STORY
ಬಿರು ಬಿಸಿಲು, ಬೆಂಕಿಯುಗುಳುವ ಸೂರ್ಯನ ಕಿರಣಗಳು, ಧಗೆಯಿಂದಾಗಿ ಭೂಮಿಯಿಂದ ಏಳುತ್ತಿದ್ದ ಕಾವು ಕಣ್ಣಿಗೆ ಕಟ್ಟಿ ತಲೆ ಸುತ್ತುವಂತಿತ್ತು. ಅನತಿ ಬೇವಿನ ಮರವೇರಿದ್ದ ಬಸ್ರಾಜ ಆಡುಗಳಿಗೆ ಸೊಪ್ಪು ಮುರಿದು ಹಾಕುತ್ತಿದ್ದುದು ಅಸ್ಪಷ್ಟವಾಗಿ ಕಾಣುತ್ತಿತ್ತು. ಈ ತಾಂಡ ಮಾತ್ರ ಎಲ್ಲಿ ಹುಡುಕಿದರೂ ಸಿಗಲೇ ಇಲ್ಲ. ಮನೆಗೆ ಹೋಗಿ ಅಪ್ಪನ ಮುಂದೆ ಏನು ಹೇಳಬೇಕು ಎಂಬ ತಿಳಿಯದ ವೀರಿಗೆ ಮೆತ್ತಗೆ ನಡುಕು ಆರಂಭವಾಗಿತ್ತು. ತಾಂಡ ಅದೊಂದು ಆಡು, ಪಕ್ಕದ ಬಸರಕೋಡ ತಾಂಡದಿಂದ ತಂದಿದ್ದರಿಂದ ಅದಕ್ಕೆ ತಾಂಡ ಎಂದು ಹೆಸರಿಡಲಾಗಿತ್ತು. ಅದು ಸಾಮಾನ್ಯದ್ದಲ್ಲ. ಕೈಗೆ ಸಿಗದೇ ಗೂಳಿಯಂತೆ ತಪ್ಪಿಸಿಕೊಂಡು ಹೋಗಬಲ್ಲ ಬಲಿಷ್ಠ ಆಡು. ಅನೇಕ ಬಾರಿ ಅದಕ್ಕಾಗಿ ವೀರಿ-ಬಸವರಿಬ್ಬರು ಯಾದಿಯಲ್ಲಿ ಹುಡುಕಾಟ ನಡೆಸಿದರೂ ಚಳ್ಳೆ ಹಣ್ಣು ತಿನ್ನಿಸಿ, ಮರೆಮಾಚಿಕೊಳ್ಳುತ್ತಿತ್ತು. ಈ ಬಾರಿ ಬೆಳಿಗ್ಗೆಯೇ ಕಾಣೆಯಾಗಿದೆ. ಹಗರನೂರು ಹಳ್ಳದ ಕಡೆ ಹೋದಾಗಲ್ಲೆಲ್ಲಾ ತಾಂಡ ಇದೇ ರೀತಿ ಕಣ್ತಪ್ಪಿ ಮರೆಯಾಗುತ್ತಲೇ ಇತ್ತು. ಈ ಬಾರಿ ಸಹ ಇದೇ ಪಾಡು. ಬೆಳ್ಳಂಬೆಳಿಗ್ಗೆ ಮನೆಯಿಂದ ಹೊರಟಾಗ ಅಲ್ಲಲ್ಲಿ ಪೊದೆಗಳಲ್ಲಿ ಅವಿತುಕೊಳ್ಳುತ್ತಿದ್ದ ಆಡನ್ನು ಹಿಂದಿನಿಂದ ಬಂದ ಬಸ್ರಾಜ ಓಡಿಸಿಕೊಂಡು ಬಂದಿದ್ದ. ಆದರೆ, ಯಾವಾಗ ಹಿರಿಹಳ್ಳ-ಈಚಲ ಕಟ್ಟೆ ಮಧ್ಯದ ಬಂಡಿಜಾಡು ಕಡೆ ಹಿಂಡು ತಿರುಗಿತು ಆಗ ಇಬ್ಬರ ಕಣ್ತಪ್ಪಿಸಿ ಪರಾರಿಯಾಯಿತು. ಹೊತ್ತು ಕಣ್ನೇರಕ್ಕೆ ಇದ್ದಾಗಿನಿಂದಲೂ ಹುಡುಗಾಟ ನಿರಂತರವಾಗಿ ನಡೆಯುತ್ತಲೇ ಇದೆ. ಇ