ಪೋಸ್ಟ್‌ಗಳು

ಜೂನ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶಿಕ್ಷಣಕ್ಕೆ ಜಾಕಿರ್ ಕೊಡುಗೆ ಅಪಾರ

ಇಮೇಜ್
ಬಳ್ಳಾರಿ:ಭಾರತೀಯ ಶಿಕ್ಷಣದ ಅಭಿವೃದ್ಧಿ ಹಾಗೂ ಸುಧಾರಣೆ ಕುರಿತು ಹಲವಾರು ಕೃತಿಗಳನ್ನು ಬರೆದು,ತಮ್ಮ ಬದುಕನ್ನೇ ಶಿಕ್ಷಣ ಕ್ಷೇತ್ರಕ್ಕೆ ಮುಡುಪಾಗಿಟ್ಟು,ಜೀವನದುದ್ದಕ್ಕೂ ಶಿಸ್ತು ಮತ್ತು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದವರು ಡಾ.ಜಾಕಿರ್ ಹುಸೇನ್ ಅವರು ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು. ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಭಾರತದ ಮೂರನೇ ರಾಷ್ಟ್ರಪತಿಗಳಾಗಿದ್ದ ಜಾಕಿರ್ ಹುಸೇನ್ ಅವರ ಭಾವಚಿತ್ರ ಬಿಡಿಸುವ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು ಹುಸೇನ್ ಅವರು ಉತ್ತರ ಪ್ರದೇಶ ರಾಜ್ಯದ ಅಲಿಗಡವ ವಿಶ್ವ ವಿದ್ಯಾಲಯದ ಕುಲಪತಿಗಳಾಗಿ ಸೇವೆಸಲ್ಲಿಸಿದರು.ಅಲ್ಲದೆ ದೆಹಲಿಯಲ್ಲಿ ಜಾಮಿಯಾ ಮಿಲಿಯ ವಿಶ್ವ ವಿದ್ಯಾಲಯ ಸ್ಥಾಪಿಸಿ, ಅದನ್ನು ಉನ್ನತ ಶಿಕ್ಷಣ ಕೇಂದ್ರ ವಾಗಿಸಿದರು.ಬಿಹಾರ ರಾಜ್ಯದ ರಾಜ್ಯಪಾಲರಾಗಿ, ಉಪರಾಷ್ಟ್ರಪತಿ ಹಾಗೂ ರಾಷ್ಟ್ರಪತಿಯಾಗಿ ಅಮೋಘ ಸೇವೆ ಸಲ್ಲಿಸಿದ್ದಾರೆ ಎಂದು ಹೇಳುತ್ತಾ ವಿದ್ಯಾರ್ಥಿಗಳು ಶಿಸ್ತು, ಸಮಯಪಾಲನೆ ಮೈಗೂಡಿಸಿಕೊಂಡು ಬಾಳಬೇಕೆಂದು ಹೇಳಿದರು. ಎಂಟನೇ ತರಗತಿಯ ವಂಶಿ,ವೈಶಾಲಿ, ಕೀರ್ತಿ, ಪ್ರಜ್ವಲ್ ಹಾಗೂ ಏಳನೇ ತರಗತಿ ರಾಜಶೇಖರ್ ಬಹುಮಾನ ಪಡೆದರು. ಶಿಕ್ಷಕರಾದ ಬಸವರಾಜ, ದಿಲ್ಷಾದ್ ಬೇಗಂ, ಚನ್ನಮ್ಮ, ಸುಮತಿ, ಸುಧಾ, ವೈಶಾಲಿ, ಶ್ವೇತಾ, ಉಮ

ಸೆಂಥಿಲ್ ವಜಾಗೊಳಿಸಿದ್ದು ಅಸಂವಿಧಾನಿಕ!

ಇಮೇಜ್
ತಮಿಳುನಾಡಿನ ಸೆಂಥಿಲ್‌ರನ್ನು ಸಂಪುಟದಿಂದ ಉಚ್ಛಾಟನೆ ಮಾಡಿರುವುದು ಪ್ರಜಾಪ್ರಭುತ್ವ ವಿರೋಧಿ ನೆಲೆ ಮತ್ತು ಅಸಂವಿಧಾನಿಕವಾಗಿದೆ. ಸ್ಟಾಲಿನ್ ಸಂಪುಟದಲ್ಲಿ ಅಬಕಾರಿ ಸಚಿವರಾಗಿದ್ದ ಸೆಂಥಿಲ್ ಬಾಲಾಜಿ ಉದ್ಯೋಗಕ್ಕಾಗಿ ಹಣ ಪಡೆದ ಆರೋಪ ಎದುರಿಸುತ್ತಿದ್ದರು. ಈ ಹಿಂದೆ ಜಯಲಲಿತಾ ಅವರ ಸಂಪುಟದಲ್ಲಿ ಸಾರಿಗೆ ಸಚಿವರಾಗಿದ್ದ ಬಾಲಾಜಿ ತಮ್ಮ ಇಲಾಖೆಯಲ್ಲಿನ ಉದ್ಯೋಗ ನೀಡಲು ಹಣ ಪಡೆದ ಆರೋಪ ಎದುರಿಸುತ್ತಿದ್ದಾರೆ. ಜೂ.೧೪ರಂದು ಜಾರಿ ನಿರ್ದೇಶನಾಲಯ ಅವರನ್ನು ಬಂಧಿಸಿತ್ತು. ಈಗ ರಾಜ್ಯಪಾಲರು ಅವರನ್ನು ಸಂಪುಟದಿಂದ ವಜಾಮಾಡಿದ್ದಾರೆ. ಇದು ಅಸಂವಿಧಾನಿಕ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗೆ ಸಂಪೂರ್ಣ ಅಧಿಕಾರ ಇರುತ್ತದೆ. ರಾಜ್ಯಪಾಲ ಹುದ್ದೆ ಒಂದು ಹೆಸರಿಗೆ ಮಾತ್ರ ಇರುವ ಉನ್ನತ ಹುದ್ದೆ. ಹುದ್ದೆಗೆ ಕೆಲವೇ ಕೆಲವು ಸಂದರ್ಭದಲ್ಲಿ ವಿವೇಚನಾ ಅಧಿಕಾರ ಬಳಕೆಮಾಡಿಕೊಳ್ಳಬಹುದು. ಉಳಿದಂತೆ ಅವರು ಸಂವಿಧಾನದ ಅನ್ವಯ ಮುಖ್ಯಮಂತ್ರಿ, ಸಚಿವ ಸಂಪುಟದ ತೀರ್ಮಾನದಂತೆಯೇ ನಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ತಮ್ಮ ಸ್ವಂತ ನಿರ್ಧಾರವನ್ನು ಹೇರುವಂತಿಲ್ಲ. ಸಂವಿಧಾನದ ಅನುಚ್ಛೇದ 154(1)ರಂತೆ ರಾಜ್ಯಾಡಳಿತದ ಕಾರ್ಯಕಾರಿ ಅಧಿಕಾರ ರಾಜ್ಯಪಾಲರಲ್ಲಿದೆ. ಅವರು ನೇರವಾಗಿ ಇಲ್ಲವೇ ತಮ್ಮ ಅಧೀನಾಧಿಕಾರಿಗಳ ಮೂಲಕ ಅದನ್ನು ನಿಭಾಯಿಸಬಹುದು ಎಂದು ಹೇಳಲಾಗುತ್ತದೆ. ಮೇಲ್ನೋಟಕ್ಕೆ ಇದು ರಾಜ್ಯಪಾಲರಿಗೆ ಸಂಪೂರ್ಣ ವಿವೇಚನಾ ಅಧಿಕಾರ ಕೊಟ್ಟಿದೆ ಅಲ್ವಾ ಅನ

ಹೆಣ್ಣು ಸಿಗದೆ ಆತ್ಮಹತ್ಯೆ ಮಾಡಿಕೊಂಡ ಚಂದದ ಯುವಕ!

