಹಳ್ಳಿ ಸಮೀಪದ ಸೋಮನಮರಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಎಸ್ ಡಿ ಎಂ ಸಿ ಅಧ್ಯಕ್ಷರಾಗಿ ಪರಮಣ್ಣ ತಂದೆ ನರಸಯ್ಯ ಹಾಗು ಉಪಾಧ್ಯಕ್ಷರಾಗಿ  ನಾಗಮ್ಮ ಗಂಡ ಸೋಮಯ್ಯ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ವೀಕ್ಷಕರಾಗಿ  ಆಗಮಿಸಿದ್ದ ಗ್ರಾಮ ಪಂಚಾಯತಿ ಸಿಬ್ಬಂದಿ ಶಿವಕುಮಾರ  ,ಗ್ರಾಮ ಪಂಚಾಯತಿ ಸದಸ್ಯರಾದ  ಸಾಬಣ್ಣ ಬುಂಕಲದೊಡ್ಡಿ , ಸನ್ನಬಾವಸಾಬ್ ತಂದೆ ಹುಸೇನ್ ಸಾಬ್ ಹಾಗು ಶಾಲೆಯ ಮುಖ್ಯ ಗುರುಗಳು ಶಿವಪುತ್ರಪ್ಪ ತಿಳಿಸಿದರು. ಶಾಲಾ ಅಭಿವೃದ್ಧಿ ಮತ್ತು  ಮೇಲುಸ್ತುವಾರಿ ಸಮಿತಿ ರಚನೆ ಮಾಡುವ  ಉದ್ದೇಶದಿಂದ ಸೋಮವಾರ ಬೆಳಿಗ್ಗೆ ವಿದ್ಯಾರ್ಥಿಗಳ ಪಾಲಕರು  ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸೂಕ್ತ ಮಾರ್ಗದರ್ಶನ ಮಾಡುವ ಮೂಲಕ ಶಾಲಾ ಮುಖ್ಯೋಪಾಧ್ಯಾಯರು  ಆಯ್ಕೆ ವಿಧಾನ , ಜಾತಿವಾರು ಸದಸ್ಯರ ಆಯ್ಕೆ,ಮತ್ತು ಮುಖ್ಯವಾಗಿ ಎಸ್ ಡಿ ಎಂ ಸಿ ಉದ್ದೇಶಗಳು ಮತ್ತು ಜವಾಬ್ದಾರಿಗಳನ್ನು  ತಿಳಿಸಿದರು.    ಪಾಲಕರು ಚರ್ಚಿಸಿ ಸೂಚಕರು ಮತ್ತು ಅನುಮೋದಕರ ಅನುಮತಿ ಮೇರೆಗೆ  ಜಾತಿವಾರು ಸದಸ್ಯರ ಆಯ್ಕೆ ಮಾಡುತ್ತ ಎಲ್ಲಾ ವರ್ಗದ ಸದಸ್ಯರ ಆಯ್ಕೆಮಾಡಿದರು.  ನಂತರ ಆಯ್ಕೆಯಾದ ಹದಿನೆಂಟು ಸದಸ್ಯರನ್ನು  ಒಂದು ಕೊಠಡಿಯಲ್ಲಿ ಸೇರಿಸಿ ತಾವೇ ಚರ್ಚಿಸಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಅವಿರೋಧವಾಗಿ   ಆಯ್ಕೆ ಮಾಡ...