ಇಮೇಜ್
  ಕಾರವಾರ: ನೋಡೋಕೆ ಫಿಲ್ಮ್ ಹೀರೋ ತರಹ ಇರುವ ಯುವಕನೋರ್ವ ಮದುವೆಗೆ ಹೆಣ್ಣು ಸಿಗಲಿಲ್ಲ ಎಂಬ ವಿಚಾರಕ್ಕೆ ಜಿಗುಪ್ಸೆಗೊಂಡು ಸುಂದರ ಯುವಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಕಾರವಾರ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದಲ್ಲಿ ನಡೆದಿದೆ. ಯಲ್ಲಾಪುರದ ತೇಲಂಗಾರದ ಕಿರಗಾರಿಮನೆ ನಿವಾಸಿ ನಾಗರಾಜ ಗಣಪತಿ ಗಾಂವ್ಕರ್ (35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಯಲ್ಲಾಪುರದ ತೇಲಂಗಾರ ಕಿರಗಾರಿಮನೆಯಲ್ಲಿ ಕೃಷಿ ಮಾಡಿಕೊಂಡಿದ್ದ ಈತ ಮದುವೆಯಾಗಲು ಕಳೆದ ಹಲವು ವರ್ಷಗಳಿಂದ ಪ್ರಯತ್ನ ನಡೆಸಿದ್ದ. ಮದುವೆಯಾಗಲೂ ಸಾಕಷ್ಟು ಹುಡುಕಾಟ ನಡೆಸಿದರು ಕೂಡ ಎಲ್ಲಿಯೂ ಸಬಂಧ ಹೊಂದಿಕೆಯಾಗಿರಲಿಲ್ಲ. ಇದರಿಂದ ಜಿಗುಪ್ಸೆಗೊಂಡ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೃಷಿಯಲ್ಲಿ ತೊಡಗಿದ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದ್ದು, ಇದೀಗ ಯುವಕ ಆತ್ಮಹತ್ಯೆ ಮಾಡಿಕೊಂಡಿರುವುದು ಇದಕ್ಕೆ ಪುಷ್ಟಿ ಕೊಟ್ಟಿದೆ. ಅದು ಅಲ್ಲದೆ ಮದುವೆಗಾಗಿ ಸಂಬಂಧಿಕರು, ಬ್ರೋಕರ್ಗಳ ಬಳಿ ಹೆಣ್ಣು ಹುಡುಕಿಕೊಡಲು ಸಾಕಷ್ಟು ಪ್ರಯತ್ನ ನಡೆಸಿದರು ಅದರಿಂದಲೂ ಸಾಧ್ಯವಾಗಿರಲಿಲ್ಲ. ಇದರಿಂದ ನಾಗರಾಜ ಪ್ರತಿನಿತ್ಯ ಯೋಚನೆಯಲ್ಲಿಯೇ ಮುಳುಗುತ್ತಿದ್ದ. ಇದನ್ನೆ ಮನಸ್ಸಿಗೆ ಹಚ್ಚಿಕೊಂಡು ಖಿನ್ನತೆಗೆ ಒಳಗಾಗಿದ್ದ. ಇಂದು ಆತನ ಮನೆಯ ಸಮೀಪದ ಗುಡ್ಡಕ್ಕೆ ತೆರಳಿ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖ

ಅಕ್ಕಿ ಬದಲು ದುಡ್ಡು ನೀಡುವುದಕ್ಕೆ ಹೆಗಡೆ ಆಕ್ಷೇಪ

ಇಮೇಜ್
ಬಳ್ಳಾರಿ: ಸರ್ಕಾರವು ಕೊಟ್ಟ ಮಾತಿನಂತೆ 10 ಕೆಜಿ ಅಕ್ಕಿ ನೀಡದೆ ಪಡಿತರ ಖಾತೆಗೆ ಹಣ ನೀಡಲು ಮುಂದಾಗಿರುವುದಕ್ಕೆ  ಬಳ್ಳಾರಿ ಜಿಲ್ಲಾ ಪಡಿತರ(ನ್ಯಾಯ ಬೆಲೆ ಅಂಗಡಿ ಮಾಲೀಕರ ಸಂಘ) ವಿತರಕರ ಸಂಘವು ಆಕ್ಷೇಪ ವ್ಯಕ್ತಪಡಿಸುತ್ತದೆ ಎಂದು  ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ  ಜಿಲ್ಲಾ ಕಾರ್ಯಧ್ಯಕ್ಷರು ವೆಂಕಟೇಶ್ ಹೆಗಡೆ ತಿಳಿಸಿದ್ದಾರೆ. ಸರ್ಕಾರವು ಕೊಟ್ಟ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘ 10 ಕೆಜಿ ಅಕ್ಕಿ ನೀಡಿ, ಬದಲಾಗಿ ನೀವು ಹಣ ನೀಡುವ ನಿರ್ಧಾರದಿಂದ ಮಾತು ತಪ್ಪಿದಂತೆ ಆಗುತ್ತದೆ. ಆದುದರಿಂದ ಪಡಿತರದಾರರ ಖಾತೆಗೆ ಹಣ ಹಾಕುವ ಬದಲು ಆಹಾರ ಧಾನ್ಯಗಳಾದ ಸಕ್ಕರೆ, ಗೋಧಿ, ಜೋಳ, ರಾಗಿ ಮುಂತಾದ ಆಹಾರ ಪದಾರ್ಥಗಳನ್ನು ರೈತರಿಂದ ನೇರವಾಗಿ ಖರೀದಿ ಮಾಡಿ ಮೂರು ಕೆ.ಜಿ ರಾಗಿ ಎರಡು ಕೆ.ಜಿ ಗೋಧಿ  ಮತ್ತು ಈಗಾಗಲೇ ಬಿಪಿಎಲ್ ಪಡಿತರದಾರರಿಗೆ ಐದು ಕೆ.ಜಿಸಿಸಿ ಅಕ್ಕಿ, ಕೊಡುತ್ತಿರುವುದರಿಂದ ಒಟ್ಟಾಗಿ 10 ಕೆ.ಜಿ ಕೊಟ್ಟಂತಾಗುತ್ತದೆ. ಹಾಗೂ ರಾಜ್ಯದಲ್ಲಿರುವ ರೈತರಿಗೂ ಅನುಕೂಲವಾಗುತ್ತದೆ ಮತ್ತು ಸಕ್ಕರೆ ಕೊಟ್ಟಲ್ಲಿ ನಷ್ಟದಲ್ಲಿರುವ ಶುಗರ್ ಫ್ಯಾಕ್ಟರಿಗಳಿಗೂ, ಮತ್ತು ಕಬ್ಬು ಬೆಳೆಗಾರರಿಗೂ ಸಹಾಯವಾಗುತ್ತದೆ. ಆದಾಗ್ಯು ಆಹಾರ ಧ್ಯಾನಗಳನ್ನು ಕೊಡದೆ, ಹಣವನ್ನೆ  ಪಡಿತರ ದಾರರಿಗೆ ಕೊಟ್ಟಲ್ಲಿ ಹಿಂದೆ ಕೇಂದ್ರ ಸರ್ಕಾರವು ಪುದುಚೇರಿ ಮತ್ತು ಛತ್ತೀಸ್ಗಡದಲ್ಲಿ ಅಕ್ಕಿ ಬದಲು ಹಣ ನೀಡುವ ಯೋಜನೆ ಆರಂಭಿಸಿತ್ತು ಯೋಜನೆ ಆರಂಭವಾಗಿ ಕೆಲ ತಿಂಗಳಲ್ಲೇ ಸ್ಥಗಿತಗೊಂಡಿತ್ತು. ಈಗ

ಸರ್ವಪಲ್ಲಿ ರಾಧಾಕೃಷ್ಣ ದೇಶದ ಕೀರ್ತಿ ಪತಾಕೆ ಎತ್ತಿಹಿಡಿದರು

ಇಮೇಜ್
ಬಳ್ಳಾರಿ :ಶಿಕ್ಷಕರಾಗಿ, ತತ್ವಜ್ಞಾನಿಗಳಾಗಿ,1949 ರಿಂದ 1952 ರವರೆಗೆ ಸೋವಿಯತ್ ರಷ್ಯಾದ ರಾಯಭಾರಿಯಾಗಿ,1952 ರಿಂದ 1962 ರವರೆಗೆ ಪ್ರಥಮ ಉಪರಾಷ್ಟ್ರಪತಿಯಾಗಿ ಹಾಗೂ1962 ರಿಂದ 1967 ರವರೆಗೆ ಎರಡನೇ ರಾಷ್ಟ್ರಪತಿಗಳಾಗಿ ಆಡಳಿತ ಮಾಡಿ ಭಾರತ ದೇಶದ ಕೀರ್ತಿ ಪತಾಕೆಯನ್ನು ಸಪ್ತ ಸಾಗರಗಳಾಚೆ ಎತ್ತಿ ಹಿಡಿದವರು ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರು ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು. ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಧಾಕೃಷ್ಣನ್ ಅವರ ನೆನಪು ಹಾಗೂ ಪ್ರತಿಭಾವಂತ ಮಕ್ಕಳಿಗೆ ಬಹುಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಹುಮಾನ ವಿತರಿಸಿ ಮಾತನಾಡಿದ ಅವರು ರಾಧಾಕೃಷ್ಣನ್ ಅವರು  ತತ್ವಜ್ಞಾನದ ಕುರಿತು ಎತಿಕ್ಸ್ ಆಫ್ ವೇದಾಂತ ಎಂಬ ಪ್ರಬಂಧ ಭಾರತೀಯ ಸನಾತನ ಹಿಂದೂ ಧರ್ಮದ ಸಂಪೂರ್ಣ ಮಾಹಿತಿ ಹೊಂದಿದ್ದು, ಅದರೊಳಗಿನ ತಾತ್ವಿಕ ವಿಚಾರಗಳು ಜನರನ್ನು ಎಚ್ಚರಿಸುವಂತೆ ಇದ್ದವು. ಆದ್ದರಿಂದ ವಿದ್ಯಾರ್ಥಿಗಳು ನಿರಂತರ ಅಧ್ಯಯನ ಹಾಗೂ ಸತತ ಪರಿಶ್ರಮ ಪಟ್ಟರೆ ಯಶಸ್ಸು ಕಂಡಿತ ಲಭಿಸುತ್ತದೆ ಎಂದು ಹೇಳಿದರು. ಪ್ರತಿಭಾವಂತ ನಲಿಕಲಿ ವಿದ್ಯಾರ್ಥಿಗಳಾದ ಹರ್ಷ,ಭಾವನ,ಪ್ರಿಯಾಂಕಾ, ಅಂಜಲಿ, ಮೇಘಮಾಲ ಬಹುಮಾನ ಪಡೆದರು. ಹಿರಿಯ ಶಿಕ್ಷಕರಾದ ಮೋದಿನ್ ಸಾಬ್ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರೆ,ಬಸವರಾಜ ಅವರು ಪೂಜೆ

ಉದ್ಯೋಗ ಖಾತ್ರಿ ಯೋಜನೆ ಎಂಬ ಚಿನ್ನದ ಮೊಟ್ಟೆ ಇಡುವ ಕೋಳಿ

ಇಮೇಜ್
  ಕೊಟ್ಟೂರು: ತಾಲ್ಲೂಕಿನಲ್ಲಿ ಪ್ರಸ್ತುತ 11 ಗ್ರಾ.ಪಂ. ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಭಾಗದಲ್ಲಿನ ಕೂಲಿಕಾರರಿಗೆ ವರ್ಷಕ್ಕೆ 10 ದಿನ ಉದ್ಯೋಗ ಸೃಷ್ಟಿಯ ದೃಷ್ಟಿಯಿಂದ ಯೋಜನೆಯಡಿ ಹಳ್ಳ-ಕೊಳ್ಳ-ಹಗರಿ-ಚೆಕ್‌ಡ್ಯಾಂ-ಕೆರೆಗಳಲ್ಲಿನ ಹೂಳು ತೆಗೆಯುವ ಕೆಲಸಕ್ಕೆ ಕೋಟ್ಯಾಂತರ ಹಣ ವೆಚ್ಚ ಮಾಡುತ್ತಿದೆ.  ಮಳೆ ಬಾರದ ಹಿನ್ನೆಲೆಯಲ್ಲಿ ರೈತ, ಕಾರ್ಮಿಕರಿಗೆ ಉದ್ಯೋಗ ಕೊಡುವ ಸರ್ಕಾರದ ಉದ್ದೇಶ ಸರಿ ಇದೆ. ಆದರೆ, ಅಧಿಕಾರಿ, ರಾಜಕಾರಣಿಗಳ ಅಸಡ್ಡೆಯ ಕಾರಣದಿಂದ ಇದೀಗ ಸರ್ಕಾರದ ಸದುದ್ದೇಶ ಈಡೇರುವ ಬದಲು ಹಣ ಪೋಲಾಗುತ್ತಿದೆ. ಕೆರೆಗಳು ಸಣ್ಣ ನೀರಾವರಿ ಇಲಾಖೆಯಡಿ ಬರುವುದರಿಂದ ಸದರಿ ಇಲಾಖೆ ತನ್ನ ಅನುದಾನದಡಿ ಕೆಲಸ ಮಾಡಬಹುದಾಗಿದೆ. ಆದರೆ ಉದ್ಯೋಗ ಖಾತ್ರಿ ಯೊಜನೆಯಲ್ಲಿ ಕೆರೆ ಹೂಳು ತೆಗೆಯುವಾಗ ಒಂದು ನಿರ್ಧಿಷ್ಟ ರೂಪುರೇಷೆಗಳನ್ನು ಗೊತ್ತು ಮಾಡದೇ ಎಲ್ಲೆಂದರಲ್ಲಿ ಗುಂಡಿ ತೆಗೆದು ಅದರಿಂದ ಮಣ್ಣನ್ನು ಕೂಡಾ ಸರಿಯಾಗಿ ವಿಲೇವಾರಿ ಮಾಡದಿರುವುದು. ಆದ್ದರಿಂದ ಸಂಬಂಧಿಸಿದ ತಾಲ್ಲೂಕು ಆಡಳಿತಾಧಿಕಾರಿ ಮತ್ತು ಈ ಭಾಗದ ಶಾಸಕರು ನಿರ್ಧಿಷ್ಠ ಸ್ಥಳ ಆಯ್ಕೆ ಮತ್ತು ಸಂಪೂರ್ಣ ಕೆಲಸ ಶಾಶ್ವತವಾಗಿ ಆಗುವಂತಹ ಗುರಿ ಹೊಂದಿ ಕೆಲಸ ಮಾಡಬೇಕಿದೆ. ಇಲ್ಲ ಅಂದರೆ ಅಧಿಕಾರಿಗಳು ತಮ್ಮ ಭ್ರಷ್ಟತೆಗೋಸ್ಕರ ಪ್ರಜೆಗಳನ್ನು ಕೂಡಾ ಸರ್ಕಾರಿ ಬ್ರಷ್ಠರನ್ನಾಗಿ ಮಾಡುತ್ತಿರುವುದು ಖೇದಕರ ಸಂಗತಿ. ಇತ್ತೀಚಿನ ದಿನಗಳಲ್ಲಿ ಕೆ ಅಯ್ಯನಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಮೇಟಿ

ಕೆಎಂಎಫ್ ಖಾಯಂ ಮುಚ್ಚುತ್ತೇವೆ:ಖಡಕ್ ಎಚ್ಚರಿಕೆ ನೀಡಿದ ನಾಗೇಂದ್ರ

ಇಮೇಜ್
  ಬಳ್ಳಾರಿ:ಮಹಾನಗರ ಪಾಲಿಕೆಯ 35 ನೆಯ ವಾರ್ಡಿನಲ್ಲಿರುವ ಕೆಎಂಎಫ್‌ನ ರಾಬಕೊವಿ ಒಕ್ಕೂಟದ ಘಟಕದ ಡೈರಿಯಲ್ಲಿ ಹಾಲು ಪ್ಯಾಕ್ ಮಾಡುವಾಗ ಬರುವ ತ್ಯಾಜ್ಯ ನೀರನ್ನು ಸರಿಯಾಗಿ ನಿರ್ವಹಿಸದ ಹಿನ್ನೆಲೆಯಲ್ಲಿ ಸಾಕಷ್ಟು ಸಮಸ್ಯೆ ಆಗುತ್ತಿದ್ದು ಸರಿ ಪಡಿಸದೇ ಇದ್ದರೆ ಕೆಎಂಎಫ್ ಅನ್ನು ಮುಚ್ಚಿಬಿದುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಖಡಕ್ ಎಚ್ಚರಿಕೆ ನೀಡಿದ್ದಾರೆ. ಕೆಡಿಪಿ ಸಭೆಯ ಅನುಪಾಲನಾ ವರದಿ ಮಂಡನೆ ವೇಳೆ ಕೆಎಂಎಫ್‌ನ ತ್ಯಾಜ್ಯ ನೀರು ನಿರ್ವಹಣೆ ಕುರಿತು ಹಿಂದಿನ ಸಭೆಯಲ್ಲಿ ಆದ ಚರ್ಚೆ ಪ್ರಸ್ತಾಪಿಸಿ ಮಾತನಾಡಿದ ಅವರು, ಕೆಎಂಎಪ್ ಡೈರಿಯಿಂದ ಹರಿದು ಬರುವ ತ್ಯಾಜ್ಯ ನೀರನ್ನು ಸರಿಯಾಗಿ ವಿಲೇವಾರಿ ಮಾಡಬೇಕು ಎಂದು ಕಳೆದ ಸಭೆಯಲ್ಲಿ ಚರ್ಚಿಸಲಾಗಿತ್ತು. ಆದರೆ, ಸಭೆಗೆ ರಾಬಕೊವಿ ಒಕ್ಕೂಟದ ಎಂಡಿ ಬಂದಿರಲಿಲ್ಲ. ಇದೇ ಕಾರಣಕ್ಕೆ ನೋಟೀಸ್ ನೀಡಲಾಗಿತ್ತು. ಈ ಬಾರಿ ನೀವು ಬಂದಿದ್ದೀರಾ. ಸಮಸ್ಯೆ ಗಂಭೀರ ಇದೆ. ನಾಳೆಯೇ ನೀವು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ಇಲ್ಲದೇ ಹೋದರೆ ಘಟಕ ಮುಚ್ಚಿಬಿಡುತ್ತೇವೆ ಎಂದು ಗುಡುಗಿದರು. ನಿಮ್ಮ ಒಬ್ಬರಿಂದ ಸಾವಿರಾರು ಜನಕ್ಕೆ ತೊಂದರೆ ಆಗುತ್ತಿದೆ. ನಿಮಗೆ ಪದೇ ಪದೇ ಎಚ್ಚರಿಕೆ ನೀಡಿದರೂ ಪ್ರಯೋಜನ ಆಗುತ್ತಿಲ್ಲ. ನಿಮ್ಮ ಅಧ್ಯಕ್ಷರಿಗೂ ಮಾತನಾಡಿದ್ದೇನೆ. ನಿಮಗೇನು ಸಮಸ್ಯೆ, ಲಾಭದಲ್ಲಿದ್ದೀರಲ್ಲಾ ಎಂದು ಪ್ರಶ್ನಿಸಿದರು. ಈ ವೇಳೆ ಮದ್ಯ ಪ್ರವೇಶ ಮಾಡಿದ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ, ಲಾಭ, ನಷ್ಟದ

ಗಂಗಾ ಕಲ್ಯಾಣ ಪಂಪ್ ಸೆಟ್ ಗುಣಮಟ್ಟ ತನಿಖೆಗೆ ಕ್ರಮ:ನಾಗೇಂದ್ರ

ಇಮೇಜ್
ಬಳ್ಳಾರಿ:ಗಂಗಾ ಕಲ್ಯಾಣ ಯೋಜನೆ ಅಡಿ ಹಾಕಲಾಗಿರುವ ಪಂಪ್‌ಸೆಟ್‌ಗಳ ಗುಣಮಟ್ಟ ಖಾತರಿಗೆ ತನಿಖೆ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ತಿಳಿಸಿದರು. ವಾರ್ಷಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಅನುಪಾಲನಾ ವರದಿ ಮಂಡನೆ ವೇಳೆ ವಿವಿಧ ನಿಗಮಗಳಿಂದ ಗಂಗಾ ಕಲ್ಯಾಣ ಯೋಜನೆ ಅಡಿ ಕೊರೆದ ಬೋರ್‌ವೆಲ್‌ಗೆ ಹಾಕಿದ ಪಂಪ್ ಸೆಟ್ ಗುಣಮಟ್ಟ ಕುರಿತು ಗಂಭೀರ ಆರೋಪ ಬಂದಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ತನಿಖೆಗೆ ಮುಂದಾಗಿದೆ ಎಂದರು. ಇನ್ನು ಗಂಗಾ ಕಲ್ಯಾಣ ಯೋಜನೆ ಅಡಿ ಮಂಜೂರು ಮಾಡಿದ ಬೋರ್ ವೆಲ್ ಕೊರೆಯಲು ಹಿಂದೇಟು ಹಾಕಬೇಡಿ. ಲಾರಿ ಹೋಗಲ್ಲ ಎಂಬ ಕಾರಣಕ್ಕೆ ಆಯ್ಕೆಯಾದ ರೈತನನ್ನು ಕೈ ಬಿಡಬೇಡಿ ಎಂದರು.

ಜೋಳ ಖರೀದಿ ಅವ್ಯವಹಾರ ವಿಚಾರ;ಸರಿಯಾದ ತನಿಖೆ ನಡೆಸಿ ಶಿಕ್ಷೆ ಕೊಡಿಸಲು ಕ್ರಮ ವಹಿಸಿ:ನಾಗೇಂದ್ರ

ಇಮೇಜ್
ಬಳ್ಳಾರಿ:ಜಿಪಂ ಸಭಾಂಗಣದಲ್ಲಿ ಸಚಿವ ನಾಗೇಂದ್ರ ಕೆಡಿಪಿ ಸಭೆ ನಡೆಸಿದರು ಬಳ್ಳಾರಿ:ಕಳೆದ ವರ್ಷ ಜೋಳ ಖರೀದಿಯಲ್ಲಿ ಆದ ಅವ್ಯವಹಾರ ತನಿಖೆಯಲ್ಲಿ ಲೋಪ ಎಸಗದೆ ತಪ್ಪಿತತರಿಗೆ ಶಿಕ್ಷೆ ಕೊಡಿಸಲು ಶ್ರಮಿಸಲು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಖಡಕ್ ಆದೇಶ ನೀಡಿದರು. ನಗರದ ಜಿಲ್ಲಾ ಪಂಚಾಯತ್ ನ ನಜೀರ್ ಸಾಬ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅನುಪಾಲನಾ ವರದಿ ಚರ್ಚೆ ವೇಳೆ ಮಾತನಾಡಿದ ಅವರು, ಜೋಳ ಖರೀದಿಯಲ್ಲಿ ಕೆಂಚನ ಗುಡ್ಡ ಗ್ರಾಮದಲ್ಲಿ ಜೋಳ ಖರೀದಿಸುವ ವಿಚಾರದಲ್ಲಿ ದೊಡ್ಡ ವಂಚನೆ ನಡೆದಿದೆ. ನನಗೆ ಈ ಕುರಿತು ಸಂಪೂರ್ಣ ಮಾಹಿತಿ ಇದೆ. ಇಂದೇ ಈ ಅಧಿಕಾರಿಗಳನ್ನು ಅಮಾನತು ಮಾಡಿ ಎಂದರು. ಸಭೆಗೆ ಮಾಹಿತಿ ನೀಡಿದ ಯೋಜನಾ ಅಧಿಕಾರಿ ಚಂದ್ರಶೇಖರ್ ಗುಡಿ, ಜೋಳ ಖರೀದಿ ವಿಷಯದಲ್ಲಿ ಎರಡು ಪ್ರಕರಣ ದಾಖಲಾಗಿವೆ. ಒಂದು ಇಲಾಖಾವಾರು ತನಿಖೆ ಮತ್ತು ಪೊಲೀಸ್ ತನಿಖೆಗೆ ಪ್ರಕರಣ ದಾಖಲಾಗಿವೆ ಎಂದರು ಈ ವೇಳೆ ಮಾತನಾಡಿದ ಆಹಾರ ಇಲಾಖೆ ಉಪ ನಿರ್ದೇಶಕಿ ಕೈಜರ್, ಇಲಾಖೆಯ ಇಬ್ಬರು ಅಧಿಕಾರಿಗಳಾದ ನಾರಾಯಣ ಸ್ವಾಮಿ, ಶಿವನಗೌಡ ಮೇಲೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ ಎಂದರು. ಬಳ್ಳಾರಿ ಗ್ರಾಮಾಂತರ ಸಿಪಿಐ ನಿರಂಜನ್ ಮಾತನಾಡಿ, ಇಬ್ಬರ ಮೇಲೆ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ. ಪ್ರಸೆಕ್ಯುಷನ್ ಗೆ ಅನುಮತಿ ಬೇಕಿದೆ ಎಂದರು. ಸಿರುಗುಪ್ಪ ಸಿಪಿಐ ಮಾತನಾಡಿ, ನಮ್ಮಲ್ಲಿ ಒಟ್ಟು 17 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. 10

ವಿದ್ಯುತ್ ಬೆಲೆ ಏರಿಕೆ ಸಮಸ್ಯೆಗೆ ಶೀಘ್ರ ಪರಿಹಾರ:ನಾಗೇಂದ್ರ

ಇಮೇಜ್
ಬಳ್ಳಾರಿ:ನಗರದ ಬಿಡಿಎಎ ಸಭಾಂಗಣದಲ್ಲಿ ಹಮ್ಮಿಕೊಂಡ ಎಂ ಎಸ್ ಎಂ ಇ ಅಂತಾರಾಷ್ಟ್ರೀಯ ದಿನಾಚರಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ನಾಗೇಂದ್ರ ಉದ್ಘಾಟಿಸಿದರು. ಬಳ್ಳಾರಿ:ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ಎಲ್ಲರ ಸಹಕಾರ ಪಡೆಯುವೆ, ಬಳ್ಳಾರಿಯನ್ನು ಭವ್ಯ ಬಳ್ಳಾರಿ ಮಾಡಲು ಶ್ರಮಿಸುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ತಿಳಿಸಿದರು. ನಗರದ ಬಿಡಿಎಎ ಸಭಾಂಗಣದಲ್ಲಿ ಮಂಗಳವಾರ ದಕ್ಷಿಣ ಭಾರತ ಪ್ರಾಂತೀಯ ಚಾರ್ಟರ್ಡ್ ಅಕೌಂಟೆಂಟ್ ಅಸೋಸಿಯೇಶನ್, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಸಹಯೋಗದಲ್ಲಿ ಕೃಷಿ ಆದಾಯ ಹೆಚ್ಚಳದ ವಿಷಯದಲ್ಲಿ ಎಂ ಎಸ್ ಎಂ ಇ ಪಾತ್ರ ವಿಷಯದ ಮೇಲೆ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಎಂ ಎಸ್ ಎಂ ಇ ದಿನಾಚರಣೆಯಲ್ಲಿ ಮಾತನಾಡಿದ ಅವರು, ಚೇಂಬರ್ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಅಸೋಸಿಯೇಶನ್ ಸಹಯೋಗದಲ್ಲಿ ನಗರ, ಜಿಲ್ಲೆ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ಕೋರುವೆ ಎಂದರು. ವಿದ್ಯುತ್ ಬಿಲ್ ಏರಿಕೆ ವಿಚಾರವಾಗಿ ನೀವು ಹೋರಾಟ ಮಾಡಿದ್ದೀರಾ. ನಿಮ್ಮ ಸಮಸ್ಯೆ ಪರಿಹಾರಕ್ಕೆ ಒಂದಿಷ್ಟು ಕಾಲಾವಕಾಶ ಬೇಕಿದೆ. ಹಿಂದಿನ ಸರ್ಕಾರ ಮಾಡಿದ ತಪ್ಪುಗಳನ್ನು ಸರಿಪಡಿಸಲು ಮುಖ್ಯಮಂತ್ರಿ ಸೇರಿದಂತೆ ಸರ್ಕಾರದ ಹಿರಿಯ ಸಚಿವರು ಪ್ರಯತ್ನಿಸುತ್ತಿದ್ದಾರೆ. ಖಂಡಿತಾ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಅವರು ತಿಳಿಸಿದರು. ಕೂಡ್ಲಿಗಿ ಶಾಸಕ ಬಿ.ಎಂ.ನಾಗರಾಜ್, ಚಾಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಶ್ರೀನಿವಾಸ ರಾವ್, ದಕ್ಷಿಣ ಭಾರತೀಯ ಚಾರ್ಟರ್ಡ್ ಅಕೌಂಟೆಂಟ್

ರಾಜ್ಯದಲ್ಲಿ 33 ರೂಗೆ ಕೆಜಿ ಅಕ್ಕಿ ಸಿಗುತ್ತೆ:ಕೃಷ್ಣ

ಇಮೇಜ್
ಬಳ್ಳಾರಿ:ರಾಜ್ಯದಲ್ಲಿಯೇ ಸೋನಾ ಮಸೂರಿ ಅಕ್ಕಿ 33.5 ರೂಪಾಯಿಯಂತೆ ಸಿಗಲಿದ್ದು, ಸರ್ಕಾರ ಇದನ್ನೇ ಖರೀದಿಸಿ, ಇಲ್ಲಿನ ರೈತರ ನೆರವಿಗೆ ಬರಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿಯೇ ಸೋನಾ ಮಸೂರಿ ಭತ್ತ 2100 ರೂ.ಗೆ ಒಂದು ಕ್ವಿಂಟಾಲ್ ಸಿಗಲಿದೆ. ಇದನ್ನು ಗಿರಣಿ ಮಾಡಿಸಿದರೆ 65 ಕೆಜಿ ಅಕ್ಕಿ ಬರಲಿದೆ. ತೌಡು, ನುಚ್ಚು ಅಕ್ಕಿ ಬಿಟ್ಟುಕೊಟ್ಟರು ಮಿಲ್ ನವರು ಫ್ರೀ ಆಗಿ ಗಿರಣಿ ಮಾಡಿಕೊಡುತ್ತಾರೆ. ಅಲ್ಲಿಗೆ 33.5 ರೂ.ಗೆ ಇಲ್ಲೇ ಸೋನಾ ಮಸೂರಿ ಅಕ್ಕಿ ಖರೀದಿಸುವ ಅವಕಾಶ ಸರ್ಕಾರಕ್ಕೆ ಇದೆ ಎಂದರು. ರಾಜ್ಯದಲ್ಲಿಯೇ ಭತ್ತ ಖರೀದಿ ಮಾಡುವುದರಿಂದ ರೈತರಿಗೂ ಅನುಕೂಲ ಆಗಲಿದೆ. ಭತ್ತಕ್ಕೆ ಒಳ್ಳೆಯ ಬೆಲೆ ಬಂದು ಭತ್ತ ಬೆಳೆಯುವ ರೈತರಿಗೆ ಉತ್ತಮ ಬೆಲೆ ಸಿಗಲಿದೆ ಎಂದು ಅವರು ತಿಳಿಸಿದರು. ಇದೂ ಅಲ್ಲದೆ ಒಂದು ವೇಳೆ ಮಿಲ್ ಮಾಲೀಕರ ಜೊತೆ ಮಾತುಕತೆ ನಡೆಸಿದರೆ ಮಿಲ್ ಮಾಲೀಕರೆ 33.5 ರೂ.ಗೆ ಅಕ್ಕಿ ಮಾರಾಟ ಮಾಡಲು ಸಿದ್ಧರಿದ್ದಾಋಎ. ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು ಎಂದು ಅವರು ತಿಳಿಸಿದರು. ಬೇರೆ ರಾಜ್ಯದಲ್ಲಿ ಖರೀದಿ ಮಾಡಿದರೆ ಸಾಗಣೆ ವೆಚ್ಚದ ಹೊರೆ ಬೀಳಲಿದೆ. ಮುಖ್ಯಮಂತ್ರಿಗಳು ಈ ಕುರಿತು ಯೋಚಿಸಬೇಕು ಎಂದು ಅವರು ತಿಳಿಸಿದರು. ಇನ್ನು 2012ರಲ್ಲಿ ಭೂಮಿ ಸರ್ವೆಮಾಡಲು ರಾಜ್ಯ ಸರ್ಕಾರ 2000 ರೂ. ಕ

ಜಗದೀಶ್ ಶೆಟ್ಟರ್ ಹೇಳಿದ್ದು ಲಿಂಗಾಯತರಿಗೆ ಅರ್ಥ ಆಗುತ್ತಾ?

ಇಮೇಜ್
  ಬಳ್ಳಾರಿ:ಲಿಂಗಾಯತ ಸಮಾಜದ ಭಗವಂತ ಖೂಬಾ, ವಕ್ಕಲಿಗ ಸಮಾಜದ ಶೋಭಾ ಕರಂದ್ಲಾಜೆ, ದಲಿತ ಸಮುದಾಯದ ನಾರಾಯಣ ಸ್ವಾಮಿ ಕೇಂದ್ರದಲ್ಲಿ ರಾಜ್ಯ ಖಾತೆ ಸಚಿವರಾಗಿದ್ದಾರೆ. ಉಳಿದ ಮತ್ತೊಬ್ಬರು ಕ್ಯಾಬಿನೆಟ್ ದರ್ಜೆ ಹೊಂದಿದ್ದಾರೆ. ಅಲ್ಲೇ ತಿಳಿಯುತ್ತೆ ಯಾರ್ಯಾರಿಗೆ ಅನ್ಯಾಯ ಆಗಿದೆ ಎಂಬುದು. ಇದನ್ನ ರಾಜ್ಯದ ಜನ ತಿಳಿದಿದ್ದಾರೆ ಎಂಬ ಜಗದೀಶ್ ಶೆಟ್ಟರ್ ಅವರ ಮಾತು ನಿಜಕ್ಕೂ ಬಿಜೆಪಿಯ ಒಳ ಉದ್ದೇಶ(hidden agenda) ಏನೂ ಎಂಬುದನ್ನು ಬಯಲು ಮಾಡಿದೆ. ಬಿಜೆಪಿಯಲ್ಲಿ ಬಹಳ ವರ್ಷಗಳ ಕಾಲ ಇದ್ದು, ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಶೆಟ್ಟರ್ ಮಾತಲ್ಲಿ ಸಾಕಷ್ಟು ಅರ್ಥ ಇದೆ. ಸದ್ಯ ಅವರು ಆಡಿರುವ ಮಾತುಗಳಿಂದಲೇ ತಿಳಿಯುತ್ತದೆ ಬಿಜೆಪಿಯಲ್ಲಿ ನೇಪೋಟಿಸಂ ಅರ್ಥಾತ್ ಸ್ವಜನ ಪಕ್ಷಪಾತ ಬಹು ದೊಡ್ಡ ಮಟ್ಟದಲ್ಲಿ ಇದೆ ಎಂಬುದು. ಬಿಜೆಪಿಯಲ್ಲಿ ಇದ್ದುಕೊಂಡು ಕತ್ತೆ ಹಾಗೆ ಪಕ್ಷ ನಿಷ್ಠೆಯಿಂದ ದುಡಿಯುತ್ತಿರುವ ಲಿಂಗಾಯತ ಸೇರಿದಂತೆ ಹಿಂದೂ ಧರ್ಮೀಯರ ಕಾರ್ಯಕರ್ತರು ಇದನ್ನು ಅರ್ಥ ಮಾಡಿಕೊಳ್ಳುವ ಜರೂರು ಇದೆ. ಬಿಜೆಪಿ ನಾಯಕರು ಅಂದ್ರೆ ಕೇವಲ ಒಂದು ಜಾತಿಯವರು ಮಾತ್ರ. ಅದು ಬ್ರಾಹ್ಮಣ ಎಂಬ ಅರ್ಥದಲ್ಲಿ ಶೆಟ್ಟರ್ ಹೇಳಿದ್ದಾರೆ. 25 ಜನ ಎಂಪಿಗಳನ್ನು ನೀಡಿದ ರಾಜ್ಯದ ಜನರಿಗೆ ಬಿಜೆಪಿ ಅನ್ಯಾಯ ಮಾಡಿದೆ ಎಂಬುದು ಅವರ ನೇರ ಮಾತು ಆದರೆ ನಿಗೂಢವಾಗಿ ಬಿಜೆಪಿಯಲ್ಲಿ ಬ್ರಾಹ್ಮಣರಿಗೆ ಹೆಚ್ಚಿನ ಆದ್ಯತೆ, ಅವರ ಏಳಿಗೆಗೆ ಉಳಿದವರು ದುಡಿಯಬೇಕು ಎಂದು ಅರ್ಥ ನೀಡುತ್ತದೆ. ಇದು ನಿರಂತರವೂ

ವಸತಿ ಬಡಾವಣೆಯಲ್ಲಿ ಅಕ್ರಮ ವಾಣಿಜ್ಯ ಮಳಿಗೆ ನಿರ್ಮಾಣ: ವರದಿ ನೀಡಿದ್ದರೂ ಯಾವುದೇ ಕ್ರಮ ಇಲ್ಲ ಯಾಕೆ?

ಇಮೇಜ್
ಕೊಟ್ಟೂರು :ಪಟ್ಟಣದ ಜೋಳದ ಕೂಡ್ಲಿಗಿ ರಸ್ತೆಯಲ್ಲಿರುವ ನೂತನವಾಗಿ ನಿರ್ಮಾಣಗೊಂಡಿರುವ ಲೇಔಟ್‌ನಲ್ಲಿ ಅಕ್ರಮವಾಗಿ ಕಮರ್ಷಿಯಲ್ ಕಾಂಪ್ಲೆಕ್ಸ್‌ ನಿರ್ಮಾಣ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಹಲವಾರು ಬಾರಿ ದಿನಪತ್ರಿಕೆಗಳಲ್ಲಿ ವರದಿಯಾಗಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದ ಪಟ್ಟಣ ಪಂಚಾಯಿತಿ ಆಡಳಿತ ಹಾಗೂ ಈ ಬಗ್ಗೆ ಮನವಿಯನ್ನು ಸಲ್ಲಿಸಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿರದ ಪ್ರಯುಕ್ತ ಜನರು ರೋಸಿಹೋಗಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಧರಣಿ ಮಾಡಲಾಗುವುದೆಂಬ ಸಂದೇಶ ಹೋದ ಮೇಲೆ ಜಿಲ್ಲಾಧಿಕಾರಿಗಳು ಮೌನ ಮುರಿದು ಸದರಿ ಅಕ್ರಮ ಕಾಂಪ್ಲೆಕ್ಸ್‌ಗಳ ನಿರ್ಮಾಣದ ಜಾಗವು ಅತಿಕ್ರಮಣವಾಗಿದೆಯೇ ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದರು. ವ ರದಿ ತಯಾರಾಗಲೂ ಸಹ ಅನೇಕ ತಿಂಗಳುಗಳು ಕಳೆದ ಮೇಲೆ ಪಟ್ಟಣ ಪಂಚಾಯಿತಿಯ ಮೇಲೆ ಒತ್ತಡವನ್ನು ಅರಿತ ಸ್ಥಳೀಯ ಆಡಳಿತ, ರಸ್ತೆಗಾಗಿಯೇ ಮೀಸಲಿಟ್ಟ ಜಾಗದಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಾಣವಾಗಿರುವುದರ ಬಗ್ಗೆ ವರದಿ ತಯಾರಿಸಲು, ಸ್ಥಳ ತನಿಖೆ ಮಾಡಿ, ಅಳೆದು ತೂಗಿ ಕಾಂಪ್ಲೆಕ್ಸ್‌ಗಳ ನಿರ್ಮಾಣವಾಗಿರುವುದು ಜಾಗ ಅತಿಕ್ರಮಣವಾಗಿದೆ ಎಂದು ಜನವರಿಯಲ್ಲಿಯೇ ವರದಿ ನೀಡಿದೆ. ವರದಿ ನೀಡಿ ಸುಮಾರು ನಾಲ್ಕು ತಿಂಗಳು ಕಳೆದರೂ ಸಹ ಕಮರ್ಷಿಯಲ್ ಕಾಂಪ್ಲೆಕ್ಸ್‌ಗಳ ಮಾಲೀಕರ ಮೇಲೆ ಯಾವುದೇ ಕ್ರಮ ಜರುಗಿಸದೇ ಇರುವುದು ಯಾತಕ್ಕಾಗಿ? ಈ ಹಿಂದೆ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಪ.ಪಂ.

ಎಂ ಎಲ್ ಸಿ ಸ್ಥಾನ ಬಳ್ಳಾರಿ ಎಸ್ ಸಿ ಎಡಗೈ ಬಣಕ್ಕೆ ನೀಡಲು ವೆಂಕಟೇಶ್ ಹೆಗಡೆ ಆಗ್ರಹ

ಇಮೇಜ್
ಬಳ್ಳಾರಿ: ವಿಧಾನ ಪರಿಷತ್‌ನಲ್ಲಿ ಖಾಲಿ ಇರುವ ಸ್ಥಾನಗಳ ಭರ್ತಿಗೆ ಸರ್ಕಾರ ಮುಂದಾಗಿದ್ದು, ಈ ಪೈಕಿ ಒಂದು ಸ್ಥಾನವನ್ನು ಎಸ್‌ಸಿ ಎಡಗೈ ಸಮುದಾಯಕ್ಕೆ ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ. ಈ ಸ್ಥಾನವನ್ನು ಬಳ್ಳಾರಿಗೆ ಇಲ್ಲವೇ ಮಾಜಿ ಸಚಿವ ಎಚ್. ಆಂಜನೇಯ ಅವರಿಗೆ ನೀಡಬೇಕು ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ವೆಂಕಟೇಶ್ ಹೆಗಡೆ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪರಿಷತ್ ಸ್ಥಾನವನ್ನು ಅದು ಯಾರೋ ಸುಧಾಮ್ ದಾಸ್ ಎಂಬ ವ್ಯಕ್ತಿಗೆ ನೀಡುವ ಕುರಿತು ಹೈಕಮಾಂಡ್ನಲ್ಲಿ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ. ಆ ವ್ಯಕ್ತಿ ಯಾರು ಅನ್ನೋದೇ ನಮ್ಮ ಸಮಾಜದ ನಾಯಕರಿಗೆ ಗೊತ್ತಿಲ್ಲ ಮತ್ತು ಅವರು ಎಷ್ಟು ವರ್ಷದಿಂದ ಪಕ್ಷಕ್ಕೆ ದುಡಿದಿದ್ದಾರೆ ಎಂಬುದೇ ತಿಳಿದಿಲ್ಲ, ಹಾಗಾಗಿ ಆ ವ್ಯಕ್ತಿಗೆ ಸ್ಥಾನವನ್ನು ನೀಡುವುದಕ್ಕೆ ನಮ್ಮ ಸಮಾಜದ ಪ್ರಬಲ ವಿರೋಧವಿದೆ, ಯಾವುದೇ ಕಾರಣಕ್ಕೂ ಆ ವ್ಯಕ್ತಿಗೆ ನೀಡಬಾರದು, ಪಕ್ಷದಲ್ಲಿ ಅನೇಕ ವರ್ಷದಿಂದ ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿದಂತಹ ನಾಯಕರುಗಳಿಗೆ ನೀಡಬೇಕೆಂದು ಒತ್ತಾಯಿಸುತ್ತೇನೆ.  ಕಲ್ಯಾಣ ಭಾಗದಲ್ಲಿ 40 ಸೀಟುಗಳಲ್ಲಿ  ಈ ಭಾಗದಲ್ಲಿ ಒಂದು ಸೀಟನ್ನು ಎಡಗೈ ಸಮುದಾಯಕ್ಕೆ ನೀಡಲಿಲ್ಲ, ಹಾಗೂ ಸೀಟು  ಹಂಚಿಕೆಯಲ್ಲಿ ಉಂಟಾದ ಗೊಂದಲದ ಕಾರಣದಿಂದಾಗಿ ನಾವು ಒಟ್ಟು 8 ಸೀಟುಗಳ ಪೈಕಿ 2 ಸೀಟನ್ನು ಮಾತ್ರ ಪಡೆದುಕೊಂಡಿದ್ದೇವೆ. ಅದೂ ಅಲ್ಲದೆ ಕಳೆದ ೧೦ ವರ್ಷಗಳಿಂದ ಬಳ್ಳಾರಿ ಜಿಲ್ಲೆಗೆ

ಜಿಎಫ್‌ಜಿಸಿಯ ವಾಣಿಜ್ಯ ವಿದ್ಯಾರ್ಥಿಗಳ ವೇದಿಕೆಗೆ ಚಾಲನೆ

ಇಮೇಜ್
ಸಾಮಾಜಿಕ ಹೊಣೆಗಾರಿಕೆ ಅಭಿವೃದ್ಧಿಯ ಮೂಲ  ದಾವಣಗೆರೆ:ಸಾಮಾಜಿಕ ಹೊಣೆಗಾರಿಕೆ ಎಂಬುದು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಅಂಜನಪ್ಪ ಎಸ್.ಆರ್. ಹೇಳಿದರು.  ವಿದ್ಯಾನಗರ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದಿಂದ ಹಮ್ಮಿಕೊಂಡಿದ್ದ ವಾಣಿಜ್ಯ ವಿಭಾಗದ ಹಳೆಯ ವಿದ್ಯಾರ್ಥಿಗಳ ವೇದಿಕೆ, ವಿವಿಧ ಕಾರ್ಯಕ್ರಮಗಳಿಗೆ ಚಾಲನೆನೀಡುವ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಅವರು, ಯಾವುದೇ ದೇಶದ ಅಭಿವೃದ್ಧಿ ವಿಷಯ ಬಂದಾಗ ಸಾಮಾಜಿಕ ಹೊಣೆಗಾರಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬ ನಾಗರಿಕ ಸಾಮಾಜಿಕ ಹೊಣೆಗಾರಿಕೆ ಅರಿಯದ ಹೊರತು ದೇಶದ ವಿಷಯಗಳ ಕುರಿತು ಮಾತನಾಡುವ ಹಕ್ಕು ಹೊಂದಿರಲಾರ ಎಂದರು.  ನಮ್ಮಲ್ಲಿ ಇಂದು ಸಾಮಾಜಿಕ ಹೊಣೆಗಾರಿಕೆ ಎಂಬುದೇ ಇಲ್ಲವಾಗಿದೆ. ಎಲ್ಲೂ ಸಹಿತ ನಾವು ದೇಶದ ಕುರಿತು ಮಾತನಾಡುವಾಗ ನಾವು ಮಾಡುವ ಕಾರ್ಯ ಏನು ಎಂಬುದರ ಕುರಿತು ಚಿಂತಿಸುವುದೇ ಇಲ್ಲ. ಬದಲಿಗೆ ಇನ್ನೊಬ್ಬರ ಕುರಿತು ಮಾತನಾಡುವವರೇ ಹೆಚ್ಚು. ಆದರೆ, ಇಂದು ನಮ್ಮ ಕಾಲೇಜಿನ ವಾಣಿಜ್ಯ ವಿಭಾಗದ ಹಳೆಯ ವಿದ್ಯಾರ್ಥಿಗಳು ಇಂತಹದ್ದೊಂದು ಕೆಲಸ ಮಾಡಿದ್ದಾರೆ. ತಾವು ಓದಿದ ಕಾಲೇಜು ತಮಗೆ ಏನು ಕೊಟ್ಟಿತ್ತು ಎಂಬುದನ್ನು ಮನಗಂಡು ತಮ್ಮ ಕಾಲೇಜಿಗೆ ತಮ್ಮದೇ ಆದ ಕೊಡುಗೆ ನೀಡಲು ಮುಂದೆ ಬಂದಿರುವುದು ಮಾದರಿಯ ಕಾರ್ಯ. ಅಂತಹ ಹಿರಿಯ ವಿದ್ಯಾರ್ಥಿಗಳಿಗೆ ನಮ್ಮ ಕಾಲೇಜಿನಿಂದ ಎಲ್ಲಾ